ಯಶ್ ರಾಧಿಕಾಗೆ ಕೊಟ್ಟ ಮೊದಲ ಗಿಫ್ಟ್ ಏನೂ ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತಿರಾ. ಈ ತರನೂ ಗಿಫ್ಟ್ ಕೊಡ್ತಾರ ಅಂತ

 

ಯಶ್ ಹಾಗೂ ರಾಧಿಕಾ ಪಂಡಿತ್ ಅವರದ್ದು ಪ್ರೇಮ ವಿವಾಹ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಪ್ರೀತಿಸುವಾಗ ರಾಧಿಕಾ ಯಶ್ ಅವರಿಂದ ಪಡೆದ ಮೊದಲ ಉಡುಗೊರೆಯ ಬಗ್ಗೆ ಹಲವಾರು ಮಂದಿಗೆ ತಿಳಿದಿಲ್ಲ. ನೀಡಿದ ಉಡುಗೊರೆ ಯಾವುದೆಂದು ತಿಳಿದರೆ, ‘ಅಯ್ಯೋ! ಇದನ್ನು ಪ್ರೀತಿಯ ಗಿಫ್ಟ್ ಆಗಿ ನೀಡುತ್ತಾರಾ?’ ಎಂದು ಉದ್ಗರಿಸುವುದು ಖಂಡಿತ.

ಇತ್ತೀಚಿನ ದಿನಗಳಲ್ಲಿ ಬಹಳ ಸಂಗಾತಿಯನ್ನು ಆಯ್ದುಕೊಳ್ಳುವಾಗ ತಮ್ಮ ರಂಗದಲ್ಲಿಯೇ ಇರುವವರನ್ನು ಹುಡುಕುವವರೇ ಜಾಸ್ತಿ. ಒಂದೇ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ಸಂಸಾರಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಮತ್ತು ಸಮಯದ ಹೊಂದಾಣಿಕೆಗಳು ಸಾರಾಗವಾಗಿ ಆಗಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ ಎಂಬುದೇ ಈ ರೀತಿಯ ವಿವಾಹಕ್ಕೆ ಮುಖ್ಯ ಕಾರಣ ಎನ್ನಬಹುದು.

ಅದೇ ರೀತಿ ತಮ್ಮ ಕಾರ್ಯಕ್ಷೇತ್ರದಲ್ಲೇ ತೊಡಗಿಸಿಕೊಂಡವರನ್ನು ವಿವಾಹವಾಗಿ ಸುಖದ ದಾಂಪತ್ಯ ಜೀವನವನ್ನು ನಡೆಸುತ್ತಿರುವ ಅನೇಕ ಜೋಡಿಗಳ ಉದಾಹರಣೆಗಳಿವೆ. ರಾಧಿಕಾ ಪಂಡಿತ್ ಹಾಗೂ ಜೋಡಿಯು ಕನ್ನಡ ಚಿತ್ರರಂಗದ ‘most cute couple’ ಎನ್ನಬಹುದು. ಇಬ್ಬರು ಮುದ್ದಾದ ಮಕ್ಕಳನ್ನು ಹೊಂದಿರುವ ಈ ಜೋಡಿಯು ಎಲ್ಲರಿಂದಲೂ ಹೊಗಳಿಕೆಗೆ ಪಾತ್ರವಾಗಿದೆ. ಯಶ್ ಹಾಗೂ ರಾಧಿಕಾ ಇಬ್ಬರು ಸ್ಟಾರ್ ಕಲಾವಿದರಾಗಿದ್ದರು ಅಭಿಮಾನಿಗಳ ಜೊತೆಯಲ್ಲಿ ಸಂಪರ್ಕದಲ್ಲಿರಲು ಕೆಲವು ಸಮಯವನ್ನು ಮೀಸಲಿಟ್ಟಿದ್ದಾರೆ.

ಕಿರುತೆರೆಯ ನಂದಗೋಕುಲ ದಾರವಾಹಿಯಲ್ಲಿ ಯಶ್ ಹಾಗೂ ರಾಧಿಕಾ ಒಟ್ಟಾಗಿ ತೆರೆಯನ್ನು ಹಂಚಿಕೊಂಡಿದ್ದು, ಅಲ್ಲಿಯೇ ಇಬ್ಬರ ಸ್ನೇಹವೊ ಪ್ರಾರಂಭ ಆಯ್ತಂತೆ. ಮೊಗ್ಗಿನ ಮನಸ್ಸು ಚಿತ್ರದಲ್ಲಿ ಮತ್ತೊಮ್ಮೆ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ನಾಲ್ಕು ಚಿತ್ರಗಳಲ್ಲಿ ಈ ಜೋಡಿ ಹಕ್ಕಿಯು ಮಿಂಚಿದ್ದಾರೆ. ರಾಮಾಚಾರಿ ಚಿತ್ರದಲ್ಲಿ ನಟಿಸಿದಾಗಲಂತು ಜನ ಇವರನ್ನು, ಎಂತಹ ಜೋಡಿ ಎಂದು ಕಣ್ಣರಳಿಸಿ ನೋಡಿ ಕೊಂಡಾಡಿದ್ದರು.

ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಥವಾ ನಾಯಕಿಯರ ವೈಯಕ್ತಿಕ ವಿಚಾರಗಳಲ್ಲಿ ಕುತೂಹಲವನ್ನು ತೋರುವುದು ಸಹಜ. ತಾವು ಮೆಚ್ಚಿದ ಕಲಾವಿದರ ಪ್ರೇಮ ಕಥೆ, ಅಲಂಕೃತ ಮನೆ, ಹುಟ್ಟುಹಬ್ಬ, ಮದುವೆ, ವಿದ್ಯಾಭ್ಯಾಸ, ಮೊದಲಿನ ಉದ್ಯೋಗ ಹೀಗೆ ಅನೇಕ ವಿಚಾರವಾಗಿ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ರಾಧಿಕಾ ಪಂಡಿತ್ ಅವರು ಹುಟ್ಟು ಹಬ್ಬದ ದಿನದಂದು ಅಭಿಮಾನಿಗಳಿಗೆ ‘ಆಸ್ಕ್ ರಾಧಿಕಾ ಸೇಶನ್’ ಒಂದನ್ನು ಏರ್ಪಡಿಸಿರುತ್ತಾರೆ. ಅಭಿಮಾನಿಗಳು ಅಸಭ್ಯವಲ್ಲದ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಿರುತ್ತಾರೆ.

ಹೇಗಿರಲು ಅಭಿಮಾನಿಯೊಬ್ಬರು, ‘ನೀವು ಹಾಗೂ ಯಶ್ ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಟ್ಟು ಅರ್ಥ ಮಾಡಿಕೊಂಡು ಪ್ರೀತಿಸಿದ ಬಳಿಕ, ಯಶ್ ಅವರಿಂದ ನೀವು ಪಡೆದ ಮೊದಲ ಉಡುಗೊರೆ ಏನು?’ ಎಂಬುದಾಗಿ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ರಾಧಿಕಾ ಪಂಡಿತ್ ಅವರು ನೀಡಿರುವ ಉತ್ತರ ಕೇಳಿ ಎಲ್ಲರೂ, ಹೌದಾ? ಎಂದು ನಕ್ಕಿದ್ದಾರೆ.

ರಾಧಿಕಾ ಪಂಡಿತ್ ಅವರು ಯಶ್ ಅವರಿಂದ ಪಡೆದ ಮೊದಲ ಉಡುಗೊರೆ ‘ಪ್ರೀತಿ ತುಂಬಿದ ಫ್ರೆಶ್ ಸೊಪ್ಪಿನ ಕಟ್ಟು’. ಈ ಬಳಿಕ ರಾಧಿಕಾ ಅವರು ಯಶ್ ಅವರಿಂದ ಸೊಪ್ಪಿನ ಬೊಕ್ಕೆಯನ್ನು ಪಡೆಯುತ್ತಿದ್ದ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಕಾಣುವ ಹಾಗೆ ಯಶ್ ಅವರು ಕಪ್ಪು ಬಣ್ಣದ ಶರ್ಟ್ ಅನ್ನು ಧರಿಸಿದ್ದಾರೆ. ಕೈಯಲ್ಲಿ ಹಸಿರು ಬಣ್ಣದ ಫ್ರೆಶ್ ಸೊಪ್ಪಿನ ಕಟ್ಟನ್ನು ಹಿಡಿದು ರಾಧಿಕಾ ಅವರಿಗೆ ನೀಡುತ್ತಿದ್ದಾರೆ. ಕೆಂಪು ಬಣ್ಣದ ಉಡುಗೆಯನ್ನು ತೊಟ್ಟಿರುವ ರಾಧಿಕಾ ಅವರ ಮುಖದ ಮೇಲೆ ನಗುವಿದೆ. ಈ ಉತ್ತರವನ್ನು ಕೇಳಿ ಮತ್ತು ಫೋಟೋವನ್ನು ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರಂತೆ.

Leave a Comment