ಸಿನಿಮಾ ವಿಚಾರಕ್ಕಿಂತ ತಾನು ಮಾಡಿಕೊಳ್ಳುವ ಕಾಂಟ್ರವರ್ಸಿಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್ (Bollywood actress Rakhi Savanth) ಮತ್ತೊಮ್ಮೆ ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರಿನ ಮೂಲದ ಆದಿಲ್ ಖಾನ್ ರನ್ನು (Mysore Adil Khan) ಮದುವೆಯಾಗಿದ್ದ ರಾಖಿ ವರ್ಷಗಳ ಹಿಂದೆ ಪತಿ ಮೇಲೆ ಅಕ್ರಮ ಸಂಬಂಧ, ಹಣ ವಂಚನೆ ಇನ್ನಿತ್ಯಾದಿ ದೂರುಗಳನ್ನು ಸಲ್ಲಿಸಿ ಜೈಲಿಗಟ್ಟಿದ್ದಾರೆ.
ಇದೀಗ ಆರು ತಿಂಗಳ ಜೈಲುವಾಸದ ನಂತರ ಹೊರಗೆ ಬಂದಿರುವ ಆದಿಲ್ ಖಾನ್ ಈ ಎಲ್ಲಾ ಆರೋಪಗಳಿಗೂ ಉತ್ತರ ಕೊಡುತ್ತಿದ್ದಾರೆ. ಆದಿಲ್ ಖಾನ್ ಅವರ ವರ್ಷನ್ ಕೇಳಿದ ಮೇಲೆ ಜನ ರಾಖಿ ಸಾವಂತ್ ಆರೋಪಗಳ ಮೇಲೆ ಅನುಮಾನ ಪಡುವಂತಾಗಿದೆ. ಗಂಡ ಹೆಂಡತಿ ಜಗಳ ಆದ ಮೇಲೆ ಇದೆಲ್ಲಾ ಮಾಮೂಲಿ ಎನ್ನುವುದನ್ನು ಮೀರುವ ಮಟ್ಟಿಗೆ ರಾಕಿ ಹಾಗೂ ಆದಿಲ್ ಜಗಳ ಬೀದಿ ರಂಪವಾಗಿದೆ.
ಹಿಂದುಳಿದ ವರ್ಗದವನು ಎನ್ನುವ ಕಾರಣಕ್ಕೆ ನನ್ನನ್ನು ದ್ವೇಷ ಮಾಡುತ್ತಿದ್ದಾರೆ.!
ಮೈಸೂರಿಗೆ ಬಂದು ಆದಿಲ್ ಖಾನ್ ಅವರ ಮನೆ ಮುಂದೆ ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ಗಲಾಟೆ ಮಾಡಿದ್ದ ರಾಖಿ ಸಾವಂತ್, ಆದಿಲ್ ಮನೆಯವರು ಹಿಂದು ಎನ್ನುವ ಕಾರಣಕ್ಕೆ ನನ್ನನ್ನು ಮನೆಗೆ ಸೇರಿಸುತ್ತಿಲ್ಲ ಎಂದು ದೂರಿದ್ದರು ಈಗ ಆದಿಲ್ ಖಾನ್ ಆರು ತಿಂಗಳ ಜೈಲುವಾಸದ ನಂತರ ಬೇಲ್ ಮೇಲೆ ಆಚೆ ಬಂದಿದ್ದಾರೆ.
ಹಾಗಾಗಿ ಮತ್ತೊಮ್ಮೆ ಮೈಸೂರಿಗೆ ಆಗಮಿಸಿರುವ ರಾಖಿ ಗಂಡನ ಮನೆಗೆ JCBಯಲ್ಲಿ ವಾದ್ಯಗಳ ಜೊತೆಗೆ ಬಂದು ಶಾ’ಕ್ ನೀಡಿದ್ದಾರೆ. ಈ ಬಾರಿ ಕೂಡ ಆದಿಲ್ ಹಾಗೂ ಕುಟುಂಬದ ಮೇಲೆ ಸಾಕಷ್ಟು ಆರೋಪ ಮಾಡಿರುವ ರಾಖಿ ಸಾವಂತ್ ಆದಿಲ್ ನನ್ನ ಬೆತ್ತಲೆ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಆದಿಲ್ ಖಾನ್ 2-3 ಲಕ್ಷಕ್ಕೆ ನನ್ನ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಬಾಲಿವುಡ್ ಗೆ ಎಂಟ್ರಿ ಕೊಡೋ ಕಾರಣಕ್ಕಾಗಿ ಆತ ಜೊತೆ ಪ್ರೀತಿಯ ನಾಟಕ ಮಾಡಿದ್ದಾನೆ, ನಾನು ನನ್ನ ಧರ್ಮ ಬದಲಾಯಿಸಿಕೊಂಡು ಇಸ್ಲಾಂ ಗೆ ಕನ್ವರ್ಟ್ ಆಗಿ ಫಾತಿಮಾ ಎಂದು ಹೆಸರು ಇಟ್ಟುಕೊಂಡೆ, ಈತನಿಗಾಗಿ ನಾನು ಎಷ್ಟೆಲ್ಲಾ ತ್ಯಾಗ ಮಾಡಿದೆ ಆದರೆ ನನಗೆ ಇವನು ಮೋಸ ಮಾಡಿದ ಎಂದು ಕೂಗಾಡಿದ್ದಾರೆ ಜೊತೆಗೆ ಹತ್ತಿರದಲ್ಲಿರುವ ಪೊಲೀಸ್ ಠಾಣೆಗೆ ಹೋಗಿ ಇಬ್ಬರ ನಡುವೆ ವಿ’ಚ್ಛೇ’ದ’ನವಾಗಿರುವ ಬಗ್ಗೆ ತಿಳಿಸಿದ್ದಾರೆ.
ಆದಿಲ್ ಜೈಲಿಂದ ಹೊರ ಬರುತ್ತಿದ್ದಂತೆ ರಾಖಿ ಸಾವಂತ್ ಮಾಡಿದ್ದ ಎಲ್ಲಾ ಆರೋಪಗಳಿಗೂ ಕೂಡ ಸಮಜಾಯಿಸಿ ನೀಡಿದ್ದರು. ನಾನು ವಿವಾಹವನ್ನು ಮುಚ್ಚಿಡುವ ಪ್ರಯತ್ನ ಮಾಡಿದೆ ಎಂದು ಹೇಳಿರುವ ಆರೋಪವೇ ಸುಳ್ಳು, ಆಕೆ ನಾವು ಮದುವೆ ಆಗಿದ್ದರೂ ಕೂಡ ಮೀಡಿಯಾಗಳ ಮುಂದೆ ನಮ್ಮ ಮದುವೆ ಯಾವಾಗ ಎಂದು ಕೇಳುತ್ತಿದ್ದಳು ನನಗೆ ಅದು ಗಾಬರಿಯಾಗುತ್ತಿತ್ತು.
ಅಂಧೇರಿ ವಿವಾಹ ಆಗುವಾಗ ಸಿಂಗಲ್ ಎಂದು ಬರೆದಿದ್ದಾಳೆ ಆದರೆ ಆಕೆಗೆ ರಿತೇಶ್ ಜೊತೆ ಮದುವೆಯಾಗಿತ್ತು ಇನ್ನೂ ವಿ’ಚ್ಛೇ’ದ’ನ ಆಗಿರಲಿಲ್ಲ, ಇದನ್ನು ಕೂಡ ಮುಚ್ಚಿಟ್ಟಿದ್ದಾಳೆ ನನಗೆ ಆದ ರೀತಿ ಅ’ನ್ಯಾ’ಯ ಬೇರೆ ಯಾವ ಹುಡುಗನಿಗೂ ಆಗಬಾರದು ಎಂದಿದ್ದರು. ಇರಾನಿ ಹುಡುಗಿಗೆ ನಾನು ಸಹಾಯ ಮಾಡಿದ್ದೆ ಅಷ್ಟೇ ಆಕೆಯ ಜೊತೆ ಸಂಪರ್ಕದಲ್ಲಿ ಇರಲಿಲ್ಲ, ಈ ಆರೋಪ ಕೂಡ ಸುಳ್ಳು.
ನಾನು ರಾಖಿ ಹಣ ಪಡೆದಿದ್ದೇನೆ ಎಂದು ಹೇಳುವುದು ಅತಿ ದೊಡ್ಡ ಸುಳ್ಳು, ಏಕೆಂದರೆ ನಾನೇ ಆಕೆಗೆ ದುಬೈನಲ್ಲಿ ಫ್ಲಾಟ್ ನೀಡಿದ್ದೇನೆ, ಡೈಮಂಡ್ ಉಂಗುರ ನೆಕ್ಲೆಸ್ ನೀಡಿದ್ದೇನೆ, ಅವಳ ಹುಟ್ಟುಹಬ್ಬಕ್ಕೆ ಬಂಗಾರದ ಒಡವೆಗಳನ್ನು ಕೂಡ ನೀಡುದ್ದೇನೆ. ಅವಳು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ನನ್ನ ಬೆ-ತ್ತ-ಲೆ ವಿಡಿಯೋ ರಾಖಿ ಬಳಿ ಇದೆ ನಾವು ಬೆಸ್ಟ್ ಜೋಡಿ ಎಂದು ಸಾಬೀತು ಪಡಿಸುವುದಕ್ಕೆ ಇದು ಬೇಕು ಎಂದು ಹೇಳಿದ್ದಳು ಎಂದು ಆದಿಲ್ ಹೇಳಿದ್ದರು. ಹಾಗಾಗಿ ರಾಖಿ ಈಗಿನ ನಡೆ ಅದಕ್ಕೆ ರಿವೆಂಜ್ ಎನ್ನುವಂತಿದೆ.
ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ನಿಲ್ಲಿಸಲು ನಿಮಿಷ ಸಾಕು ಎಚ್ಚರಿಕೆ ನೀಡಿದ NTK ಮುಖ್ಯಸ್ಥ ಸೀಮಾನ್.!