ಕರ್ನಾಟಕದ ತುಂಬೆಲ್ಲಾ ಈಗ ಕಾಟೇರನದ್ದೇ ಮಾತು. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರು ಕಾಟೇರನಾಗಿ ಕಾಣಿಸಿಕೊಂಡಿರುವ ಕಾಟೇರ ಚಿತ್ರವು (Katera Cinema) ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ ಡಿ ಬಾಸ್ ಸೆಲೆಬ್ರಿಟಿಗಳೆಲ್ಲ ಇಂತಹದೊಂದು ಓಪನಿಂಗ್ ಆಗಿ ಕಾಯುತ್ತಿದ್ದರು, ಈಗ ನಮಗೂ ಕಾಲರ್ ಎತ್ತಿ ನಡೆಯುವ ಕಾಲ ಬಂದಿದೆ ಎಂದು ಹೇಳಿಕೊಂಡು ಸಂಭ್ರಮಿಸುತಿದ್ದಾರೆ.
ಸಿನಿಮಾ ತೆರೆಕಂಡು ವಾರದಲ್ಲೇ ಗಳಿಕೆಯಲ್ಲಿ ಭಾರಿ ಮಂಚೂಣಿಯಲ್ಲಿದ್ದು ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ ಡಿ ಬಾಸ್ ಎನ್ನುವುದನ್ನು ಪ್ರೂವ್ ಆಗುತ್ತಿದೆ. ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಟೇರ ಸಿನಿಮಾ ಕುರಿತು ಒಂದಲ್ಲ ಒಂದು ಅಪ್ಡೇಟ್ ಹೊರಬೀಳುತ್ತಲಿದ್ದು ನಟ ದರ್ಶನ್ ಅವರು ಕೂಡ ಇದೇ ಸಂತಸದಲ್ಲಿ ಹಲವಾರು ಕಡೆ ಸಂದರ್ಶನ ಕೊಡುತ್ತಿದ್ದಾರೆ.
KGF ದಾಖಲೆ ಮುರಿದ ಧ್ರುವ ಸರ್ಜಾ ಮಾರ್ಟಿನ್ ಆಡಿಯೋ ರೈಟ್ಸ್.! ಎಷ್ಟು ಕೋಟಿಗೆ ಸೇಲ್ ಆಗಿದೆ ಗೊತ್ತ.?
ದರ್ಶನ್ ಅವರ ಸಿನಿಮಾ ರುಚಿ ಒಂದು ರೀತಿಯದ್ದಾದರೆ ಅವರ ಸಂದರ್ಶನಗಳನ್ನು ನೋಡುವ ಮಜಾವೇ ಬೇರೆ. ಪ್ರಶ್ನೆ ಕೇಳಿದವರೆ ಬೆಚ್ಚಿಬೀಳುವಂತೆ, ರಾಪಿಡ್ ಆಗಿ ಬೆಂಕಿ ಯಂತಹ ಉತ್ತರಗಳನ್ನು ಇದ್ದಿದ್ದು ಇದ್ದಂಗೆ ಹೇಳುವ ದರ್ಶನ್ ಅವರ ಸಂದರ್ಶನ ನೇರ ದಿಟ್ಟ ನಿರಂತರ.
ಹಾಗೆಯೇ ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ನಿರೂಪಕಿಯಿಂದ ದರ್ಶನ್ ಅವರಿಗೆ ಕಾಟೇರ ಸಿನಿಮಾದ ಕುರಿತು, ಸಿನಿಮಾದಲ್ಲಿ ಅವರು ಆಯ್ದುಕೊಂಡಿರುವ ಪಾತ್ರ ಹಾಗೂ ಆ ಕಥೆಯ ಕುರಿತು ಮತ್ತು ನಿರ್ದೇಶಕ ನಿರ್ಮಾಪಕರು ಸೇರಿದಂತೆ ಅವರ ಅನೇಕ ಬಗೆಯ ಪ್ರಶ್ನೆಗಳು ಎದುರಾಗಿವೆ.
ಎಲ್ಲ ಪ್ರಶ್ನೆಗಳಿಗೂ ಕೂಡ ಮನಸಾರೆ ಉತ್ತರ ಕೊಟ್ಟವರು ರೈತರ ಬಗ್ಗೆ ಕೂಡ ಮಾತನಾಡುವುದನ್ನು ಮರೆತಿಲ್ಲ. ಅದೇ ರೀತಿ ಮಾತನಾಡುವಾಗ ಇವರಿಗೆ ಸಿನಿಮಾ ಬೇರೆ ಭಾಷೆಗಳಲ್ಲಿ ಕಾಟೇರ ಡಬ್ ಆಗಿ ರಿಲೀಸ್ ಆಗುವುದರ ಕುರಿತು ಪ್ರಶ್ನೆ ಎದುರಾಗಿದೆ.
ದರ್ಶನ್ ನಟನೆಯ ಕಾಟೇರ ಚಿತ್ರ ನೋಡಲಿದ್ದಾರೆ ಕಿಚ್ಚ ಸುದೀಪ್.! ಮುನಿಸು ಮರೆತು ಒಂದಾದ ದೋಸ್ತುಗಳು.!
ಈಗ ಪ್ಯಾನ್ ಇಂಡಿಯಾ ಸಿನಿಮಾದ (Pan India) ಕಾಲವಾಗಿರುವುದರಿಂದ ಕನ್ನಡ ತಮಿಳು ತೆಲುಗು ಹಿಂದಿ ಯಾವುದೇ ಭಾಷೆಯಲ್ಲಿ ಸ್ಟಾರ್ ಸಿನಿಮಾ ತಯಾರಾದರೂ ದೊಡ್ಡ ಬಜೆಟ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿಯೇ ತಯಾರಾಗುವುದು. ಅಥವಾ ಕಾಂತರಾ ಸಿನಿಮಾ ರೀತಿ ಸಣ್ಣದಾಗಿ ಶುರುವಾಗಿದ್ದು ಕಥೆ ಗಟ್ಟಿತನದಿಂದ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಗ್ಗೆ ಬದಲಾಗಲೂಬಹುದು.
ಅದೇ ರೀತಿ ದರ್ಶನ್ ಸಿನಿಮಾ ಡಬ್ ಆಗುವುದರ ಕುರಿತು ಮಾತನಾಡಿದ ನಿರೂಪಕರು ಪರಭಾಷೆಯಲ್ಲಿ ಕೂಡ ನಿಮ್ಮನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ ಎನ್ನುವುದರ ಕುರಿತು ಅದು ನಿಮಗೆ ಹೇಗೆ ಪರಿಣಾಮ ಬೀರುತ್ತದೆ ಎಂದು ಕೇಳಿದ ಪ್ರಶ್ನೆಗೆ ಇದು ಯಾವುದೇ ರೀತಿಯ ಬದಲಾವಣೆ ತರುವುದಿಲ್ಲ ಯಾರು ಇಷ್ಟಪಟ್ಟರು ಗೌರವಿಸುತ್ತೇವೆ.
ಅಪ್ಪನ ಹೆಸರು ಉಳಿಸೋದು ಹೇಗಂತ ನಿಮ್ಮನ್ನು ನೋಡಿ ಕಲಿಬೇಕು.! ಶಿವಣ್ಣನ ಬಗ್ಗೆ ಧನುಷ್ ಗುಣಗಾನ.!
ಆದರೆ ಸಿನಿಮಾಗಾಗಿ ಬೇರೆ ರಾಜ್ಯಗಳಿಗೆ ಹೋಗಿ ಪ್ರಮೋಷನ್ ಗಾಗಿ ತಿರುಗಾಡಿ ಅಲ್ಲಿರುವವರ ಕೈಕಾಲು ಹಿಡಿದು ಬದುಕಲು ಆಗುವುದಿಲ್ಲ ಇಲ್ಲಿರುವವರ ಕಾಲುಗಳನ್ನು ತೊಳೆದುಕೊಂಡು ಬದುಕುತ್ತೇವೆ ಅಷ್ಟೇ ಸಾಕು ನಮಗೆ ಎಂದು ಸ್ಟ್ರೈಟ್ ಆಗಿ ಉತ್ತರ ಕೊಟ್ಟಿದ್ದಾರೆ. ದರ್ಶನ್ ಕೂಡ ಇಂತಹದೊಂದು ಮಾತನ್ನು ಬಹಳ ಹಿಂದಿನಿಂದಲೂ ಹೇಳುತ್ತಲೇ ಬರುತ್ತಿದ್ದಾರೆ.
ದರ್ಶನ್ ಅವರ ಅನೇಕ ಸಿನಿಮಾಗಳು ಪರಭಾಷೆಗೆ ಡಬ್ ಆಗಿದೆ ಆದರೆ ದರ್ಶನ್ ಅವರಿಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಆಗಲಿ ಅಥವಾ ಸಿನಿಮಾ ಬೇರೆ ಭಾಷೆಗೆ ಡಬ್ ಮಾಡುವುದರ ಬಗ್ಗೆ ಆಗಲಿ ಆಸಕ್ತಿ ಇಲ್ಲ ಇದನ್ನು ನೇರವಾಗಿ ಹೇಳುತ್ತಾ ಬಂದಿದ್ದಾರೆ, ಮತ್ತೆ ಅದು ರಿಪೀಟ್ ಆಗಿದೆ. ಅದೇನೇ ಆಗಲಿ ಕನ್ನಡದ ಸಾಮಾಜಿಕ ಕಳಕಳಿ ಇರುವ ಕಾಟೇರ ಚಿತ್ರವು ಇಡೀ ದೇಶವೇ ತಿರುಗಿ ನೋಡುವಂತಹ ಸಕ್ಸಸ್ ಕಾಣಲಿ ಎಂದು ಡಿ ಬಾಸ್ ಅಭಿಮಾನಿಗಳಾಗಿ ನಾವು ಆಶಿಸೋಣ.