Thursday, September 28, 2023
Home News ಕಾರ್ಮಿಕರ ಕಾರ್ಡ್ ಇರುವಂತಹ ಅಭ್ಯರ್ಥಿಗಳ ಮಕ್ಕಳಿಗೆ ಸಿಗಲಿದೆ ಉಚಿತ ಶಾಲಾ ಕಿಟ್. ಶಾಲಾ ಕಿಟ್ ನಲ್ಲಿ...

ಕಾರ್ಮಿಕರ ಕಾರ್ಡ್ ಇರುವಂತಹ ಅಭ್ಯರ್ಥಿಗಳ ಮಕ್ಕಳಿಗೆ ಸಿಗಲಿದೆ ಉಚಿತ ಶಾಲಾ ಕಿಟ್. ಶಾಲಾ ಕಿಟ್ ನಲ್ಲಿ ಏನೇನೆಲ್ಲ ಇರುತ್ತದೆ ಗೊತ್ತಾ.?

ನಮಸ್ಕಾರ ಸ್ನೇಹಿತರೆ ಇಂದಿನ ವಿಷಯದಲ್ಲಿ ನಾವು ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ಇರುವಂತಹವರಿಗೆ ಏನೆಲ್ಲಾ ಅವಕಾಶಗಳು ಇದೆ ಹಾಗೆ ಲೇಬರ್ ಕಾರ್ಡ್ ಇದ್ದರೆ ಅಂತವರ ಮಕ್ಕಳಿಗೆ ಏನೆಲ್ಲಾ ಲಾಭ ಇದೆ ಎಂದು ನಾವು ಇಂದು ಈ ವಿಷಯದಲ್ಲಿ ತಿಳಿಸುತ್ತಿದ್ದೇವೆ. ಕಾರ್ಮಿಕರ ಕಾರ್ಡ್ ಇದ್ದಂತಹ ಅವರ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದರೆ ಅಂತಹ ಮಕ್ಕಳಿಗೆ ಉಚಿತವಾಗಿ ಕಿಟ್ ವಿತರಣೆಯನ್ನು ಮಾಡುತ್ತಿದ್ದಾರೆ.

ಈ ಕಿಟ್ ಹೇಗೆ ಉಪಯೋಗವಾಗುತ್ತದೆ ಹಾಗೆ ಇದಕ್ಕೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಹೇಗೆ ಸಲ್ಲಿಸಬೇಕು ಏನೆಲ್ಲ ದಾಖಲಾತಿಗಳು ಬೇಕು ಎನ್ನುವಂತಹ ಸಂಪೂರ್ಣ ವಿಧಾನವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಕಾರ್ಮಿಕ ಕಲ್ಯಾಣ ಇಲಾಖೆ ವತಿಯಿಂದ ಉಚಿತ ಶಾಲಾ ಕಿಟ್ ವಿತರಿಸಲಾಗುವಂತಹ ನಿರ್ಧಾರ ಕೈಗೊಂಡಿದೆ ಶಾಲಾ ಮಕ್ಕಳಿಗೆ ಎರಡು ಹಂತದಲ್ಲಿ ಕಿಟ್ ವಿತರಣೆ ಮಾಡಬೇಕೆಂದು ಕಾರ್ಮಿಕ ಕಲ್ಯಾಣ ಮಂಡಳಿ ನಿರ್ಧಾರವನ್ನು ತೆಗೆದುಕೊಂಡಿದೆ ಒಂದರಿಂದ ಐದನೇ ತರಗತಿ ಓದುತ್ತಿರುವಂತಹ ಕಾರ್ಮಿಕರ ಮಕ್ಕಳಿಗೆ ಕಿಟ್ ವಿತರಿಸಲಾಗುತ್ತಿದೆ. ಎರಡನೇ ಹಂತದಲ್ಲಿ ವಿತರಿಸಲಾಗುತ್ತದೆ ಒಂದರಿಂದ ನಾಲ್ಕನೇ ತರಗತಿಯ ವರೆಗಿನ ಮಕ್ಕಳಿಗೆ ಕಿಟ್ಟನ್ನು ವಿತರಣೆ ಮಾಡಲಾಗುತ್ತದೆ.

ಕಾರ್ಮಿಕರ ಕಾರ್ಡ್ ಕಿಟ್ ಗೆ ಬೇಕಾಗಿರುವಂತಹ ದಾಖಲಾತಿಗಳು

*ವ್ಯಾಸಂಗ ದೃಢೀಕರಣ ಪತ್ರ

*ಆಧಾರ್ ಕಾರ್ಡ್

*ನಾಲ್ಕನೇ ತರಗತಿಯ ಮಾರ್ಕ್ಸ್ ಕಾರ್ಡ್

*ತಂದೆ ತಾಯಿಯ ಕಾರ್ಮಿಕರ ಕಾರ್ಡ್

*ರೇಷನ್ ಕಾರ್ಡ್

ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಇದ್ದಂತಹ ಮಕ್ಕಳಿಗೆ ಇಲಾಖೆ ಕಡೆಯಿಂದ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ ಈಗ ಶಾಲಾ ಕಿಟ್ ಗಳನ್ನು ನೀಡಲು ಪ್ರಾರಂಭ ಮಾಡುತ್ತಿದ್ದಾರೆಂದು ಶಿರಾ ತಾಲೂಕಿನಲ್ಲಿ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ವಿತರಣೆ ಮಾಡಲಾಗಿತ್ತು, ಇದು ಶಿರಾ ತಾಲೂಕಿನಲ್ಲಿ ಅದೇ ರೀತಿಯಾಗಿ ಬೆಳಗಾವಿ ಜಿಲ್ಲೆಯ ಅತ್ತಣಿಯಲ್ಲಿ ಜೂನ್ 14 ರಂದು ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ಗಳನ್ನು ವಿತರಣೆ ಮಾಡಿದ್ದಾರೆ.

ಅದೇ ರೀತಿಯಾಗಿ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರಾಗಿ ಕಾಕೋವಾದಲ್ಲಿ ಕಿಟ್ಟನ್ನು ವಿತರಣೆ ಮಾಡಲಾಗಿದೆ ಇದು ಜೂನ್ 9ರಂದು ವಿತರಿಸಲಾಗಿದೆ ಹಾಗೆಯೇ ತಿಪಟೂರಿನ ಶಾಲಾ ಮಕ್ಕಳಿಗೆ ಉಚಿತ ಶಾಲಾ ಕಿಟ್ಟನ್ನು ಜೂನ್ ಎರಡನೇ ತಾರೀಕಿನಂದು ವಿತರಣೆ ಮಾಡಲಾಗಿದೆ ಹೀಗೆ ಶಾಲಾ ಮಕ್ಕಳಿಗೆ ಇಲಾಖೆಯಿಂದ ವಿತರಣೆ ಮಾಡಲಾಗುತ್ತಿದ್ದು. ನೀವು ಕೂಡ ಶಾಲಾ ಕಿಟ್ ಪಡೆಯಲು ಇಚ್ಚಿಸಿದರೆ ನಿಮ್ಮ ತಾಲೂಕಿನ ಕಾರ್ಮಿಕ ಇಲಾಖೆ ಅಥವಾ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಗೆ ಭೇಟಿ ನೀಡಿ ಅರ್ಜಿಯನ್ನು ಪ್ರಾರಂಭವಾದ ನಂತರ ಅರ್ಜಿಯನ್ನು ಸಲ್ಲಿಸಿ ಕಾರ್ಮಿಕರ ಮಕ್ಕಳು ಶಾಲಾ ಕಿಟ್ ಗಳನ್ನು ಪಡೆದುಕೊಳ್ಳಬಹುದು.

ಕಾರ್ಮಿಕರ ಮಕ್ಕಳಿಗೆ ಕಾರ್ಮಿಕರ ಕಾರ್ಡ್ ಕಡೆಯಿಂದ ಇಲಾಖೆಯು ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಶಾಲಾ ಮಕ್ಕಳಿಗೆ ಅನುಕೂಲ ಆಗಬೇಕು ಎನ್ನುವಂತಹ ಹಿತ ದೃಷ್ಟಿಯಿಂದ ಶಾಲಾ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ ಇದು ಎಲ್ಲ ಜಿಲ್ಲೆಗಳಲ್ಲಿಯೂ ಸಹ ಮಾಡಲಾಗುತ್ತದೆ ನೀವು ಸಹ ನಿಮ್ಮ ತಾಲೂಕಿನಲ್ಲಿ ಹೋಗಿ ವಿಚಾರಿಸಿ ಕಾರ್ಮಿಕ ಕಾರ್ಡ್ ಹೊಂದಿದ್ದರೆ ನೀವು ಸಹ ನಿಮ್ಮ ಮಕ್ಕಳಿಗೆ ಶಾಲಾ ಕಿಟ್ಟನ್ನು ಪಡೆದುಕೊಳ್ಳಬಹುದು. ಕಾರ್ಮಿಕ ಇಲಾಖೆ ಅಥವಾ ಕಟ್ಟಡ ಮತ್ತು ಇತರೆ ನಿರ್ಮಾಣ ಇಲಾಖೆ ಮಂಡಳಿಯಲ್ಲಿ ನೀವು ಅರ್ಜಿಯನ್ನು ಸಲ್ಲಿಸಿ, ನೋಂದಣಿ ಮಾಡಿಕೊಂಡು ನಂತರ ಶಾಲಾ ಕಿಟ್ ಗಳನ್ನು ಪಡೆದುಕೊಳ್ಳಬಹುದು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ. ಹಾಗೆ ಇತರರಿಗೂ ಶೇರ್ ಮಾಡಿ.

- Advertisment -