ನಮ್ಮ ಹಿಂದೂ ಸಂಪ್ರದಾಯದಲ್ಲಿ ಲಕ್ಷ್ಮಿ ದೇವಿಯನ್ನು ಶುಕ್ರವಾರದ ದಿನ ಪೂಜಿಸುವಂತಹ ಸಂಪ್ರದಾಯವಿದೆ ಆದರೆ ಆಷಾಡ ಶುಕ್ರವಾರದ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವನ್ನು ನೀಡಲಾಗುತ್ತದೆ ಯಾರೆಲ್ಲ ಉದ್ಯೋಗ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ ಅಂತಹವರು ಆಷಾಢ ಶುಕ್ರವಾರದಂದು ಅಥವಾ ಯಾವುದೇ ಶುಕ್ರವಾರ ಲಕ್ಷ್ಮಿ ದೇವಿಯ ಯಾವ ಹೆಸರುಗಳನ್ನು ಪಠಿಸಿದರೆ ನಿಮಗೆ ಉದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಈ ವಿಷಯದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಒಬ್ಬ ವ್ಯಕ್ತಿ ತನ್ನ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಾಗ ಅಥವಾ ಆತನಿಗೆ ಉದ್ಯೋಗ ಸಿಗದೇ ಇದ್ದಾಗ ಅವನು ದೇವರುಗಳು ಮತ್ತು ದೇವತೆಗಳಿಂದ ಕೆಲವು ರೀತಿಯ ಪವಾಡಗಳನ್ನು ನಿರೀಕ್ಷೆ ಮಾಡುತ್ತಾ ಇರುತ್ತಾನೆ. ಇದು ಸರ್ವೇಸಾಮಾನ್ಯ ಹಿಂದು ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂದು ಪರಿಗಣಿಸಲಾಗುತ್ತದೆ.
ಲಕ್ಷ್ಮಿ ದೇವಿಯ ಈ ಎಂಟು ಹೆಸರುಗಳನ್ನು ತಪ್ಪದೆ ಪಠಿಸಿದರೆ ನಿಮ್ಮ ಜೀವನದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ.
1. ಓಂ ಆದ್ಯಾಲಕ್ಷ್ಮ್ಯೈ ನಮಃ
2. ಓಂ ವಿದ್ಯಾಲಕ್ಷ್ಮ್ಯೈ ನಮಃ
3. ಓಂ ಸೌಭಾಗ್ಯಲಕ್ಷ್ಮ್ಯೈ ನಮಃ
4.ಓಂ ಅಮೃತಲಕ್ಷ್ಮ್ಯೈ ನಮಃ
5. ಓಂ ಕಾಮಲಕ್ಷ್ಮ್ಯೈ ನಮಃ
6. ಓಂ ಸತ್ಯಲಕ್ಷ್ಮ್ಯೈ ನಮಃ
7. ಓಂ ಭೋಗಲಕ್ಷ್ಮ್ಯೈ ನಮಃ
8. ಓಂ ಯೋಗಲಕ್ಷ್ಮ್ಯೈ ನಮಃ
ಈ ಹೆಸರುಗಳನ್ನು ನೀವು ಪಠಿಸಿದರೆ ಎಷ್ಟೇ ದಿನಗಳಿಂದ ಉದ್ಯೋಗ ಸಮಸ್ಯೆಯನ್ನು ಗಳನ್ನು ಎದುರಿಸಿತ್ತಿದ್ದರೂ ಸಹ ನಿವಾರಣೆ ಮಾಡಿಕೊಳ್ಳಬಹುದು. ಲಕ್ಷ್ಮಿ ದೇವಿಯನ್ನು ಪೂಜೆ ಮಾಡುವಂತಹ ಸಂದರ್ಭದಲ್ಲಿ ಈ ತಪ್ಪುಗಳನ್ನು ಖಂಡಿತಾ ಮಾಡಬೇಡಿ.
ಇದನ್ನು ಓದಿ:- ನಿಮ್ಮ ಕೃಷಿ ಭೂಮಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಕೂಡಲೇ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಪಡೆದುಕೊಳ್ಳಿ.
* ಪೂಜೆ ಮಾಡುವಂತಹ ಸಂದರ್ಭದಲ್ಲಿ ಕೋಪದಿಂದ ಮತ್ತು ಕೆಲವು ವಸ್ತುಗಳನ್ನು ಸೇವಿಸುವುದರಿಂದ ಲಕ್ಷ್ಮೀದೇವಿಯು ನಿಮ್ಮ ಮೇಲೆ ಕೋಪಿಸಿಕೊಳ್ಳುತ್ತಾಳೆ.
* ಶುಕ್ರವಾರದಂದು ನಾವು ಕೇವಲ ಸಾತ್ವಿಕ ಆಹಾರಗಳನ್ನು ಮಾತ್ರ ಸೇವನೆ ಮಾಡಬೇಕು ಈ ವಿಷಯಗಳ ಬಗ್ಗೆ ಶುಕ್ರವಾರದ ದಿನದಂದು ವಿಶೇಷ ಕಾಳಜಿಯನ್ನು ವಹಿಸಬೇಕು.
* ಶುಕ್ರವಾರದಂದು ದಾನ ಧರ್ಮವನ್ನು ಮಾಡುವ ಮೂಲಕ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಸಂತೋಷಗೊಳ್ಳುತ್ತಾಳೆ. ಆದ್ದರಿಂದ ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾಳೆ ಹೀಗಾಗಿ ನೀವು ನಿಮ್ಮ ಕೈಲಾದಷ್ಟು ಇತರರಿಗೆ ಅವಶ್ಯಕತೆ ಇರುವವರಿಗೆ ದಾನ ಧರ್ಮವನ್ನು ಮಾಡಿ.
ದೇವಿ ಪೂಜೆ ಮಾಡುವಂತಹ ಸರಿಯಾದ ವಿಧಾನ
ಮಹಾಲಕ್ಷ್ಮಿಯ ಪೂಜೆ ಮಾಡಲು ನೀವು ಮುಂಜಾನೆ ಬೇಗ ಎದ್ದು ಶುದ್ಧರಾಗಬೇಕು ನಂತರ ಮುಖ್ಯವಾಗಿ ಪೂಜೆ ಮಾಡುವ ಸ್ಥಳ ಹಾಗೂ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ದೇವರ ಕೋಣೆಯಲ್ಲಿ ಒಂದು ಮರದ ಪೀಠದ ಮೇಲೆ ಅಥವಾ ಕೆಂಪು ಬಣ್ಣದ ಬಟ್ಟೆಯ ಮೇಲೆ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಇಡಿ ಹಾಗೂ ಲಕ್ಷ್ಮೀದೇವಿಯ ವಿಗ್ರಹದ ಅಥವಾ ಫೋಟೋ ಎರಡು ಕಡೆಗಳಲ್ಲಿ ತುಪ್ಪದ ದೀಪಗಳನ್ನು ಹಚ್ಚಿ
ಲಕ್ಷ್ಮಿ ದೇವಿಗೆ ಕೆಂಪು ಬಣ್ಣದ ಹೂವುಗಳು ಪ್ರಿಯವಾಗಿದ್ದರಿಂದ ಕೆಂಪು ಬಣ್ಣದ ಹೂವುಗಳಿಂದ ಲಕ್ಷ್ಮಿ ದೇವಿಯನ್ನು ಅಲಂಕರಿಸಿ ದೂಪ ದ್ರವ್ಯಗಳನ್ನು ಬೆಳೆಗೆ ಅಕ್ಷತೆಯನ್ನು ಅರ್ಪಿಸಿ ಹಾಗೆಯೇ ಬಿಳಿ ಬಣ್ಣದ ಸಿಹಿ ತಿಂಡಿಗಳನ್ನು ನೈವೇದ್ಯ ಮಾಡಿ ಅರ್ಪಿಸಿ ಹಾಗೆ ಪೂಜೆಯ ಕೊನೆಯಲ್ಲಿ ಲಕ್ಷ್ಮಿ ಮಂತ್ರವನ್ನು ಪಠಿಸಿ ದೇವಿಗೆ ಕೊನೆಯದಾಗಿ ಆರತಿಯನ್ನು ಮಾಡಿ ಪೂಜೆಯನ್ನು ಪೂರ್ಣಗೊಳಿಸಿ. ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.