Thursday, September 28, 2023
Home cinema news ಶಿವಣ್ಣ, ಸುದೀಪ್ ಆಗಲ್ಲ ಅಂತ ಕೈಬಿಟ್ಟ ಸಿನಿಮಾ ನಾ ದರ್ಶನ್ ಮಾಡಿ ಇತಿಹಾಸ ಸೃಷ್ಟಿಸಿದ ಚಿತ್ರ...

ಶಿವಣ್ಣ, ಸುದೀಪ್ ಆಗಲ್ಲ ಅಂತ ಕೈಬಿಟ್ಟ ಸಿನಿಮಾ ನಾ ದರ್ಶನ್ ಮಾಡಿ ಇತಿಹಾಸ ಸೃಷ್ಟಿಸಿದ ಚಿತ್ರ ಯಾವುದು ಗೊತ್ತ.?

 

ಇಂದು ಬಾಕ್ಸ್ ಆಫೀಸ್ ಸುಲ್ತಾನ (Box office Sulthana) ಎಂದು ಕರೆಸಿಕೊಳ್ಳುತ್ತಿರುವ ದರ್ಶನ್ ತೂಗುದೀಪ (Darshan Thoogudeep) ಅವರು ಈ ಹೆಸರು ಪಡೆಯುವ ಮುನ್ನ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ದರ್ಶನ್ ಅವರು ಮೂಲತಃ ಕಲಾವಿದರ ಕುಟುಂಬದವರೇ. ಇವರ ತಂದೆ ತೂಗುದೀಪ್ ಶ್ರೀನಿವಾಸ್ (father Thoogudeepa Shreenivas) ಅವರು ನೂರಾರು ಸಿನಿಮಾಗಳಲ್ಲಿ ಖಳನಾಯಕನಾಗಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಒಂದು ರೀತಿಯ ಛಾಪು ಮೂಡಿಸಿದರು.

ಡಾಕ್ಟರ್ ರಾಜಕುಮಾರ್ (Dr. Rajkumar era) ಅವರ ಸಮಕಾಲೀನರಾದ ಇವರು ಬಹುತೇಕ ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿ ಅವರ ಎದುರು ನಿಂತು ಖಳನಾಯಕನ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಇಂತಹ ದೊಡ್ಡ ಬ್ಯಾಗ್ರೌಂಡ್ ಇದ್ದರೂ ಕೂಡ ದರ್ಶನ್ ಅವರಿಗೆ ಚಿತ್ರರಂಗದ ಹಾದಿ ಸುಲಭವಾಗಿರಲಿಲ್ಲ ,ಜೊತೆಗೆ ಸಾಕಷ್ಟು ಆರ್ಥಿಕ ಹೊಡೆತಗಳನ್ನು ತಿನ್ನುತ್ತಾ ತಮ್ಮ ಬದುಕನ್ನು ತಾವೇ ಸ್ವ ಪರಿಶ್ರಮದಿಂದ ಕಟ್ಟಿಕೊಟ್ಟ ಬಲಶಾಲಿ ಈ ದಾಸ.

ಮೈಸೂರಿನಲ್ಲಿ ಶಿಕ್ಷಣ ಮುಗಿಸಿದ ಇವರು ವಿದ್ಯಾಭ್ಯಾಸವನ್ನು 10ನೇ ತರಗತಿಗೆ ಮೀಸಲಾಗಿಸಿ ಹೊಟ್ಟೆಪಾಡಿಗಾಗಿ ನಾನಾ ಕೆಲಸ ಮಾಡುತ್ತಿದ್ದರು. ಆ ಸಮಯಕ್ಕೆ ದರ್ಶನ್ ಅವರ ತಂದೆ ಆರೋಗ್ಯ ಸ್ಥಿತಿ ತೀರ ಹದಗೆಟ್ಟಿತ್ತು. ತಂದೆಯ ಮರಣದ ದಿನ ಸೇರಿದ್ದ ಜನಸಂದಣಿ ನೋಡಿದ ದರ್ಶನ್ ಅವರು ತಾನು ಸಹ ಇದೇ ರೀತಿ ಜನರನ್ನು ಸಂಪಾದನೆ ಮಾಡಬೇಕು ಎನ್ನುವ ಕಾರಣಕ್ಕೆ ಚಿತ್ರರಂಗಕ್ಕೆ ಬರಬೇಕು ಎಂದು ಡಿಸೈಡ್ ಮಾಡಿದರು. ಅಪ್ಪನ ಹೆಸರು ಉಳಿಸುವ ಧ್ಯೇಯ ತೊಟ್ಟ ಇವರು ನೀನಾಸಂ (Neenasam) ಕಡೆ ಪಯಣ ಬೆಳೆಸಿದರು.

ಅಲ್ಲಿ ಕೆಲ ಕಾಲ ರಂಗ ಶಿಕ್ಷಣ ಪಡೆದುಕೊಂಡು ಗಾಂಧಿನಗರಕ್ಕೆ ಕಾಲಿಟ್ಟ ಇವರಿಗೆ ಇವರು ನಿರೀಕ್ಷಿಸಿದ್ದ ಸ್ವಾಗತ ಸಿಗಲಿಲ್ಲ. ಮೊದಮೊದಲಿಗೆ ಸೆಟ್ಗಳಲ್ಲಿ ಲೈಟ್ ಮ್ಯಾನ್ ರೀತಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ದರ್ಶನ್ ಅವರಿಗೆ ಅಸಿಸ್ಟೆಂಟ್ ಕ್ಯಾಮರಾ ಮ್ಯಾನ್ ಆಗುವ ಅವಕಾಶ ಸಿಕ್ಕಿತು ಅಷ್ಟಕ್ಕೆ ಸಮಾಧಾನ ಮಾಡಿಕೊಳ್ಳ ಇವರಿಗೆ ಬಣ್ಣದ ತುಡಿತ ಸಾಕಷ್ಟಿತ್ತು, ಕೆಲ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಕೂಡ ಅಭಿನಯಿಸಿ, ನಿಧಾನವಾಗಿ ಮೇನ್ ರೋಡ್ ಕಡೆ ಬಂದರು.

ಆರಂಭದಲ್ಲಿ ಖಳನಾಯಕನ ಪಾತ್ರಗಳನ್ನು ಅತ್ಯದ್ಭುತವಾಗಿ ನಟಿಸಿ, ಸಿನಿಮಾರಂಗದವರ ಗಮನ ಸೆಳೆದ ಇವರಿಗೆ ಮೆಜೆಸ್ಟಿಕ್ (Mejestic) ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತು. ಈ ಸಿನಿಮಾವು ನಾಯಕನಟನ ಎರಡು ಶೇಡ್ ಗಳು ಹೊಂದಿತ್ತು. ಪಾಸಿಟಿವ್ ಹಾಗೂ ನೆಗೆಟಿವ್ ಎರಡು ಶೇಡ್ಗಳ ದರ್ಶನ್ ಅವರ ಅಭಿನಯ ಅವರ ಯಶಸ್ಸಿಗೆ ನಾಂದಿಯಾಯಿತು. ಮೆಜೆಸ್ಟಿಕ್ ಸಿನಿಮಾ ಕೊಟ್ಟ ಹೆಸರಿನಿಂದ ದರ್ಶನ್ ಅವರು ಇನ್ನೂ ಕೆಲವು ಚಿತ್ರಗಳಿಗೆ ನಾಯಕ ನಟರಾದರು. ಆದರೆ ಆ ಬಳಿಕ ಅಭಿನಯಿಸಿದ ನೀನಂದ್ರೆ ಇಷ್ಟ, ಕಿಟ್ಟಿ ಈ ಸಿನಿಮಾಗಳು ಅಷ್ಟೇನೂ ಸದ್ದು ಮಾಡಲಿಲ್ಲ.

ಆಗ ಅವರಿಗೆ ನನ್ನ ಪ್ರೀತಿಯ ರಾಮು ಎನ್ನುವ (Nanna preethiya Ramu) ಸಂಗೀತದ ನೆಲೆಯುಳ್ಳ ಸಿನಿಮಾದಲ್ಲಿ ರಾಮು ಎನ್ನುವ ಕುರುಡನ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಈ ಸಿನಿಮಾದಲ್ಲಿನ ರಾಮು ಪಾತ್ರ ಮತ್ತು ಸಿನಿಮಾ ಕಥೆಯನ್ನು ಕೇಳಿದ ದರ್ಶನ್ ಅವರು ತಡಮಾಡದೆ ಅವಕಾಶವನ್ನು ಒಪ್ಪಿಕೊಂಡರು. ಅವರು ಈ ಸಿನಿಮಾಗೆ ಒಪ್ಪುವ ಮುನ್ನವೇ ಈ ಸಿನಿಮಾ ಆಫರ್ ಅನ್ನು ಸುದೀಪ್ ಹಾಗೂ ಶಿವಣ್ಣ ಅವರಿಗೂ ಸಹ ನೀಡಲಾಗಿತ್ತು. ಆದರೆ ನನ್ನ ಪ್ರೀತಿ ರಾಮು ಸಿನಿಮಾದ ಗೆಲುವಿನ ಋಣ ದರ್ಶನ್ ಅವರಿಗೆ ಇತ್ತು ಅನಿಸುತ್ತದೆ.

ದರ್ಶನ್ ಅವರು ತಾನು ಈ ಚಿತ್ರದಲ್ಲಿ ಮತ್ತೊಮ್ಮೆ ತಾನಂತ ಕಲಾವಿದ ಎನ್ನುವುದನ್ನು ಸಾಬೀತು ಮಾಡಬೇಕು ಇಂತಹ ಚಾಲೆಂಜಿಂಗ್ ಪಾತ್ರಗಳನ್ನು ಅಭಿನಯಿಸಿ ನನ್ನನ್ನು ನಾನು ಕಂಡುಕೊಳ್ಳಬೇಕು ಎನ್ನುವ ಕಾರಣಕ್ಕೆ ತಮ್ಮ ಮೇಲೆ ತಾವು ಪ್ರಯೋಗ ಮಾಡಿಕೊಳ್ಳುವುದಕ್ಕಾಗಿ ಆತ್ಮವಿಶ್ವಾಸದಿಂದ ಈ ಪಾತ್ರವನ್ನು ಒಪ್ಪಿಕೊಂಡರು. ಇಂದು ದರ್ಶನವರು ಹತ್ತಾರು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದರು ಕೂಡ ನನ್ನ ಪ್ರೀತಿಯ ರಾಮು ಸಿನಿಮಾದ ಆ ಪಾತ್ರ ಮತ್ತು ಅಭಿನಯ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಇರುವಂತಹದ್ದು.

ಆತ್ಮಕ್ಕೆ ಮುಟ್ಟುವಂತಹ ಅಭಿನಯವನ್ನು ಈ ಚಿತ್ರದಲ್ಲಿ ಮಾಡಿ ಕುರುಡನ ಪಾತ್ರಕ್ಕೆ ಜೀವ ತುಂಬಿದ ಕಾರಣ ನನ್ನ ಪ್ರೀತಿಯ ರಾಮು ಸಿನಿಮಾ ಸೂಪರ್ ಹಿಟ್ ಆಯ್ತು. ಚಿತ್ರದ ಗೀತೆಗಳು ಕೂಡ ಇಂದಿಗೂ ಅನೇಕರ ಫೇವರೆಟ್ ಲಿಸ್ಟ್ ಅಲ್ಲಿದೆ. ಇಳೆಯರಾಜ (Ilayaraja) ಅವರ ಸಂಗೀತ ನಿರ್ದೇಶನದ ಮತ್ತು ಸಾಹಿತ್ಯ ರಚನೆಯ ಈ ಚಿತ್ರದ ಹಾಡುಗಳು ಸಹ ಸಿನಿಮಾದ ಗೆಲುವಿಗೆ ಮತ್ತೊಂದು ಕಾರಣ ಆಯಿತು.

ಒಬ್ಬ ಕುರುಡು ಸಂಗೀತಗಾರನ ಚಾಲೆಂಜಿಂಗ್ ಪಾತ್ರವನ್ನು ಇಷ್ಟು ಚೆನ್ನಾಗಿ ಅಭಿನಯಿಸಿದ ಕಾರಣ ದರ್ಶನ್ ಅವರಿಗೆ ಚಾಲೆಂಜಿಂಗ್ ಸ್ಟಾರ್ (chalenging star) ಎನ್ನುವ ಬಿರುದು ಕೂಡ ಬಂತು. ಇಂದು ದರ್ಶನ್ ಅವರು ಸದಾ ಗೆಲುವಿನ ಹಾದಿಯಲ್ಲಿ ಹೋಗುತ್ತಿದ್ದು, ಇಡೀ ಕರುನಾಡಿನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಎನ್ನುವ ಖ್ಯಾತಿಗೂ ಒಳಗಾಗಿದ್ದಾರೆ. ಈ ಅಭಿಮಾನಕ್ಕೆ ಮತ್ತು ದರ್ಶನ್ ರ ಗೆಲುವಿಗೆ ನನ್ನ ಪ್ರೀತಿಯ ರಾಮು ಸಿನಿಮಾ ಕೂಡ ಒಂದು ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

- Advertisment -