ಇದೀಗ ಸರ್ಕಾರದ ವತಿಯಿಂದ ಗೃಹಜೋತಿ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರಿಗೂ ಸಹ ಉಚಿತವಾದ ವಿದ್ಯುತ್ ನೀಡಲಾಗುತ್ತಿದೆ ರಾಜ್ಯದ ಪ್ರತಿಯೊಂದು ಮನೆಗೂ ಸಹ 200 ಯೂನಿಟ್ ನಷ್ಟು ಉಚಿತ ವಿದ್ಯುತ್ ಕೊಡುವುದಾಗಿ ಸರ್ಕಾರ ಭರವಸೆಯನ್ನು ನೀಡಿ ಅದನ್ನು ಅನುಷ್ಠಾನಕ್ಕೆ ತಂದಿದೆ ಈಗ ಗೃಹಜೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ತನ್ನು ಜನರು ಪಡೆದುಕೊಳ್ಳುತ್ತಿದ್ದಾರೆ.
ಇನ್ನು ಸಾಕಷ್ಟು ಜನರಿಗೆ ಗೃಹಜೋತಿ ಯೋಜನೆಯ ಅರ್ಜಿ ಪ್ರಕ್ರಿಯೆಯಲ್ಲಿ ಗೊಂದಲಗಳು ಸೃಷ್ಟಿಯಾಗಿದೆ ಇದೀಗ ಎಲ್ಲಾ ಗೊಂದಲಗಳನ್ನು ನಿವಾರಿಸಲು ಸಚಿವರಾದ ಕೆಜೆ ಜಾರ್ಜ್ ಅವರು ಗೃಹಜೋತಿ ಯೋಜನೆಯ ಬಗ್ಗೆ ಇರುವಂತಹ ಎಲ್ಲಾ ಗೊಂದಲವನ್ನು ಪರಿಹಾರ ಮಾಡಿದ್ದಾರೆ.
ಇದನ್ನು ಓದಿ:- ಲಕ್ಷ್ಮಿ ದೇವಿಯ ಈ 8 ಹೆಸರುಗಳನ್ನು ಹೇಳಿದರೆ ನಿಮಗೆ ಉದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತಹ ಕೆಜೆ ಜಾರ್ಜ್ ಅವರು ವಿದ್ಯುತ್ ಇಲಾಖೆಯ ಸಚಿವರಾಗಿದ್ದು ಮಾಧ್ಯಮದ ಮುಂದೆ ಸುದ್ದಿಗೋಷ್ಠಿಯಲ್ಲಿ ಪ್ರಮುಖ ವಿಚಾರವನ್ನು ಮಾತನಾಡಿದ್ದಾರೆ ಅದೇನೆಂದರೆ ಆಗಸ್ಟ್ 5 ರಂದು ಗೃಹಜೋತಿ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗುತ್ತದೆ ಎನ್ನುವ ವಿಷಯವನ್ನು ವರ ಹಾಕಿದ್ದಾರೆ ಇದರೊಂದಿಗೆ ಯಾರೆಲ್ಲ ಜುಲೈ ತಿಂಗಳ ವಿದ್ಯುತ್ ಬಿಲ್ ಕಟ್ಟಿರ್ತಾರೋ ಅವರಿಗೆ ಕಟ್ಟಿರುವಂತಹ ಹಣವನ್ನು ವಾಪಸ್ ಕೊಡಲಾಗುತ್ತದೆ ಹಣವನ್ನು ಸರ್ಕಾರವೇ ಕೊಡುತ್ತದೆ ಎಂದು ತಿಳಿಸಿದ್ದಾರೆ.
ಜೂನ್ ತಿಂಗಳ ವಿದ್ಯುತ್ ಬಿಲ್ ಜುಲೈ ನಲ್ಲಿ ಬಂದಿದೆ ಆದರೆ ಜುಲೈ ತಿಂಗಳ ವಿದ್ಯುತ್ ಬಿಲ್ ನಲ್ಲಿ ಜೂನ್ ತಿಂಗಳ ಜೊತೆಗೆ ಜುಲೈ ನ ಕೆಲವು ದಿನಗಳು ಕೂಡ ಸೇರಿಕೊಂಡಿದ್ದು ಈ ಕಾರಣದಿಂದ ಎಲೆಕ್ಟ್ರಿಸಿಟಿ ಬಿಲ್ ಮೊತ್ತ ಸಾಕಷ್ಟು ಮನೆಗಳಲ್ಲಿ ಜಾಸ್ತಿ ಬಂದಿದೆ. ಇದನ್ನು ಪರಿಶೀಲಿಸಿ ಕಳೆದ ನಾಲ್ಕು ತಿಂಗಳುಗಳಿಂದ ಯಾರು ಬಾಕಿ ಉಳಿಸಿಕೊಂಡಿಲ್ಲ ಅವರಿಗೆಲ್ಲ ಜುಲೈ ತಿಂಗಳಲ್ಲಿ ಕಟ್ಟಿರುವಂತಹ ಹೆಚ್ಚುವರಿ ಹಣವನ್ನು ನಾಲ್ಕು ತಿಂಗಳವರೆ ಒಳಗೆ ವಾಪಸ್ ಕೊಡಲಾಗುತ್ತದೆ ಎಂದು ಕೆಜಿ ಜಾರ್ಜ್ ಅವರು ತಿಳಿಸಿದ್ದಾರೆ.
ಇದನ್ನು ಓದಿ:- ನಿಮ್ಮ ಕೃಷಿ ಭೂಮಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಕೂಡಲೇ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಪಡೆದುಕೊಳ್ಳಿ.
ಇದೀಗ 1.40 ಕೋಟಿ ಜನರು ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ರಾಜ್ಯದಲ್ಲಿ ಈ ಯೋಜನೆಯ ಅನುಕೂಲವನ್ನು ಪಡೆದುಕೊಳ್ಳಲು ಕಾಯುತ್ತಿರುವ ಕಾರಣದಿಂದಾಗಿ ಆಗಸ್ಟ್ 5 ರಿಂದ ಯೋಜನೆಯನ್ನು ಜಾರಿಗೆ ತರುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿದ್ಯುತ್ ಸಚಿವ ಕೆಜೆ ಜಾರ್ಜ್ ಅವರು ತಿಳಿಸಿದ್ದಾರೆ.
ಗೃಹಜೋತಿ ಯೋಜನೆಯಲ್ಲಿ ಯಾವುದೇ ಗೊಂದಲ ಇದ್ದರೂ ಸಹ ನೀವು ಮಾಹಿತಿಗಳನ್ನು ಪಡೆದುಕೊಳ್ಳಲು ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಉಚಿತ ವಿದ್ಯುತ್ತನ್ನು ಪಡೆದುಕೊಳ್ಳಲು ಯೋಜನೆಗೆ ಅರ್ಜಿ ಸಲ್ಲಿಸಲು ರಿಜಿಸ್ಟರ್ ಮಾಡಿಕೊಳ್ಳುವುದಕ್ಕೆ ಯಾವುದೇ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ
ಜನರು ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಿ, ಆದರೆ ಜುಲೈ ತಿಂಗಳ ಒಳಗೆ ಅರ್ಜಿ ಸಲ್ಲಿಸಿದ್ದಾರೆ ಅಂತವರಿಗೆ ಆಗಸ್ಟ್ ನಿಂದ ಉಚಿತ ವಿದ್ಯುತ್ ಸಿಗುತ್ತದೆ. ರಾಜ್ಯದಲ್ಲಿ ಇನ್ನು ಯಾರು ಅರ್ಜಿ ಸಲ್ಲಿಸಿಲ್ಲ ಅಂತಹವರು ಜುಲೈ ತಿಂಗಳ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ ಜನಕರಿಗೆ ಅನುಕೂಲ ಆಗಲಿ ಎಂದು ಆಗಸ್ಟ್ 5ಕ್ಕೆ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತರುವ ಪ್ಲಾನ್ ಮಾಡಲಾಗಿದೆ.
ಅರ್ಜಿ ಹಾಕದೆ ಇರುವವರು ಯಾವುದೇ ಕಾರಣಕ್ಕೂ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುವುದಿಲ್ಲ. ಈ ತಿಂಗಳು ನೀವು ಅರ್ಜಿಯನ್ನು ಸಲ್ಲಿಕೆ ಮಾಡಿದರೆ ಮುಂದಿನ ತಿಂಗಳಿನಿಂದ ನಿಮಗೆ ಉಚಿತ ವಿದ್ಯುತ್ ದೊರೆಯಲಿದೆ ಇನ್ನು ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಿಲ್ಲ ಅಂತಹವರು ಕೂಡಲೇ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ತನ್ನು ಪಡೆದುಕೊಳ್ಳಿ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.