ನಮ್ಮ ಹಿಂದೂ ಧರ್ಮದಲ್ಲಿ ದೇವರಿಗೆ ವಿಶೇಷವಾದಂತಹ ಸ್ಥಾನವನ್ನು ನೀಡುತ್ತಾರೆ ಪ್ರತಿಯೊಬ್ಬರೂ ಸಹ ಒಂದೊಂದು ದೇವರನ್ನು ಪೂಜಿಸುತ್ತಾ ತಮ್ಮ ಕಷ್ಟಗಳನ್ನು ಇಷ್ಟಾರ್ಥಗಳನ್ನು ದೇವರಿಗೆ ಹೇಳಿ ಕಷ್ಟಗಳಿಂದ ನಿವಾರಣೆ ಮಾಡುವ ಹಾಗೆ ಬೇಡಿಕೊಳ್ಳುತ್ತಾರೆ. ತಾಯಿ ಚಾಮುಂಡೇಶ್ವರಿ ದೇವಿಯ ಪವಾಡ ಒಂದನ್ನು ನಾವಿಲ್ಲಿ ತಿಳಿಸಲು ಹೊರಟಿದ್ದೇವೆ. ಮಾತು ಬಾರದ ವ್ಯಕ್ತಿಗೆ ಮಾತು ಬರಿಸಿದ ಚಾಮುಂಡೇಶ್ವರಿ ದೇವಿ ಹರಕೆ ಮಾಡಿಕೊಂಡಂತಹ ಒಂದೇ ವಾರದಲ್ಲಿ ನಡೆಯಿತು ಪವಾಡ.
ನಾವು ಹೇಳ ಹೊಟ್ಟಿರುವ ಶ್ರೀ ಚಾಮುಂಡೇಶ್ವರಿ ದೇವಿಯು ತುಂಬಾ ಹೆಸರುವಾಸಿಯಾಗಿದ್ದಾರೆ ತಾಯಿ ಚಾಮುಂಡೇಶ್ವರಿ ಆರಿಕೋಡಿ ಗ್ರಾಮದಲ್ಲಿ ನೆಲೆಸಿ ತನ್ನ ಮಹಿಮೆಯನ್ನು ಜನರಿಗೆಲ್ಲ ಸಾರುವ ರೀತಿಯಲ್ಲಿ ಪವಾಡಗಳನ್ನು ಸೃಷ್ಟಿಸುತ್ತಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪಂಟ್ವಾಳ ತಾಲೂಕಿನ ಕನ್ಯೆನ್ನ ಗ್ರಾಮದಲ್ಲಿ ಗೌರಿ ನಿಲಯದ ನಿವಾಸಿ ವಾಸುದೇವ ನಾಯಕ್ ಎಂಬುವರು ವ್ಯವಹಾರವನ್ನು ಮಾಡುತ್ತಿದ್ದರು ಇವರ ಆರೋಗ್ಯದಲ್ಲಿ ಎಲ್ಲವೂ ಸರಿ ಇತ್ತು ಆದರೆ ಇವರು ಏಕ ಏಕಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲು ಆರಂಭಿಸಿದರು ಈ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 18ರಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭವಾಗಿದ್ದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿತ್ತು.
ಈ ಚಿಕಿತ್ಸೆ ನಡೆದ ನಂತರ ವಾಸುದೇವ್ ಅವರಿಗೆ ಮಾತು ಆಡಲು ಬರುತ್ತಿರಲಿಲ್ಲ ಇದರಿಂದ ಗಾಬರಿಗೊಂಡ ಅವರು ಮನೆಯ ಹಾಗೂ ಸ್ನೇಹಿತರ ಸಲಹೆಯ ಮೇರೆಗೆ ಆರುಕೋಡಿ ಚಾಮುಂಡೇಶ್ವರಿ ದೇವಿಯ ಸನ್ನಿಧಾನಕ್ಕೆ ಬಂದರು. ವಾಸುದೇವ್ ಅವರ ತಂಗಿ ಅಣ್ಣನ ಆರೋಗ್ಯದ ಹಿತ ದೃಷ್ಟಿಯಿಂದ ತಾಯಿ ಚಾಮುಂಡೇಶ್ವರಿ ಗೆ ಹರಿಕೆಯನ್ನು ಮಾಡಿಕೊಂಡಿದ್ದರು ತನ್ನ ಅಣ್ಣನಿಗೆ ಮಾತು ಬಂದರೆ ವಜ್ರದ ಮೂಗುತಿಯನ್ನು ದೇವಿಗೆ ಮಾಡಿಸಿಕೊಡುತ್ತೇವೆ ಎಂಬ ಹರಕೆ ಮಾಡಿಕೊಂಡರು.
ಇದೇ ರೀತಿಯಲ್ಲಿ ಅವರಿಗೆ ಒಂದು ವಾರದಲ್ಲಿ ಮಾತು ಬಂದಿತ್ತು, ಖುದ್ದಾಗಿ ವೈದ್ಯರೇ ಇವರಿಗೆ ಮಾತು ಬರುವುದಿಲ್ಲ ಎಂದು ತಿಳಿಸಿದರು ಆದರೆ ದೇವಿಗೆ ಹರಕೆ ಮಾಡಿಕೊಂಡ ನಂತರ ಇವರು ಚೆನ್ನಾಗಿ ಮಾತನಾಡುತ್ತಿದ್ದಾರೆ ಹಾಗೆಯೇ ಇವರ ಆರೋಗ್ಯವು ಸಹ ಸುಧಾರಿಸಿದೆ ಇದರಿಂದ ತಾಯಿಯ ಮಹಿಮೆ ಎಂತದ್ದು ಎಂಬುದು ನಮ್ಮೆಲ್ಲರಿಗೂ ತಿಳಿಯುತ್ತದೆ. ವಾಸುದೇವ ಅವರು ಕುಟುಂಬ ಸಮೇತರಾಗಿ ತಾಯಿಯ ದರ್ಶನವನ್ನು ಪಡೆದುಕೊಂಡು ಹರಿಕೆಯನ್ನು ಸಲ್ಲಿಸಿ ಹೋಗಿದ್ದಾರೆ.
ಹಾಗೆಯೇ ಆರಿಕೋಡಿ ದೇವಸ್ಥಾನ ದಲ್ಲಿ ವೈದ್ಯರು ಕೈ ಬಿಟ್ಟಂತಹ ಹಲವು ರೋಗಿಗಳಿಗೆ ಚಾಮುಂಡೇಶ್ವರಿ ದೇವಿ ಅಚ್ಚರಿಯನ್ನು ಮೂಡಿಸಿ ಸಮಸ್ಯೆಯನ್ನು ನಿವಾರಣೆ ಮಾಡಿ ಮರು ಜೀವ ನೀಡುತ್ತಾರೆ. ತನ್ನನ್ನು ನಂಬಿ ಬಂದಂತಹ ಭಕ್ತರ ಕೈಯನ್ನು ತಾಯಿ ಎಂದಿಗೂ ಕೈ ಬಿಟ್ಟಿಲ್ಲ ಯಾರು ಏನೇ ಹರಕೆ ಮಾಡಿಕೊಂಡರು ಸಹ ತಾಯಿ ಚಾಮುಂಡೇಶ್ವರಿ ದೇವಿಯು ಅವರ ಕೈಯನ್ನು ಹಿಡಿಯುತ್ತಾಳೆ. ಇಲ್ಲಿಗೆ ಹೆಚ್ಚಾಗಿ ಆರೋಗ್ಯ ಸಮಸ್ಯೆ ಇರುವಂತಹ ಅವರು ಬಂದು ಹರಕೆಯನ್ನು ಮಾಡಿಕೊಂಡು ತಾಯಿಗೆ ಯಾವುದಾದರೂ ಒಂದು ರೂಪದಲ್ಲಿ ಅರಿಕೆಯನ್ನು ತೀರಿಸುತ್ತಾರೆ.
ನಿಮ್ಮ ಕಷ್ಟಗಳನ್ನು ದೇವಿಯ ಹತ್ತಿರ ಹೇಳಿಕೊಂಡು ಹೋದಂತಹ ಕೆಲವೇ ದಿನಗಳಲ್ಲಿ ಪವಾಡ ನಡೆದು ಬಿಡುತ್ತದೆ. ತಾಯಿ ಚಾಮುಂಡೇಶ್ವರಿ ದೇವಿ ಹಲವಾರು ಕಡೆಗಳಲ್ಲಿ ತನ್ನ ರೂಪವನ್ನು ತೋರಿಸುತ್ತಾರೆ ಅದೇ ರೀತಿಯಲ್ಲಿ ಆರಿಕೊಡಿ ಗ್ರಾಮದಲ್ಲಿಯೂ ಸಹ ತಾಯಿ ತನ್ನ ಮಹಿಮೆಯನ್ನು ಜನರಿಗೆ ತಿಳಿಸುತ್ತಾ ಜನರ ಕಷ್ಟಗಳನ್ನು ನಿವಾರಣೆ ಮಾಡುತ್ತಾ. ಬೇಡಿ ಬಂದವರಿಗೆ ಭಾಗ್ಯವನ್ನು ನೀಡುತ್ತಾ ಕರುಣಾಮಯಿ ಎನಿಸಿಕೊಂಡಿದ್ದಾರೆ. ಈ ದೇವಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.