ಸರ್ಕಾರಿ ಜಾಗವನ್ನು ಹೊತ್ತುವರಿ ಮಾಡಿಕೊಂಡಿರುವುದರ ಬಗ್ಗೆ ಸರ್ಕಾರ ಇದೀಗ ಹೊಸ ಒಂದು ತೀರ್ಮಾನವನ್ನು ಕೈಗೊಂಡಿದ್ದು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡರೆ ಏನೆಲ್ಲ ತೊಂದರೆಗಳು ಎದುರಿಸಬೇಕಾಗುತ್ತದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಕೆಲವೊಬ್ಬರು ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಅಥವಾ ಜಮೀನಿಗಾಗಿ ಒತ್ತುವರಿ ಮಾಡಿಕೊಂಡಿರುತ್ತಾರೆ ಇನ್ನು ಕೆಲವರು ಓಡಾಡುವ ಜಾಗಕ್ಕಾಗಿ ಒತ್ತುವರಿ ಮಾಡಿಕೊಂಡಿರುತ್ತಾರೆ. ಅನಧಿಕೃತವಾಗಿ ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವುಗೊಳಿಸಲಾಗುತ್ತದೆ ಎಂದು ಸುದ್ದಿಗಾರರೊಂದಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿಯನ್ನು ನೀಡಿದ್ದಾರೆ
ಹೌದು ಇದೇ ಆಗಸ್ಟ್ 7 ರಂದು ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಸಚಿವರೊಡನೆ ಸಮಿತಿ ಇದ್ದು ಇದರ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ. ಕಂದಾಯ ಸಚಿವರಾದಂತಹ ಕೃಷ್ಣ ಭೈರೇಗೌಡ ಅವರು ವಿಧಾನಸೌಧದಲ್ಲಿ ಇಂದು ಪತ್ರಿಕಾ ಘೋಷ್ಠಿಯೊಂದಿಗೆ ಮಾತನಾಡಿ ಭೂಮಿ ತೆರವುಗೊಳಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಭೂಮಿಯನ್ನು ಯಾರೆಲ್ಲಾ ಒತ್ತುವರಿ ಮಾಡಿಕೊಂಡಿದ್ದಾರೋ ಅದರ ಬಗ್ಗೆ ವರದಿಯನ್ನು ಎ. ಟಿ ರಾಮಸ್ವಾಮಿ ಹಾಗೂ ಬಾಲಸುಬ್ರಮಣ್ಯ ವರದಿಯಲ್ಲಿ ನಮೂದಿಸಲಾಗಿದ್ದು ಅದನ್ನು ಆಧಾರವಾಗಿಟ್ಟುಕೊಂಡು ಒತ್ತುವರಿ ಮಾಡಿಕೊಂಡಿರುವಂತಹ ಸರ್ಕಾರದ ಭೂಮಿಯನ್ನು ತೆರವುಗೊಳಿಸಲು ಕಾರ್ಯ ಸದ್ಯದಲ್ಲಿ ಆರಂಭವಾಗುವುದಕ್ಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರ.
ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ತೆರವುಗೊಳಿಸಿದ ನಂತರ ರೆವೆನ್ಯೂ ಇನ್ಸ್ಪೆಕ್ಟರ್ ಹಾಗೂ ಇತರ ಅಧಿಕಾರಿಗಳು ಆ ಭೂಮಿ ಮತ್ತೆ ಯಾರಿಂದಲೂ ಒತ್ತುವರಿ ಆಗದೆ ಇರುವಂತೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಸರ್ಕಾರಕ್ಕೆ ತಿಳಿಯದ ರೀತಿಯಲ್ಲಿ ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ ಹಾಗಾಗಿ ಪ್ರತಿ ತಿಂಗಳು ಒಂದು ನಿಗದಿತ ಪ್ರಮಾಣದಲ್ಲಿ ಒತ್ತುವರಿ ತೆರವು ಕಾರ್ಯ ನಡೆಯಬೇಕು ಇದಕ್ಕಾಗಿ ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ಅಧಿಕಾರಿಗಳ ಜೊತೆಗೆ ನಡೆಸಲಾಗುವುದು ಸರ್ಕಾರದ್ದೇ ಆಗಿರುವ ಭೂಮಿಯನ್ನು ರಕ್ಷಿಸುವುದು ಸರ್ಕಾರದ ಮೊದಲ ಆದ್ಯತೆ ಹಾಗೂ ಕರ್ತವ್ಯವಾಗಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ಸಂದರ್ಭದಲ್ಲಿ ಮತ್ತೊಂದು ವಿಷಯವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಜಿಲ್ಲೆಯಲ್ಲಿ ಕೆಲವು ಅಕ್ರಮ ಭೂ ನೊಂದಣಿ ಕೂಡ ನಡೆಯುತ್ತಿದೆ ಹಾಗಾಗಿ ಜಿಲ್ಲಾ ಮಟ್ಟದಲ್ಲಿಯೇ ಇದನ್ನು ಸರಿಪಡಿಸಲು ಸಹಶಿಲ್ದಾರರು ಹಾಗೂ ಇತರ ಅಧಿಕಾರಿಗಳಿಗೆ ಆದೇಶವನ್ನು ನೀಡಿದ್ದಾರೆ.
ಹಲವು ಬಾರಿ ಬೇರೆಯವರ ಹೆಸರಿನಲ್ಲಿ ಇರುವಂತಹ ಜಮೀನು ಅಥವಾ ಭೂಮಿಯನ್ನು ಬೇನಾಮಿಯಾಗಿ ಕೆಲವರು ಮತ್ತೊಬ್ಬರಿಗೆ ಮಾರುತ್ತಾರೆ. ನಂತರ ಆ ಭೂಮಿಯ ನಿಜವಾದ ಮಾಲೀಕ ತನ್ನ ಭೂಮಿಯನ್ನು ಹಿಂಪಡೆಯಲು ಕೋರ್ಟ್ ಮನೆ ಎಂದು ಅಲೆದಾಡ ಬೇಕಾಗುತ್ತದೆ ಸಾಕಷ್ಟು ಸ್ಟೇ ಆರ್ಡರ್ ಪ್ರಕರಣಗಳು ಕೂಡ ನಡೆದಿದ್ದು ಆ ಭೂಮಿ ಯಾರ ಬಳಕೆ ಮಾಡಿಕೊಳ್ಳದೆ ಇರುವ ರೀತಿ ಆಗುತ್ತದೆ.
ಈ ರೀತಿ ಮಧ್ಯವರ್ತಿಗಳು ಯಾರ ಜಮೀನನ್ನು ಕೂಡ ಸುಳ್ಳು ದಾಖಲೆಗಳನ್ನು ನೀಡಿ ಇನ್ನೊಬ್ಬರ ಹೆಸರಿಗೆ ವರ್ಗಾಯಿಸುವಂತೆ ಇಲ್ಲ ಇದು ತಕ್ಷಣವೇ ಜಿಲ್ಲಾ ಮಟ್ಟದಲ್ಲಿಯೇ ಪರಿಶೀಲನೆ ಆಗಬೇಕು. ಅವರ ಸ್ವಂತ ಜನ್ಮೀನಿಗಾಗಿ ಕೋರ್ಟ್ ಅಲೆಯುವಂತಹ ಪರಿಸ್ಥಿತಿ ಆಗಬಾರದು ಎಂದು ಸಚಿವರು ತಿಳಿಸಿದ್ದಾರೆ ಒತ್ತುವರಿ ಮಾಡಿಕೊಂಡಿರುವಂತಹ ಸರ್ಕಾರದ ಭೂಮಿಯನ್ನು ನೀವಾಗಿ ನೀವೇ ಬಿಟ್ಟರೆ ಸರ್ಕಾರದಿಂದ ಯಾವುದೇ ರೀತಿಯ ತೊಂದರೆ ನಿಮಗೆ ಉಂಟಾಗುವುದಿಲ್ಲ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.