ಪುಟ್ಟಗೌರಿ, ಕನ್ನಡತಿ ಕಲರ್ ವಾಹಿನಿಯ ಈ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಾಯಕ ನಟಿಯಾಗಿ ಮಿಂಚಿ ಈಗ ಬೆಳ್ಳಿ ತೆರೆಯಲು ಅದೃಷ್ಟ ಪರೀಕ್ಷೆಗಿಳಿದಿರುವ ನಟಿ ರಂಜಿನಿ ರಾಘವನ್ (Ranjani Raghavan) ಬಹುಮುಖ ಪ್ರತಿಭೆ.
ಅಭಿನಯ ಮಾತ್ರವಲ್ಲದೆ ಹಾಡುಗಾರಿಕೆ, ಕಥೆ ಬರೆಯುವುದು ಇತ್ಯಾದಿ ಕಲೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಇವರಿಗೆ ಈಗಾಗಲೇ ಕರ್ನಾಟಕದಲ್ಲಿ ಬಹುದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ರಂಜನಿ ರಾಘವನ್ ಅವರು ಹಾಕುವ ಒಂದು ಪೋಸ್ಟ್ ಗೆ ಬರುವ ಲೈಕ್ ಕಮೆಂಟ್ ನಿಂದ ಜನರು ಇದರಿಂದ ಎಷ್ಟು ನಿರೀಕ್ಷೆ ಮಾಡುತ್ತಾರೆ ಎಂದು ತಿಳಿದುಕೊಳ್ಳಬಹುದು.
ಇದೇ ಕಾರಣಕ್ಕಾಗಿ ಪ್ರತಿ ಬಾರಿಯೂ ಕೂಡ ಬಿಗ್ ಬಾಸ್ (Bigboss) ಅನೌನ್ಸ್ ಆದಾಗ ರಂಜನಿ ಅವರು ಇರುತ್ತಾರೆ ಎಂದು ಅಂದುಕೊಳ್ಳುವವರು ಹಾಗೂ ಇರಲಿ ಎಂದು ಆಸೆ ಪಡುವವರ ದೊಡ್ಡಪಟ್ಟಿಯೇ ಇರುತ್ತದೆ. ಆದರೆ ಇಂತಹ ಆಸೆಗಳಿಗೆ ಪುಟ್ಟಗೌರಿ ತಣ್ಣೀರು ಎರಚಿ ಬಿಟ್ಟಿದ್ದಾರೆ.
ಅಕ್ಕ ಪಕ್ಕದ ರಾಜ್ಯಗಳಿಗೆ ಹೋಗಿ ಸಲಾಂ ಹೊಡೆಯುವ ಅವಶ್ಯಕತೆ ನನಗಿಲ್ಲ ಎಂದು ಗುಡುಗಿದ ಡಿ-ಬಾಸ್.! ಮತ್ತೊಮ್ಮೆ ಪ್ಯಾನ್ ಇಂಡಿಯಾ ಸಿನಿಮಾಗೆ ಟಂಗ್ ಕೊಟ್ರಾ.?
ಮೊದಲಿನಿಂದಲೂ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಖಂಡಿತವಾಗಿ ಕಲರ್ಸ್ ವಾಹಿನಿಯಲ್ಲಿ ಕೆಲಸ ಮಾಡಿದ ಪ್ರತಿಭೆಗಳಿಗೆ ಒಂದು ಅವಕಾಶ ಇದ್ದೆ ಇರುತ್ತದೆ. ಅಂತಹದರಲ್ಲಿ ಯಶಸ್ವಿ ಧಾರಾವಾಹಿಗಳಲ್ಲಿ ಮಿಂಚಿದ ರಂಜನಿ ರಾಘವನ್ ಅವರಿಗೂ ಆಫರ್ ಹೋಗಿರುತ್ತದೆ ಎನ್ನುವುದು ಗೆಸ್ ಮಾಡುವಂತದ್ದೇ.
ಆದರೆ ಅದ್ಯಾಕೋ ನಟಿ ಇನ್ನು ಈ ಬಗ್ಗೆ ಮನಸ್ಸು ಮಾಡಿಲ್ಲ, ಸದ್ಯಕ್ಕೆ ಅವರು ತಮ್ಮ ಸತ್ಯಂ ಸಿನಿಮಾದ (Sathyam Movie) ವಿಚಾರವಾಗಿ ಬಿಜಿಯಾಗಿದ್ದಾರೆ. ಈ ನಡುವೆ ಖಾಸಗಿ ಯೂಟ್ಯೂಬ್ ವಾಹಿನಿಗೆ ಸಂದರ್ಶನ ಕೊಟ್ಟ ಇವರಿಗೆ ಇದೇ ಪ್ರಶ್ನೆ ಎದುರಾಗಿದೆ, ಬಿಗ್ ಬಾಸ್ ನೋಡುತ್ತೀರ? ನೀವೇಕೆ ಬಿಗ್ ಬಾಸ್ ಗೆ ಹೋಗುತ್ತಿಲ್ಲ? ಎಂದು ಕೇಳಿದ ಪ್ರಶ್ನೆಗೆ ಮನದಾಳದಿಂದ ಬಹಳ ಪ್ರಬುದ್ಧತೆಯ ಉತ್ತರಗಳನ್ನು ನೀಡಿದ್ದಾರೆ ಕನ್ನಡತಿ.
ಬಿಗ್ ಬಾಸ್ ಕಾರ್ಯಕ್ರಮವನ್ನು ರೆಗುಲರ್ ಆಗಿ ನೋಡುವ ಟೈಮ್ ಟೇಬಲ್ ಇಲ್ಲ ಯಾಕೆಂದರೆ ಸಮಯಾವಕಾಶ ಇರುವುದಿಲ್ಲ ಆದರೆ ಖಂಡಿತವಾಗಿಯೂ ಇನ್ಸ್ಟಾಗ್ರಾಮ್ ಗಳಲ್ಲಿ ಹರಿದಾಡುವ ಅಪ್ಡೇಟ್ಗಳನ್ನು ನೋಡುತ್ತಿರುತ್ತೇನೆ, ಮನೆಯಲ್ಲಿ ಇದ್ದಾಗ ಕೂತು ಎಪಿಸೋಡ್ ನೋಡುತ್ತೇನೆ.
ಗೀತಕ್ಕನ ತಂಗಿಯನ್ನೇ ರಾಘಣ್ಣ ಮದುವೆಯಾಗಿದ್ದು ಹೇಗೆ ಗೊತ್ತ.? ದೊಡ್ಮನೆಯ ಇಂಟ್ರೆಸ್ಟಿಂಗ್ ಸ್ಟೋರಿ.!
ಇವರೇ ಗೆಲ್ಲುತ್ತಾರೆ ಎಂದು ಹೇಳಲು ಬರುವುದಿಲ್ಲ ನಾನು ನೋಡುವ ದೃಷ್ಟಿಕೋನ ಬೇರೆ. ಪರಿಸ್ಥಿತಿಗಳಲ್ಲಿ ಆ ವ್ಯಕ್ತಿ ಸಿಚುವೇಶನ್ ಹೇಗೆ ಹ್ಯಾಂಡಲ್ ಮಾಡುತ್ತಾನೆ ಎಂದು ಅವನ ಸೈಕಲಜಿ ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ನೋಡುತ್ತೇನೆ.
ಬಿಗ್ ಬಾಸ್ ಮನೆಯಲ್ಲಿ ಅವರು ನಡೆದುಕೊಳ್ಳುವುದರಿಂದ ಅವರ ವ್ಯಕ್ತಿತ್ವ ಡಿಸೈಡ್ ಆಗಿ ಬಿಡುವುದಿಲ್ಲ ಹೊರಗೆ ಬಂದಮೇಲೆ ಅಥವಾ ಒಳಗೆ ಹೋಗುವ ಮುನ್ನ ಆ ರೀತಿ ಅವರು ಇಲ್ಲದೆ ಇರಬಹುದು ಹಾಗಾಗಿ ಯಾರು ಆ ರೀತಿ ಡಿಸೈಡ್ ಕೂಡ ಆಗಬಾರದು ಎನ್ನುತ್ತೇನೆ.
ಇನ್ನು ನಾನು ಬಿಗ್ ಬಾಸ್ ಮನೆಗೆ ಹೋಗುತ್ತೇನೆ ಎಂದು ಹೇಳಿಕೊಳ್ಳುವ ಧೈರ್ಯ ನನಗೆ ಇನ್ನೂ ಬಂದಿಲ್ಲ ಯಾಕೆಂದರೆ ಹೆಚ್ಚು ಜನರು ಹೇಳುವುದು ಬಿಗ್ ಬಾಸ್ ಮನೆಗೆ ನನ್ನನ್ನು ನಾನು ಕಂಡುಕೊಂಡಲು ಹೋಗುತ್ತಿದ್ದೇನೆ ಎಂದು ಆದರೆ ನನಗೆ ನಾನು ಒಬ್ಬಳೇ ಕೂತು ಅದನ್ನು ಮಾಡಬಲ್ಲೆ ಅಥವಾ ಗುಂಪಿನಲ್ಲಿ ಕೆಲಸ ಮಾಡುವಾಗ ನಾನು ನನ್ನನ್ನು ಹುಡುಕಬಲ್ಲೆ ಬಿಗ್ ಬಾಸ್ ಮನೆಗೆ ಹೋಗಿ ನನ್ನನ್ನು ಕಂಡುಕೊಳ್ಳಬೇಕಿಲ್ಲ ಎನ್ನುವುದು ಇದುವರೆಗೂ ನನಗೆ ಇರುವ ಅಭಿಪ್ರಾಯ.
KGF ದಾಖಲೆ ಮುರಿದ ಧ್ರುವ ಸರ್ಜಾ ಮಾರ್ಟಿನ್ ಆಡಿಯೋ ರೈಟ್ಸ್.! ಎಷ್ಟು ಕೋಟಿಗೆ ಸೇಲ್ ಆಗಿದೆ ಗೊತ್ತ.?
ನನ್ನನ್ನು ಅಭಿನಯ ಮಾಡುವುದರಲ್ಲಿ, ಕಥೆ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದೇನೆ ನಾನೇ ಕಥೆಯಾಗುವ ಮಟ್ಟಕ್ಕೆ ನನಗಿನ್ನು ಧೈರ್ಯ ಬಂದಿಲ್ಲ. ಯಾರು ಗೆಲ್ಲುತ್ತಾರೆ ನಿಮ್ಮ ಸ್ನೇಹಿತರೂ ಕೂಡ ಇದ್ದಾರೆ ಅಲ್ಲವೇ ಎಂದು ಕೇಳಿದಕ್ಕೆ ಖಂಡಿತ ನನ್ನ ಜೊತೆ ಕೆಲಸ ಮಾಡಿದವರು ಇದ್ದಾರೆ ಆದರೆ ನಾನು ಆ ರೀತಿ ಒಪಿನಿಯನ್ ಸೃಷ್ಟಿಸಲು ಇಷ್ಟಪಡುವುದಿಲ್ಲ ಎಂದು ಬಚಾವಾಗಿದ್ದಾರೆ. ನಿಮ್ಮ ಪ್ರಕಾರ ರಂಜನಿ ಮುಂದಿನ ಸೀಸನ್ನಲ್ಲಾದರೂ ಬಿಗ್ ಬಾಸ್ ಗೆ ಬರಬೇಕೇ ಹಾಗಿದ್ದರೆ ಕಮೆಂಟ್ ಮಾಡಿ ತಿಳಿಸಿ.