ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ BJP ಜೊತೆ JDS ಪಕ್ಷವು ಕೈಗೂಡಿಸಲು ಮುಂದಾಗಿದೆ. ಈ ಮೂಲಕ JDS, NDA ಮೈತ್ರಿಕೂಟ ಸೇರುವ ಕುರಿತು ಇದ್ದ ಎಲ್ಲಾ ಊಹಾಪೋಹಗಳಿಗೂ ತೆರೆ ಬಿದ್ದು ಕೇಂದ್ರದ ಮಟ್ಟದಲ್ಲಿ ಇದು ಅಧಿಕೃತವಾಗಿ ಘೋಷಣೆಯಾಗಿದೆ. ಈ ಮೈತ್ರಿ ಕುರಿತು JDS ಪಕ್ಷದಲ್ಲಿಯೇ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು JDS ನಲ್ಲಿರುವ ಮುಸ್ಲಿಂ ನಾಯಕರುಗಳು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಕುಮಾರಸ್ವಾಮಿ ಅವರು ಅಮಿತ್ ಶಾ, ಮತ್ತು ನಡ್ದಾವರನ್ನು ಭೇಟಿಯಾಗಿ ಮೈತ್ರಿಗೆ ತಮ್ಮ ಬೆಂಬಲ ಸೂಚಿಸುತ್ತಿದ್ದಂತೆ ಇತ್ತ ರಾಜ್ಯ ರಾಜಕಾರಣದಲ್ಲಿ JDS ಪಕ್ಷದಲ್ಲಿ ಬಾರಿ ವ್ಯತ್ಯಾಸಗಳನ್ನುಂಟು ಉಂಟಾಗುತ್ತಿವೆ. ಮೊದಲಿಗೆ JDS ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಸೈಯದ್ ಶಫಿವುಲ್ಲಾ (Syed shafiullah) ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.
ಒಂದೇ ದಿನಕ್ಕೆ 24,000 ರೂಪಾಯಿ ಮೌಲ್ಯದ ಆಸ್ತಿ ನೋಂದಣಿ, ಸರ್ಕಾರಕ್ಕೆ ಬರೋಬ್ಬರಿ 244 ಕೋಟಿ ಆದಾಯ.!
BJP ಯೊಂದಿಗೆ JDS ಸೇರ್ಪಡೆ ಆಗಿರುವುದೇ ಪಕ್ಷದೊಂದಿಗಿನ ತಮ್ಮ ಸಂಬಂಧವನ್ನು ಮುರಿದುಕೊಳ್ಳಲು ಕಾರಣ ಎಂದಿರುವ ಅವರು ಪಕ್ಷ ನೀಡಿದ್ದ ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ (resignation letter) ಕೊಟ್ಟಿದ್ದಾರೆ. JDS ಪಕ್ಷದ ಅಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ತಮ್ಮ ನಿಲುವು ಏನೆಂದು ಸ್ಪಷ್ಟಪಡಿಸಿದ್ದಾರೆ.
JDS ಪಕ್ಷದ ಜಾತ್ಯತೀತ ನೆಲೆಗಟ್ಟಿನ ಮೇಲೆ ನಂಬಿಕೆ ಇಟ್ಟು ಸಮಾಜ ಮತ್ತು ಸಮುದಾಯಕ್ಕೆ ಸೇವೆ ಸಲ್ಲಿಸಲು ನಾನು ಶ್ರಮಿಸಿದ್ದೆ ಮತ್ತು ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದೆ. ಆದರೆ, ನಮ್ಮ ನಾಯಕರಾದ ಎಚ್.ಡಿ ಕುಮಾರಸ್ವಾಮಿಯವರು ಇದೀಗ ಎರಡನೇ ಬಾರಿಗೆ BJP ಜೊತೆ ಕೈಜೋಡಿಸಿದ್ದಾರೆ. ಕೋಮುವಾದಿ ಪಕ್ಷದ ಜೊತೆ ಜಾತ್ಯಾತೀತ ಪಕ್ಷ ಎನಿಸಿಕೊಂಡ JDS ಒಂದಾಗಿರುವುದು ನನಗೆ ಇಷ್ಟ.
ಈ ಹಿನ್ನೆಲೆಯಲ್ಲಿ ನಾನು ಪಕ್ಷದಿಂದ ಹಾಗೂ ಪಕ್ಷದ ಚಟುವಟಿಕೆಯಿಂದ ಹೊರಗುಳಿಯಲು ನಿರ್ಧಾರ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. BJP ಹಾಗೂ JDS ಮೈತ್ರಿ ಮಾಡಿಕೊಂಡಿರುವುದು JDS ಅಲ್ಪಸಂಖ್ಯಾತ ನಾಯಕರಿಗೂ ಒಪ್ಪಿಯಾಗದೇ ಪಕ್ಷ ತೊರೆಯಲು ತೀರ್ಮಾನಿಸಿದ್ದಾರೆ. ಬೆಂಗಳೂರಿನ K.K ಗೆಸ್ಟ್ ಹೌಸ್ ನಲ್ಲಿ ಸೆಪ್ಟೆಂಬರ್ 24ರಂದು ನಡೆದ JDS ಅಲ್ಪಸಂಖ್ಯಾತ ನಾಯಕರ ಸಭೆಯಲ್ಲಿ ಮುಸ್ಲಿಂ ಮುಖಂಡರು JDS ಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
JDS ಕಾರ್ಯಾಧ್ಯಕ್ಷ ಎನ್ ಎಂ ನಬಿ, ಮುಖಂಡರಾದ ಮೋಹಿದ್ ಅಲ್ತಾಫ್,ನಾಸೀರ್ ಉಸ್ತಾದ್,ವಕ್ತಾರ ನೂರ್ ಅಹಮ್ಮದ್ ಸೇರಿದಂತೆ ದಾವಣಗೆರೆ, ಮೈಸೂರು, ರಾಮನಗರ, ರಾಯಚೂರು, ತುಮಕೂರು ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದು, ರಾಜ್ಯದಲ್ಲಿ ಪ್ರವಾಸ ಮಾಡಿ ಸಾಮೂಹಿಕ ರಾಜೀನಾಮೆ ನೀಡಲು ನಿರ್ಣಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ 3 ಬೋರ್ಡ್ ಎಕ್ಸಾಮ್ ನಡೆಸಲು ನಿರ್ಧಾರ.!
ಮೂಲಗಳ ಪ್ರಕಾರ JDS ಪಕ್ಷದ ಅಧ್ಯಕ್ಷರಾದ ಇಬ್ರಾಹಿಂ ಸಹ ಪಕ್ಷ ತೊರೆಯಲಿದ್ದಾರೆ ಎಂದು ತಿಳಿದು ಬಂದಿದೆ. ಇಬ್ರಾಹಿಂ ಈಗಾಗಲೇ ಕಾಂಗ್ರೆಸ್ನಿಂದ ಆಚೆ ಬಂದಿರುವುದರಿಂದ ಇಬ್ರಾಹಿಂ ನವರು ಇದೀಗ JDS ತೊರೆದು ಯಾವ ಪಕ್ಷಕ್ಕೆ ಹೋಗಲಿದ್ದಾರೆ ಎನ್ನುವ ಕುತೂಹಲ ಉಂಟಾಗಿದೆ ಅವರು ಕಾಂಗ್ರೆಸ್ಗೆ ಮರಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.
ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಸಹ ಇಬ್ರಾಹಿಂ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಲು ಪ್ಲಾನ್ ನಡೆಯುತ್ತಿದೆ ಆದರೆ ಇಬ್ರಾಹಿಂ ಅವರು JDS ತೊರೆದರೆ ಯಾವುದೇ ಪಕ್ಷಕ್ಕೆ ಸೇರದೆ ರಾಜಕೀಯದಿಂದ ದೂರ ಉಳಿಯಲಿದ್ದಾರೆ ಎನ್ನುವ ಸುದ್ದಿಯೂ ಕೂಡ ಹರಿದಾಡುತ್ತಿದೆ. ಮುಂದಿನ ಬೆಳವಣಿಗೆ ಏನಾಗಲಿದೇ ಕಾದು ನೋಡೋಣ…