ರಾಘಣ್ಣ ದೊಡ್ಮನೆಯ ಎರಡನೇ ರಾಜಕುಮಾರ. ಸರಳತೆ, ಮಾತುಕತೆ ಎಲ್ಲದರಲ್ಲೂ ಕೂಡ ಅಣ್ಣಾವ್ರನ್ನೇ ಹೋಲುವ ಇವರು ಸಿನಿಮಾ ರಂಗ ದ ಬದಲು ಬೇರೆ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎನ್ನುವುದು ರಾಜಕುಮಾರ್ ಅವರ ಆಸೆಯಾಗಿತ್ತು. ಹೀಗಾಗಿ ವೈದ್ಯರಾಗುವ ಕನಸು ಕಂಡಿದ್ದ ರಾಘವೇಂದ್ರ ರಾಜಕುಮಾರ್ ಅವರನ್ನು ಅದೃಷ್ಟ ಸಿನಿಮಾ ರಂಗದ ಕಡೆಗೆ ಎಳೆದು ತಂದಿತ್ತು.
ಶಿವಣ್ಣ ಪುನೀತ್ ಹಾದಿಯಾಗಿ ತಾವು ಚಿತ್ರರಂಗ ಪ್ರವೇಶಿಸಿದ ರಾಘಣ್ಣರವರಿಗೆ ಆರಂಭದಲ್ಲಿ ಅತ್ಯುತ್ತಮವಾದ ಸ್ವಾಗತ ಸಿಕ್ಕಿತು. ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ಸ್ಪಸ್ತಿಕ್ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡು ದೊಡ್ಮನೆ ಖ್ಯಾತಿ ಬೆಳಗಿದರು.
ನಂತರ ಅವಕಾಶಗಳು ಕಡಿಮೆಯಾದ ಮೇಲೆ ದೊಡ್ಮನೆ ಪ್ರೊಡಕ್ಷನ್ ಹೌಸ್ ವಜ್ರೇಶ್ವರಿ ಕಂಬೈನ್ಡ್ಸ್ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡರು. ಇವರು ಬದುಕಿನಲ್ಲಿ ಉಳಿದ ಸಹೋದರರಿಗಿಂತ ಹೆಚ್ಚು ಏರುಪೇರು ಕಂಡವರು ಎಂದೇ ಹೇಳಬಹುದು. ಆದರೆ ಸಹೋದರರ ಪ್ರೀತಿ ವಾತ್ಸಲ್ಯ ಮಡದಿ ಆರೈಕೆ ರಾಘಣ್ಣನಿಗೆ ಮರು ಜೀವ ಕೊಟ್ಟಿದೆ.
ಸಿನಿಮಾ ಸೋಲು ಗೆಲುವು ಮಾತ್ರವಲ್ಲದೇ ಆರೋಗ್ಯದ ವಿಚಾರದಲ್ಲಿ ಕೂಡ ವೈಪರೀತ್ಯಗಳನ್ನು ಕಂಡಾಗ ಪ್ರತಿಯೊಬ್ಬರಿಗೂ ಕುಟುಂಬದ ಸಹಕಾರವೇ ಮುಖ್ಯವಾಗುತ್ತದೆ. ಹಾಗೆಯೇ ರಾಘಣ್ಣನಿಗೂ ಕೂಡ ಆ ಎಲ್ಲಾ ಸಮಯದಲ್ಲೂ ಧೈರ್ಯ ತುಂಬಿದ್ದು ಪತ್ನಿಯಂತೆ.
ಅಣ್ಣಾವ್ರ ಮೂರು ಜನ ಸೊಸೆಯರಲ್ಲಿ ಹಿರಿ ಸೊಸೆ ಗೀತಾ ಶಿವರಾಜಕುಮಾರ್ ಹಾಗೂ ಕಿರಿ ಸೊಸೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಗ್ಗೆ ನಾವು ಸಾಕಷ್ಟು ತಿಳಿದುಕೊಂಡಿದ್ದೇವೆ ಆದರೆ ಮಂಗಳಮ್ಮ ರವರು ಹೆಚ್ಚಾಗಿ ಮಾಧ್ಯಮಗಳೆದುರು ಮಾತನಾಡುವುದಿಲ್ಲ ಕುಟುಂಬದ ಕಾರ್ಯಕ್ರಮ ಬಿಟ್ಟು ಬೇರೆ ಕಾರ್ಯಕ್ರಮಗಳ ಕಾಣಿಸಿಕೊಳ್ಳುವುದಿಲ್ಲ.
ಹೀಗಾಗಿ ಅವರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ ಅಸಲಿಗೆ ಮಂಗಳಮ್ಮ ಬೇರೆ ಯಾರು ಇಲ್ಲ ಗೀತಾ ರವರ ತಂಗಿ ಮತ್ತು ಇವರದ್ದು ಕೂಡ ಲವ್ ಮ್ಯಾರೇಜ್ ಆಗಿದೆ. ಅಣ್ಣಾವ್ರು ಮಕ್ಕಳಿಗೆ ಹಲವು ಕಂಡೀಶನ್ ಹಾಕಿದ್ದರು ಅದರಲ್ಲಿ ಮದುವೆ ಆದ ನಂತರವೇ ಸಿನಿಮಾ ಎನ್ನುವುದಕ್ಕೂ ಕೂಡ ಒಂದಾಗಿತ್ತು.
ಅಂತೆಯೇ ಶಿವರಾಜ್ ಕುಮಾರ್ ಅವರು ಗೀತಾ ಅವರ ಕೈ ಹಿಡಿದ ಮೇಲೆ ಸಿನಿಮಾಗಳಲ್ಲಿ ಅಭಿನಯಿಸಲು ಶುರು ಮಾಡಿದರು. ರಾಘಣ್ಣ ಕೂಡ ಸಿನಿಮಾಗೆ ಬರುವುದು ಎಂದು ನಿರ್ಧಾರ ಮಾಡಿದ ಮೇಲೆ ಮದುವೆ ಆಗಲೇ ಬೇಕಿತ್ತು ಹೀಗಾಗಿ ತಮಗೆ ಹೊಂದಿಕೊಳ್ಳುವ ಹೆಣ್ಣಿಗಾಗಿ ಕಾಯುತ್ತಿದ್ದರು.
ಅದೇ ಸಂದರ್ಭದಲ್ಲಿ ಶಿವಣ್ಣನವರ ಮದುವೆಯಲ್ಲಿ ಮಂಗಳಮ್ಮ ಅವರು ಲವಲವಿಕೆಯಿಂದ ಓಡಾಡುತ್ತಿದ್ದನ್ನು ಕಂಡ ರಾಘಣ್ಣ ಅವರ ನಡೆ-ನುಡಿಗಳನ್ನು ಗಮನಿಸಿ ನನ್ನ ತಾಯಿಯ ಗುಣಗಳು ಇವರಲ್ಲೂ ಇದೆ ಹೀಗಾಗಿ ಈ ಹುಡುಗಿಯೇ ಪತ್ನಿ ಆಗಬೇಕು ಎಂದು ಬಯಸಿದರು. ಬಳಿಕ ಗೀತಾ ಅವರ ಅಮ್ಮನ ತಂಗಿ ಮಗಳೇ ಮಂಗಳಮ್ಮ ನವರು ಎನ್ನುವುದು ತಿಳಿದ ಬಳಿಕ ಇನ್ನಷ್ಟು ಧೈರ್ಯ ಬಂತು.
ಮಂಗಳಮ್ಮರವರಿಗೆ ಪ್ರೇಮ ನಿವೇದಿಸಿಕೊಂಡು ಎರಡು ಕುಟುಂಬದವರನ್ನು ಒಪ್ಪಿಸಿ ಕೈ ಹಿಡಿದರು. ಇಂದಿಗೂ ಕೂಡ ಇಷ್ಟು ವರ್ಷದ ದಾಂಪತ್ಯದ ಬಳಿಕ ನನ್ನ ಎರಡನೇ ತಾಯಿ ಮಂಗಳಮ್ಮ ನನ್ನ ತಾಯಿಯ ಗುಣಗಳು ಆಕೆಯಲ್ಲಿ ಹಚ್ಚೊತ್ತಿವೆ ಎಂದು ಹೇಳುತ್ತಾ ಮಡದಿಯಲ್ಲಿ ತಾಯಿಯನ್ನು ಕಾಣುತ್ತಾರೆ ರಾಘಣ್ಣ.
ರಾಘಣ್ಣ ಹಾಗೂ ಮಂಗಳಮ್ಮ ಅವರಿಗೆ ಇಬ್ಬರು ಗಂಡು ಮಕ್ಕಳು ಈಗಾಗಲೇ ಹಿರಿಯ ಮಗ ವಿನಯ್ ರಾಜಕುಮಾರ್ ಸಿದ್ದಾರ್ಥ ಸಿನಿಮಾ ಮೂಲಕ ಇಂಡಸ್ಟ್ರಿ ಪ್ರವೇಶಿಸಿದ್ದಾರೆ ಅನಂತು v/s ನುಸ್ರತ್, ರನ್ ಆಂಟೋನಿ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಎರಡನೇ ಮಗ ಗುರು ರಾಘವೇಂದ್ರ ರಾಜಕುಮಾರ್ ಅಲಿಯಾಸ್ ಯುವ ಕೂಡ ಸಿನಿಮಾರಂಗಕ್ಕೆ ಪ್ರವೇಶ ಮಾಡಿದ್ದಾರೆ.
ಇವರು ಸಹ ಮದುವೆಯಾದ ಬಳಿಕವೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಅಪ್ಪು ಇಲ್ಲದ ನೋವನ್ನು ಅಭಿಮಾನಿಗಳು ಯುವನನ್ನು ಕಂಡು ಮರೆಯುತ್ತಿದ್ದಾರೆ. ಇವರ ಬಹು ನಿರೀಕ್ಷಿತ ಚಿತ್ರ ಯುವರಣಧೀರ ಕಂಠೀರವ ಸಿನಿಮಾಗೆ ಇಡೀ ಕರುನಾಡೇ ಕಾಯುತ್ತಿದೆ ನೀವು ಕೂಡ ಅದರಲ್ಲಿ ಒಬ್ಬರಾಗಿದ್ದರೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.