ನಟಿ ಪ್ರೇಮ(Prema) ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shiva Rajkumar) ಅವರ ಓಂ(On Cinema Kannada) ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ತಾವು ನಟನೆ ಮಾಡಿದ ಮೊದಲ ಸಿನಿಮಾ ಸೂಪರ್ ಹಿಟ್ ಆಯಿತು ನಟಿ ಪ್ರೇಮ ಅವರ ಅಭಿನಯವನ್ನು ನೋಡಿ ಎಲ್ಲರೂ ಕೂಡ ಮೆಚ್ಚಿಕೊಂಡರು. ತದನಂತರ ಒಂದರ ಹಿಂದೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವುದರ ಮೂಲಕ ಸ್ಯಾಂಡಲ್ವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡರು.
ಹೌದು ನಟಿ ಪ್ರೇಮ ಅವರು ಡಾಕ್ಟರ್ ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಶಶಿಕುಮಾರ್, ರಮೇಶ್ ಅರವಿಂದ್ ಹೀಗೆ ಕನ್ನಡದ ಬಹುತೇಕ ಎಲ್ಲಾ ದಿಗ್ಗಜರ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೂ ಕೂಡ ಕನ್ನಡದಲ್ಲಿ ಸುಮಾರು ಐವತ್ತಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಒಂದು ರೀತಿಯಲ್ಲಿ ಹೇಳುವುದಾದರೆ ಚಿತ್ರರಂಗಕ್ಕೆ ನಟಿ ಪ್ರೇಮ ಅವರು ಸಾಕಷ್ಟು ಕೊಡುಗೆಯನ್ನು ಕೊಟ್ಟಿದ್ದಾರೆ. ಚಿತ್ರರಂಗದಲ್ಲಿ ಉನ್ನತ ಶಿಖರದಲ್ಲಿ ಇರುವಾಗಲೇ ಸಾಕಷ್ಟು ಸಿನಿಮಾಗಳ ಆಫರ್ ಗಳು ಇರುವಾಗಲೇ ನಟಿ ಪ್ರೇಮ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.
ಹೌದು ಸಾಮಾನ್ಯವಾಗಿ ನಟಿಯರು ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಬಹಳಷ್ಟು ಯೋಚಿಸುತ್ತಾರೆ ತಮ್ಮ ಕೆರಿಯರ್ ಗೆ ಸಂಬಂಧಿಸಿದಂತಹ ವ್ಯಕ್ತಿಯನ್ನೇ ಮದುವೆಯಾದರೆ ಮುಂದಿನ ಸಿನಿ ಜೀವನಕ್ಕೆ ಸಹಾಯವಾಗುತ್ತದೆ ಎಂದು ಬಯಸುತ್ತಾರೆ. ಆದರೆ ನಟಿ ಪ್ರೇಮ ಅವರು ಮಾತ್ರ ಇದ್ಯಾವುದನ್ನು ಕೂಡ ನೋಡುವುದಿಲ್ಲ ತಮ್ಮ ಮನೆಯಲ್ಲಿ ನಿಶ್ಚಯ ಮಾಡಿದಂತಹ ಹುಡುಗನ ಜೊತೆ ಮದುವೆ ಮಾಡಿಕೊಳ್ಳುವುದಕ್ಕೆ ಒಪ್ಪಿಕೊಳ್ಳುತ್ತಾರೆ. ಪ್ರೇಮ ಅವರ ಮನೆಯಲ್ಲಿ ಜೀವನ್ ಅಪ್ಪಚ್ಚು ಎಂಬ ಇಂಜಿನಿಯರ್ ಅನ್ನು ಪ್ರೇಮ ಅವರಿಗೆ ಮದುವೆ ಮಾಡಲು ಏರ್ಪಾಡು ಮಾಡುತ್ತಾರೆ.
ಮನೆಯವರು ನೋಡಿದಂತಹ ಹುಡುಗನನ್ನು ಪ್ರೇಮ ಅವರು ಕೂಡ ಮದುವೆಯಾಗುವುದಕ್ಕೆ ಸಿದ್ಧರಾಗುತ್ತಾರೆ ಸ್ವಲ್ಪವೂ ಕೂಡ ತಮ್ಮ ಮುಂದಿನ ಜೀವನದ ಬಗ್ಗೆ ಯೋಚನೆ ಮಾಡುವುದಿಲ್ಲ. ಮದುವೆಯಾದ ನಂತರ ತನ್ನ ಸಿನಿ ಕೆಲಸಗಳೆಲ್ಲದಕ್ಕೂ ಕೂಡ ಗುಡ್ ಬೈ ಹೇಳಿ ಗಂಡನ ಜೊತೆ ನೆಮ್ಮದಿಯುತವಾದ ಸಂಸಾರಕ ಜೀವನವನ್ನು ಸಾಗಿಸಬೇಕು ಎಂಬ ಆಸೆ ಕನಸನ್ನು ಹೊಂದಿರುತ್ತಾರೆ. ಆದರೆ ಅಲ್ಲೇ ನೋಡಿ ನಟಿ ಪ್ರೇಮ ಅವರು ಎಡವಿದ್ದು, ಹೌದು ಜೀವನ್ ಅಪ್ಪಚ್ಚು ಒಬ್ಬ ದುರಾಸೆ ಹೊಂದಿದ್ದಂತಹ ವ್ಯಕ್ತಿ ಈತನ ಮನಸ್ಸಿನಲ್ಲಿ ಪ್ರೇಮ ಅವರನ್ನು ಮದುವೆಯಾಗುವುದಕ್ಕಿಂತ ಮುಂಚೆ ಪ್ರೇಮ ಅವರು ಸಿನಿಮಾದಲ್ಲಿ ನಟನೆ ಮಾಡುತ್ತಾರೆ, ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ ಈಕೆಯನ್ನು ಮುಂದಿಟ್ಟುಕೊಂಡು ಹಣ ಗಳಿಸಿಕೊಳ್ಳಬಹುದು ಎಂಬ ಯೋಚನೆಯಲ್ಲಿ ಇರುತ್ತಾರೆ.
ಆದರೆ ಮದುವೆಯಾದ ಎರಡು ವರ್ಷದ ನಂತರ ಇದೆಲ್ಲವೂ ಕೂಡ ನಟಿ ಪ್ರೇಮ ಅವರಿಗೆ ತಿಳಿಯುತ್ತದೆ. ಹೌದು ಪ್ರೇಮಾ ಅವರು ಮದುವೆಯಾದ ನಂತರ ಸಿನಿಮಾ ಕೆಲಸಗಳಲ್ಲಿ ಹೆಚ್ಚು ಆಸಕ್ತಿ ತೋರಿಸುವುದಿಲ್ಲ, ಸಾಂತರಿಕ ಜೀವನದ ಕಡೆ ಒಲವು ತೋರುತ್ತಾರೆ. ಆದರೆ ಜೀವನ್ ಮಾತ್ರ ಸಿನಿಮಾದಲ್ಲಿ ನಟಿಸುವಂತೆ ಒತ್ತಾಯ ಮಾಡುತ್ತಾರೆ. ಅಷ್ಟೇ ಅಲ್ಲದೆ ಹಣವನ್ನು ತಂದು ಕೊಡುವಂತೆ ಪೀಡಿಸುತ್ತಾರೆ ಇದೆಲ್ಲವನ್ನು ಗಮನಿಸಿದಂತಹ ನಟಿ ಪ್ರೇಮ ಅವರು ಇನ್ನು ಮುಂದೆ ನಾನು ಜೀವನ್ ಜೊತೆ ಬಾಳುವುದರಲ್ಲಿ ಯಾವುದೇ ರೀತಿಯಾದಂತಹ ಅರ್ಥವಿಲ್ಲ. ನಾನು ಒಳ್ಳೆಯ ಕುಟುಂಬವನ್ನು ಬಯಸುತ್ತೇನೆ ಆದರೆ ಈತ ಮಾತ್ರ ಕುಟುಂಬಕ್ಕಿಂತಲೂ ಹೆಚ್ಚು ಹಣಕ್ಕೆ ಮಾನ್ಯತೆಯನ್ನು ನೀಡುತ್ತಾನೆ ಇಂಥವನ ಜೊತೆ ಬದುಕಲು ಸಾಧ್ಯವಿಲ್ಲ ಎಂದು ಗಟ್ಟಿ ನಿರ್ಧಾರ ಮಾಡಿ 2016ರಲ್ಲಿ ನಟಿ ಪ್ರೇಮ ಅವರು ಜೀವನ್ ಅಪಚ್ಚು ಅವರಿಗೆ ವಿ.ಚ್ಛೇ.ದ.ನ.ವನ್ನು ನೀಡುತ್ತಾರೆ.
ವಿ.ಚ್ಛೇ.ದ.ನ.ವಾ.ದ ಬಳಿಕ ಒಂದಷ್ಟು ವರ್ಷ ಇದೇ ನೋವಿನಲ್ಲಿ ಕಾಲ ಕಳೆಯುತ್ತಾರೆ ಯಾವುದೇ ಸಿನಿಮಾ ಕೆಲಸ ಇರಬಹುದು ಅಥವಾ ವೈಯಕ್ತಿಕ ಕೆಲಸ ಇರಬಹುದು ಎಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲ. ನಾಲ್ಕೈದು ವರ್ಷ ಇದೇ ನೋ.ವ.ಲ್ಲಿ ಇದ್ದಂತಹ ಪ್ರೇಮ ಅವರು ಇವೆಲ್ಲವನ್ನು ದಾಟಿ ಮತ್ತೆ ಶಿಶಿರ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಮತ್ತೆ ಕಮ್ ಬ್ಯಾಕ್ ಮಾಡುತ್ತಾರೆ. ತದನಂತರ ಒಂದಷ್ಟು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ನಟಿ ಪ್ರೇಮ ಅವರು ಜೀವನ್ ಅವರಿಂದ ದೂರ ಆಗಿದ್ದರು ಕೂಡ ಇನ್ನೂ ಎರಡನೇ ಮದುವೆಯ ಬಗ್ಗೆ ಯೋಚನೆ ಮಾಡಿಲ್ಲ.
ನಿಜಕ್ಕೂ ಕೂಡ ಇದು ಆಚರಿಯ ಸಂಗತಿ ಅಂತ ಹೇಳಬಹುದು ಏಕೆಂದರೆ ನಟ ನಟಿಯರು ಮದುವೆಯಾಗುವುದು ಮತ್ತೆ ದೂರ ಆಗುವುದು ಹೊಸದೇನಲ್ಲ. ಆರು ತಿಂಗಳಿಗೊಮ್ಮೆ ವರ್ಷಕೊಮ್ಮೆ ವಸ್ತುಗಳನ್ನು ಬದಲಿಸುವಂತೆ ಸಂಬಂಧಗಳನ್ನು ಕೂಡ ಬದಲಿಸುತ್ತಾರೆ ಆದರೆ ಪ್ರೇಮ ಅವರು ಮಾತ್ರ ಮೊದಲ ಪತಿಯಿಂದ ಇಷ್ಟೆಲ್ಲ ನೋ.ವು ಸಂ.ಕ.ಟ.ವನ್ನು ಅನುಭವಿಸಿದ್ದರು ಕೂಡ ಇನ್ನೊಂದು ಮದುವೆಯಾಗಬೇಕು ತಾನು ಅಂದುಕೊಂಡ ಜೀವನವನ್ನು ಸಾಗಿಸಬೇಕು ಕನಸನ್ನು ಕಂಡಿಲ್ಲ. ಈ ಕಾರಣಕ್ಕಾಗಿಯೇ ನಟಿ ಪ್ರೇಮ ಅವರು ಇನ್ನೂ ಕೂಡ ಎರಡನೇ ಮದುವೆಯಾಗಿಲ್ಲ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.