ಸಾಮಾನ್ಯವಾಗಿ ಟ್ರಾಫಿಕ್ ನಲ್ಲಿ (traffic) ಸಿಲುಕಿಕೊಂಡ ನಾವು ಕಚೇರಿಗೆ ಅಥವಾ ಶಾಲಾ-ಕಾಲೇಜಿಗೆ ಅಥವಾ ಕೆಲಸ ಮುಗಿಸಿಕೊಂಡು ಮನೆಗೆ ತಡವಾಗಿ ಬಂದಾಗ ಯಾರಾದರೂ ಯಾಕೆ ಲೇಟ್ ಎಂದು ಪ್ರಶ್ನೆ ಮಾಡಿದರೆ ಕೋಪಗೊಂಡು ಹೇಳುವುದು ಒಂದೇ ಮಾತು. ಹಾರಿಕೊಂಡು ಬರಲು ನನಗೆ ರೆಕ್ಕೆ ಇದೆಯಾ? ಎಂದು, ರೆಕ್ಕೆ ಇಲ್ಲದಿದ್ದರೆ ಏನಾಯ್ತು ಇನ್ನು ಮುಂದೆ ಹಾರುವ ಕಾರು (flying car) ನಿಮ್ಮನ್ನು ಹೊತ್ತು ತರಲಿದೆ.
ನಿಮಗೆ ಬಹಳ ಆಶ್ಚರ್ಯ ಎನಿಸಬಹುದು ಆದರೆ ಈ ರೀತಿಯ ಒಂದು ಪ್ರಯೋಗ ನಡೆದಿರುವುದು ಅಕ್ಷರಶಃ ಸತ್ಯ. ಪ್ರಯೋಗ ಮಾತ್ರವಲ್ಲದೆ ಎಲ್ಲಾ ರೀತಿಯಲ್ಲೂ ಪರೀಕ್ಷೆಗಳನ್ನು ಪಾಸ್ ಆಗಿ 2025ರಲ್ಲಿ ಮಾರುಕಟ್ಟೆಗೆ ಇಳಿಯಲು ತಯಾರಾಗಿದೆ ಕೂಡ. ಏರೋಪ್ಲೇನ್ ಮಾತ್ರ ಹಾರಲು ಸಾಧ್ಯ ಕಾರು ಹೇಗೆ ಹಾರುತ್ತದೆ ಎಂದು ಪ್ರಶ್ನೆ ಮೂಡಬಹುದು. ಅದಕ್ಕೂ ಕೂಡ ಉತ್ತರ ಮತ್ತು ವಿವರ ಇಲ್ಲಿದೆ ನೋಡಿ.
ವೃದ್ದಾಪ್ಯ ವೇತನ 2,000 ರೂಪಾಯಿಗೆ ಏರಿಸುವಂತೆ ಮುಖ್ಯಮಂತ್ರಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ.!
ಅಲೆಫ್ ಏರೋನಾಟಿಕ್ಸ್ ವಿಶ್ವದ ಮೊದಲ ಹಾರುವ ಕಾರನ್ನು (Aleph Aeronautics Unveils the World’s First Flying Car with FAA Approval) ಬಿಡುಗಡೆ ಮಾಡಿದ್ದು, ವಾಹನ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಉದ್ದವಾದ ಟೇಕ್-ಆಫ್ ಹಾಗೂ ಲ್ಯಾಂಡಿಂಗ್ ಸಾಮರ್ಥ್ಯಗಳೊಂದಿಗೆ ತಯಾರಾಗಿರುವ ಈ ಕಾರ್ ವಿದ್ಯುತ್ ಚಾಲಿತ ಕಾರ್ (electric car) ಆಗಿದೆ.
ಈ ಅದ್ಭುತವು ಒಂದು ಅಥವಾ ಇಬ್ಬರು ಪ್ರಯಾಣಿಕರು ಕುಳಿತು ಪ್ರಯಾಣಿಸಿದಷ್ಟು ಸಾಮರ್ಥ್ಯದಲ್ಲಿ ತಯಾರಾಗಿದೆ US (United state) ಸರ್ಕಾರದಿಂದ ಇದರ ತಯಾರಿಕೆಗೆ ಅನುಮೋದನೆ ಕೂಡ ಸಿಕ್ಕಿದ್ದು ಎಲ್ಲಾ ಸುರಕ್ಷಿತ ಪರೀಕ್ಷೆಗಳಲ್ಲೂ ಪಾಸ್ ಆಗಿ ಹಾರಲು ಅರ್ಹವಾಗಿದೆ ಎಂದು ಅನುಮೋದಿಸಲ್ಪಟ್ಟಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (Federal aviation administration) ಇದಕ್ಕೆ ಪ್ರಮಾಣ ಪತ್ರ (certificate) ನೀಡಿರುವ ಸಂಸ್ಥೆಯಾಗಿದೆ.
ಆದಿಲ್ ಖಾನ್ ನನ್ನ ಬೆ-ತ್ತ-ಲೆ ವಿಡಿಯೋ ಮಾರಾಟ ಮಾಡುತ್ತಿದ್ದಾನೆ – ನಟಿ ರಾಖಿ ಸಾವಂತ್
ಈ ಹೊಸ ಆವಿಷ್ಕಾರವು ವಾಹನವು ಸಂಚಾರ ದಟ್ಟಣೆಗೆ ಪರಿಹಾರ ತರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹಾರುವ ಕಾರಿನ ಬೆಲೆ $300,000 ಎಂದು ಅಂದಾಜಿಸಲಾಗಿದೆ. ಭಾರತದ ಮಾರುಕಟ್ಟೆ ಬೆಲೆಯಲ್ಲಿ ಈ ವಾಹನದ ಮೌಲ್ಯ 2.46 ಕೋಟಿ ರೂ. ಈ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 110 ಮೈಲುಗಳ ಮೈಲೇಜ್ ನೀಡಲಿದೆಯಂತೆ.
2025 ರ ಅಂತ್ಯದ ವೇಳೆಗೆ ಗ್ರಾಹಕರ ಕೈಗೆ ತಲುಪಲಿದ್ದು ಆ ಬಳಿಕ ಇದು ಸಾರಿಗೆ ತಂತ್ರಜ್ಞಾನದಲ್ಲಿ ಗಮನಾರ್ಹ ಬದಲಾವಣೆ ತರಲಿದೆ ಎಂದು ನಿರೀಕ್ಷಿಸಬಹುದಾಗಿದೆ. ಈ ಹಾರುವ ಕಾರುಗಳ ಬಳಕೆಯ ಪರಿಣಾಮವಾಗಿ ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸಲು ಮತ್ತು ಒಂದು ವೇಳೆ ನಾವು ಸಂಚರಿಸುವ ಮಾರ್ಗದಲ್ಲಿ ವಾಹನದ ಘಟನೆ ಇದ್ದರೆ ದಿಢೀರ್ ಎಂದು ನಾವು ಪ್ರಯಾಣಿಸುವ ಮಾರ್ಗವನ್ನು ಬದಲಾಯಿಸಲು ಅವಕಾಶ ಮಾಡಿಕೊಡುವುದರಿಂದ ಬಾರಿ ಕುತೂಹಲ ಉಂಟಾಗಿದೆ.
ಹಿಂದುಳಿದ ವರ್ಗದವನು ಎನ್ನುವ ಕಾರಣಕ್ಕೆ ನನ್ನನ್ನು ದ್ವೇಷ ಮಾಡುತ್ತಿದ್ದಾರೆ.!
ಈ ಫ್ಯೂಚರಿಸ್ಟಿಕ್ ವಾಹನಗಳ ಆಗಮನಕ್ಕಾಗಿ ಪ್ರಪಂಚದ ಹಲವು ದೇಶಗಳು ಇದೇ ಬಗೆಯ ನಿರೀಕ್ಷೆ ಮತ್ತು ಕುತೂಹಲದಿಂದ ಕಾತರಿಸುತ್ತಿದೆ. ಬೆಲೆ ಹೆಚ್ಚಾಗಿರುವುದರಿಂದ ಎಲ್ಲಾ ವರ್ಗದವರ ಕೈಗೂ ಎಟಕುತ್ತದೆ ಎಂದು ಊಹಿಸುವುದು ಕ’ಷ್ಟವಾಗಿದೆ. ಆದರೂ ಕೂಡ ಉಳ್ಳವರ ಪಾಲಿಗೆ ತಮ್ಮ ಟೈಮ್ ಸೇವ್ ಮಾಡಲು ಬೆಸ್ಟ್ ಆಪ್ಷನ್ ಆಗುತ್ತದೆ ಎನ್ನಬಹುದು.
ಆದಷ್ಟು ಬೇಗ ಇಂತಹದೊಂದು ಬದಲಾವಣೆ ಕಂಡುಬರಲಿ, ಟೆಕ್ನಾಲಜಿ ಇನ್ನಷ್ಟು ಬೆಳೆಯುತ್ತಾ ಹೋಗಲಿ ಆದರೆ ಬೆಲೆ ಕೂಡ ಅಗ್ಗವಾಗಿ ಎಲ್ಲರಿಗೂ ಸೌಲಭ್ಯ ತಲುಪುವಂತಾಗಲಿ ಎಂದು ಬಯಸೋಣ. ಈ ಹೊಸ ಆವಿಷ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.