ಪಿ.ಆರ್.ಕೆ ಸ್ಟುಡಿಯೋಸ್ ಹಾಗೂ ಎನ್.ತ್ರಿ.ಕೆ ಡಿಸೈನ್ ಸ್ಟುಡಿಯೋ ವತಿಯಿಂದ ದಿ. ಡಾ. ಪುನೀತ್ ರಾಜ್‍ಕುಮಾರ್ ಅವರ ಸಂಗ್ರಹಣೀಯ ಶಿಲ್ಪಗಳ ಅನಾವರಣ (Digital statue inogration) ಕಾರ್ಯಕ್ರಮವನ್ನು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (C.M Siddaramaih), ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಪುನೀತ್ ಹಿರಿಯ ಸಹೋದರ ರಾಘವೇಂದ್ರ ರಾಜ್‍ಕುಮಾರ್, ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ಮಗಳು ವಂದಿತಾ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಗಣ್ಯರ ಸಮ್ಮುಖದಲ್ಲಿ ಸಿ.ಎಂ ಸಿದ್ದರಾಮಯ್ಯ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಪುನೀತ್ ರಾಜಕುಮಾರ್ ಹಾಗೂ ಡಾ. ರಾಜ್ ಕುಮಾರ್ ಅವರ ವ್ಯಕ್ತಿತ್ವವನ್ನು ಗುಣಗಾನ ಮಾಡಿದರು. ಡಾ.ರಾಜ್ ಕುಟುಂಬದೊಂದಿಗೆ ನನಗೆ ಮೊದಲಿನಿಂದಲೂ ಒಡನಾಟ ಇತ್ತು. ಪುನೀತ್ ರಾಜಕುಮಾರ್ ಅವರ ನನಗೆ ನೀಡುತ್ತಿದ್ದಷ್ಟು ಗೌರವವನ್ನು ನಮ್ಮ ಕುಟುಂಬದವರೂ ನೀಡುತ್ತಿರಲಿಲ್ಲ.
ಡಾ. ರಾಜ್ ಕುಟುಂಬದವರು ಯಾರಿಗೂ ಕೂಡ ಕೆಟ್ಟದ್ದನ್ನು ಬಯಸಿಲ್ಲ, ಯಾರ ಬಗ್ಗೆ ಕೆಟ್ಟದಾಗಿ ಮಾತು ಕೂಡ ಆಡಿಲ್ಲ, ಇವರಿಬ್ಬರ ಸಾ’ವನ್ನು ಕರ್ನಾಟಕದ ಜನ ಇಂದಿಗೂ ಸಹ ಅರಗಿಸಿಕೊಳ್ಳಲಾಗದೇ ಸಂಕಟ ಪಡುತ್ತಿದ್ದಾರೆ. ಕರ್ನಾಟಕದ ಮನೆ ಮನೆಗಳಿಗೂ ಮಗನಾಗಿದ್ದರೂ ಅಪ್ಪು, ಪುನೀತ್ ಅವರನ್ನು ಕಳೆದುಕೊಂಡ ದಿನ ಇಡೀ ಕರ್ನಾಟಕವೇ ಸೂತಕದ ಛಾಯೆಯಲ್ಲಿತ್ತು. ತಮ್ಮ ಮನೆ ಮಂದಿಯನ್ನೇ ಕಳೆದುಕೊಂಡಷ್ಟು ಜನರು ದುಃ’ಖ ಪಟ್ಟರು.
ಇವರಿಬ್ಬರಿಗೆ ಸಿಕ್ಕ ಈ ಮಟ್ಟಗಿನ ಪ್ರೀತಿ ಅಭಿಮಾನ ಗೌರವ ಬೇರೆ ನಟನಿಗೆ ಸಿಕ್ಕಿರುವುದನ್ನು ನಾನು ಇದುವರೆಗೂ ಕಂಡಿಲ್ಲ. ಅಪ್ಪು ಸಾ’ವು ಸಿನಿಮಾ ಇಂಡಸ್ಟ್ರಿಗೆ, ಕುಟುಂಬಕ್ಕೆ ಮಾತ್ರವಲ್ಲದೇ ಕರುನಾಡಿಗೆ ಆಗಿರುವ ದೊಡ್ಡ ನ’ಷ್ಟ. ಅವರ ಸ್ಥಾನವನ್ನು ತುಂಬಲು ಯಾರಿಗೂ ಕೂಡ ಸಾಧ್ಯವಿಲ್ಲ, ಹಿರಿಯರಿಗೆ ಗೌರವ ಕೊಡುತ್ತಿದ್ದರು, ಕಿರಿಯರನ್ನು ಸಹ ಕಲಾವಿದರನ್ನು ಪ್ರೀತಿಯಿಂದ ಕಾಣುತ್ತಿದ್ದರು.
ಹೊಸಬರನ್ನು ಬೆಳೆಸುವ ಪ್ರೋತ್ಸಾಹ ನೀಡುವ ಗುಣ ಅವರಿಗೆ ಇತ್ತು, ಇಂತಹ ವ್ಯಕ್ತಿಯನ್ನು ನಾವು ಬಹಳ ಬೇಗ ಕಳೆದುಕೊಂಡೆವು. ಅವರು ಇನ್ನಷ್ಟು ವರ್ಷ ಬದುಕಿದ್ದರೆ ಇನ್ನೂ ಎತ್ತರದ ಮಟ್ಟದಲ್ಲಿ ಸಾಧನೆ ಮಾಡಿರುತ್ತಿದ್ದರು ಆದರೆ ಈಗ ಅವರ ಸಾಧನೆಗಳ ಮೂಲಕ ಮತ್ತು ಸ್ಮಾರಕಗಳ ಮೂಲಕ ಅವರನ್ನು ಸ್ಮರಿಸೋಣ.
ಪುನೀತ್ ರಾಜ್‍ಕುಮಾರ್ ಅವರ ಸ್ಮಾರಕ ಪುನರಾಭಿವೃದ್ಧಿ ಸೇರಿದಂತೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ನಮಗೆ ಮಾಡಿರುವ ಮನವಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಪ್ಪು ಹುಟ್ಟಿದ ದಿನವಾದ ಮಾರ್ಚ್ 17 ನ್ನು ಸ್ಪೂರ್ತಿ ದಿನವಾಗಿ (To announce Appu birthday as Inspiration day) ಆಚರಿಸುವುದಕ್ಕೆ ಹಿಂದೆ ಇದ್ದ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ, ಆದರೆ ನಾವು ಅದಕ್ಕೆ ಬದ್ಧ ಎಂದು ಘೋಷಿಸಿದರು.
ಬಳಿಕ ಇದರ ಬಗ್ಗೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ಅವರು ಅಪ್ಪು ಬದುಕಿದ್ದಾಗ ನಮ್ಮ ಮನೆ ಮಂದಿ ಜೊತೆಗೆ ಇದ್ದ, ಈಗ ಅವನು ಕರ್ನಾಟಕದ ಪ್ರತಿಯೊಂದು ಮನೆಯ ಸದಸ್ಯನಾಗಿದ್ದಾನೆ. ಕಳೆದ ಸರ್ಕಾರವು ಮಾರ್ಚ್ 17 ನ್ನು ಸ್ಪೂರ್ತಿ ದಿನವಾಗಿ ಘೋಷಣೆ ಮಾಡಿತ್ತು, ಆದರೆ ಅದನ್ನು ಕಾರ್ಯರೂಪಕ್ಕೆ ತರುವಷ್ಟರಲ್ಲಿ ಚುನಾವಣೆ ಬಂದ ಕಾರಣ ಈಗಿನ ನಮ್ಮ ನೂತನ ಮುಖ್ಯಮಂತ್ರಿಗಳು ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ರಾಘಣ್ಣ (Raghavendra Raj Kumar) ಮನವಿ ಮಾಡಿಕೊಂಡರು.