ಫ್ರೀ ವಿದ್ಯುತ್ ಬಿಲ್ ಬಂದಿಲ್ಲ ಎಂದು ತಲೆಕೆಡಿಸಿ ಕೊಂಡಿದ್ದೀರಾ.? ಹಾಗಾದರೆ ಈ ಮಾಹಿತಿ ತಪ್ಪದೆ ತಿಳಿದುಕೊಳ್ಳಿ.
ಸಾಕಷ್ಟು ಜನರಿಗೆ ಆಗಸ್ಟ್ ತಿಂಗಳಿನಲ್ಲಿ ಬಂದಂತಹ ಜೀರೋ ವಿದ್ಯುತ್ ಬಿಲ್ ನಿಂದ ಸಂತಸ ಮನೆ ಮಾಡಿದೆ ಈಗಾಗಲೇ ಸಾಕಷ್ಟು ಜನರಿಗೆ ಬೆಸ್ಕಾಂ ಸಿಬ್ಬಂದಿಯವರು ಮನೆ ಬಾಗಿಲಿಗೆ ಬಂದು ವಿದ್ಯುತ್ ಬಿಲ್ಲನ್ನು ನೀಡಿದ್ದಾರೆ ವಿದ್ಯುತ್ ಶುಲ್ಕ 0 ಎಂದು ನಮೂದಿಸಿರುವುದನ್ನು ಕಂಡು ಫಲಾನುಭವಿಗಳು ಖುಷಿಪಟ್ಟಿದ್ದಾರೆ ಲಕ್ಷಾಂತರ ಗ್ರಹಕರು ಸರ್ಕಾರದ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಎಲ್ಲ ದಾಖಲೆಗಳನ್ನು ಸರಿಯಾಗಿ ನೀಡಿ ಅರ್ಹ ಫಲಾನುಭವಿಗಳಿಗೆ ಆಗಸ್ಟ್ 1 ರಿಂದಲೇ ಶೂನ್ಯ ವಿದ್ಯುತ್ ಬಿಲ್‌ಅನ್ನು ತಲುಪಿಸುವ ಕಾರ್ಯವನ್ನು ಇದೀಗ ಮಾಡಲಾಗಿದೆ…