ಕನ್ನಡ ಚಲನಚಿತ್ರ ರಂಗದ ಹೆಸರಾಂತ ನಟ ವಿಜಯ ರಾಘವೇಂದ್ರ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಇದೀಗ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ವಿ’ಧಿ’ವ’ಶರಾಗಿದ್ದು ಈ ಕುರಿತದಂತಹ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಬ್ಯಾಂಕಾಕ್ ಪ್ರವಾಸಕ್ಕಾಗಿ ಕುಟುಂಬಸ್ಥರೊಂದಿಗೆ ತೆರಳಿದ್ದರು. ಪ್ರವಾಸ ಕೈಗೊಂಡಿದಂತಹ ಸಂದರ್ಭದಲ್ಲಿ ನೆನ್ನೆ ಮಧ್ಯಾಹ್ನ ಜ್ವರ ಮತ್ತು ಎದೆ ನೋವು ಕಾಣಿಸಿಕೊಂಡಿತ್ತು ಪ್ರವಾಸದಿಂದ ಸುಸ್ತಾಗಿರಬಹುದು ಎಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು ಆದರೆ ನೆನ್ನೆ ರಾತ್ರಿ 8:00 ಗಂಟೆಯ ವೇಳೆಗೆ ತೀವ್ರ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲು ಮಾಡಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸ್ಪಂದನ ಅವರು ನಿ’ಧ’ನರಾಗಿದ್ದಾರೆ.
ಚಿತ್ರೀಕರಣದಲ್ಲಿ ಇದ್ದಂತಹ ವಿಜಯ್ ರಾಘವೇಂದ್ರ ಅವರಿಗೆ ಈ ವಿಚಾರ ತಿಳಿದು ಬರಸಿಡಿಲು ಬಡಿದಂತೆ ಆಗಿದೆ ಈ ವಿಷಯ ಕೇಳಿ ವಿಜಯ್ ರಾಘವೇಂದ್ರ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದೀಗ ವಿಜಯ್ ರಾಘವೇಂದ್ರ ಅವರು ಸಹ ಬ್ಯಾಂಕಾಕ್ ಗೆ ತೆರಳಿದ್ದಾರೆ ಸ್ಪಂದನ ಅವರ ಶರೀರವನ್ನು ಬೆಂಗಳೂರಿಗೆ ತರುವಂತಹ ಸಾಧ್ಯತೆ ಇದೆ.
ವಿಜಯ ರಾಘವೇಂದ್ರ ಹಾಗೂ ಸ್ಪಂದನ ಅವರು ಬಹಳ ವರ್ಷಗಳಿಂದ ಪ್ರೀತಿಸಿ 2007ರಲ್ಲಿ ವಿವಾಹವಾಗಿದ್ದರು ಇವರಿಗೆ ಒಬ್ಬ ಮುದ್ದಾದ ಮಗನು ಸಹ ಇದ್ದಾನೆ. ವಿಜಯ್ ಮದುವೆಯ ಬಗ್ಗೆ ತಮ್ಮದೇ ಆದಂತಹ ಕನಸನ್ನು ಕಟ್ಟಿಕೊಂಡಿದ್ದರು ಮಂಗಳೂರಿನ ಹುಡುಗಿಯನ್ನು ಮದುವೆಯಾಗಬೇಕು ಎಂಬ ಕನಸನ್ನು ಇಟ್ಟುಕೊಂಡು ಅದರಂತೆ ಸ್ಪಂದನ ಅವರನ್ನು ಮದುವೆಯಾಗಿದ್ದರು.
2004ರಲ್ಲಿ ಸ್ಪಂದನ ಅವರನ್ನು ಮೊದಲು ಭೇಟಿಯಾಗಿದ್ದರು ಎರಡನೇ ಭೇಟಿಗೆ ಸ್ಪಂದನ ಅವರ ಬಳಿ ಮದುವೆಯಾಗುತ್ತೀರಾ ಎನ್ನುವಂತಹ ವಿಷಯವನ್ನು ಪ್ರಸ್ತಾಪ ಮಾಡಿದ್ದರು ನಂತರ ಕುಟುಂಬಸ್ಥರಿಗೆ ವಿಷಯ ತಿಳಿಸಿ ಮದುವೆಯನ್ನು ಮಾಡಿಕೊಂಡಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಇವರು ವಿವಾಹ ಜೀವನವನ್ನುಕಳೆದಿದ್ದರು ಇದೀಗ ಸ್ಪಂದನ ಅವರನ್ನು ಕಳೆದುಕೊಂಡು ವಿಜಯ್ ರಾಘವೇಂದ್ರ ಅವರು ನುಂಗಲಾಗದಂತಹ ನೋವನ್ನು ಅನುಭವಿಸುತ್ತಿದ್ದಾರೆ.
ವಿಜಯ್ ರಾಘವೇಂದ್ರ ಅವರಿಗೆ ಸ್ಪಂದನ ಎಂದರೆ ಬಹಳಷ್ಟು ಪ್ರೀತಿ, ಸಾಕಷ್ಟು ಬಾರಿ ಮಾಧ್ಯಮಗಳ ಮುಂದೆ ಈ ವಿಚಾರವನ್ನು ಹೇಳಿಕೊಂಡಿದ್ದರು. ಆದರೆ ಇದೀಗ ವಿಜಯ್ ರಾಘವೇಂದ್ರ ಅವರ ಪತ್ನಿ ನಿ’ಧ’ನರಾಗಿದ್ದು ಈ ನೋವನ್ನು ವಿಜಯ ರಾಘವೇಂದ್ರ ಅವರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸ್ಪಂದನ ಅವರು 2016ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಪೂರ್ವ ಸಿನಿಮಾದಲ್ಲೂ ಸಹ ನಟಿಸಿದ್ದರು. ಪತಿಯ ಏಳಿಗೆಯಲ್ಲಿ ಬೆನ್ನೆಲುಬಾಗಿ ನಿಲ್ಲುತ್ತಿದ್ದರು ಗಂಡನ ನೋವು ನಲಿವು ಎಲ್ಲದರಲ್ಲೂ ಸಹ ಪಾಲನ್ನು ತೆಗೆದುಕೊಳ್ಳುತ್ತಿದ್ದ ಸ್ಪಂದನ ಅವರು ಇಂದು ಅವರೊಟ್ಟಿಗೆ ಇಲ್ಲ ಎಂದು ಹೇಳಲು ಸಾಧ್ಯವಾಗುತ್ತಿಲ್ಲ ಇದು ವಿಜಯ್ ರಾಘವೇಂದ್ರ ಅವರ ಅಭಿಮಾನಿಗಳಿಗೆ ನಿಜಕ್ಕೂ ಬೇಸರದ ಸಂಗತಿ.
ಸ್ಪಂದನ ಅವರು ಮೂಲತಹ ಮಂಗಳೂರಿನವರು ಇವರ ತಂದೆ ಬಿಕೆ ಶಿವರಾಮ್ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಪೊಲೀಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮೂಲತಹ ಮಂಗಳೂರಿನವರಾದ ಸ್ಪಂದನ ಓದಿದ್ದು ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ. ಸ್ಪಂದನ ಅವರ ಕುಟುಂಬಸ್ಥರಿಗೆ ಈ ಈ ಸುದ್ದಿ ವಿ’ಷಾ’ದನೀಯ ಇಷ್ಟು ಬೇಗ ಈ ರೀತಿ ಆಗುತ್ತದೆ ಎಂದು ಯಾರೂ ಸಹ ಊಹೆ ಮಾಡಿರಲಿಲ್ಲ ಅಂತಹ ಸ್ಥಿತಿ ಈಗ ಕುಟುಂಬಸ್ಥರಿಗೆ ಎದುರಾಗಿದೆ. ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸೋಣ.