ಕರ್ನಾಟಕದ ಕುಳ್ಳ ಎಂದ ಹೆಸರು ಪಡೆದ ದ್ವಾರಕೀಶ್ (Dwarakish) ಕನ್ನಡ ಸಿನಿಮಾ ರಂಗದಲ್ಲಿ ಅಚ್ಚಳಿಯದೆ ಉಳಿದಿರುವ ಹೆಸರು ಡಾ. ರಾಜಕುಮಾರ್ (Dr. Raj) ಅವರ ಕಾಲದಿಂದಲೂ ಕೂಡ ಕಪ್ಪು ಬಿಳುಪು ಸಿನಿಮಾದ (White and black Cinema Era) ಸಮಯದಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡಿರುವ ದ್ವಾರಕೀಶ್ ಸಿನಿಮಾ ಆಸಕ್ತಿಗೆ ಅವರೇ ಸಾಟಿ.
ನಟನಾಗಿ, ಹಾಸ್ಯನಟನಾಗಿ, ನಿರ್ಮಾಪಕನಾಗಿ, ನಿರ್ದೇಶನಕ್ಕಾಗಿ ಕನ್ನಡ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ದ್ವಾರಕೀಶ್ ಅವರು ತಮ್ಮದೇ ಆದ ದ್ವಾರಕೀಶ್ ಚಿತ್ರ (Dwarakish Chitra production house) ಎನ್ನುವ ಸಂಸ್ಥೆಯನ್ನು ಕಟ್ಟಿ ಹತ್ತಾರು ಮನೆಗಳಿಗೆ ಅನ್ನಕ್ಕೆ ದಾರಿ ಮಾಡಿಕೊಟ್ಟವರು. ಆದರೆ ಸಿನಿಮಾ ರಂಗದಲ್ಲಿ ಸಕ್ಸಸ್ ಎನ್ನುವುದು ನೀರಿನ ಮೇಲಿನ ಗುಳ್ಳೆಯಂತೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಯಾಕೆಂದರೆ, ಅದೃಷ್ಟ ಅವರ ಜೀವನದಲ್ಲಿ ಹೇಗೆ ಬೇಕಾದರೂ ಆಟ ಆಡಬಹುದು, ಅದಕ್ಕೆ ಪ್ರತ್ಯಕ್ಷ ಸಾಕ್ಷಿ ದ್ವಾರಕೀಶ್ ಅವರ ಜೀವನ.
ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ 3 ಬೋರ್ಡ್ ಎಕ್ಸಾಮ್ ನಡೆಸಲು ನಿರ್ಧಾರ.!
ದ್ವಾರಕೀಶ್ ಅವರು ಶೃತಿ, ವಿನೋದ್ ರಾಜ್, ಸುನಿಲ್ ಮುಂತಾದ ಹೊಸ ನಟರನ್ನು ಕನ್ನಡಕ್ಕೆ ಪರಿಚಯಿಸಿದವರು. ಒಂದು ಕಾಲದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರ ಕಾಂಬಿನೇಷನ್ ನಲ್ಲಿ ಬರುತ್ತಿದ್ದ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ ಅನ್ನು ಉಡಿಸ್ ಮಾಡುತ್ತಿತ್ತು. ಆ ಸಮಯಕ್ಕೆ ಸಿನಿಮಾ ಭವಿಷ್ಯದಲ್ಲಿ ಶುಕ್ರದೆಶೆ ಹೊಂದಿದ್ದ ಅವರ ಲಕ್ ಕ್ರಮೇಣ ಕುಸಿಯುತ್ತಾ ಬಂತು.
ಸಾಲದಕ್ಕೆ ಸಿನಿಮಾ ರಂಗದವರ ಜೊತೆಗಿನ ಮ’ನ’ಸ್ತಾ’ಪ, ಆಪ್ತಮಿತ್ರ ಎನಿಸಿಕೊಂಡಿದ್ದ ವಿಷ್ಣುವರ್ಧನ್ (Dr.Vishnuvardan) ಅವರೊಂದಿಗೆ ಮು’ನಿ’ಸು ಇತ್ಯಾದಿಗಳು ಇವರನ್ನು ಅಧೋಗತಿಗೆ ತಂದಿತು. ಸಾಕಷ್ಟು ಬಾರಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರ ನಡುವೆ ಮನಸ್ತಾಪ ಬಂದು ಮಾತುಗಳು ನಡೆದಿದ್ದರೂ ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ದ್ವಾರಕೀಶ್ ಅವರು ಕಂಗೆಟ್ಟಿದ್ದಾಗ ಆಪ್ತಮಿತ್ರ ಎನ್ನುವ ಸಿನಿಮಾವನ್ನು ಸಂಭಾವನೆ ಇಲ್ಲದೆ ಮಾಡಿಕೊಟ್ಟು ಮತ್ತೆ ಅವರು ಮೇಲೆ ಬರುವ ಹಾಗೆ ಮಾಡಿದ್ದರು.
ಆಪ್ತಮಿತ್ರ (Apthamitra) ಸಿನಿಮಾಗೂ ಮುನ್ನ ಕೂಡ ಅನೇಕ ಸಂದರ್ಭಗಳಲ್ಲಿ ಕೂಡ ಈ ರೀತಿ ವಿಷ್ಣುವರ್ಧನ್ ಅವರು ದ್ವಾರಕೀಶ್ ಅವರ ಕ’ಷ್ಟಗಳಿಗೆ ಹೆಗಲಾಗಿದ್ದರು. ಇತ್ತೀಚೆಗೆ ತಮ್ಮ ಸಂಸ್ಥೆಯ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿಕೊಟ್ಟರು. ಆದರೆ ಅದನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ಅವರು ಕೂಡ ವಿಫಲರಾಗಿದ್ದಾರೆ ಎಂದೇ ಹೇಳಬಹುದು.
ವಿಷ್ಣುವರ್ಧನ್ ಸಿನಿಮಾದ ಬಳಿಕ ಸುದೀಪ್ (Sudeep) ಅವರೊಂದಿಗೆ ಕಾಂಟ್ರವರ್ಸಿ, ಆಯುಷ್ಮಾನು ಭವ ಚಿತ್ರದ ಅಭಿನಯಕ್ಕಾಗಿ ಶಿವಣ್ಣ ಹಾಗೂ ರಚಿತಾ ರಾಮ್ (Shivana and Rachitharam) ಅವರಿಗೆ ಪೂರ್ತಿ ಸಂಭಾವನೆ ನೀಡದೆ ಇರುವ ಆರೋಪಗಳನ್ನು ಎದುರಿಸುವಂತಾಗಿದೆ. ಇದರೊಂದಿಗೆ ಸಾಲು ಸಾಲು ಹಾಕಿ ದ್ವಾರಕೇಶ್ ಚಿತ್ರ ನಿರ್ಮಾಣದ ಸಿನಿಮಾಗಳು ಬಿದ್ದಿರುವುದರಿಂದ ಸಾಲದ ಹೊರೆ ಹೆಚ್ಚಾಗಿ ದ್ವಾರಕೀಶ್ ಅವರು ತಮ್ಮ ಕನಸಿನ ಬಂಗಲೆಯನ್ನು ಮಾರಿ ಆ ಸಾಲ ತೀರಿಸುವಂತಾಗಿದೆ.
ಮುಸ್ಲಿಂ ಸದಸ್ಯರನ್ನು ಸಂಸತ್ತಿನಲ್ಲಿ ತಳಿಸುವ ದಿನ ದೂರವಿಲ್ಲ – ಓವೈಸಿ ಇಂದ ಅಚ್ಚರಿಯ ಹೇಳಿಕೆ
HSR ಲೇಔಟ್ ನಲ್ಲಿ ದ್ವಾರಕೀಶ್ ಅವರು ಕಟ್ಟಿಸಿ ವಾಸಿಸುತ್ತಿದ್ದ ಮನೆಯನ್ನು (Home sale) 10.5 ಕೋಟಿಗೆ ಮಾರಾಟ ಮಾಡಿದ್ದಾರೆ. ಅಂದ ಹಾಗೆ ಈ ಮನೆಯನ್ನು ಕೊಂಡುಕೊಂಡಿರುವವರು ಮತ್ತಾರು ಅಲ್ಲ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿಯವರು(Purchased by Divine star Rishabh Shetty). ಅನೇಕರಿಗೆ ಮಾತುಕತೆ ಆಗಿ ಬಜೆಟ್ ಒಪ್ಪದ ಕಾರಣ ಸುಮ್ಮನಾಗಿದ್ದ ದ್ವಾರಕೀಶ್ ಅವರು ರಿಷಭ್ ಶೆಟ್ಟಿ ಅವರಿಗೆ ತಮ್ಮ ಪ್ರೀತಿಯ ಮನೆಯನ್ನು ಬಿಟ್ಟು ಕೊಟ್ಟಿದ್ದಾರೆ.
ದ್ವಾರಕೀಶ್ ಅವರಿಗೆ ಇದು 13ನೇ ಮನೆ ಆಗಿತ್ತು, ಅನೇಕ ಕಡೆ ಆಸ್ತಿ ಮಾಡಿರುವ ದ್ವಾರಕೀಶ್ ಅವರು ಈಗ ಒಂದು ಮನೆಯನ್ನು ಮಾರಿ ತಮ್ಮ ಸಂಸ್ಥೆಯಲ್ಲಿರುವ ಸಾಲವನ್ನು ತೀರಿಸಿದ್ದಾರೆ.