ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳ ಪೈಕಿ ನಾಲ್ಕನೇ ಗ್ಯಾರಂಟಿ ಕಾರ್ಡ್ ಯೋಜನೆಯಾದ ಕುಟುಂಬದ ಯಜಮಾನಿಯರು ಕಾಯುತ್ತಿರುವ ಮಹತ್ವಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯು ಸೋಮವಾರ ಸಂಜೆ ಲಾಂಚ್ ಆಗಿದೆ. ಬಹಳ ವಿಭಿನ್ನವಾದ ಶೈಲಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಸರ್ಕಾರ ಸೂಚಿಸಿದ್ದು ಈ ಹಿಂದಿನ ಗೃಹ ಜ್ಯೋತಿ ಯೋಜನೆಗೆ ಅರಕ ಸಲ್ಲಿಸುವ ವೇಳೆ ಆದ ಸಮಸ್ಯೆಗಳು ಉದ್ಭವಿಸಬಾರದು ಎನ್ನುವ ಕಾರಣಕ್ಕಾಗಿ ಎಲ್ಲಾ ಅಗತ್ಯ ಮುಂದಾಲೋಚನೆಗಳನ್ನು ಕೈಗೊಂಡಿದೆ.
ಈಗ ಸರ್ಕಾರವು ಅರ್ಜಿ ಸಲ್ಲಿಸಲು ನೋಂದಣಿ ಮಾಡಿಕೊಳ್ಳಲು SMS ಕಳುಹಿಸಬೇಕು ಎಂದು ಸೂಚಿಸಿದೆ. SMS ಪಡೆದ ಬಳಿಕ SMS ನಲ್ಲಿ ಸೂಚಿಸಿದ ಸ್ಥಳಕ್ಕೆ ಹಾಗೂ ಸಮಯಕ್ಕೆ ದಾಖಲೆ ಜೊತೆ ಹೋಗಿ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಒಂದು ದಿನಕ್ಕೆ ಕೇವಲ 60 ಜನರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಳ್ಳಲಾಗಿದೆ. ಆ 60 ಜನರಲ್ಲಿ ಸರ್ಕಾರದಿಂದ ಈ ಸೇವಾ ಸಿಂಧು ಕೇಂದ್ರಗಳಿಗೂ ಕೂಡ ಹೋಗಿರುತ್ತದೆ.
ಉಳಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆ ದಿನ ಅವಕಾಶ ಇರುವುದಿಲ್ಲ. ಆದರೆ ಅನೇಕರಿಗೆ SMS ಕಳುಹಿಸಿದರು ಕೂಡ ರಿಪ್ಲೈ ಬರುತ್ತಿಲ್ಲ, ಇನ್ನೂ ಕೆಲವರಿಗೆ 26 ಗಂಟೆಗಳ ನಂತರ ಪ್ರಯತ್ನಿಸಬೇಕು ಎಂದು ರಿಪ್ಲೈ ಬರುತ್ತಿದೆ. ಆಗಸ್ಟ್ ತಿಂಗಳಿಂದ ಸಹಾಯಧನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ ಎಂದು ಸರ್ಕಾರ ತಿಳಿಸಿದೆ ಜೊತೆಗೆ ಅರ್ಜಿ ಸಲ್ಲಿಸುವವರ ಫಲಾನುಭವಿಗಳ ಸಂಖ್ಯೆ ಕೋಟಿಗಿಂತಲೂ ಅಧಿಕವಿದೆ.
ಆದ್ದರಿಂದ ಅನೇಕರು ಅರ್ಜಿ ಸಲ್ಲಿಸಲು ಗೊಂದಲಕ್ಕೆ ಒಳಗಾಗಿದ್ದಾರೆ. ಈಗ ಅವರಿಗೆಲ್ಲ ಪರಿಹಾರ ನೀಡುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನೋಂದಣಿ ವೇಳಾಪಟ್ಟಿಕ್ಕಾಗಿ ಕಾಯುತ್ತಿದ್ದರೆ ಈ ರೀತಿಯಾಗಿ ಅದನ್ನು ಪರಿಶೀಲಿಸಿಕೊಳ್ಳಿ.
● ಮೊದಲಿಗೆ ಸರ್ಕಾರವು 8147500500 ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು SMS ಕಳುಹಿಸುವಂತೆ ಸೂಚಿಸಿತು, ಆದರೆ ಈಗ ಈ ಸಂಖ್ಯೆ ಜೊತೆ ಮತ್ತೊಂದು ಸಂಖ್ಯೆಯನ್ನು ಸಹ ನೀಡಿದೆ. 8277000555 ಈ ಸಂಖ್ಯೆಗೂ ಕೂಡ ಪಡಿತರಚೀಟಿ ಸಂಖ್ಯೆಯನ್ನು SMS ಕಳುಹಿಸಿ ಅರ್ಜಿ ಸಲ್ಲಿಸಲು ನೋಂದಣಿ ಮಾಡಿ ವೇಳಾಪಟ್ಟಿಯನ್ನು ಪಡೆದುಕೊಳ್ಳಬಹುದು.
● ಒಂದು ವೇಳೆ ಪಲಾನುಭವಿಯ ಮೊಬೈಲ್ ಸಂಖ್ಯೆಯು ರೇಷನ್ ಕಾರ್ಡ್ ಗೆ ಲಿಂಕ್ ಆಗಿರದೇ ಇದ್ದಲ್ಲಿ ಆ ರೇಷನ್ ಕಾರ್ಡ್ ನಲ್ಲಿರುವ ಉಳಿದ ಯಾವುದೇ ಸದಸ್ಯರ ಮೊಬೈಲ್ ಸಂಖ್ಯೆ ಮೂಲಕ ಕೂಡ SMS ಕಳುಹಿಸಿ ನೋಂದಣಿ ವೇಳಾಪಟ್ಟಿಯನ್ನು ಪಡೆದುಕೊಳ್ಳಬಹುದು.
● ಇದರೊಂದಿಗೆ ಮತ್ತೊಂದು ಅವಕಾಶವನ್ನು ಕೂಡ ಸರ್ಕಾರ ನೀಡಿದೆ. ಅದೇನೆಂದರೆ ನೇರವಾಗಿ ಗೃಹಲಕ್ಷ್ಮಿ ಯೋಜನೆಯ ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ಕೂಡ ನಿಮ್ಮ ನೋಂದಣಿ ವೇಳಾಪಟ್ಟಿ ಯಾವಾಗ ಎಂದು ಫಲಾನುಭವಿಗಳು ತಿಳಿದುಕೊಳ್ಳಬಹುದು.
https://sevasindhugs.1.karnataka.gov.in/gl-stat-sp/Slot_Trackhttps://sevasindhugs.1.karnataka.gov.in/gl-stat-sp/Slot_Track ಈ ವೆಬ್ ಸೈಟ್ ಗೆ ಭೇಟಿ ಕೊಟ್ಟು ವೇಳಾಪಟ್ಟಿ ತಿಳಿದುಕೊಳ್ಳಬಹುದು.
ಈ ವೆಬ್ ಸೈಟ್ ಗೆ ಭೇಟಿ ಕೊಟ್ಟ ತಕ್ಷಣ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಕೇಳಲಾಗುತ್ತದೆ. ಅಲ್ಲಿ ಅದನ್ನು ಎಂಟರ್ ಮಾಡಿ ಬಳಿಕ ಕ್ಯಾಪ್ಚರ್ ಕೋಡ್ ಕೂಡ ಇರುತ್ತದೆ ಅದನ್ನು ನಮೂದಿಸಿದರೆ ನಿಮ್ಮ ಪಡಿತರ ಚೀಟಿ ಸಂಖ್ಯೆಯಲ್ಲಿರುವ ಕುಟುಂಬದ ಯಜಮಾನಿ ಯಾವ ದಿನಾಂಕಕ್ಕೆ ಯಾವ ಸಮಯಕ್ಕೆ ಹೋಗಿ ಯಾವ ಸೇವಾಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವ ವೇಳಾಪಟ್ಟಿ ಬರುತ್ತದೆ.