ಕಾಂಗ್ರೆಸ್ ಸರ್ಕಾರವು ನೀಡಿರುವಂತಹ ಗ್ಯಾರಂಟಿಗಳಿಗೆ ಈಗಾಗಲೇ ಜನರು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ ಇನ್ನು ಕೆಲವರು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಕಾರಣ ಅವರ ಬಳಿ ರೇಷನ್ ಕಾರ್ಡ್ ಇಲ್ಲದ ಕಾರಣದಿಂದಾಗಿ ಹಾಗೆಯೇ ಅವರ ಹೆಸರು ರೇಷನ್ ಕಾರ್ಡ್ ನಲ್ಲಿ ಇಲ್ಲದೆ ಇದ್ದರೆ ಅಂತಹವರು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯ ವಾಗುತ್ತಿಲ್ಲ.
ಬಹಳಷ್ಟು ಜನರು ಹೊಸ ರೇಷನ್ ಕಾರ್ಡ್ ಮಾಡಿಸಿಕೊಳ್ಳಬೇಕು ರೇಷನ್ ಕಾರ್ಡ್ ಗೆ ಹೆಸರನ್ನು ಸೇರಿಸಬೇಕು ರೇಷನ್ ಕಾರ್ಡ್ ನಲ್ಲಿ ಇರುವಂತಹ ಹೆಸರುಗಳನ್ನು ತಿದ್ದುಪಡಿ ಮಾಡಿಸಬೇಕು ಈ ರೀತಿಯಾಗಿ ಬಹಳಷ್ಟು ಜನರು ಗೊಂದಲದಲ್ಲಿ ಇದ್ದಾರೆ. ಇಂತಹವರಿಗೆ ಸರ್ಕಾರವು ಗುಡ್ ನ್ಯೂಸ್ ಕೊಟ್ಟಿದೆ.
ರೇಷನ್ ಕಾರ್ಡ್ ಇದ್ದರೂ ಕೂಡ ಮುಂದಿನ ದಿನಗಳಲ್ಲಿ ಅಂತಹ ರೇಷನ್ ಕಾರ್ಡ್ ಗಳು ಕ್ಯಾನ್ಸಲ್ ಆಗುವಂತಹ ಸಾಧ್ಯತೆಗಳು ಇದೆ. ಕೆಲವೊಬ್ಬರ ರೇಷನ್ ಕಾರ್ಡ್ ಗಳು ಯಾಕೆ ರದ್ದಾಗುತ್ತದೆ ಎಂದು ನೋಡುವುದಾದರೆ. ಕೆಲವರಿಗೆ ನಾಲ್ಕೈದು ಮನೆಗಳಿಂದ ಬಾಡಿಗೆ ಬರುತ್ತಿರುತ್ತದೆ, ವೈಟ್ ಬೋರ್ಡ್ ಕಾರುಗಳು ಇರುವಂತಹವರಿಗೆ ಸರ್ಕಾರ ಇದೀಗ ಬಿಪಿಎಲ್ ಕಾರ್ಡನ್ನು ರದ್ದು ಮಾಡಲು ಮುಂದಾಗಿದೆ.
ಆಧಾರ್ ಕಾರ್ಡ್ ನ ಮೂಲಕ ನಮ್ಮ ಬಳಿ ಏನಿದೆ ಏನಿಲ್ಲ ಎಂಬುವಂತಹ ಸಂಪೂರ್ಣ ಮಾಹಿತಿ ಸರ್ಕಾರದ ಕೈಯಲ್ಲಿದೆ ನಾವು ಏನೇ ಖರೀದಿ ಮಾಡಬೇಕಾದರೆ ಆಧಾರ್ ಕಾರ್ಡ್ ಪ್ರಮುಖವಾದಂತಹ ದಾಖಲೆಯಾಗಿದೆ ಈ ದಾಖಲೆಯನ್ನು ನೀಡಿದ ನಂತರ ನಾವು ಕಾರು ಮನೆ ಇನ್ನಿತರ ಎಲ್ಲವನ್ನು ಖರೀದಿ ಮಾಡಲು ಸಾಧ್ಯ ಆಧಾರ್ ಕಾರ್ಡ್ ನೀಡಿರುತ್ತೇವೆ ಇದರ ಮುಖಾಂತರ ಸರ್ಕಾರಕ್ಕೆ ತಿಳಿಯುತ್ತದೆ.
ರಾಜ್ಯದಲ್ಲಿ ಹೊಸದಾಗಿ ರೇಷನ್ ಕಾರ್ಡ್ ಗಳನ್ನು ವಿತರಿಸಲು ಸರ್ಕಾರ ನಿರ್ಧರಿಸಿದೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಸ್ಥಗಿತವಾಗಿದ್ದ ಪ್ರಕ್ರಿಯೆ ಪುನರಾರಂಭಕ್ಕೆ ಶೀಘ್ರವೇ ಚಾಲನೆ ಸಿಗಲಿದೆ ಆದರೆ ಬಿಪಿಎಲ್ ಕಾರ್ಡ್ ಪಡೆಯಲು ಹೊಸ ಮಾನದಂಡ ರೂಪಿಸಲಾಗಿದ್ದು ವೈಟ್ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆಎಚ್ ಮುನಿಯಪ್ಪ ಅವರು ದುಡಿಮೆಗಾಗಿ ಕಾರನ್ನು ಇಟ್ಟುಕೊಂಡಿರುವವರು ಬಿಪಿಎಲ್ ಕಾರ್ಡ್ ಗೆ ಅರ್ಹರಾಗಿರುತ್ತಾರೆ. ಇಂತಹವರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಹ ಸಲ್ಲಿಸಬಹುದು.
ಈಗಾಗಲೇ 2,95,586 ಬಿಪಿಎಲ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಸದ್ಯದಲ್ಲೇ ಇದಕ್ಕೆ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿ ಆರ್ಥಿಕ ಇಲಾಖೆ ಅನುಮೋದನೆಗೆ ಸಲ್ಲಿಸಲಾಗುವುದು ಎಂದು ವಿವರಿಸಿದ್ದರು. ಸೆಪ್ಟೆಂಬರ್ ನಿಂದಲೇ ಬಿಪಿಎಲ್ ಕಾರ್ಡ್ದಾರರಿಗೆ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಲಾಗಿದೆ 5 ಕೆಜಿ ಅಕ್ಕಿ ಬದಲು ಜನರಿಗೆ ಸುಧೀರ್ಘ ಅವಧಿಗೆ ಹಣ ನೀಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಮುಂದಿನ ತಿಂಗಳಿನಿಂದಲೇ 10 ಕೆಜಿ ಅಕ್ಕಿ ನೀಡಲು ಚಿಂತನೆ ನಡೆಯುತ್ತಿದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಬಿಪಿಎಲ್ ಕಾರ್ಡ್ ಗೆ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು.
ಅಕ್ಕಿ ಸಿಗದಿದ್ದರೆ ಅನಿವಾರ್ಯವಾಗಿ ಹಣವನ್ನೇ ಫಲಾನುಭವಿಗಳ ಖಾತೆಗೆ ಹಾಕಲಾಗುತ್ತದೆ ಅಕ್ಕಿ ಒದಗಿಸುವ ಬಗ್ಗೆ ಈಗಾಗಲೇ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜೊತೆ ಮಾತುಕತೆ ನಡೆಯುತ್ತಿದ್ದು ಎರಡು ರಾಜ್ಯಗಳು ಅಕ್ಕಿ ಒದಗಿಸಲು ಮುಂದೆ ಬಂದಿವೆ ಎಂದು ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ