ಡಿ ಬಾಸ್ ದರ್ಶನ್ ಅವರ ಕುರಿತಾಗಿ ನಟಿ, ಪಂಕಜಾ ಮಾತನಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೆಲವು ಹಳೆಯ ಕಥೆಗಳನ್ನು ಎಲ್ಲರೆದುರು ತೆರೆದಿಟ್ಟಿದ್ದಾರೆ. ‘ಅಂಬಿಕಾ’ ಧಾರಾವಾಹಿಯಲ್ಲಿ ಪಂಕಜಾ ಅವರು ಅಭಿನಯಿಸುತ್ತಿರುವ ಕಾಲದಲ್ಲಿ ದರ್ಶನ್ ಅವರು ಅಲ್ಲಿಯೇ ಕೆಲಸ ಮಾಡುತ್ತಿದ್ದರಂತೆ.. ಜೇಜುಬಾಯಿ ಪಾತ್ರವನ್ನು ಪಂಕಜಾ ನಿರ್ವಹಿಸುತ್ತಿದ್ದರು. ಆಗಿನ ದರ್ಶನ್ ಅವರನ್ನು ನೋಡಿದರೆ ಈಗಿನ ಡಿ ಬಾಸ್ ಎಂದು ತಿಳಿಯುತ್ತಿರಲಿಲ್ಲವಂತೆ. ನಂಬಲು ಸಾಧ್ಯವಿಲ್ಲ ಎನ್ನುತ್ತಾರೆ ಪಂಕಜಾ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಮುದ್ದು ಮುದ್ದಾಗಿ ಮಾತನಾಡುವ ಮಕ್ಕಳಿಂದ ಹಿಡಿದು ಮಾಗಿದ ಮುದುಕರವರೆಗೂ ಎಲ್ಲರೂ ದರ್ಶನ್ ಅವರ ಅಭಿಮಾನಿಗಳೇ. ಕರ್ನಾಟಕದ ಮೂಲೆ ಮೂಲೆಗಳಲ್ಲಿಯೂ ದರ್ಶನ್ ಅವರ ಅನುಯಾಯಿಗಳು ಕಾಣಸಿಗುತ್ತಾರೆ. ಸಾಮಾನ್ಯವಾಗಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಾಯಕನಟನ ಕೆಲವು ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಅದೇ ಕಾರಣಕ್ಕಾಗಿ ಇಂಟರ್ನೆಟ್ ಜಾಲದಲ್ಲಿ ಹುಡುಕುತ್ತಾರೆ.
ತಾವು ಮೆಚ್ಚಿದ ನಟನ ಹಿಂದಿನ ಉದ್ಯೋಗ, ವಿದ್ಯಾಭ್ಯಾಸ, ತಂದೆ ತಾಯಿ, ಮಡದಿ, ಮಕ್ಕಳು, ಬಾಲ್ಯದ ಕೀಟಲೆಗಳು ಎಲ್ಲವನ್ನು ತಿಳಿದುಕೊಳ್ಳುವ ಉತ್ಸಾಹವನ್ನು ತೋರುತ್ತಾರೆ. ನಾವು ಈಗ ಹೇಳುತ್ತಿರುವುದು ಡಿ ಬಾಸ್ ದರ್ಶನ್ ಅವರ ಕಥೆ.. ಈ ಕಥೆಯನ್ನು ನೀವೆಂದೂ ಯಾರಿಂದಲೂ ಕೇಳಿರಲು ಸಾಧ್ಯವಿಲ್ಲ. ಈ ರೋಚಕ ವಿಷಯವನ್ನು ತಿಳಿದುಕೊಳ್ಳಬೇಕು ಎಂದರೆ ಬರಹವನ್ನು ಸಂಪೂರ್ಣವಾಗಿ ಓದಿ.
ಪಂಕಜಾ ಅವರು ಸಂದರ್ಶನದಲ್ಲಿ ಈ ರೀತಿಯಾಗಿ ಹೇಳಿದ್ದಾರೆ; ” ನಾನು ಅಭಿನಯಿಸುವುದರೊಂದಿಗೆ ಆಡಿಯೋ ಕಲಾವಿದೆ ಕೂಡ ಹೌದು. ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು. ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅನೇಕ ಬೀದಿ ನಾಟಕಗಳನ್ನು ಮಾಡಿದ್ದೇನೆ.. ಹಲವಾರು ಜನಪ್ರಿಯ ನಟರೊಂದಿಗೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ..ನಾನು ನೋಡಿದ ಹಾಗೆ ಕಲೆಯಲ್ಲಿ ಪ್ರಾವಿಣ್ಯತೆಯನ್ನು ಹೊಂದಿದವರು ಎಂದಿಗೂ ಅಹಂ ಅನ್ನು ತೋರಿಸಿಲ್ಲ.
ನನ್ನನ್ನು ಎಲ್ಲರೂ ಪ್ರೀತಿಯಿಂದ ದೊಡ್ಡಮ್ಮ ಎಂದು ಕರೆಯುತ್ತಿದ್ದರು. ನಾನು ಈಗಿನ ಅನೇಕ ಕಲಾವಿದರ ಚಿಕ್ಕಂದಿನಿಂದ ನೋಡಿದ್ದೇನೆ” ಎಂದಿದ್ದಾರೆ. ಪಂಕಜಾ ಅವರು ಮಾತನಾಡುತ್ತಾ ದರ್ಶನ್ ಅವರ ಕಥೆಯನ್ನು ಹೇಳಿದ್ದಾರೆ. “ಇವರೇ ನಾನು ಅಂದು ನೋಡಿದ ದರ್ಶನ್ ಎಂದರೆ ನಂಬಲು ಅಸಾಧ್ಯ. ಬಾಲ್ಯದಲ್ಲಿನ ದರ್ಶನ ಅವರನ್ನು ನೋಡಿದರೆ ಇವರೇ ಅವರು ಎಂದು ತಿಳಿಯಲು ಸಾಧ್ಯವಿಲ್ಲ..
ನಾನು ಅಂಬಿಕ ಎಂಬ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದ ಕಾಲವದು. ನಾನು ಜೀಜು ಬಾಯಿಯ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದೆ…ಅಂದು ದರ್ಶನವರು ಅಲ್ಲಿಯೇ ಕೆಲಸವನ್ನು ಮಾಡುತ್ತಿದ್ದರು..ದರ್ಶನ್ ಅವರು ಹುಟ್ಟಿದಾಗಿನಿಂದಲೂ ಕಷ್ಟದಿಂದಲೇ ಎದ್ದು ಬಂದವರು… ಮಾನವೀಯ ಮೌಲ್ಯಗಳನ್ನು ಅಂದಿನಿಂದಲೇ ರೂಢಿಸಿಕೊಂಡು ಬಂದವರು… ಒಮ್ಮೆಲೇ ಯಾರು ಶ್ರೀಮಂತರಾಗಿಲ್ಲ. ಅವರ ತಂದೆ ಒಬ್ಬ ಹಿರಿಯ ಕಲಾವಿದರೆ ಇರಬಹುದು. ಶ್ರೀಮಂತರೇ ಆಗಿರಬಹುದು. ಆದರೆ ದರ್ಶನ್ ಅವರು ಅವಕಾಶಗಳನ್ನು ಪಡೆದುಕೊಳ್ಳಲು ಕಷ್ಟಪಟ್ಟಿದ್ದರು.
ಅವರ ತಂದೆ ತೂಗುದೀಪ್ ಶ್ರೀನಿವಾಸ್ ಅವರು ನಾಟಕಗಳನ್ನು ಮಾಡುತ್ತಿದ್ದರು..ಅವರ ಜೊತೆಯಲ್ಲಿ ನಾನು ಅಭಿನಯಿಸಿದ್ದೇನೆ .. ದರ್ಶನ್ ಅವರ ತಾಯಿಯು ನನಗೆ ಹತ್ತಿರದ ಪರಿಚಯ..’ಅಲ್ಪ ವಿದ್ಯಾ ಮಹಾ ಗರ್ವಿ’ ಈ ಮಾತಿಗೆ ಉದಾಹರಣೆಯಾಗುವಂತಹ ಜನರೇ ಈಗಿನ ಕಾಲದಲ್ಲಿ ಹೆಚ್ಚಿನದಾಗಿ ಸಿಗುವವರು.. ಆದರೆ ನಾನು ದರ್ಶನ್ ಹಾಗೂ ಅವರ ಕುಟುಂಬದವರನ್ನು ಹತ್ತಿರದಿಂದ ನೋಡಿದ್ದೇನೆ. ಯಾರಲ್ಲಿಯೂ ಗರ್ವವಿಲ್ಲ. ಆದರೆ ಮಹಾ ಕಲೆ ಇದೆ. ಅಂತಹ ಕಲಾವಿದರಾದರೂ ಅಹಂ ಎನ್ನುವುದು ಇರಲಿಲ್ಲ” ಎಂದು ಪಂಕಜಾ ಅವರು ದರ್ಶನ್ ಹಾಗೂ ಅವರ ಕುಟುಂಬದವರನ್ನು ಹಾಡಿ ಹೊಗಳಿದ್ದಾರೆ.