ಕೆಸಿಸಿ ಕನ್ನಡ ಚಲನಚಿತ್ರ ಕಪ್ (KCC) ಎನ್ನುವ ಈ ಕ್ರಿಕೆಟ್ ಮ್ಯಾಚ್ ಅನ್ನು ಕಳೆದು ಎರಡು ವರ್ಷಗಳಿಂದ ಆಯೋಜನೆ ಮಾಡಲಾಗುತ್ತಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಎಲ್ಲಾ ಕಲಾವಿದರಗಳು ನಿರ್ದೇಶಕರು ನಿರ್ಮಾಪಕರು ಸೇರಿದಂತೆ ಕೆಲವು ರಾಜಕೀಯ ವ್ಯಕ್ತಿಗಳು ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಆರು ತಂಡಗಳು ಮೈಸೂರಿನಲ್ಲಿ (Mysore) ನಡೆಯುವ ಈ ಮ್ಯಾಚಲ್ಲಿ ಭಾಗವಹಿಸಲಿದೆ. ಇದರ ಕ್ಯಾಪ್ಟನ್ ಗಳಾಗಿ ಶಿವಣ್ಣ, ಗಣೇಶ್, ಧ್ರುವ, ಧನಂಜಯ್, ಸುದೀಪ್ ಹಾಗೂ ಉಪೇಂದ್ರರವರಾಗಿದ್ದಾರೆ.
ಇಷ್ಟೆಲ್ಲ ಆಯೋಜನೆಗೆ ಕಾರಣಕರ್ತ ಅಂದರೆ ಅದು ಸುದೀಪ್ (Sudeep) ಅವರೇ ಎಂದು ಹೇಳಬಹುದು. ಯಾಕೆಂದರೆ ಸುದೀಪ್ ಅವರಿಗೆ ಕ್ರಿಕೆಟ್ ಬಗ್ಗೆ ವಿಪರೀತ ಕ್ರೇಜ್ ಜೊತೆಗೆ ಈ ರೀತಿ ಕಾರ್ಯಕ್ರಮ ಮಾಡುವುದಕ್ಕೆ ಅವರಿಗೆ ಆಸಕ್ತಿಯೂ ಕೂಡ ಹೆಚ್ಚು. ಸುಮಾರು ಎಲ್ಲಾ ತಾರೆಗಳು ಕೂಡ ಇದರಲ್ಲಿ ಭಾಗಿಯಾಗಿದ್ದು ಕೆಲವರು ಆಟವಾಡುತ್ತಿದ್ದರೆ ಉಳಿದವರು ಸಪೋರ್ಟ್ ಮಾಡುತ್ತಿದ್ದಾರೆ.
ಈ ಕಾರ್ಯಕ್ರಮದ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರಿಗೆ ಇದರ ಬಗ್ಗೆ ಹಲವು ಪ್ರಶ್ನೆಗಳು ಎದುರಾಗಿದೆ. ಈ ಮ್ಯಾಚ್ ಆಯೋಜನೆ ಆಗುವುದರ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದ ದಿನದಿಂದಲೂ ಕೂಡ ಹೆಚ್ಚಿನ ಜನ ಪ್ರಶ್ನೆ ಮಾಡಿರುವುದು ಎಲ್ಲಾ ಸ್ಟಾರ್ಗಳು ಕೂಡ ಇದ್ದಾರೆ ದರ್ಶನ್ (Darshan) ಹಾಗೂ ಯಶ್ (Yash) ಯಾಕಿಲ್ಲ ಎಂದು ಈ ಬಗ್ಗೆ ಸುದೀಪ್ ಅವರು ಈ ಬಾರಿ ಉತ್ತರ ಕೊಟ್ಟಿದ್ದಾರೆ.
ಪದೇ ಪದೇ ಅದೇ ಪ್ರಶ್ನೆಗಳನ್ನು ಕೇಳುತ್ತಿರಬೇಡಿ ನಾವು ಎಲ್ಲಾ ಸ್ಟಾರ್ ಗಳಿಗೂ ಕೂಡ ಆಹ್ವಾನ ಕೊಡುತ್ತೇವೆ ಆದರೆ ಕೆಲವರಿಗೆ ಬರುವುದಕ್ಕೆ ಇಷ್ಟ ಇರುತ್ತದೆ ಕೆಲವರಿಗೆ ಇಷ್ಟ ಇದ್ದರೂ ಅವರ ಕೆಲಸದ ಒತ್ತಡದ ಕಾರಣದಿಂದ ಬರಲು ಆಗುವುದಿಲ್ಲ. ಕೆಲವರು ಇದನ್ನೆಲ್ಲ ಮೀರಿ ನಾವು ಸಹ ಇದರ ಒಂದು ಭಾಗವಾಗಲೇ ಬೇಕು ಎಂದು ಅಂದುಕೊಂಡು ಹೇಗಾದರೂ ಬರುತ್ತಾರೆ. ಇದರ ಬಗ್ಗೆ ಯಾರಿಗೂ ಕೂಡ ಪ್ರೆಶರ್ ಇಲ್ಲ ಎಲ್ಲರೂ ಬರಬಹುದು ನಾವು ಯಾರಿಗೂ ಕೂಡ ಎಲ್ಲೂ ಭೇದ ಭಾವ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಜೊತೆಗೆ ಕನ್ನಡ ಚಲನಚಿತ್ರ ರಂಗದ ಈ ಆಟಕ್ಕೆ ಈ ಬಾರಿ ಬೇರೆ ಭಾಷೆಗಳಿಂದ ಕೂಡ ಸ್ಟಾರ್ ಗಳು ಬರುವ ಸಾಧ್ಯತೆ ಇದೆ ಇದನ್ನು ಕನ್ನಡ ಕಲಾವಿದರಿಗೆ ಮಾತ್ರ ಈ ಬಾರಿ ಮೀಸಲು ಇಟ್ಟಿಲ್ಲ. ಕನ್ನಡಕ್ಕಾಗಿ ಬೇರೆಯವರು ಬಂದು ಆಡುತ್ತಿದ್ದಾರೆ ಹಾಗಾಗಿ ಅವರಿಗೋಸ್ಕರ ಅದನ್ನು ಒಪ್ಪಿಕೊಳ್ಳಲಾಗಿದೆ. ಬರುವನು ಬಿಟ್ಟು ಬಾರದೆ ಇರುವ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಹ ಹೇಳಿದ್ದಾರೆ.
ಇತ್ತೀಚಿಗೆ ತಾರಾ ಅವರು ಸಹ ಈ ಕಾರ್ಯಕ್ರಮದ ಕುರಿತು ವೇದಿಕೆಯಲ್ಲಿ ಮಾತನಾಡಿ ಇದನ್ನು ಕನ್ನಡ ಚಲನಚಿತ್ರ ರಂಗಕ್ಕೆ ಮಾತ್ರ ಮೀಸಲಿಡದೆ ರಾಜಕೀಯ ವ್ಯಕ್ತಿಗಳು ಉದ್ಯಮಿಗಳು ಹೀಗೆ ಎಲ್ಲರನ್ನೂ ಸೇರಿಸಿ ನಡೆಸಿದರೆ ಇನ್ನು ಸಹ ಒಗ್ಗಟ್ಟು ಹೆಚ್ಚಾಗುತ್ತದೆ ಎಂದು ಸಹ ಸಲಹೆ ನೀಡಿದರು ಹೀಗಾಗಿ ಇದು ಇನ್ನಷ್ಟು ವಿಸ್ತರಿಸಿಕೊಳ್ಳುವ ಸಾಧ್ಯತೆಯೂ ಕೂಡ ಇದೆ. ಸದ್ಯಕ್ಕೆ ಇಡೀ ಕರ್ನಾಟಕದಲ್ಲಿ ಈ ಅಲೆ ಬಾರಿ ಜೋರಾಗಿದ್ದು ಫೆಬ್ರವರಿ 12 ಅಥವಾ 13ರಿಂದ ಶುರು ಆಗುವ ಈ ಮ್ಯಾಚ್ ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.
ಇಡೀ ಇಂಡಸ್ಟ್ರಿಯೇ ಒಂದು ಕಡೆ ಸೇರಿ ಆಡುವ ಈ ಮ್ಯಾಚನ್ನು ನೋಡಿ ಕಣ್ತುಂಬಿ ಕೊಳ್ಳುವುದೇ ಒಂದು ಭಾಗ್ಯ. ಇನ್ನು ಅದರಲ್ಲಿ ಭಾಗವಹಿಸಿ ಆಟ ಆಡುವುದು ಇನ್ನು ಹೆಮ್ಮೆಯ ವಿಚಾರ ಹಾಗಾಗಿ ಯಾವುದೇ ಸ್ಟಾರ್ ಗೂ ಕೂಡ ಇಂಡಸ್ಟ್ರ ಹೆಸರು ಬಂದಾಗ ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ ಆದರೆ ಕೆಲವೊಮ್ಮೆ ಅನಿವಾರ್ಯತೆಗಳಿಂದ ಅವರು ಇಲ್ಲದ್ದೇ ಹೋದರು ಪರೋಕ್ಷವಾಗಿ ಅವರ ಬೆಂಬಲವಂತೂ ಇದ್ದೇ ಇರುತ್ತದೆ ಇದನ್ನೇ ಸುದೀಪ ಅವರು ಈ ರೀತಿ ಹೇಳಿದ್ದಾರೆ.