ಕುರಿ ಸಾಕಾಣಿಕೆ ಮಾಡುವವರಿಗೆ ಕರ್ನಾಟಕ ಸರ್ಕಾರದಿಂದ ಇಲ್ಲಿದೆ ಗುಡ್ ನ್ಯೂಸ್. ಹೌದು, ಇಂದಿನ ಲೇಖನದಲ್ಲಿ ಕುರಿ ಸಾಕಾಣಿಕೆಗೆ ನೀಡಲಾಗುವ ಸಹಾಯಧನದ ಬಗ್ಗೆ ವಿವರವನ್ನು ಸಂಪೂರ್ಣವಾಗಿ ನೀಡಲಾಗಿದೆ. ನೀವು ಈ ಯೋಜನೆಯ ಅಡಿಯಲ್ಲಿ ಎಷ್ಟು ಹಣವನ್ನು ಪಡೆದುಕೊಳ್ಳಬಹುದು? ಈ ಯೋಜನೆಗೆ ಅರ್ಜಿಸಲ್ಲಿಸುವುದು ಹೇಗೆ? ಇದಕ್ಕಾಗಿ ಒದಗಿಸಬೇಕಾದ ದಾಖಲೆಗಳು ಯಾವುವು? ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ. ಹಾಗಾಗಿ, ಈ ಲೇಖನವನ್ನು ಪೂರ್ತಿಯಾಗಿ ಓದಿ.
ಕುರಿ ಸಾಕಾಣಿಕೆ ಇಂದು ಕೇವಲ ಹೈನುಗಾರಿಕೆಯ ಭಾಗವಾಗಿ ಉಳಿದಿಲ್ಲ. ಕುರಿ ಸಾಕಾಣಿಕೆಯೂ ಉದ್ಯಮವಾಗಿ ಬದಲಾಗುತ್ತಿದೆ. ಅದರಲ್ಲಿ ಲಕ್ಷಾಂತರ ಆದಾಯ ಗಳಿಕೆ ಇರುವ ಕಾರಣಕ್ಕೆ ಜನರು ಕೃಷಿಯ ಜೊತೆಗೆ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಕೆಲವರು ಇದನ್ನು ಮಾಂಸಕ್ಕಾಗಿ ಸಾಕುತ್ತಾರೆ. ಕುರಿ ಸಾಕಾಣಿಕೆಯಿಂದಾಗಿ ಕುರಿಗಳನ್ನು ಒಂದೇ ವರ್ಷಕ್ಕೆ ಮಾರಾಟ ಮಾಡಿದರೂ ಲಾಭ ಗಳಿಸಬಹುದು. ಇದರೊಂದಿಗೆ ಕುರಿ ಗೊಬ್ಬರಕ್ಕೂ ಉತ್ತಮ ಬೇಡಿಕೆಯಿದೆ.
ಕುರಿ ಸಾಕಾಣಿಕೆ ಲಾಭದಾಯಕ ವ್ಯಾಪಾರವಾಗಿ ಮಾರ್ಪಟ್ಟಿದೆ. ಇದಕ್ಕೆ ಸರ್ಕಾರದಿಂದಲೂ ನೆರವು ನೀಡಲಾಗುತ್ತದೆ. ಕುರಿ ಸಾಕಾಣಿಕೆ ಉದ್ಯಮ ಆರಂಭಿಸಲು ಸರಕಾರದಿಂದ ಸಾಲ, ವಿಮೆ ಸೌಲಭ್ಯ ನೀಡಲಾಗುತ್ತದೆ ಎಂದು ತಿಳಿದವರು ಬಹಳ ಕಡಿಮೆ. ಕಡಿಮೆ ವೆಚ್ಚದಲ್ಲಿ ಕುರಿ ಸಾಕಾಣಿಕೆ ವ್ಯಾಪಾರ ಆರಂಭಿಸುವುದು ವಿಶೇಷ. ಈ ವ್ಯವಹಾರದಲ್ಲಿ ಕುರಿಗಳ ಆಹಾರದ ಅವಶ್ಯಕತೆಗಳು ಇತರ ಪ್ರಾಣಿಗಳ ಸಾಕಣೆಗಿಂತ ಅಗ್ಗವಾಗಿದೆ. ಇದಲ್ಲದೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಡಿಮೆ ಸ್ಥಳದಿಂದಲೂ ಇದನ್ನು ಪ್ರಾರಂಭಿಸಬಹುದು.
ಇದೀಗ ರಾಜ್ಯಾದ್ಯಂತ ಇರುವ ಎಲ್ಲ ರೈತರಿಗೆ ರಾಜ್ಯದ ಕುರಿ ಅಭಿವೃದ್ದಿ ನಿಗಮದಿಂದ ಸಹಾಯ ಧನಕ್ಕೆ ಹೊಸ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತ ಕುರಿ ಸಾಕಣೆ ಮಾಡಲು ಬಯಸುವ ನಿರುದ್ಯೋಗಿ, ಯುವಕ, ಯುವತಿಯರು ಹಾಗೂ ರೈತರೂ ಕುರಿ ಸಾಕಣೆ ಮಾಡಲು ಬಯಸುವ ಪ್ರತಿಯೊಬ್ಬರು ಕೂಡ ಕರ್ನಾಟಕ ರಾಜ್ಯ ಕುರಿ ವಿಮೆ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಕುರಿ ಅಥವಾ ಮೇಕೆ ಘಟಕ ಸ್ಥಾಪನೆಗೆ ಸಹಾಯ ಧನಕ್ಕೆ ನಿಗಮಗಳಿಂದ ಹೊಸ ಅರ್ಜಿಗಳನ್ನು ಕರೆಯಲಾಗಿದೆ.
ರೈತರು ಈ ಅರ್ಜಿಗಳನ್ನು ಸಲ್ಲಿಸುವ ಮೂಲಕ ನಾಲ್ಕು ಲಕ್ಷ ರೂಪಾಯಿಗಳವರೆಗೆ ಸಹಾಯ ಧನವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಕೂಡ ರೈತರಾಗಿದ್ದರೆ ಅಥವಾ ರೈತ ಕುಟುಂಬದವರಾಗಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಮತ್ತು ಇದನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಇದರಿಂದ ಅವರು ಇದರ ಸಂಪೂರ್ಣ ಲಾಭ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.
ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ 2023-24ನೇ ಸಾಲಿಗೆ 6+1 ಕುರಿ/ಮೇಕೆ ಸಾಕಣೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ತಮ್ಮ ಜಿಲ್ಲಾ ಕುರಿ ಅಭಿವೃದ್ಧಿ ನಿಗಮದ ಉಪ ನಿರ್ದೇಶಕರ ಕಚೇರಿ ಸಂಪರ್ಕಿಸಿ ನಿಗದಿತ ಸಮಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದು.
ಅರ್ಜಿದಾರರ ವಯೋಮಿತಿ 18 ವರ್ಷದಿಂದ 60 ವರ್ಷದ ವರೆಗಿರಬೇಕು. ತಮ್ಮ ಜಿಲ್ಲೆಯ ಕುರಿ ಮತ್ತು ಉಣ್ಣೆ ಸಾಕಾಣಿಕೆ ನಿಮಗಕ್ಕೆ ಬೇಡಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಜುಲೈ 30 ರ ಒಳಗಾಗಿ ಈ ಅರ್ಜಿಯನ್ನು ನಿಗಮಕ್ಕೆ ನೀಡಬೇಕು. ಇಲ್ಲವಾದಲ್ಲಿ ನಿಮ್ಮ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಈ ಅರ್ಜಿಯನ್ನು ಸಲ್ಲಿಸುವ ಮೂಲಕ ನೀವು 4 ಲಕ್ಷ ಸಹಾಯ ಧನವನನ್ನು ಪಡೆದುಕೊಳ್ಳಬಹುದಾಗಿದೆ. ನೀವು ಅರ್ಹರಾಗಿದ್ದರೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 18-60 ವಯೋಮಿತಿ ಒಳಗಿನ ಸದಸ್ಯರಿಗೆ ಅನ್ವಯವಾಗುವ ಯೋಜನೆಯಾಗಿದ್ದು; ವಿವಿಧ ಜಿಲ್ಲೆಯ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ ನಿಗಮದಲ್ಲಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಕುರಿ/ ಮೇಕೆ ಸಾಕಾಣಿಕೆಗಾಗಿ ಸಹಾಯ ಧನ ಒದಗಿಸಲಾಗುತ್ತದೆ. ಆಯ್ಕೆಯಾದ ಪ್ರತಿ ಫಲಾನುಭವಿಗೆ ಕನಿಷ್ಟ 6+1ರ ಕುರಿ/ಮೇಕೆ ಘಟಕವನ್ನು ನೀಡಲು ಯೋಚಿಸಲಾಗಿದೆ. ಶೇಕಡಾ 90ರ ಸಹಾಯಧನವನ್ನು ನಿಗಮದ ವತಿಯಿಂದಲೂ, ಸಾಲದ ಭಾಗವನ್ನು ಬ್ಯಾಂಕುಗಳ ವತಿಯಿಂದಲೂ ಒದಗಿಸಲಾಗುತ್ತದೆ.