ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅನೇಕ ಹೆಸರುಗಳಿಂದ ಅಭಿಮಾನಿಗಳು ಕರೆಯುತ್ತಾರೆ. ಕೆಲವರು ದಾಸ ಎಂದರೆ ಅನೇಕರಿಗೆ ಇವರು ಡಿ ಬಾಸ್, ದಚ್ಚು ಎನ್ನುವುದು ಇನ್ನು ಕೆಲವರಿಗೆ ಅಚ್ಚು ಮೆಚ್ಚು. ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್ವುಡ್ ಸುಲ್ತಾನ, ಇನ್ನಿತರ ಟೈಟನ್ ಗಳನ್ನು ಪಡೆದಿರುವ ದರ್ಶನ್ ಅವರ ನಿಜವಾದ ಹೆಸರು ಹೇಮಂತ್ ಕುಮಾರ್ ಸಿನಿಮಾ ಇಂಡಸ್ಟ್ರಿಗೆ ಬಂದಮೇಲೆ ಅವರ ಹೆಸರು ದರ್ಶನ್ ಎಂದು ಬದಲಾಯಿಸಲಾಯಿತು.
ಈಗ ದರ್ಶನ್ ಅವರು ತಮ್ಮ ಸೆಲೆಬ್ರೆಟಿಗಳು ಪ್ರೀತಿಯಿಂದ ಹೇಗೆ ಕರೆದರೂ ಓಗೊಡುತ್ತಾರೆ ಅದು ಬೇರೆ ವಿಚಾರ. ಆದರೆ ಇಂದು ನಾವು ಹೇಳುತ್ತಿರುವುದು ಇದಕ್ಕಿಂತ ಬಹಳ ವಿಶೇಷವಾದ ವಿಷಯ. ದರ್ಶನ್ ಅವರಿಗೆ ಇನ್ನೊಂದು ಹೆಸರು ಇದೆ ಅವರ ಮನೆಯಲ್ಲಿ ಅವರ ತಾಯಿ, ಸಹೋದರಿ ಎಲ್ಲರೂ ಪ್ರೀತಿಯಿಂದ ಇದೇ ಹೆಸರಿನಲ್ಲಿ ಅವರನ್ನು ಕರೆಯುವುದು.
ಕುಟುಂಬದ ಆತ್ಮೀಯರಿಗಷ್ಟೇ ಈ ಹೆಸರು ತಿಳಿದಿದೆ ಮೊನ್ನೆ ಡಾಲಿ ಧನಂಜಯ್ ಅವರ ನಿರ್ಮಾಣದ ಟಗರು ಪಲ್ಯ ಸಿನಿಮಾ ಟ್ರೈಲರ್ ರಿಲೀಸ್ ಇವೆಂಟ್ ನಲ್ಲಿ ಈ ಹೆಸರು ಬಹಿರಂಗಗೊಂಡಿದೆ. ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಹಾಸ್ಯನಟ ನಾಗರಭೂಷಣ್ ನಾಯಕ ನಟನಾಗಿರುವ ಮತ್ತು ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತ ಲಾಂಚ್ ಆಗುತ್ತಿರುವ ಪಕ್ಕಹಳ್ಳಿ ಶೈಲಿಯ ಸಿನಿಮಾವಾದ ಟಗರು ಪಲ್ಯ ಸಿನಿಮಾ ಟ್ರೈಲರ್ ರಿಲೀಸ್ ಇವೆಂಟ್ಗೆ ದರ್ಶನ್ ರವರೇ ಮುಖ್ಯ ಅತಿಥಿಗಳಾಗಿದ್ದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ತಾರ ಅವರು ದರ್ಶನ್ ಅವರನ್ನು ಕರೆಯುವಾಗ ಅವರನ್ನು ಮನೆಯಲ್ಲಿ ಕರೆಯುವಂತೆ ಕರೆದು ನಂತರ ಅದಕ್ಕೆ ಸ್ಪಷ್ಟತೆ ಕೊಟ್ಟಿದ್ದಾರೆ. ಈ ಹೆಸರನ್ನು ಕೇಳಿದ ತಕ್ಷಣ ದಚ್ಚು ಅಭಿಮಾನಿಗಳು ಥ್ರಿಲ್ ಆಗಿ ಹೋಗಿದ್ದಾರೆ. ಅಷ್ಟಕ್ಕೂ ದರ್ಶನ್ ರವರ ಈ ಹೆಸರು ಏನು ಗೊತ್ತಾ?
ನಟಿ ತಾರಾ ಅವರು ದರ್ಶನ್ ಅವರನ್ನು ಅಪ್ಪು ಎಂದು ಕರೆದಿದ್ದಾರೆ ಇದು ಅಲ್ಲಿದವರಿಗೆಲ್ಲ ಆಶ್ಚರ್ಯ ಉಂಟು ಮಾಡಿದೆ. ಇದಕ್ಕೆ ಸ್ಪಷ್ಟತೆ ಕೊಟ್ಟ ತಾರ ಅವರು ಇದು ನಾನು ಇಟ್ಟಿರುವ ಹೆಸರಲ್ಲ ದರ್ಶನ್ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಅವರ ಮನೆಯಲ್ಲಿ ಇದೇ ಹೆಸರಿನಿಂದ ಕರೆಯುತ್ತಿದ್ದದ್ದು ಈಗಲೂ ಅವರ ತಾಯಿ ಹಾಗೂ ಅವರ ಸಹೋದರಿ ಇವರನ್ನು ಅಪ್ಪು ಎಂದೇ ಕರೆಯುವುದು.
ಇದು ಮೊದಲಿನಿಂದ ನನಗೂ ಸಹ ಅಭ್ಯಾಸವಾಗಿ ಹೋಗಿದೆ ಹಾಗಾಗಿ ನಾನು ಯಾವಾಗಲೂ ಅವರನ್ನು ಇದೇ ಹೆಸರಿನಿಂದ ಕರೆಯುವುದು ಎಂದು ಹೇಳಿದ್ದಾರೆ. ಅಪ್ಪು ಎನ್ನುವ ಹೆಸರು ಕನ್ನಡಿಗರಿಗೆ ಬಹಳ ಹತ್ತಿರವಾದದ್ದು ಜೊತೆಗೆ ಪ್ರತಿಯೊಬ್ಬರೂ ಕೂಡ ತಮ್ಮ ಮನೆಯಲ್ಲಿ ಒಂದು ಮಗುವಿಗಾದರೂ ಈ ಹೆಸರನ್ನು ಇಟ್ಟು ಪ್ರೀತಿಯಿಂದ ಕರೆಯುತ್ತಾರೆ.
ಹಾಗಾಗಿ ದರ್ಶನ್ ಅವರ ಮನೆಯಲ್ಲಿ ಕೂಡ ಚಿಕ್ಕ ವಯಸ್ಸಿನಿಂದ ಹಿರಿಯ ಮಗನಿಗೆ ಈ ಹೆಸರು ಕರೆದು ಕೂಗುವುದು ಅಭ್ಯಾಸವಾಗಿದೆ ಇದು ಕುಟುಂಬದ ಆತ್ಮೀಯರಿಗಷ್ಟೇ ತಿಳಿದಿತ್ತು. ಚಿಕ್ಕ ವಯಸ್ಸಿನಿಂದಲೂ ಕೂಡ ದರ್ಶನವರಿಗೆ ಪರಿಚಯ ಇದ್ದ ಎಲ್ಲರೂ ಈಗಲೂ ಇದೇ ಹೆಸರಿನಿಂದ ಕರೆಯುತ್ತಾರೆ ಈಗ ದರ್ಶನ್ ಅವರನ್ನು ಕರೆಯುವುದಕ್ಕೆ ಅನೇಕ ಟೈಟಲ್ ಗಳೇ ಇವೆ.
ಒಡೆಯ, ಯಜಮಾನ, ಚಂದನವನದ ಚಕ್ರವರ್ತಿ ಹೀಗೆ ಅವರ ಸಿನಿಮಾದ ಯಾವ ಹೆಸರು ಕರೆದರು ಅದು ಅವರಿಗೆ ಸೇರುತ್ತದೆ. ನೀವು ದರ್ಶನ್ ಅಭಿಮಾನಿಗಿದ್ದರೆ ನಿಮಗೆ ಅವರು ಯಾವ ಹೆಸರು ಇಷ್ಟ ಎಂದು ಕಮೆಂಟ್ ಮಾಡಿ ತಿಳಿಸಿ.