ಮಾಸ್ಟರ್ ಆನಂದ್ ಟಿವಿ ಪ್ರಪಂಚದ ಕಾಲದಿಂದಲೂ ನಮ್ಮ ಎದುರಿಗೆ ಇರುವ ಒಂದು ಪ್ರತಿಭೆ. ಬಾಲನಟನಾಗಿ ಸಿನಿಮಾರಂಗದಲ್ಲಿ ಕಾಣಿಸಿಕೊಂಡು ಆ ಕಾಲದಲ್ಲಿ ಹೀರೋ ರೇಂಜ್ ನಲ್ಲಿ ಸಂಭಾವನೆ ಹಾಗೂ ಬೇಡಿಕೆಯನ್ನು ಹೊಂದಿದ್ದ ಇವರು ಈಗಲೂ ಕೂಡ ಕನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯ ನಿರೂಪಕನಾಗಿ, ಹೆಸರಾಂತ ಧಾರಾವಾಹಿಗಳ ನಿರ್ದೇಶಕನಾಗಿ, ಕಥೆಗಾರನಾಗಿ ಮತ್ತು ಸಿನಿಮಾಗಳಲ್ಲೂ ಕೂಡ ಬಣ್ಣ ಹಚ್ಚುತ್ತ ನಮ್ಮ ಮುಂದೆ ಸದಾ ಕಾಣುವ ಪರಿಚಿತ ವ್ಯಕ್ತಿಯಾಗಿದ್ದಾರೆ.
ಹೀಗಾಗಿ ಪ್ರತಿಯೊಬ್ಬರಿಗೂ ಇವರನ್ನು ನೋಡಿದರೆ ನಮ್ಮ ಮನೆಯ ಮಗ ಎನ್ನುವ ಫೀಲ್ ಬರುತ್ತದೆ. ಆದರೆ ಇಂತಹ ಮಾಸ್ಟರ್ ಆನಂದ್ ತಮ್ಮ ಮಗನ ಸ್ಥಿತಿ ಬಗ್ಗೆ ಹೇಳಿಕೊಂಡು ಮೀಡಿಯ ಮುಂದೆ ಕಣ್ಣೀರಿಟ್ಟಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ದಂಪತಿಗೆ ಇಬ್ಬರು ಮಕ್ಕಳಿದ್ದರೆ ಹಿರಿಯ ಮಕ್ಕ ಕೃಷ್ಣ ಆನಂದ್ ಮತ್ತು ಮಗಳು ವಂಶಿಕಾ ಕಶ್ಯಪಾ ಆನಂದ್.
ಅಕ್ಕ ಪಕ್ಕದ ರಾಜ್ಯಗಳಿಗೆ ಹೋಗಿ ಸಲಾಂ ಹೊಡೆಯುವ ಅವಶ್ಯಕತೆ ನನಗಿಲ್ಲ ಎಂದು ಗುಡುಗಿದ ಡಿ-ಬಾಸ್.! ಮತ್ತೊಮ್ಮೆ ಪ್ಯಾನ್ ಇಂಡಿಯಾ ಸಿನಿಮಾಗೆ ಟಂಗ್ ಕೊಟ್ರಾ.?
ವಂಶಿಕ ರವರು ರಿಯಾಲಿಟಿ ಶೋ ಗಳ ಮೂಲಕ ಗುರುತಿಸಿಕೊಂಡು ಅಪ್ಪನಿಗೆ ತಕ್ಕ ಮಗಳು ಎನಿಸಿಕೊಂಡಿದ್ದಾರೆ ಅಭಿನಯದಲ್ಲಿ ಈ ವಯಸ್ಸಿಗೆ ತಂದೆಯನ್ನು ಮೀರಿಸುತ್ತಿದ್ದಾರೆ. ಆದರೆ ಪುತ್ರನ ಪರಿಸ್ಥಿತಿ ಬೇರೆ ರೀತಿ ಇದೆ. ಇವರು ಕೂಡ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಮತ್ತು DNA ಎನ್ನುವ ಸಿನಿಮಾದಲ್ಲಿ ಕೂಡ ಬಣ್ಣ ಹಚ್ಚಿದರು ಆದರೀಗ ಅವರು ಗುರುಕುಲ ಒಂದರಲ್ಲಿ ಜೀವಿಸುತ್ತಿದ್ದಾರೆ.
ಆಧುನಿಕ ಜೀವನದ ಯಾವುದೇ ಫೆಸಿಲಿಟಿ ಇಲ್ಲದೆ ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಮಗನಂತೆ ಚಾಪೆ ಮೇಲೆ ಮಲಗಿಕೊಂಡು 15 ದಿನಕ್ಕೊಮ್ಮೆ ತಂದೆ ತಾಯಿಯನ್ನು ಕರೆ ಮಾಡಿ ಮಾತನಾಡಿಸುತ್ತಾ ಬದುಕುತ್ತಿದ್ದಾರೆ ಈ ರೀತಿ ನಿರ್ಧಾರ ಪೋಷಕರ ತೆಗೆದುಕೊಳ್ಳಲು ಕಾರಣ ಏನು ಎನ್ನುವುದನ್ನು ಮಿಡಿಯ ಪ್ರಶ್ನೆ ಒಂದಕ್ಕೆ ವಿವರಿಸುತ್ತಾ ನಟ ಆನಂದ್ ಕೂಡ ಭಾವುಕರಾಗಿದ್ದಾರೆ.
ಗೀತಕ್ಕನ ತಂಗಿಯನ್ನೇ ರಾಘಣ್ಣ ಮದುವೆಯಾಗಿದ್ದು ಹೇಗೆ ಗೊತ್ತ.? ದೊಡ್ಮನೆಯ ಇಂಟ್ರೆಸ್ಟಿಂಗ್ ಸ್ಟೋರಿ.!
ನನ್ನ ಮಗ ನದಿಯಿಂದ ಆಚೆ ಇದ್ದಾನೆ ನಥಿಯಿಂದ ಈಚೆ ನಮ್ಮ ಲೈಫ್ ಸ್ಟೈಲ್ ಇದೆ. ಇಲ್ಲಿ ಅವನಿಗೆ ಬೇಕಾಗಿದ್ದು ಎಲ್ಲಾ ಕೇಳದೆ ಸಿಗುತ್ತಿದೆ ಹಾಗಾಗಿ ಯಾವುದರ ಬೆಲೆಯೂ ಅವನಿಗೆ ಗೊತ್ತಾಗುತ್ತಿಲ್ಲ. ಅದಕ್ಕಾಗಿ ನಾವು ಹೊಸ ಬಟ್ಟೆ ತಂದುಕೊಟ್ಟರು ಆ ಕಡೆ ತಿರುಗಿ ನೋಡುವುದಿಲ್ಲ ಮನೆಗೆ ಬಂದರು ಅವನ ಪಾಡಿಗೆ ಅವನು ವಿಡಿಯೋ ಗೇಮ್ ಆಡುತ್ತಾ, ಮೊಬೈಲ್ ನೋಡುತ್ತ ಕಳೆದೋಗಿರುತ್ತಾನೆ.
ಆದ್ದರಿಂದ ಬಹಳ ಗಟ್ಟಿ ನಿರ್ಧಾರ ಮಾಡಿ ನಾವು ಅವನನ್ನು ಇಂಥ ಜಾಗಕ್ಕೆ ಕಳಿಸುವ ನಿರ್ಧಾರ ಮಾಡಿದೆವು. ಅಲ್ಲಿ ಒಂದು ತಿಂಗಳಿಗೆ ಒಂದು ಬಾರಿ ಮಾತ್ರ ಭೇಟಿ ಮಾಡುವ ಅವಕಾಶವಿರುತ್ತದೆ, ಫೋನ್ ಕೊಡುವುದಿಲ್ಲ ನಮಗೆ ದಿನ ಫೋನ್ ಮಾಡಲು ಅವಕಾಶವಿಲ್ಲ. ನಮಗೆ ಹಾಸ್ಟೆಲ್ ಗೆ ಹಾಕಬೇಕು ಎಂದಿದ್ದರೆ ಮನೆ ರೀತಿ ಫೀಲ್ ಕೊಡುವ ಹಾಸ್ಟೆಲ್ ಗೆ ಹಾಕುತ್ತಿದ್ದೆ.
ನಾವು ನನ್ನ ಮಗನಿಗೆ ಜೀವನದ ಎಲ್ಲಾ ರೀತಿಯ ಕಷ್ಟಗಳು ಗೊತ್ತಾಗಬೇಕು ಎಂದು ಅಂದುಕೊಂಡಿದ್ದೇನೆ. ನನಗೆ ಅನುಕೂಲ ಇದೆ ಎಂದು ನಾನು ಅವನನ್ನು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಬೆಳೆಸಿದರೆ ಅಥವಾ 24 ಗಂಟೆ ಫ್ಲೈಟ್ ನಲ್ಲಿ ತಿರುಗಿಸಿದರೆ ಅವನು ಎಂದು ಕೂಡ ಕೆಳಗೆ ಇಳಿಯುವುದಿಲ್ಲ.
ದರ್ಶನ್ ಕಾಟೇರ ಸಿನಿಮಾದಲ್ಲಿ ಧರಿಸಿದ ಶರ್ಟ್ ನಿಂದ ಲಕ್ಷ ಲಕ್ಷ ಹಣ ದುಡಿಯುತ್ತಿರುವ ಹುಡುಗ.!
ನಾವು ಅವನನ್ನು ಚೆನ್ನಾಗಿ ನೋಡಿಕೊಳ್ಳಬಹುದು ಆದರೆ ಸಮಾಜ ಕೂಡ ಹಾಗೆ ಸ್ವೀಕರಿಸುವುದಿಲ್ಲ. ಮುಂದೆ ಒಂದು ದಿನ ಅವನು ಕೆಲಸಕ್ಕೆ ಹೋಗಬೇಕು ಅಲ್ಲಿ ಯಾವುದೋ ಊರಿಗೆ ಹೋಗಿ ಏನು ವ್ಯವಸ್ಥೆ ಇಲ್ಲದ ಜಾಗದಲ್ಲಿ ಇರಬೇಕಾದ ಸಂದರ್ಭ ಬರಬಹುದು.
ಆಗ ಅದೇ ಕಾರಣಕ್ಕೆ ಕೊಟ್ಟ ಜವಾಬ್ದಾರಿ ನಿರ್ವಹಿಸದೆ ಮನೆಗೆ ಬಂದರೆ ಅಥವಾ ಬಾಸ್ ಜೊತೆ ಜಗಳ ಮಾಡಿಕೊಂಡು ಮೂರು ಮೂರು ತಿಂಗಳಿಗೆ ಕೆಲಸ ಬದಲಾಯಿಸುತ್ತಿದ್ದರೆ ಆಗ ಎಷ್ಟು ನೋವಾಗುತ್ತದೆ ಅದಕ್ಕಿಂತ ಈಗಲೇ ಅವನಿಗೂ ಕಷ್ಟ ಕೊಡುತ್ತಾ, ನಾವು ನೋ’ವು ತಿನ್ನುತ್ತಾ ಮಗನಿಗೆ ಒಳ್ಳೆಯದಕ್ಕಾಗಿ ಶಿಕ್ಷಣ ಕೊಡಿಸುತ್ತಿದ್ದೇನೆ. ಇಲ್ಲದಿದ್ದರೆ ಅವನು ನಮ್ಮ ಜೊತೆಗಿದ್ದು ಪೋಲಿ ಬೀಳುತ್ತಾನೆ.
ಎಲ್ಲಾ ತಂದೆ ತಾಯಿಗೂ ಕೂಡ ಇದೊಂದು ಅಗ್ನಿಪರೀಕ್ಷೆ ಹೇಗೆ ಮಾತ್ರೆ, ಟಾನಿಕ್ ಗಿಂತ ಇಂಜೆಕ್ಷನ್ ನೋವು ಕೊಟ್ಟರು ಬಹಳ ಬೇಗ ಅದು ರಿಸಲ್ಟ್ ಕೊಡುತ್ತದೆ ಬದುಕಿಗೆ ಅಂತಹ ಇಂಜೆಕ್ಷನ್ ಟ್ರೀಟ್ಮೆಂಟ್ ಮಗ ಸರಿ ಹೋಗುವುದಕ್ಕೆ ಇದು ಅಗತ್ಯವಿತ್ತು ಅವನನ್ನು ಬಿಟ್ಟು ಇರಲು ನಮಗೂ ತುಂಬಾ ಕಷ್ಟವಾಗುತ್ತಿದೆ ಎಂದು ಹೇಳಿ ಕ’ಣ್ಣೀ’ರಿ’ಟ್ಟಿದ್ದಾರೆ.