ಹೆಣ್ಣು ಮಕ್ಕಳಿಗೆ ಕೂದಲೆಂದರೆ ಬಹಳ ಪ್ರೀತಿ, ಅದರ ಪೋಷಣೆ ಮಾಡಲು ಎಷ್ಟು ಕಾಳಜಿ ಮಾಡುತ್ತಾರೆ ಹಾಗೂ ಎಷ್ಟು ಹಣವನ್ನು ಬೇಕಾದರೂ ತೆರುತ್ತಾರೆ. ದಟ್ಟವಾದ, ಉದ್ದವಾದ ಸೊಂಪಾದ ಕೂದಲೆಂದರೆ ಅದು ಅವರ ಸೌಂದರ್ಯದ ಪ್ರತೀಕ. ಇಷ್ಟು ಕಷ್ಟಪಟ್ಟು ಬೆಳೆಸಿದ ಕೂಡಲನ್ನು ಯಾರಾದರೂ ಮುಟ್ಟಿದರೆ ಸಹಿಸಲಾದಷ್ಟು ಕೋಪ ಬರುತ್ತದೆ.
ಆದರೀಗ ಅವರೇ ಒಪ್ಪಿ ಅವರ ಕೂದಲನ್ನು ಶಾರ್ಟ್ (Short hair) ಮಾಡಿಸಿಕೊಂಡು ತಮ್ಮ ಇಷ್ಟಪಟ್ಟು ಬೆಳೆಸಿದ್ದ ಕೂದಲನ್ನು ಕ್ಯಾನ್ಸರ್ ಪೇಷಂಟ್ ಗಳಿಗಾಗಿ ದಾನ (Donate hair for Cancer patients) ಮಾಡುತ್ತಿದ್ದಾರೆ. ಈ ಮಹಿಳೆಯರ ಸಾಲಿಗೆ ಇದೀಗ ಭಾರತೀಯ ಕ್ರಿಕೆಟರ್ ಯುವರಾಜ್ ಸಿಂಗ್ ಪತ್ನಿ ಖ್ಯಾತ ನಟಿ ಹಜೇಲ್ ಕಿಚ್ (Cricketer Yuvaraj Singh wife Hazel Keech) ಕೂಡ ಸೇರುತ್ತಿದ್ದಾರೆ.
ಹಜೇಲ್ ಕಿಚ್ ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೂದಲನ್ನು ದಾನವಾಗಿ ಕೊಟ್ಟಿದ್ದಾರೆ ಮತ್ತು ಈ ವಿಚಾರವನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ (Instagram post) ಹಂಚಿಕೊಂಡಿದ್ದಾರೆ. ಇದರ ಬಗ್ಗೆ ಒಂದು ಸುಧೀರ್ಘ ಬರಹವನ್ನೇ ಬರೆದುಕೊಂಡಿರುವ ಅವರು ತಾವು ಯಾಕೆ ಹೇರ್ ಕಟ್ ಮಾಡಿಸಿಕೊಂಡಿದ್ದು ಎನ್ನುವುದಕ್ಕೆ ವಿವರ ಕೊಟ್ಟಿದ್ದಾರೆ.
ಇದೀಗ ಆ ಬರಹ ಮತ್ತು ಅವರ ಹೇರ್ ಕಟ್ ಆಗಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 2016ರಲ್ಲಿ ಯುವರಾಜ್ ಸಿಂಗ್ ಅವರ ಕೈ ಹಿಡಿದ ಹಜೇಲ್ ಕಳೆದ ವರ್ಷ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈಗಷ್ಟೇ ಬಾಣಂತನ ಮುಗಿಸಿಕೊಂಡಿರುವ ಅವರು ಸಾಮಾನ್ಯವಾಗಿ ಹೆರಿಗೆ ಆದ ನಂತರ ಉಂಟಾಗುವ ಕೂದಲು ಉದುರುವಿಕೆಯ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳುವ ಬದಲು ಕೂದಲನ್ನು ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಯುನೆಟೆಡ್ ಕಿಂಗ್ ಡಮ್ ನ ಲಿಟಿಲ್ ಪ್ರಿನ್ಸೆಸ್ ಟ್ರಸ್ಟ್ ಗೆ (UK Little princess trust) ತಮ್ಮ ಕೂದಲನ್ನು ದಾನ ಮಾಡಿರುವುದಾಘಿ ಹೇಳಿ ನನ್ನ ಕೂದಲನ್ನು ಸ್ವೀಕರಿಸಿದ್ದಕ್ಕಾಗಿ @officiallittleprincesstrust ಗೆ ಧನ್ಯವಾದಗಳು ಎಂದಿದ್ದಾರೆ. ಮತ್ತು ಇದನ್ನು ನಾನು ಪ್ರಮೋಷನ್ ಗಾಗಿ ಮಾಡಿಲ್ಲ ವಿಗ್ ಗಾಗಿ ಹೇರ್ ಡೊನೇಟ್ ಮಾಡಲು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಈ ಸಂಸ್ಥೆಯ ವಿವರ ಕಂಡು ಬಂತು ನೋಡಿ ಒಪ್ಪಿಕೊಂಡೆ ಕ್ವಾರಿಟಿ ಕೊಟ್ಟಿದ್ದಾರೆ.
ಯುವರಾಜ್ ಸಿಂಗ್ ಅವರೂ ಕೂಡ ಕ್ಯಾನ್ಸರ್ ಗೆದ್ದು ಬಂದವರು. ಪತಿ ಕಿಮೋಥೆರಫಿ ಚಿಕಿತ್ಸೆ (Chemotherapy) ದಿನಗಳನ್ನು ನೆನೆದ ಹಜೇಲ್ ಕ್ಯಾನ್ಸರ್ ಚಿಕಿತ್ಸೆಯ ಭಾಗವಾಗಿ ಕಿಮೋಥೆರಫಿ ಟ್ರೀಟ್ ಮೆಂಟ್ ಸಮಯದಲ್ಲಿ ಕೂದಲು ಉದುರುವ ನೋವು ಹೇಗಿರುತ್ತದೆ ಎಂಬುದನ್ನು ಹತ್ತಿರದಿಂದ ನೋಡಿದ್ದೇನೆ.
ಇದೀಗ ಆ ನೋವನ್ನು ಅರ್ಥ ಮಾಡಿಕೊಂಡು ನನ್ನ ಕೂದಲನ್ನು ದಾನ ಮಾಡಿದ್ದೇನೆ. ಮಗು ಹುಟ್ಟಿದ ಬಳಿಕ ಅನೇಕ ಮಹಿಳೆಯರು ಕೂದಲನ್ನು ಶಾರ್ಟ್ ಮಾಡಿಕೊಳ್ಳುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ನನಗೆ ಮಗು ಆದ ಮೇಲೆ ಅದು ಅರ್ಥವಾಯ್ತು. ಅದಕ್ಕಾಗಿ ಕೂದಲನ್ನು ಶಾರ್ಟ್ ಆಗಿ ಕಟ್ ಮಾಡಿಕೊಂಡು ಅದನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ನೀಡಿದೆ ಎಂದು ಬರೆದುಕೊಂಡಿದ್ದಾರೆ.
ತಮಿಳು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಹಜೇಲ್ ಟೀಮ್ ಇಂಡಿಯ ಕ್ರಿಕೆಟ್ ಆಟಗಾರರನ್ನು ವರಿಸಿರುವ ಕಾರಣ ದೇಶದ ಎಲ್ಲರಿಗೂ ಪರಿಚಿತರಾಗಿದ್ದಾರೆ. ಇವರ ಈ ನಿರ್ಧಾರವು ಇನ್ನಷ್ಟು ಜನರಿಗೆ ಮಾದರಿಯಾಗಿದೇ ಇರದು. ಸೋಶಿಯಲ್ ಮೀಡಿಯಾದಲ್ಲಿ ಈಕೆ ಪೋಸ್ಟ್ ಗೆ ಬರಪೂರ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗುತ್ತಿತ್ತು ಎಲ್ಲರೂ ಇವರ ಈ ನಿರ್ಧಾರಕ್ಕೆ ಶಬಾಷ್ ಗಿರಿ ನೀಡುತ್ತಿದ್ದಾರೆ.
ಸೆಲೆಬ್ರೆಟಿಗಳ ಒಂದಷ್ಟು ನಿರ್ಧಾರಗಳು ಖಂಡಿತವಾಗಿಯೂ ಜನಸಾಮಾನ್ಯರ ಮೇಲೆ ಪ್ರಭಾವ ಬೀರುತ್ತವೆ, ಅದೇ ರೀತಿ ಇವರ ಈ ನಿರ್ಧಾರ ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ ಎನ್ನುವುದಷ್ಟೇ ನಮ್ಮ ಅಂಕಣದ ಆಶಯ.