ಬಿಗ್ ಬಾಸ್ ಹಾಗೂ ಡ್ಯಾನ್ಸ್ ರಿಯಾಲಿಟಿ ಶೋಗಳ ಖ್ಯಾತಿಯ ಕಿಶನ್ (Bigboss Kishan) ಡಾನ್ಸ್ ಮಾಡುವುದರಲ್ಲಿ ಪಂಟರ್ ಎಂದು ಎಲ್ಲರೂ ಬಲ್ಲರು. ಕನ್ನಡದ ರಿಯಾಲಿಟಿ ಶೋಗಳು ಮಾತ್ರವಲ್ಲದೆ ಹಿಂದಿ ಡ್ಯಾನ್ಸ್ ರಿಯಾಲಿಟಿ ಶೋಗಳನ್ನು ಕೂಡ ಮಿಂಚಿ ಮನೆ ಮನೆ ಮಾತಾಗಿದ್ದ ಕಿಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆಕ್ಟಿವ್ ಆಗಿರುತ್ತಾರೆ.
ಫೇಸ್ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲೂ ಕೂಡ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಇವರು ಆಗಾಗ ಡಾನ್ಸ್ ವಿಡಿಯೋಗಳನ್ನು ಹಂಚಿಕೊಂಡು ಮನೋರಂಜಿಸುತ್ತಿರುತ್ತಾರೆ. ಇದೀಗ ಇವರು ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗ್ಡೆ (Samyuktha Hedge) ಜೊತೆಗೆ ಕನ್ನಡದ ರೋಮ್ಯಾಂಟಿಕ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ, ವಿಡಿಯೋ ಸೋಶಿಯಲ್ ವಿಡಿಯೋದಲ್ಲಿ ವೈರಲ್ ಆಗುತ್ತಿದ್ದು ಪರ ಮತ್ತು ವಿರೋಧ ಚರ್ಚೆಗೆ ಕಾರಣವಾಗಿದೆ.
ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕಿರಿಕ್ ಹುಡುಗಿಯಾಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಸಂಯುಕ್ತ ಹೆಗಡೆ ಅದ್ಯಾವ ಘಳಿಗೆ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರೋ ಗೊತ್ತಿಲ್ಲ. ಸಿನಿಮಾ ಗಿಂತ ಹೆಚ್ಚಾಗಿ ಸದಾ ಕಾಲ ಒಂದಲ್ಲ ಒಂದು ವಿವಾದದ ಮೂಲಕ ಸುದ್ದಿಯಲ್ಲಿರುತ್ತಾರೆ. ಹೆಚ್ಚಾಗಿ ತಮ್ಮ ಉಡುಗೆ ತೊಡುಗೆ ಕಾರಣಕ್ಕೆ ಟ್ರೋಲ್ ಆಗುವ ಇವರು ನೆಟ್ಟಿಗಳಿಂದ ಖಾರವಾದ ಕಮೆಂಟ್ ಪಡೆದರೂ ಆ ಗೀಳನ್ನು ನಿಲ್ಲಿಸಿದಂತಿಲ್ಲ.
ಸದಾ ತಮ್ಮ ಹಾಟ್ ಫೋಟೋ ಶೂಟ್ ಇಂದ ಪಡ್ಡೆ ಹುಡುಗರ ನಿದ್ದೆಗೆಡಿಸಿ ಹಲ್ಚಲ್ ಸೃಷ್ಟಿಸಿರುವ ನಟಿ ಈಗ ಒಂದು ಹೆಜ್ಜೆ ಮುಂದೆ ಹೋಗಿ ಕಿಶನ್ ಜೊತೆ ರೋಮ್ಯಾಂಟಿಕ್ ಹಾಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಜಂಗ್ಲಿ ಸಿನಿಮಾದ ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ ಹಾಡಿಗೆ ಮೈ ಚಳಿ ಬಿಟ್ಟು ಕುಣಿದಿದ್ದಾರೆ.
ಕಿಶನ್ ಹಾಗೂ ಸಂಯುಕ್ತ ಹೆಗಡೆ ಇಬ್ಬರೂ ಕೂಡ ತಮ್ಮ instagram ಖಾತೆಯಲ್ಲಿ ಈ ಹಾಡಿನ ತುಣುಕನ್ನು ಹಂಚಿಕೊಂಡಿದ್ದಾರೆ. ಸತತವಾಗಿ 2 ಗಂಟೆಗಿಂತ ಹೆಚ್ಚು ಕಾಲ ಸಮಯ ತೆಗೆದುಕೊಂಡು ಹಾಡನ್ನು ಕೊರಿಯೋಗ್ರಾಫ್ ಮಾಡಿಕೊಂಡು ಕೆಲ ನಿಮಿಷಗಳ ರೀಲ್ ಮಾಡಿ ಶಾರ್ಟ್ ವಿಡಿಯೋ ಹರಿ ಬಿಟ್ಟಿದ್ದಾರೆ. ಈ ಹಾಡಿನಲ್ಲಿ ಇವರು ಹಾಕಿರುವ ಸ್ಟೆಪ್ಗಳು ಸಾಹಸ ರೀತಿಯಲ್ಲಿ ಇದ್ದು ಡ್ಯಾನ್ಸ್ ಎಂದು ನೋಡಿದವರು ಮೆಚ್ಚುಗೆ ಸೂಸುತಿದ್ದಾರೆ.
ಆದರೆ ಈ ಹಾಡಿನಲ್ಲಿರುವ ಕಾಶ್ಚ್ಯೂಮ್ ಕೆಲ ವರ್ಗಕ್ಕೆ ಬೇಸರ ತರಿಸಿದೆ ಹಾಗಾಗಿ ಒಪ್ಪದವರು ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. ಕಿಶನ್ ಕಪ್ಪುಬಿಳುಪು ಬಟ್ಟೆಯೊಂದಿಗೆ ಕಾಣಿಸಿಕೊಂಡಿದ್ದರೆ ಸಂಯುಕ್ತ ಹೆಗಡೆ ಅವರು ತುಂಡುಡುಗೆಯಲ್ಲಿ ಕುಣಿದಿದ್ದಾರೆ, ಇದನ್ನು ನೋಡಿ ನೋಡುಗರೇ ನಾಚುವಂತಿದೆ ಎಂದು ನೆಟ್ಟಿಗರು ಕುಟುಕುತ್ತಿದ್ದಾರೆ.
ಇದೇ ಮೊದಲಲ್ಲ ಸಂಯುಕ್ತ ಹೆಗಡೆ ಹಿಂದೆ ಕೂಡ ಪಾರ್ಕ್ ಒಂದಕ್ಕೆ ಟೂ ಪೀಸ್ ವರ್ಕೌಟ್ ಮಾಡಲು ಹೋಗಿ ಅಲ್ಲಿನ ಸ್ಥಳಿಯರಿಂದ ಮು’ಖ’ಭಂ’ಗ ಅನುಭವಿಸಿದ್ದರು. ಇದಾದ ಮೇಲೆ ನಟಿ ಬುದ್ಧಿ ಕಲಿಯುತ್ತಾರೆ ಎಂದುಕೊಳ್ಳಲಾಗಿತ್ತು ಆದರೆ ಅದು ಹುಸಿಯಾಯಿತು.
ಮೈ ಮೇಲೆ ಬಟ್ಟೆ ಇರುವುದೇ ಭಾರ ಎನ್ನುವಂತೆ ದಿನದಿಂದ ದಿನಕ್ಕೆ ಸಂಯುಕ್ತ ಹೆಗಡೆ ಮೈ ಮಾಟ ತೋರುವುದು ಹೆಚ್ಚು ಮಾಡುತ್ತಿದ್ದಾರೆ ಇದರಿಂದ ನೆಟ್ಟಿದರು ಸಂಯುಕ್ತ ಹೆಗಡೆ ನಾಡಿನ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ, ಇಬ್ಬರಿಬ್ಬರಿಗೂ ಮಾಡಲು ಕೆಲಸ ಇಲ್ಲ ಹೀಗಾದರೂ ಸುದ್ದಿಯಲ್ಲಿರಲು ಕುಣಿಯುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.