Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ವೃದ್ದಾಪ್ಯ ವೇತನ 2,000 ರೂಪಾಯಿಗೆ ಏರಿಸುವಂತೆ ಮುಖ್ಯಮಂತ್ರಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ.!

Posted on October 5, 2023 By Admin No Comments on ವೃದ್ದಾಪ್ಯ ವೇತನ 2,000 ರೂಪಾಯಿಗೆ ಏರಿಸುವಂತೆ ಮುಖ್ಯಮಂತ್ರಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ.!

 

ನೂತನ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ಗೃಹಲಕ್ಷ್ಮಿ ಯೋಜನೆಯಿಂದ (Gruhalakshmi Scheme) ಹೆಚ್ಚು ಸುದ್ದಿಯಲ್ಲಿ ಇದ್ದಾರೆ.

ಕಾಂಗ್ರೆಸ್ ಸರ್ಕಾರವು ಚುನಾವಣೆ ಪೂರ್ವವಾಗಿ ನೀಡಿದ್ದ ಗ್ಯಾರಂಟಿ ಭರವಸೆಯಂತೆ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಗೂ ಕೂಡ ಈಗ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2000ರೂ. ಸಹಾಯಧನವನ್ನು ನೀಡುತ್ತಿದೆ. ಸರ್ಕಾರದ ವತಿಯಿಂದ ಈ ಯೋಜನೆ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸುವ ಹೊಣೆಗಾರಿಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೇರಿದ್ದಾಗಿದೆ.

ಆದಿಲ್ ಖಾನ್ ನನ್ನ ಬೆ-ತ್ತ-ಲೆ ವಿಡಿಯೋ ಮಾರಾಟ ಮಾಡುತ್ತಿದ್ದಾನೆ – ನಟಿ ರಾಖಿ ಸಾವಂತ್

ಹೀಗಾಗಿ ಸುದ್ದಿಯಲ್ಲಿರುತ್ತಿದ್ದ ಸಚಿವರು ಇದರ ಜೊತೆಗೆ ಹಿರಿಯ ನಾಗರಿಕರ ಸಲುವಾಗಿ ಮಾನ್ಯ ಮುಖ್ಯಮಂತ್ರಿಗಳ ಬಳಿ ವೃದ್ಧಾಪ್ಯ ವೇತನ ಹೆಚ್ಚಿಸುವಂತೆ ಮನವಿ ಸಲ್ಲಿಸಿ ತಮ್ಮ ಕಾಳಜಿ ಮೆರೆದಿದ್ದಾರೆ. ಇದರ ಕುರಿತು ಮಾಹಿತಿ ಇಲ್ಲಿದೆ ನೋಡಿ.

ವಿಶ್ವ ಹಿರಿಯ ನಾಗರಿಕರ ದಿನದ (Senior Citizen day) ಅಂಗವಾಗಿ ಅಕ್ಟೋಬರ್ 1 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಿದ್ದರಾಮಯ್ಯ (CM Siddaramaiah) ಅವರು ಆಗಮಿಸಿದ್ದರು.

ಹಿಂದುಳಿದ ವರ್ಗದವನು ಎನ್ನುವ ಕಾರಣಕ್ಕೆ ನನ್ನನ್ನು ದ್ವೇಷ ಮಾಡುತ್ತಿದ್ದಾರೆ.!

ಆ ವೇಳೆ ಈ ಕುರಿತು ಪ್ರಸ್ತಾಪಿಸಿದ ಸಚಿವೆ ನನ್ನ ಬಳಿ ಅನೇಕ ಹಿರಿಯ ನಾಗರಿಕರು ಬರುತ್ತಾರೆ, ಕುಟುಂಬದ ಯಜಮಾನಿಯರಿಗೆ ಮನೆಯ ಖರ್ಚಿನ ನಿರ್ವಹಣೆಗೆಂದು ಸರ್ಕಾರದ ವತಿಯಿಂದ ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ 2,000 ಕೊಡುತ್ತಿದ್ದೀರಾ ನಾವು ಹಿರಿಯ ನಾಗರಿಕರಿಗೆ ಮಾತ್ರ ಪ್ರತಿ ತಿಂಗಳು 1200 ಪೆನ್ಷನ್ (old age Pension) ಬರುತ್ತದೆ.

ಈ ಹಣದಿಂದ ಒಂದು ತಿಂಗಳ ಜೀವನ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ ಎಂದು ದೂರು ಹೇಳುತ್ತಿದ್ದಾರೆ ಮತ್ತು ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ವೃದ್ಯಾಪ್ಯ ವೇತನ ಹೆಚ್ಚಳ ಮಾಡಿಸಿ ಎಂದು ಕೇಳಿಕೊಳ್ಳುತ್ತಾರೆ.

ಬಚ್ಚನ್ ಕುಟುಂಬದ ಕುಡಿ ಐಶ್ವರ್ಯ ರೈ ಪುತ್ರಿ ಆರಾಧ್ಯ ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಗೊತ್ತಾ.? ನಿಜಕ್ಕೂ ಬೆರಗಾಗಿ ಹೋಗ್ತಿರಾ.!

ಹಾಗಾಗಿ ಎಲ್ಲಾ ಹಿರಿಯ ನಾಗರಿಕರ ಪರವಾಗಿ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಹಿರಿಯ ನಾಗರಿಕರಿಗೆ ವೃದ್ಯಾಪ ವೇತನವನ್ನು 1,200 ರಿಂದ 2,000 ರೂ. ಗೆ ಹೆಚ್ಚಿಗೆ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇದಾದ ಬಳಿಕ ತಮ್ಮ ಭಾಷಣದ ಸಮಯದಲ್ಲಿ ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಖಂಡಿತವಾಗಿಯೂ ನಾನು ಈ ಮನವಿಯನ್ನು ಸ್ವೀಕರಿಸುತ್ತೇನೆ.

ಇದರ ಕುರಿತು ಅವಲೋಕನ ಮಾಡುತ್ತೇನೆ, ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಬಜೆಟ್ ಘೋಷಣೆ ಆಗುವ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ವೃದ್ದಾಪ್ಯ ವೇತನ ಏರಿಕೆ ಮಾಡಲಾಗುತ್ತದೆ ಎನ್ನುವ ಭರವಸೆ ನೀಡಿದರು. ಆದರೆ ಎಷ್ಟು ಹಣ ಹೆಚ್ಚಿಗೆ ಮಾಡಲಾಗುತ್ತದೆ ಎನ್ನುವುದರ ಮಾಹಿತಿ ತಿಳಿಸಲಿಲ್ಲ, ಇಂತಿಷ್ಟೇ ಹಣ ಮಾಡುತ್ತೇವೆ ಎಂದು ಈಗಲೇ ಹೇಳಲು ಆಗುವುದಿಲ್ಲ ಖಂಡಿತವಾಗಿಯೂ ಈಗಿರುವುದಕ್ಕಿಂತ ಹೆಚ್ಚಿಗೆ ಹಣ ತಲುಪುವ ಹಾಗೆ ವ್ಯವಸ್ಥೆ ಮಾಡಲಾಗುವುದು ಎನ್ನುವ ಭರವಸೆ ನೀಡಿದರು.

ಬಚ್ಚನ್ ಕುಟುಂಬದ ಕುಡಿ ಐಶ್ವರ್ಯ ರೈ ಪುತ್ರಿ ಆರಾಧ್ಯ ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಗೊತ್ತಾ.? ನಿಜಕ್ಕೂ ಬೆರಗಾಗಿ ಹೋಗ್ತಿರಾ.!

ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ 65 ವರ್ಷ ಮೇಲ್ಪಟ್ಟ 1,200 ರೂ. ಪೆನ್ಷನ್ ಪಡೆಯುವ 30,27,520 ಲಕ್ಷ ಫಲಾನುಭವಿಗಳಿದ್ದಾರೆ. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಯಾಪ್ಯ ವೇತನ ಯೋಜನೆಯಡಿ 60 ರಿಂದ 65 ವರ್ಷ ವಯೋಮನದ ಹಿರಿಯ ನಾಗರಿಕರಿಗೆ 600ರೂ. ವೃದ್ದಾಪ್ಯ ವೇತನ ನೀಡಲಾಗುತ್ತಿದೆ, ಈ ಫಲಾನುಭವಿಗಳ ಸಂಖ್ಯೆ 18,98,358 ಲಕ್ಷ ಇದೆ. 2011ರ ಜನಗಣತಿಯಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ 57.91 ಲಕ್ಷ ಹಿರಿಯ ನಾಗರಿಕರಿದ್ದಾರೆ ಎಂದು ಗುರುತಿಸಲಾಗಿದೆ.

Viral News

Post navigation

Previous Post: ಆದಿಲ್ ಖಾನ್ ನನ್ನ ಬೆ-ತ್ತ-ಲೆ ವಿಡಿಯೋ ಮಾರಾಟ ಮಾಡುತ್ತಿದ್ದಾನೆ – ನಟಿ ರಾಖಿ ಸಾವಂತ್
Next Post: ಒಂದು ಬಾರಿ ಚಾರ್ಜ್ ಮಾಡಿದ್ರೆ ಸಾಕು ನೂರಾರು ಕಿ.ಮೀ ಹಾರುವ ವಿಶ್ವದ ಮೊದಲ ಕಾರು ಬಿಡುಗಡೆ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme