ಹಾಲುಂಡ ತವರು ಖ್ಯಾತಿಯ ನಟಿ ಸೀತಾರಾ ತಮ್ಮ ಜೀವನದುದ್ದಕ್ಕೂ ಮದುವೆಯಾಗದೆ ಒಂಟಿಯಾಗಿ ಉಳಿದು ಬಿಟ್ಟಿದ್ದಾರೆ. ‘ಅಬ್ಬಾ! ಇಷ್ಟೊಂದು ಫೇಮಸ್ ನಟಿ.. ಸೌಂದರ್ಯದಲ್ಲೇನು ಕಡಿಮೆ ಇಲ್ಲ..ಆದರೂ ಮದುವೆಯಾಗದೆ ಯಾಕಿದ್ದಾರೆ?’ ಎಂಬ ಪ್ರಶ್ನೆ ಅನೇಕ ಅಭಿಮಾನಿಗಳಲ್ಲಿ ಮೂಡಿತ್ತು. ಸಂದರ್ಶನ ಒಂದರಲ್ಲಿ ನಟಿ, ಸಿತಾರ 49 ವರ್ಷಗಳಾಗಿದ್ದರು, ತಾವು ದಾಂಪತ್ಯ ಜೀವನಕ್ಕೆ ಕಾಲಿಡದ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಸಿತಾರಾ ಅವರು 1973 ಜೂನ್ ಮೂವತ್ತರಂದು ಜನಿಸಿದರು. ಕೇರಳದ ತಿರುವನಂತಪುರಂನಲ್ಲಿ ಜನಿಸಿರುವ ಇವರಿಗೆ ಬಾಲ್ಯದಿಂದಲೂ ನಟನೆಯಲ್ಲಿ ತುಂಬಾ ಆಸಕ್ತಿ ಇತ್ತು. ಇವರ ತಂದೆ ಪರಮೇಶ್ವರನ್ ನಾಯರ್. ತಾಯಿ ವಲ್ಸಲಾ. ಸಿತಾರಾ ಅವರಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಅವರೊಂದಿಗೆ ಸಿತಾರಾ ಅವರು ತಮ್ಮ ಬಾಲ್ಯದಲ್ಲಿಯೇ ಚಿತ್ರೀಕರಣವನ್ನು ನೋಡಲು ಹೋಗುತ್ತಿದ್ದರಂತೆ.
ಆಗಿನಿಂದಲೂ ಸಿನಿಮಾ ರಂಗವೆಂದರೆ ಅವರಿಗೆ ಅದೇನೋ ಖುಷಿ. 1986ರಲ್ಲಿ ಕಾವೇರಿ ಎಂಬ ಚಿತ್ರದಲ್ಲಿ ಕಾಣಿಸಿಕೊಂಡು ಸಿನಿಮಾ ರಂಗದಲ್ಲಿ ಚೊಚ್ಚಲ ಹೆಜ್ಜೆಯನ್ನು ಇಟ್ಟರು. 1989 ರಲ್ಲಿ ಕೆ. ಬಾಲಚಂದರ್ ಅವರ ‘ಪುದು ಪುದು ಅರ್ಥಂಗಲ್’ ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು.
ಸಿತಾರಾ ಅವರ ಪ್ರತಿಭೆ, ಅಭಿನಯದ ಮೇಲಿನ ಹಿಡಿತ, ಗೌರವವು ಎಲ್ಲರಿಗೂ ತಿಳಿದು ಅನೇಕ ಅವಕಾಶಗಳು ಇವರನ್ನು ಹುಡುಕಿಕೊಂಡು ಬಂದವು. ಇವರು ಕನ್ನಡ ಸೇರಿದಂತೆ ಮಲಯಾಳಂ, ತಮಿಳು, ತೆಲುಗು ಭಾಷೆಗಳ ಚಲನಚಿತ್ರಗಳಲ್ಲಿ ಕಾಣಿಸಿಕೊಂಡು ಬಹುಭಾಷಾ ನಟಿ ಎಂದು ಕರೆಸಿಕೊಂಡಿದ್ದಾರೆ. 80 90 ರ ದಶಕದ ಬಹುಬೇಟಿಕೆಯ ನಟಿಯಾಗಿ ಹೊರಹೊಮ್ಮಿದ್ದರು. 37 ವರ್ಷಗಳ ದೀರ್ಘ ವೃತ್ತಿ ಜೀವನದಲ್ಲಿ, ನೂರಕ್ಕೂ ಅಧಿಕ ಚಲನಚಿತ್ರಗಳಲ್ಲಿ ಬಣ್ಣ ಹಚ್ಚಿ, ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ.
ಇಸಾಕ್ ನಿರ್ದೇಶನದ ನಾಗೇಶ್ ತಿರೈಯರಂಗಂ ಚಿತ್ರವು ಗಿನ್ನಿಸ್ ದಾಖಲೆ ಬರೆದಿದೆ. ಇತ್ತೀಚಿನ ಹಿಟ್ ಚಿತ್ರಗಳೆಂದರೆ ಶ್ರೀಮಂತುಡು, ಶಂಕರಾಭರಣಂ ಮತ್ತು ಭಲೇ ಭಲೇ ಮಗಾಡಿವೋಯ್. ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ತಾವು ಒಂಟಿಯಾಗಿ ಜೀವನ ಸಾಗಿಸುತ್ತಿರುವ ಬಗ್ಗೆ ಸಿತಾರಾ ಸ್ಪಷ್ಟಪಡಿಸಿದ್ದರೂ ಕೂಡ ಮದುವೆಯಾಗದೆ ಉಳಿದಿರಲು ಕಾರಣವನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಇತ್ತೀಚಿನ ಮಾಧ್ಯಮಗಳ ಸಂದರ್ಶನ ಒಂದರಲ್ಲಿ ತಾವು ವಿವಾಹವಾಗದೆ ಇರುವುದು ತಮ್ಮದೇ ನಿರ್ಧಾರ ಎಂದು ಹೇಳಿಕೊಂಡರು.
ಸಿತಾರಾ ಅವರ ತಂದೆ ತಾಯಿಗಳಿಬ್ಬರು ವಿದ್ಯುತ್ ಮಂಡಳಿಯಲ್ಲಿ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಿತಾರಾ ತಮ್ಮ ತಂದೆ ತಾಯಿಗಳ ಜೊತೆಯಲ್ಲಿ ತುಂಬಾ ಹತ್ತಿರವಾಗಿದ್ದರು. ಜೀವನವನ್ನು ಹಂಚಿಕೊಳ್ಳಲು ಸರಿಯಾದ ವ್ಯಕ್ತಿ ಸಿಗಲಿಲ್ಲ ಎಂಬುದು ಒಂದು ಕಾರಣವಾದರೆ ಇನ್ನೊಂದೆಡೆ ಹೆತ್ತವರಿಂದ ದೂರ ಉಳಿಯಲು ಇಷ್ಟ ಪಡದೆ ಅವರು ವಿವಾಹವಾಗದೆ ಉಳಿದಿದ್ದಾರೆ ಎನ್ನಬಹುದು. ಹೌದು. ಎಷ್ಟೋ ಜನ ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋದ ಹೊಸತರಲ್ಲಿ ಹೆತ್ತವರ ನೆನಪಾಗಿ ಅಳುತ್ತಾ, ನೋವು ನುಂಗುವುದುಂಟು.
ಮಾಧ್ಯಮಗಳ ಸಂವಾದದಲ್ಲಿ ಸಿತಾರಾ ಅವರು, ‘ನಾನು ನನ್ನ ತಂದೆ ಪರಮೇಶ್ವರನ್ ನಾಯರ್ ಅವರಿಗೆ ತುಂಬಾ ಹತ್ತಿರದಲ್ಲಿದ್ದೆ. ಬೇಸರವಾದಾಗ, ಕನಸನ್ನು ನನಸು ಮಾಡುವಾಗ ಹೀಗೆ ಎಲ್ಲಾ ಸಮಯದಲ್ಲಿಯೂ ನನಗೆ ಆತ್ಮೀಯರಾಗಿ ಇದ್ದುದೆಂದರೆ ನನ್ನ ತಂದೆ. ನನ್ನ ಹೆತ್ತವರನ್ನು ಬಿಟ್ಟು ದೂರ ಉಳಿಯಲು ನನಗೆ ಮನಸಾಗಲಿಲ್ಲ. ಅದೇ ಕಾರಣಕ್ಕಾಗಿ ನಾನು ಮದುವೆಯಾಗಲು ಸಿದ್ಧವಿರಲಿಲ್ಲ. ಪ್ರಸ್ತಾಪಗಳು ಬಂದಾಗ ಹಿನ್ಸರಿಯುತ್ತಿದ್ದೆ.
ಇನ್ನು ನನ್ನ ತಂದೆ ತೀ.ರಿಕೊಂಡ ಬಳಿಕ ಮದುವೆಯಾಗಿ ನೆಲೆಸುವ ಆಲೋಚನೆಗಳು ಸಂಪೂರ್ಣವಾಗಿ ನನ್ನಿಂದ ಮರೆಯಾದವು’ ಎಂದಿದ್ದಾರೆ. ಮಾತನ್ನು ಮುಂದುವರಿಸಿ, ‘ನಾನು ಒಂಟಿಯಾಗಿರುವುದು ನನಗೆ ಸಂತೋಷವಿದೆ..ಯಾವುದೇ ಬೇಸರವಿಲ್ಲ.. ಅಷ್ಟೇ ಅಲ್ಲದೆ ನಾನು ಬ್ಯುಸಿಯಾಗಿರಲು ಸಾಕಷ್ಟು ಕೆಲಸಗಳಿವೆ’ ಎಂದಿದ್ದಾರೆ.