ಹಳ್ಳಿಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದನ್ನು ತಡೆಯುವ ಸಲುವಾಗಿ ಸರ್ಕಾರವೇ 3,000 ಕ್ಕೂ ಹೆಚ್ಚು ಜನಸಂಖ್ಯೆಗಳುಳ್ಳ ಗ್ರಾಮಗಳಲ್ಲಿ ಸರ್ಕಾರದ ವತಿಯಿಂದ ಮಧ್ಯದ ಅಂಗಡಿ ತೆರೆಯಬೇಕೆಂಬ ಯೋಚನೆಯಲ್ಲಿದೆ. ಈ ಬಗ್ಗೆ ಅಬಕಾರಿ ಸಚಿವರಾದ ಆರ್.ಬಿ ತಿಮ್ಮಪ್ಪ (Minister RB Thimmappa) ಅವರು ವಿಷಯ ಪ್ರಸ್ತಾಪ ಮಾಡುತ್ತಿದ್ದಂತೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ (EX.CM Basavaraj bommai) ಅವರು ಸಹ ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿ ತಮ್ಮ X ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಬಕಾರಿ ಸಚಿವರ ಈ ಮಾತು ಹಾಸ್ಯಾಸ್ಪದವಾಗಿದೆ. ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಧ್ಯದ ಅಂಗಡಿ ತೆರೆಯಲು ಮುಂದಾಗಿರುವುದು ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಅವರು ಕಿಡಿಕಾರಿದ ಅವರು ಅಕ್ರಮ ಮಧ್ಯ ಮಾರಾಟವನ್ನು ತಡೆಯಲು ಆಗದೆ ಇದ್ದಲ್ಲಿ ನಿಮ್ಮ ಅಬಕಾರಿ ಇಲಾಖೆಯು ಮಾಡುವುದಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂ ಸದಸ್ಯರನ್ನು ಸಂಸತ್ತಿನಲ್ಲಿ ತಳಿಸುವ ದಿನ ದೂರವಿಲ್ಲ – ಓವೈಸಿ ಇಂದ ಅಚ್ಚರಿಯ ಹೇಳಿಕೆ
ಗೃಹಲಕ್ಷ್ಮಿಯರಿಗೆ 2000ರೂ. ಸಹಾಯಧನ ಎನ್ನುವ ಗ್ಯಾರಂಟಿ ಯೋಜನೆ ಘೋಷಣೆ ಮಾಡಿರುವ ಸರ್ಕಾರವು ಆ 2000ರೂ. ತೆಗೆದುಕೊಳ್ಳುವುದಕ್ಕೆ ಒಂದು ಕುಟುಂಬದಲ್ಲಿ ಅತ್ತೆ ಸೊಸೆ ಇಬ್ಬರೂ ಇದ್ದರೆ ಅವರಲ್ಲಿ ಒಬ್ಬರ ಹೆಸರನ್ನು ಅವರೇ ನಿರ್ಧಾರ ಮಾಡಬೇಕು ಎಂದು ಹೇಳುವ ಮೂಲಕ ಅನ್ಯೋನ್ಯವಾಗಿದ್ದ ಅತ್ತೆ ಸೊಸೆ ಮಧ್ಯೆ ಜ’ಗ’ಳ ಹಚ್ಚಿದೆ.
ಈಗ ಹಳ್ಳಿಹಳ್ಳಿಗೂ ಮಧ್ಯದ ಅಂಗಡಿಯನ್ನು ಸ್ಥಾಪಿಸಿ ಹಣಕ್ಕಾಗಿ ಗಂಡ ಹೆಂಡತಿ ಕಿತ್ತಾಡುವಂತೆ ಮಾಡಲು ಮುಂದಾಗಿದೆ. ಸರ್ಕಾರ ಗೃಹಿಣಿಯರಿಗೆ ಕೊಟ್ಟ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಹಿಂಪಡೆಯಲು ಮಧ್ಯದ ಅಂಗಡಿ ಸ್ಥಾಪಿಸಲು ಹೊರಟಿದೆ. ಈ ರೀತಿ ಮಾಡಿದರೆ ಗೃಹಲಕ್ಷ್ಮಿಯರೇ ಅವರಿಗೆ ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ. ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ರಾಜ್ಯದ ದೊಡ್ಡ ದುರಂತ. ಇದು ಸಾರಾಯಿ ಗ್ಯಾರಂಟಿ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಇಲ್ಲಿಗೆ ಆಟ ಆಡಲು ಬಂದವನು, ಯಾವುದೇ ಕಾರಣಕ್ಕೂ ಕರ್ನಾಟಕ ವಿರೋಧಿ ಆಗಲಾರೆ ಎಂದ ಎಂ.ಎಸ್ ಧೋನಿ.!
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (H.D Kumaraswamy) ಅವರು ಸಹ ಹಳ್ಳಿಗಳಲ್ಲಿ ಮಧ್ಯದಂಗಡಿ ತೆಗೆಯುವ ಸರ್ಕಾರವನ್ನು ನಿರ್ಧಾರವನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ಮನೆ ಮನೆಗೂ ಮಧ್ಯ ಹಂಚಲು ಹೊರಟಿರುವ ರಾಜ್ಯ ಸರ್ಕಾರವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಕುಡುಕರ ತೋಟ ಮಾಡಲು ಹೊರಟಿರುವುದು ದು’ರಂ’ತ ಇದು ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿಯಾಗಿದೆ ಕುಟುಕಿದ್ದಾರೆ.
ನಾರಿಯರಿಗೆ ಶಕ್ತಿ ತುಂಬುತ್ತೇವೆ ಎಂದ ಹೇಳಿದ ಸರ್ಕಾರವು ಈಗ ಅವರ ಬಾಳಿಗೆ ಬೆಂಕಿ ಹಾಕುವ ಕೆಲಸ ಮಾಡುತ್ತಿದೆ. ಗೃಹಲಕ್ಷ್ಮೀ ಎಂದ ಸರಕಾರ ಅವರ ಬಾಳಿಗೀಗ ಗ್ರಹಣವಾಗಿಲು ಹೊರಟಿದೆ. ಗೃಹಜ್ಯೋತಿ ಎಂದ ಸರಕಾರ ಅವರ ಬಾಳಿನ ಜ್ಯೋತಿಯನ್ನೇ ನಂದಿಸುತ್ತಿದೆ. ಅನ್ನಭಾಗ್ಯ ಎಂದ ಸರಕಾರ ಈಗ ಮದ್ಯಭಾಗ್ಯ ನೀಡುತ್ತಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾವೇರಿ ವಿವಾದ, ಪ್ರಧಾನಿ ಮಧ್ಯಸ್ಥಿಕೆಗೆ ದೇವೇಗೌಡರ ಪತ್ರ, ಪತ್ರ ಸ್ವಾಗತಿಸಿದ ಸಿದ್ದರಾಮಯ್ಯ.!
ಹಳ್ಳಿಗಳ ಕುಡಿತ ಮುಕ್ತವಾಗಿರಬೇಕು ಬಡದೇಶ ಆದರೂ ಕುಡಿತ ಮುಕ್ತ ದೇಶವಾಗಿರಬೇಕು ಎನ್ನುವುದು ಗಾಂಧೀಜಿಯವರ ಕನಸಾಗಿತ್ತು. ಆದರೆ ಕರ್ನಾಟಕ ರಾಜ್ಯದಲ್ಲಿ ಸರ್ಕಾರವೇ ಹಳ್ಳಿಯಲ್ಲು ಮಧ್ಯದ ಅಂಗಡಿ ಸ್ಥಾಪಿಸಲು ನಿರ್ಧರಿಸಿರುವುದರಿಂದ ಖಂಡಿತವಾಗಿ ಇದನ್ನು ಬಹುತೇಕರು ವಿವರಿಸಲಿದ್ದಾರೆ ಆದರೆ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳದೆ ಕಾದು ನೋಡೋಣ ಮತ್ತು ಈ ವಿಚಾರವಾಗಿ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನೀವು ಕೂಡ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.