ಮಾಲಿವುಡ್ ಬೆಡಗಿ ಮಮತಾ ಮೋಹನ್ ದಾಸ್ ಅವರು ಕರ್ನಾಟಕದಲ್ಲಿ ಹುಟ್ಟದಿದ್ದರೂ ಕೂಡ ಬೆಂಗಳೂರಿನಲ್ಲಿ ವಿಧ್ಯಾಭ್ಯಾಸ ಮಾಡಿ ಬದುಕು ಕಂಡುಕೊಂಡವರು. ಕನ್ನಡದ ಗೂಳಿ ಸಿನಿಮಾದಲ್ಲಿ ಅಭಿನಯಿಸಿರುವ ಇವರು ಹೆಚ್ಚಾಗಿ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಒಂದು ಸಮಯದ ಸ್ಟಾರ್ ಹೀರೋಯಿನ್ ಕೂಡ ಆಗಿದ್ದ ಇವರು ಅದನ್ನು ಹೊರತುಪಡಿಸಿ ಕನ್ನಡ ತಮಿಳು ತೆಲುಗು ಗಳನ್ನು ಕೂಡ ಅಭಿನಯಿಸಿ ತಮ್ಮ ಮೋಹಕ ಅಭಿನಯದಿಂದ ಸಾಕಷ್ಟು ಮನಗಳನ್ನು ಗೆದ್ದಿದ್ದಾರೆ.
ಮಮತಾ ಮೋಹನ್ ದಾಸ್ ಅವರು ಇತ್ತೀಚೆಗೆ ಕ್ಯಾನ್ಸರ್ ಗೆ ತುತ್ತಾಗಿದ್ದರು, ಕ್ಯಾನ್ಸರ್ ಇಂದ ಅವರು ಹೊರಬರುವಂತೆ ಅವರ ಸಾಕಷ್ಟು ಅಭಿಮಾನಿಗಳು ಸ್ನೇಹಿತರು ಅವರಿಗಾಗಿ ಪ್ರಾರ್ಥಿಸಿದ್ದರು. ಈಗ ಅದರಿಂದ ಹೊರಬಂದ ಮಮತಾ ಅವರನ್ನು ಮತ್ತೊಂದು ಆರೋಗ್ಯ ಸಮಸ್ಯೆಗೆ ಕಾಡುತ್ತಿದೆ. ಈ ಬಾರಿ ಆ ಸಮಸ್ಯೆ ಅವರನ್ನು ಹೀನಾಯವಾಗಿ ನೋಯಿಸುತ್ತಿದೆ.
ಆಟೋ ಹುಮಿನೋ ಕಾಯಿಲೆ ಎಂದು ಕರೆಯಲಾದ ವಿಟಿಲಿಗೋ ಎನ್ನುವ ಚರ್ಮ ಸಂಬಂಧಿತ ಸಮಸ್ಯೆಗೆ ಇವರು ತುತ್ತಾಗಿದ್ದಾರೆ. ಇದನ್ನು ತೊನ್ನು ರೋಗ ಎಂದು ಕೂಡ ಗುರುತಿಸುತ್ತಾರೆ. ನಟಿ ಮಮತಾ ಮೋಹನ್ ದಾಸ್ ಅವರು ಮತ್ತೊಮ್ಮೆ ಕ್ಯಾನ್ಸರ್ ಗೆ ಗುರಿಯಾಗಿದ್ದಾರೆ ಈ ಬಾರಿ ಅವರಿಗೆ ಅದನ್ನು ಗೆಲ್ಲುವ ಶಕ್ತಿ ಇಲ್ಲ ಎನಿಸುತ್ತದೆ ಎನ್ನುವ ಸುದ್ದಿ ಒಂದು ಹಬ್ಬಿತ್ತು. ಇದರಿಂದ ತೀರ ಬೇಸರಿಸಿಕೊಂಡ ಮಮತಾ ಮೋಹನ್ ದಾಸ್ ಅವರು ಆ ಕುರಿತು ಸ್ಪಷ್ಟಣೆ ಕೂಡ ನೀಡಿದ್ದರು.
ಯಾರು ಕೂಡ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಬೇಡಿ, ನಿಮ್ಮ ಮಾತು ನಂಬಿ ನನ್ನ ಸ್ನೇಹಿತರು ಹಾಗೂ ಪರಿಚಯಸ್ಥರು ಕರೆ ಮಾಡಿ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ ಈ ಬಾರಿ ನನಗೆ ಕ್ಯಾನ್ಸರ್ ಗೆಲ್ಲುವ ಶಕ್ತಿ ಇಲ್ಲ ಎಂದು ನೀವು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಅವರು ತಿರುಗೇಟು ನೀಡಿದ್ದರು. ಅದಾದ ಬಳಿಕ ಅವರ ಸೋಶಿಯಲ್ ಮೀಡಿಯಾ ಖಾತೆಯಿಂದ ಭಾವನಾತ್ಮಕ ಪೋಸ್ಟ್ ಒಂದು ಶೇರ್ ಆಗಿತ್ತು.
ಅದರಲ್ಲಿ ಸೂರ್ಯನ ಬೆಳಕನ್ನು ಮುಂಜಾನೆ ಎದ್ದು ಆನಂದಿಸುತ್ತಿರುವ ಅವರು ಸೆಲ್ಫಿ ಫೋಟೋ ಹಾಕಿಕೊಂಡು ಸಾಕಷ್ಟು ಸಾಲಗಳನ್ನು ಬರೆದಿದ್ದರು. ಅವರು ಬರೆದ ಬರಹ ಈ ರೀತಿ ಇತ್ತು. ಸೂರ್ಯದೇವ, ನಾನು ಹಿಂದೆದಿಗಿಂತಾ ಈಗ ಹೆಚ್ಚು ನಿನ್ನನ್ನು ಅಪ್ಪಿಕೊಳ್ಳುತ್ತಿದ್ದೇನೆ. ನನ್ನ ಶರೀರದ ಬಣ್ಣ ಬದಲಾಗುತ್ತಿದೆ ಅದಕ್ಕಾಗಿ ನೀನು ಬರುವುದಕ್ಕಿಂತ ಮುಂಚೆ ಎದ್ದು ನಿನಗಾಗಿ ಕಾಯುತ್ತಿದ್ದೇನೆ.
ನಿನ್ನ ಶಕ್ತಿಯನ್ನೆಲ್ಲಾ ನನಗೆ ಕೊಡು ಜೀವನಪೂರ್ತಿ ನಾನು ನಿನಗೆ ರುಣಿಯಾಗಿ ಇರುತ್ತೇನೆ ಎಂದು ಬರೆದಿದ್ದಾರೆ. ಇದರ ಮೂಲಕ ಅವರನ್ನು ಈಗ ಕಾಡುತ್ತಿರುವ ವಿಟಲಿಗೋ ಸಮಸ್ಯೆಗೆ ಸೂರ್ಯನ ಕಿರಣವೇ ರಾಮಬಾಣ ಎನ್ನುವುದು ಸ್ಪಷ್ಟವಾಗಿದೆ. ವಿಟಿಲಗೋ ಕಾಯಿಲೆಯಿಂದ ಬಳಲುವವರು ಕ್ರಮೇಣ ತಮ್ಮ ಚರ್ಮದ ಬಣ್ಣವನ್ನು ಕಳೆದುಕೊಳ್ಳುತ್ತಾರೆ. ಚರ್ಮದ ಬಣ್ಣವನ್ನು ಕಾಪಾಡಬೇಕಾದ ಮೇಲಟೋನಿನ್ ಸೃಷ್ಟಿಸುವ ಚರ್ಮದ ಕೋಶಗಳು ಬೆಳವಣಿಗೆ ಆಗಲು ಈ ಕಾಯಿಲೆ ಬಿಡುವುದಿಲ್ಲ.
ಮಾ.ರ.ಣಾಂ.ತಿ.ಕ ಕಾಯಿಲೆ ಅಲ್ಲದಿದ್ದರೂ ಕೂಡ ಒಂದು ಮಾನಸಿಕ ಸಮಸ್ಯೆವಾಗಿ ವಿಪರೀತವಾಗಿ ಇದು ಕಾಡಿ ಬಿಡುತ್ತದೆ. ಈಗಷ್ಟೇ ಕ್ಯಾನ್ಸಲ್ ಇಂದ ಸುಧಾರಿಸಿಕೊಂಡಿದ್ದ ನಟಿ ಬದುಕಿನಲ್ಲಿ ಮತ್ತೆ ಈ ರೀತಿ ಸಮಸ್ಯೆ ಎದುರಾಗಿರುವುದು ಬಹಳ ಬೇಸರದ ವಿಷಯ ಆಗಿದೆ. ಸದ್ಯಕ್ಕೆ ಅವರ ಅಭಿಮಾನಿಗಳು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ನೀವು ಫೈಟರ್ ಖಂಡಿತವಾಗಿ ಇದರ ವಿರುದ್ಧ ಹೋರಾಡಿ ಗೆಲ್ಲುತ್ತೀರಿ ನಿಮ್ಮನ್ನು ಮೊದಲಿನಂತೆ ಕಾಣಲು ನಾವು ಸಹ ಕಾಯುತ್ತಿದ್ದೇವೆ ನಿಮಗಾಗಿ ಪ್ರಾರ್ಥಿಸುತ್ತೇವೆ ಎಂದೆಲ್ಲಾ ಹೇಳಿ ಸಮಾಧಾನ ಪಡಿಸುತ್ತಿದ್ದಾರೆ.