ನೀವು ಅಗ್ಗದ ಬೆಲೆಯಲ್ಲಿ ಮನೆಯನ್ನು ಖರೀದಿ ಮಾಡಲು ಬಯಸಿದರೆ ನಿಮಗೆ ಇದು ಅತ್ತ್ಯುತ್ತಮ ಸಮಯ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಮಗೆ ವಿಶೇಷ ಕೊಡುಗೆಯನ್ನು ತಂದಿದೆ. ಈ ಮೂಲಕ ನೀವು ಅಗ್ಗದ ಬೆಲೆಯಲ್ಲಿ ಮನೆಯನ್ನು ಖರೀದಿ ಮಾಡಬಹುದಾಗಿದೆ.
ನೀವು ನಿಮ್ಮ ಕನಸಿನ ಮನೆ ಅಥವಾ ಆಸ್ತಿ ಖರೀದಿಸಲು ಬಯಸಿದರೆ, ಪಿಎಂಬಿ ಬ್ಯಾಂಕ್ ಮೆಗಾ ಆಫರ್ ಒಂದನ್ನು ಘೋಷಿಸಿದೆ. ಈ ವರ್ಷ ಮನೆ ಖರೀದಿಸಬೇಕು ಎಂದುಕೊಂಡಿದ್ದರೆ ನಿಮಗೆ ಇದು ಗುಡ್ ನ್ಯೂಸ್ ಆಗಿದೆ. ದೇಶದ ಸರ್ಕಾರಿ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಒಂದು ಉತ್ತಮ ಅವಕಾಶವನ್ನು ಮಾಡಿಕೊಟ್ಟಿದೆ. ಪಿ ಎನ್ ಬಿ ಬ್ಯಾಂಕ್ ನಲ್ಲಿ ಮೆಗಾ ಇ – ಹರಾಜು ಪ್ರಕ್ರಿಯೆ ನಡೆಯಲಿದ್ದು, ಇದರ ಬಗ್ಗೆ ಟ್ವೀಟ್ ಮಾಡಿ ಅಧಿಕೃತ ಮಾಹಿತಿಯನ್ನು ಬ್ಯಾಂಕ್ ನೀಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೀಘ್ರದಲ್ಲಿಯೇ ಅಗ್ಗದ ಮನೆಯ ಹರಾಜನ್ನು ನಡೆಸಲಿದೆ. ಅದರ ಅಡಿಯಲ್ಲಿ ಅದು ವಸತಿ, ವಾಣಿಜ್ಯ, ಕೈಗಾರಿಕಾ, ಕೃಷಿ ಆಸ್ತಿಗಳು ಮತ್ತು ಸರ್ಕಾರೀ ಆಸ್ತಿಗಳನ್ನು ಹರಾಜು ಮಾಡುತ್ತದೆ. ಈ ಹರಾಜಿನ ಬಗ್ಗೆ ಪಿ ಎನ್ ಬಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖರೀದಿಸಬಹುದು ಅಗ್ಗದ ಮನೆ
ಪಿ ಎನ್ ಬ್ ಬ್ಯಾಂಕ್ ವಸತಿ, ವಾಣಿಜ್ಯ ಆಸ್ತಿ, ಕೈಗಾರಿಕಾ ಆಸ್ತಿ ಹಾಗೂ ಕೃಷಿ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ. ಬ್ಯಾಂಕ್‌ನಲ್ಲಿ ನಡೆಯಲಿರುವ ಮೆಗಾ ಇ ಹರಾಜಿನ ಬಗ್ಗೆ ಪಿ ಎನ್ ಬಿ ಅಧಿಕೃತವಾಗಿ ಟ್ವಿಟ್ಟರ್ ಮೂಲಕ ತಿಳಿಸಿದೆ. ಈ ಹರಾಜಿನಲ್ಲಿ ಪಾಲ್ಗೊಳ್ಳುವುದರ ಮೂಲಕ ನಿಮ್ಮ ಕನಸಿನ ಆಸ್ತಿಯನ್ನು ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ಬಳಸಿಕೊಳ್ಳಿ ಎಂದು ಟ್ವೀಟ್ ಮಾಡಿದೆ. ಇದು ಜುಲೈ 20 ಅಂದರೆ, ನಿನ್ನೆ ನಡೆಯಲಿರುವ ಹರಾಜು ಪ್ರಕ್ರಿಯೆ ಆಗಿದ್ದು, ಜನರು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು.
12022 ಮನೆಗಳ ಹರಾಜು
ಪಿ ಎನ್ ವಿ ಬ್ಯಾಂಕ್ 12022 ಮನೆಗಳು, 2313 ಅಂಗಡಿಗಳು, 1171 ಕೈಗಾರಿಕಾ ಆಸ್ತಿ ಹಾಗೂ 103 ಕೃಷಿ ಭೂಮಿಯನ್ನು ಮಾರಾಟ ಮಾಡಲಿಕ್ಕಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಈ https://ibapi.in/ ಲಿಂಕ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಹರಾಜು ಪ್ರಕ್ರಿಯೆ
ಅನೇಕ ಬ್ಯಾಂಕ್‌ಗಳು ಸಾಲ ತೀರಿಸಲು ಸಾಧ್ಯವಾಗದೆ ಇರುವವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ನಂತರ ಅದನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸುತ್ತದೆ. ಸಾಕಷ್ಟು ಜನ ಇಂತಹ ಆಸ್ತಿಗಳನ್ನು ಬಿಡ್ ಮಾಡುವುದರ ಮೂಲಕ ಖರೀದಿ ಮಾಡುತ್ತಾರೆ. ಯಾರು ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಂಡು ಅದನ್ನು ಮರುಪಾವತಿ ಮಾಡಲು ಸಾಧ್ಯವಿಲ್ಲವೋ ಅಂತವರ ಜಮೀನು ಮನೆ ಅಥವಾ ಯಾವುದೇ ಆಸ್ತಿಯನ್ನು ಬ್ಯಾಂಕ್ ಅಡವಿಸಿಕೊಂಡಿದ್ದರೆ ಸಾಲ ತೀರಿಸದೇ ಇರುವ ಸಂದರ್ಭದಲ್ಲಿ ಅದನ್ನು ಬ್ಯಾಂಕ್ ಮುಟ್ಟುಗೋಲು ಹಾಕಿಕೊಳ್ಳಬಹುದು. ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಮೂಲಕ ಬ್ಯಾಂಕ್ ತನಗೆ ಬರಲಿರುವ ಆಸ್ತಿಯನ್ನು ಹಿಂಪಡೆದುಕೊಳ್ಳುತ್ತದೆ.
SARFAESI ಕಾಯ್ದೆಯಡಿ ಹರಾಜು
ಬ್ಯಾಂಕ್ ಮೂಲಕ ನಡೆಯಲಿರುವ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿರುತ್ತದೆ. SARFAESI ಕಾಯ್ದೆಯಡಿ ಮೆಗಾ ಇ- ಹರಾಜನ್ನು ನಡೆಸಲಾಗುತ್ತದೆ. ಈ ಹರಾಜಿನಲ್ಲಿ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತದೆ. ಬ್ಯಾಂಕ್‌ನಲ್ಲಿ ದಾಖಲೆಗಾಗಿ ಅಡಮಾನ ಇಟ್ಟ ಆಸ್ತಿಗಳು ಇವಾಗಿದ್ದು, ಸಾಲ ತೀರಿಸಲು ಸಾಧ್ಯವಾಗದೆ ಇರುವವರು ಈ ಆಸ್ತಿ ಮಾರಾಟಕ್ಕೂ ಒಪ್ಪಿಗೆ ಸೂಚಿಸಿರುತ್ತಾರೆ. ಹಾಗಾಗಿ, ಯಾವುದೇ ಸಮಸ್ಯೆ ಇಲ್ಲದೆ ಅಗತ್ಯ ಇರುವ ಗ್ರಾಹಕರು ಹರಾಜಿನಲ್ಲಿ ಪಾಲ್ಗೊಂಡು ತಮಗೆ ಬೇಕಾದ ಆಸ್ತಿಯನ್ನು ಖರೀದಿ ಮಾಡಬಹುದು.
ಬ್ಯಾಂಕಿನಲ್ಲಿ ಹರಾಜಿನ ವಿಧಾನ
ಬ್ಯಾಂಕಿನ ಈ ಹರಾಜಿನಲ್ಲಿ ಭಾಗವಹಿಸುವ ಜನರು ಆಸ್ತಿಗಾಗಿ ಅರ್ನೆಸ್ಟ್ ಮನಿ ಅನ್ನು ಠೇವಣಿ ಮಾಡಬೇಕಾಗುತ್ತದೆ. ಇದಕ್ಕಾಗಿ ಡಿಜಿಟಲ್ ಸಹಿ ಅಗತ್ಯವಿದೆ. ಇದನ್ನು ಮಾಡಿದ ನಂತರ ವ್ಯಕ್ತಿಯು ಹರಾಜಿಗಾಗಿ ಇಮೇಲ್ ಐಡಿಯಲ್ಲಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಪಡೆಯುತ್ತಾನೆ. ಜನರು ಯಾವುದೇ ವಸತಿ ಅಥವಾ ವಾಣಿಜ್ಯ ಆಸ್ತಿಯನ್ನು ಬ್ಯಾಂಕ್ ನಲ್ಲಿ ಸಾಲವನ್ನು ತೆಗೆದುಕೊಳ್ಳಲು ಗ್ಯಾರೆಂಟಿಯಾಗಿ ಇರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಆ ವ್ಯಕ್ತಿಯು ಹಣವನ್ನು ಪಾವತಿಸಲು ಸಾಧ್ಯವಾಗದಿದ್ದರೆ ಬ್ಯಾಂಕ್ ತನ್ನ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಅದರ ಮೊತ್ತ ಮರುಪಡೆಯುತ್ತದೆ.
ಬ್ಯಾಂಕ್ ಹರಾಜಿನಲ್ಲಿ ಖರೀದಿ ಮಾಡಿದರೆ ಏನು ಪ್ರಯೋಜನ?
ಆಸ್ತಿ ದರ ಕಡಿಮೆಯಾಗಿರುತ್ತದೆ. ಬ್ಯಾಂಕ್ ಹರಾಜಿನಲ್ಲಿ ಆಸ್ತಿಯನ್ನು ಖರೀದಿ ಮಾಡುವುದರಿಂದ ಹಲವಾರು ಪ್ರಯೋಜನಗಳು ನಮಗಿದೆ. ಬ್ಯಾಂಕ್ ಹರಾಜಿನಲ್ಲಿ ಆಸ್ತಿ ಖರೀದಿ ಮಾಡುವುದರಿಂದ ನಮಗೆ ಅತೀ ಕಡಿಮೆ ದರದಲ್ಲಿ ಆಸ್ತಿಯು ಲಭ್ಯವಾಗಲಿದೆ. ಇನ್ನು ಬ್ಯಾಂಕುಗಳು ಸಾಮಾನ್ಯವಾಗಿ ಯಾವುದೇ ಆಸ್ತಿ ಮೇಲೆ ಸಾಲವನ್ನು ನೀಡುವಾಗ ಆಸ್ತಿಯ ಸಂಪೂರ್ಣ ಪರಿಶೀಲನೆ ನಡೆಸಿರುತ್ತದೆ. ಆದ್ದರಿಂದಾಗಿ ಆ ಆಸ್ತಿಯನ್ನು ಹರಾಜಿನಲ್ಲಿ ಖರೀದಿ ಮಾಡುವಾಗ ಹೆಚ್ಚಿನ ಆತಂಕ ಇರುವುದಿಲ್ಲ.
ಈ ಆಸ್ತಿಯು ರೆಡಿ ಟು ಮೂವ್ ಇನ್ ಆಗಿದೆ. ಭಾರತದಲ್ಲಿ ಬ್ಯಾಂಕ್ ಹರಾಜು ಎಂದಿಗೂ ಸುರಕ್ಷಿತವಾಗಿದೆ. ಆಸ್ತಿಗಳು ಸುರಕ್ಷಿತವಾಗಿದೆ. ಖರೀದಿದಾರರು ಒಪ್ಪಂದವನ್ನು ಕೊನೆ ಮಾಡಿಕೊಂಡ ಬಳಿಕ ನೇರವಾಗಿ ಮನೆಗೆ ಹೋಗಬಹುದಾಗಿದೆ. ಹಾಗೆಯೇ ಯಾವುದೇ ಕಾನೂನು ಸಮಸ್ಯೆ ಉಂಟಾಗುವುದಿಲ್ಲ.