Tuesday, October 3, 2023
Home Entertainment ನಟಿ ದೀಪಿಕಾ ದಾಸ್ ಯಶ್ ತಂಗಿ ಆಗಿದ್ರೂ ಕೂಡ ಎಲ್ಲಿಯೂ ಅದನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.?...

ನಟಿ ದೀಪಿಕಾ ದಾಸ್ ಯಶ್ ತಂಗಿ ಆಗಿದ್ರೂ ಕೂಡ ಎಲ್ಲಿಯೂ ಅದನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

 

ಕನ್ನಡದಲ್ಲಿ ಗಾದೆ ಮಾತೊಂದಿದೆ. ಗೆದ್ದ ಎತ್ತಿನ ಬಾಲ ಹಿಡಿಯುವುದು ಅಥವಾ ಓಡುವ ಕುದುರೆಗೆ ಬಾಜಿ ಕಟ್ಟುವುದು ಎಂದು. ಇದರ ಅರ್ಥ ಇಷ್ಟೇ ಯಾರಾದರೂ ನಮ್ಮ ಸುತ್ತಲೂ ಇರುವವರು ಹೆಸರು ಮಾಡಿದ್ದರೆ ಅವರ ಹೆಸರು ಬಳಿಸಿಕೊಂಡು ನಾವು ಬದುಕಿಕೊಳ್ಳುವುದು. ಸಾಮಾನ್ಯವಾಗಿ ಈ ಪ್ರಪಂಚದಲ್ಲಿ ಇಂತಹ ಜನರೇ ಹೆಚ್ಚು ಇರುವುದು. ಯಾರ ಹೆಸರು ಹೇಳಿದರೆ ಕೆಲಸ ಆಗುತ್ತದೆ ಆ ಹೆಸರುಗಳನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.

ಇನ್ನು ಸಿನಿಮಾ ಇಂಡಸ್ಟ್ರಿಯ ವಿಷಯ ಬಂದರೆ ಯಾವುದೇ ಬ್ಯಾಗ್ರೌಂಡ್ ಇಲ್ಲದವರಿಗೆ ಇಲ್ಲಿ ಮಣೆ ಹಾಕುವುದು ಕಷ್ಟ ಸಾಧ್ಯ. ಹಾಗಾಗಿ ಇಂಡಸ್ಟ್ರಿಗೆ ಬರುವವರು ಮತ್ತೊಬ್ಬರ ಹೆಸರು ಹೇಳಿಕೊಂಡು ಬರುವುದೇ ಹೆಚ್ಚು ಆದರೆ ಇಂದು ಇಂಟರ್ನ್ಯಾಷನಲ್ ಸ್ಟಾರ್ ಆಗಿರುವ ಯಶ್ ಅವರ ತಂಗಿ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕ ನಟಿ ಆಗಿದ್ದರೂ ಎಂದು ಸಹ ಅವರ ಸಂಬಂಧ ಬಗ್ಗೆ ಬಹಿರಂಗಪಡಿಸಿಲ್ಲ ಎನ್ನುವುದು ಬಹಳ ವಿಶೇಷ.

ರಾಕಿಂಗ್ ಸ್ಟಾರ್ ಯಶ್ (Rocking star Yash) ಅವರ ತಂಗಿ (Sister) ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ದೀಪಿಕಾ ದಾಸ್ (Deepika Das) ಎನ್ನುವ ಈ ನಟಿಯ ಬಗ್ಗೆ ಎಲ್ಲರೂ ಕೇಳಿಯೇ ಇರುತ್ತೀರಿ. ದೂದ್ ಸಾಗರ್ (Dood sagar) ಎನ್ನುವ ಕನ್ನಡ ಸಿನಿಮಾ ಮೂಲಕ ನಾಯಕಿ ನಟಿಯಾಗಿ ಗುರುತಿಸಿಕೊಂಡ ಇವರು ಬೆಳ್ಳಿತೆರೆಗಿಂತ ಕಿರುತೆರೆಯಲ್ಲಿ ಮಿಂಚಿದ್ದೆ ಹೆಚ್ಚು.

ಮೊದಲಿಗೆ ಕಿರುತೆರೆಯ ಕೃಷ್ಣ ರುಕ್ಮಿಣಿ (Krishna Rukmini) ಎನ್ನುವ ಧಾರಾವಾಹಿಯಲ್ಲಿ ಕೃಷ್ಣನ ತಂಗಿ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದ ದೀಪಿಕಾ ದಾಸ್ ಅವರು ನಂತರ ಪ್ರಸಾರವಾದ ಜೀ ಕನ್ನಡ (Zee kannada) ವಾಹಿನಿಯ ನಾಗಿಣಿ (Nagini) ಎನ್ನುವ ಧಾರಾವಾಹಿಯಲ್ಲಿ ಲೀಡ್ ರೋಲ್ (lead role) ಅಲ್ಲಿ ಕಾಣಿಸಿಕೊಂಡರು. ನಾಗಿಣಿ ಪಾತ್ರಧಾರಿ ಆಗಿ ಅಮೃತ ಎನ್ನುವ ರೋಲ್ ಅನ್ನು ನಿಭಾಯಿಸಿದ ಇವರಿಗೆ ಕರ್ನಾಟಕದಾದ್ಯಂತ ಬಹಳ ಮೆಚ್ಚುಗೆ ಕೇಳಿ ಬಂದಿತ್ತು.

ಅಲ್ಲದೆ ಆ ಧಾರವಾಹಿಯೂ ಕೂಡ ಬಹಳ ಜನಪ್ರಿಯವಾಗಿ ಹೋಯಿತು. ಇಂದಿಗೂ ಕೂಡ ದೀಪಿಕಾ ದಾಸ್ ಅವರನ್ನು ಹೆಚ್ಚಿನ ಜನ ನಾಗಿಣಿ ಎಂದೇ ಗುರುತಿಸುತ್ತಾರೆ. ಹೆಸರಿಗೆ ತಕ್ಕ ಹಾಗೆ ಹಾವಿನ ರಾಣಿಯ ಶೇಡ್ ಅಲ್ಲೇ ಇದ್ದಿದ್ದರಿಂದ ನಾಗಿಣಿ ಪಾತ್ರ ಅವರಿಗೆ ಚೆನ್ನಾಗಿ ಹೊಂದಿಕೊಂಡು ಬಿಟ್ಟಿತು. ಇದೇ ಜನಪ್ರಿಯತೆಯಿಂದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಹೋಗುವ ಅದೃಷ್ಟವನ್ನು ಪಡೆದುಕೊಂಡರು.

ಬಿಗ್ ಬಾಸ್ ಸೀಸನ್ ಏಳರಲ್ಲಿ (Bigboss S7) ಕಂಟೆಸ್ಟೆಂಟ್ ಆಗಿ ಕೊನೆಯ ದಿನದವರೆಗೂ ಕೂಡ ಮನೆಯಲ್ಲಿ ಇದ್ದ ಇವರೇ ಆ ಸೀಸನ್ ವಿನ್ನರ್ ಇವರೇ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೂದಲೆಳೆ ಅಂತರದಲ್ಲಿ ದೀಪಿಕಾ ಗೆಲುವು ಮಿಸ್ ಮಾಡಿಕೊಂಡು ಶೈನ್ ಶೆಟ್ಟಿಗೆ ಬಿಟ್ಟು ಕೊಡುವಂತಾಯಿತು. ಆದರೂ ಕೂಡ ಮನೆಯಲ್ಲಿ ಇದ್ದಷ್ಟು ದಿನ ಸೂಪರ್ ಆಗಿ ಟಾಸ್ಕ್ ಮಾಡುತ್ತಾ ಫ್ಯಾಷನ್ ಆಗಿ ಉಡುಗೆ ತೊಡುತ್ತಾ ಎಲ್ಲರ ಜೊತೆ ಲವಲವಿಕೆಯಿಂದ ಇದ್ದರೂ ತನ್ನದೇ ಆದ ಒಂದು ಗತ್ತು ಕಾಪಾಡಿಕೊಂಡಿದ್ದ ದೀಪಿಕಾ ದಾಸ್ ಅವರ ವ್ಯಕ್ತಿತ್ವ ಬಹಳ ಜನರಿಗೆ ಇಷ್ಟವಾಗಿ ಹೋಗಿತ್ತು.

ಬಿಗ್ ಬಾಸ್ ಇಂದ ಬಂದಮೇಲೆ ನಾಗಿಣಿ ಭಾಗ ಎರಡರಲ್ಲೂ ಕೂಡ ಕೆವದಿನಗಳು ದೀಪಿಗೆ ದಾಸ್ ಕಾಣಿಸಿಕೊಂಡಿದ್ದರು. ನಡುವೆ ಆಗಾಗ ತಮ್ಮ ರೀಲ್ಸ್ ಗಳ ಮೂಲಕ ಮತ್ತು ಹೊಸ ಹೊಸ ಫೋಟೋಗಳ ಮೂಲಕ ಕೂಡ ಗಮನ ಸೆಳೆಯುತ್ತಿದ್ದರು. ಈ ಬಾರಿ ವಿಶೇಷವಾಗಿ ಅರೆಂಜ್ ಆಗಿದ್ದ ಬಿಗ್ ಬಾಸ್ ಸೀಸನ್ 9ರಲ್ಲೂ ಕೂಡ ಪ್ರವೀಣರಾಗಿ ಮನೆ ಸೇರಿದ ಇವರು ಫಿನಾಲೆವರೆಗೂ ಕೂಡ ಇದ್ದು ಈ ಬಾರಿಯೂ ಗೆಲುವಿನಿಂದ ಮಿಸ್ ಆದರು. ದೀಪಿಕಾ ದಾಸ್ ಅವರಿಗೆ ಇರುವ ಗೋಲ್ ಏನೆಂದರೆ ಆಕೆ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆಯ ನಟಿಯಾಗಿ ಹೆಸರು ಮಾಡಬೇಕು ಎನ್ನುವುದು.

ಅದಕ್ಕಾಗಿ ಸಾಕಷ್ಟು ತಯಾರಿಯನ್ನು ಕೂಡ ಮಾಡಿಕೊಂಡು ಇಂದಿಗೂ ಪರಿಶ್ರಮ ಹಾಕುತ್ತಿರುವ ಇವರು ಅವರ ಅಣ್ಣನ ಹೆಸರನ್ನು ಹೇಳಿದರೆ ತಕ್ಷಣವೇ ಫೇಮಸ್ ಆಗಬಹುದು. ಯಾಕೆಂದರೆ ಇಡೀ ಇಂಡಿಯಾ ರಾಕಿ ಭಾಯ್ ಎಂದು ಕರೆಯುತ್ತಿರುವ ಯಶ್ ಅವರು ಈಕೆಗೆ ಸ್ವಂತ ಅಣ್ಣನೇ ಆಗಬೇಕು. ಯಶ್ ಅವರ ತಾಯಿ ಪುಷ್ಪ ಅವರ ಸ್ವಂತ ತಂಗಿಯ ಮಗ ಆಗಿರುವ ದೀಪಿಕಾ ದಾಸ್ ಅವರು ಎಲ್ಲೂ ಸಹ ತಾವು ಯಶ್ ತಂಗಿ ಎಂದು ಹೇಳಿಕೊಂಡಿಲ್ಲ.

ಈ ಬಗ್ಗೆ ಅವರನ್ನು ಪ್ರಶ್ನೆ ಕೇಳಿದರೆ ನಾನು ಅಣ್ಣ ಫೇಮಸ್ ಆಗಿದ್ದಾನೆ ಎನ್ನುವ ಕಾರಣಕ್ಕಾಗಿ ಅವನ ಹೆಸರನ್ನು ಹೇಳಿ ಅವಕಾಶಗಳನ್ನು ಪಡೆದುಕೊಂಡು ಆತನ ಘನತೆಗೆ ಧಕ್ಕೆ ತರಲು ಇಷ್ಟ ಇಲ್ಲ ಬದಲಾಗಿ ನನ್ನ ಸಾಮರ್ಥ್ಯಕ್ಕೆ ತಕ್ಕ ಹಾಗೆ ನಾನು ಹೆಸರು ಮಾಡಬೇಕು, ನಮ್ಮ ಸಂಬಂಧ ಚೆನ್ನಾಗಿದೆ ಅಷ್ಟೇ ಸಾಕು ಅವರ ಹೆಸರಿನ ಕ್ರೆಡಿಟ್ ನನಗೆ ಬೇಡ ಎಂದು ಹೇಳಿ ಅಣ್ಣನಿಗೆ ತಕ್ಕ ತಂಗಿ ಎನಿಸಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

- Advertisment -