ಕರ್ನಾಟಕ ರಾಜ್ಯದ ನೂತನ ಮುಖ್ಯ ಮಂತ್ರಿಗಳು ಆಗಿರುವಂತಹ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಹೊಲ ನಮ್ಮ ರಸ್ತೆ ಎನ್ನುವ ಹೊಸ ಯೋಜನೆಯ ಮೂಲಕ ಯಾರ ಜಮೀನಿಗೆ ಅಂದರೆ ಹೊಲ ಗದ್ದೆಗಳಿಗೆ ವಾಹನಗಳು ಚಲಾಯಿಸಲು ರಸ್ತೆ ಇರುವುದಿಲ್ಲವೋ ಅವರಿಗೆ ವಾಹನಗಳನ್ನು ಚಲಾಯಿಸುವುದಕ್ಕೆ ಸರ್ಕಾರದ ಕಡೆಯಿಂದ ಉಚಿತವಾಗಿ ರಸ್ತೆಯನ್ನು ಮಾಡಿ ಕೊಡುವಂತಹ ಯೋಜನೆಯನ್ನು ಪ್ರಾರಂಭ ಮಾಡಿದೆ.
ಈ ಒಂದು ಯೋಜನೆಯಿಂದ ರೈತರಿಗೆ ಅನುಕೂಲವಾಗುವಂತೆ ಅವರು ತಮ್ಮ ಹೊಲಗದ್ದೆಗಳಲ್ಲಿ ಬೆಳೆದಂತಹ ಧಾನ್ಯಗಳನ್ನು ವಾಹನಗಳ ಮೂಲಕ ಕೊಂಡೊಯ್ಯುವುದಕ್ಕೆ ಅನುಕೂಲವಾಗುವಂತೆ ಈ ಒಂದು ಯೋಜನೆಯ ಉದ್ದೇಶವಾಗಿದ್ದು. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ತಪ್ಪದೆ ಈ ಸುದ್ದಿ ನೋಡಿ:- ಸರ್ಕಾರದಿಂದ ರೈತರಿಗೆ ಬಂಪರ್ ಸುದ್ದಿ.! ಕುರಿ ಸಾಕಾಣಿಕೆಗೆ ನಿಮಗೆ ಸಿಗಲಿದೆ 4 ಲಕ್ಷ ಸಹಾಯ ಧನ.! ಈ ಅವಕಾಶ ಮಿಸ್ ಮಾಡ್ಕೊಬೇಡಿ ಅರ್ಜಿ ಸಲ್ಲಿಸಿ
ಹೌದು ಕರ್ನಾಟಕ ರಾಜ್ಯದಾದ್ಯಂತ ಇರುವಂತಹ ಎಲ್ಲ ರೈತರಿಗೆ ಇದೊಂದು ಒಳ್ಳೆಯ ಸುವರ್ಣಾವಕಾಶವಾಗಿದ್ದು ಪ್ರತಿಯೊಬ್ಬ ರೈತರು ಕೂಡ ತಮ್ಮ ಹೊಲಗದ್ದೆಗಳಿಗೆ ಓಡಾಡಲು ರಸ್ತೆಯನ್ನು ಪಡೆದುಕೊಳ್ಳ ಬಹುದಾಗಿದೆ. ಹೌದು ಕೆಲವೊಂದಷ್ಟು ರೈತರು ತಮ್ಮ ಜಮೀನುಗಳಿಂದ ಯಾವುದೇ ರೀತಿಯಾದಂತಹ ರಸ್ತೆ ಮಾರ್ಗ ಇಲ್ಲದೆ ಅಕ್ಕಪಕ್ಕ ಜಮೀನಿನ ವರ ಜಾಗದಲ್ಲಿ ಓಡಾಡುತ್ತಿದ್ದು ಹಾಗೂ ಇದು ಕೆಲವೊಮ್ಮೆ ಕಿರಿಕಿರಿ ಉಂಟುಮಾಡಿದ್ದೇ ಆದರೆ ಇನ್ನು ಮುಂದೆ ಈ ರೀತಿಯ ಪರಿಸ್ಥಿತಿ ಇರುವುದಿಲ್ಲ.
ನಮ್ಮ ಹೊಲ ನಮ್ಮ ರಸ್ತೆ ಎನ್ನುವ ಹೊಸ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ರೈತರು ಕೂಡ ತಮ್ಮದೇ ಆದಂತಹ ಸ್ವಂತ ಜಾಗವನ್ನು ಅಂದರೆ ಓಡಾಡುವುದಕ್ಕೆ ಅವಕಾಶವನ್ನು ಈ ಒಂದು ಯೋಜನೆಯ ಮೂಲಕ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಒಂದು ಯೋಜನೆಯ ಅಡಿಯಲ್ಲಿ ರೈತರಿಗೆ ಎಷ್ಟು ಅಳತೆಯ ಜಾಗ ಓಡಾಡಲು ಅವಕಾಶ ಸಿಗುತ್ತದೆ ಎಂದು ನೋಡುವುದಾದರೆ.
23 ಫೀಟ್ ರಸ್ತೆ. ಹೌದು 23 ಫೀಟ್ ರಸ್ತೆ ಮಾಡಿಕೊಡಲು ಸರ್ಕಾರದಿಂದ ಹೊಸ ಆದೇಶವನ್ನು ಹೊರಡಿಸಲಾಗಿದೆ.
ಹಾಗಾದರೆ ಯಾವ ರೈತರು ತಮ್ಮ ಹೊಲ ಗದ್ದೆಗಳಿಗೆ ಓಡಾಡಲು ಜಾಗ ಇರುವುದಿಲ್ಲವೋ ಅವರು ಈ ಒಂದು ಯೋಜನೆಯ ಅಡಿಯಲ್ಲಿ ಹೇಗೆ ರಸ್ತೆ ಮಾಡಿಸಿಕೊಳ್ಳುವಂತಹ ಅವಕಾಶವನ್ನು ಪಡೆದುಕೊಳ್ಳಬಹುದು, ಯಾರು ಯಾರು ಈ ಒಂದು ಯೋಜನೆಗೆ ಅರ್ಹರಿರುತ್ತಾರೆ ಹಾಗೂ ಅದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ, ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ನಮ್ಮ ಹೊಲ ನಮ್ಮ ರಸ್ತೆ ಎನ್ನುವ ಸರ್ಕಾರದ ಸವಲತ್ತನ್ನು ಪಡೆದು.
ರೈತರು ಸಮುದಾಯಿಕವಾಗಿ ರಸ್ತೆಯನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದ.
• ನೀವು ಸರಿಯಾಗಿ ಈ ಒಂದು ಅರ್ಜಿಯನ್ನು ಬರೆದುಕೊಂಡು ಬಂದು ಗ್ರಾಮ ಪಂಚಾಯಿತಿಗೆ ಕೊಟ್ಟರೆ ಅದನ್ನು ಪರಿಶೀಲಿಸಿ ನಿಮ್ಮ ಹೊಲಕ್ಕೆ ಹೋಗಲು ರಸ್ತೆಯ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ.
• ಹಾಗೂ ಯಾರಿಗೆ ರಸ್ತೆಗಳು ಇದ್ದು ಅದು ಹಾಳಾಗಿರುತ್ತದೆಯೋ ಅದನ್ನು ಸರಿಪಡಿಸಿಕೊಡಬೇಕು ಎನ್ನುವಂತೆ ಒಂದು ಅರ್ಜಿಯನ್ನು ಬರೆದು ನಿಮ್ಮ ಗ್ರಾಮ ಪಂಚಾಯಿತಿಗೆ ನೀಡಬೇಕು ಹಾಗೂ ಅದರಲ್ಲಿ ನಿಮ್ಮ ಹೊಲದ ಸರ್ವೆ ನಂಬರ್, ವಿಸ್ತೀರ್ಣ, ಹಾಗೂ ನಿಮ್ಮ ಜಮೀನಿಗೆ ಸಂಬಂಧಪಟ್ಟ ಕೆಲವೊಂದು ಮಾಹಿತಿಗಳನ್ನು ಬರೆಯಬೇಕು.
* ನಂತರ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ನಿಮ್ಮ ಅರ್ಜಿಯ ಕುರಿತಾಗಿ ಚರ್ಚಿಸಿ ಅನುಮೋದನೆಯನ್ನು ನೀಡಲಾಗುತ್ತದೆ.
* ಇದನ್ನು ವಾರ್ಷಿಕ ಕ್ರಿಯೆ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯತ್ ಸೇರಿಸುತ್ತದೆ. ಆ ಮೂಲಕ ನಿಮಗೆ ಅನುದಾನ ನೀಡುವುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ.
* ನಂತರ ಸಾಮಾನ್ಯ ಸಭೆಯಲ್ಲಿ ಎಷ್ಟು ಅನುದಾನ ನೀಡಬೇಕು ಎನ್ನುವು ದನ್ನು ಚರ್ಚಿಸಿ ಅಷ್ಟು ಹಣವನ್ನು ಮಂಜೂರು ಮಾಡಲಾಗುತ್ತದೆ.
ತಪ್ಪದೆ ಈ ಸುದ್ದಿ ನೋಡಿ:- ಗೃಹಲಕ್ಷ್ಮಿ ಯೋಜನೆಗೆ ಮೇಸೆಜ್ ಮಾಡಿದ್ರು ಕೂಡ ಇನ್ನೂ ರಿಪ್ಲೈ ಬಂದಿಲ್ವ.? ಚಿಂತೆ ಬಿಡಿ ಈ 2 ಹೊಸ ವಿಧಾನಗಳಲ್ಲಿ ಟ್ರೈ ಮಾಡಿ ಖಂಡಿತ ಅರ್ಜಿ ಸಲ್ಲಿಸಬಹುದು ವೇಳಪಟ್ಟಿ ಬರುತ್ತೆ.!
* ಗ್ರಾಮ ಪಂಚಾಯಿತಿ ಅನುಮೋದನೆ ಸಿಕ್ಕ ನಂತರ ಅಲ್ಲಿಂದಲೇ ಒಬ್ಬ ವ್ಯಕ್ತಿ ನಿಮ್ಮ ಜಮೀನಿಗೆ ಬಂದು ಅಲ್ಲಿ ಜಾಗದ ಅಳತೆ ಹಾಗೂ ಎಷ್ಟು ಜನರು ಕೆಲಸಕ್ಕೆ ಬೇಕಾಗಬಹುದು ಹಾಗೂ ಅದಕ್ಕೆ ತಗಲುವ ವೆಚ್ಚವೆಷ್ಟು ರಸ್ತೆ ಮಾಡಲು ಬೇಕಾಗುವ ವಸ್ತುಗಳು, ಹಾಗೂ ಎಷ್ಟು ವೆಚ್ಚ ಬೇಕಾಗು ತ್ತದೆ, ಎನ್ನುವುದನ್ನು ಪಟ್ಟಿ ಮಾಡಿ ಅದರಂತೆ ಕಾಮಗಾರಿ ನಡೆಸಲು ಸೂಚಿಸಲಾಗುತ್ತದೆ.
* ಇಲ್ಲಿ ಕೆಲಸ ಮಾಡಲು ಸಾಮಾನ್ಯವಾಗಿ ಇಲ್ಲಿ ಜಾಬ್ ಕಾರ್ಡ್ ಇರುವ ಕೂಲಿ ಕಾರರನ್ನು ನೇಮಿಸಿಕೊಳ್ಳಲಾಗುತ್ತದೆ.
* ಈ ರಸ್ತೆ ಕಾಮಗಾರಿಯಲ್ಲಿ ಯಾರು ಕೆಲಸಕ್ಕೆ ನೇಮಕಗೊಂಡಿರುತ್ತಾ ರೋ ಅವರಿಗೆ ಪ್ರತಿ ವಾರ ಅವರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
* ಇನ್ನು ರಸ್ತೆ ಕಾಮಗಾರಿ ಮಾಡುವಾಗ ಬೇಕಾಗುವ ಮಣ್ಣು ಕಲ್ಲು ಮೊದಲಾದ ವಸ್ತುಗಳನ್ನು ಯಂತ್ರಗಳ ಮೂಲಕ ತರಿಸಿ ಹಾಕಿಸಲಾಗು ತ್ತದೆ.
* ಇನ್ನು ಸಮುದಾಯ ರಸ್ತೆ ನಿರ್ಮಾಣ ಮಾಡಲು ಸುತ್ತ ಮುತ್ತ ಇರು ವಂತಹ ಎಲ್ಲ ರೈತರು ಒಪ್ಪಿಗೆಯನ್ನು ನೀಡಬೇಕು. ಇನ್ನು ರಸ್ತೆಯನ್ನು ನಿರ್ಮಾಣ ಮಾಡಲು 60% ನಷ್ಟು ಯಂತ್ರದ ಸಹಾಯ ಹಾಗೂ 40% ನಷ್ಟು ಕಾರ್ಮಿಕರ ಸಹಾಯವನ್ನು ಪಡೆದು ರಸ್ತೆ ಕಾಮಗಾರಿಯನ್ನು ಮಾಡಲಾಗುತ್ತದೆ.
* ಇನ್ನು ರಸ್ತೆ ಮಾಡಿಸಿಕೊಳ್ಳುವ ಸಲುವಾಗಿ ರೈತರಿಗೆ ಯಾವುದೇ ಗೊಂದಲ ಇದ್ದರೆ ಗ್ರಾಮ ಪಂಚಾಯಿತಿಗೆ ಹೋಗಿ ಈ ಒಂದು ವಿಷಯದ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ.