ಸದಾ ಒಂದಿಲ್ಲ ಒಂದು ವಿಚಾರವಾಗಿ ಪ್ರಧಾನಿ ಮೋದಿ (PM Narendra Modi) ಅವರ ಹೆಸರನ್ನು ಪ್ರಸ್ತಾಪಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi) ಇಸ್ರೇಲ್ ನಲ್ಲಿ (Israel) ನಡೆಯುತ್ತಿರುವ ಯುದ್ಧಕ್ಕೆ ಮಣಿಪುರ (Manipura) ವಿಚಾರವನ್ನು ತಳುಕು ಹಾಕುವ ಮೂಲಕ ಮತ್ತೊಮ್ಮೆ ಪ್ರಧಾನಿಗಳ ಮೇಲೆ ಹರಿಹಾಯ್ದಿದ್ದಾರೆ.
ಇದೇ ನವೆಂಬರ್ 7ರಂದು ಮಿಜೋರಾಂ ರಾಜ್ಯದಲ್ಲಿ ವಿಧಾನಸಭಾ (Mizoram Assembly Election-2023) ಚುನಾವಣೆ ಇದೆ, ಇದರ ಪ್ರಯುಕ್ತ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ರ್ಯಾಲಿಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿಯವರು ಅಲ್ಲಿನ ಸಭೆಯೊಂದರಲ್ಲಿ ಈ ರೀತಿ ಪ್ರಧಾನಿಗಳ ಮೇಲೆ ಆರೋಪಗಳ ಮಳೆಗರೆದಿದ್ದಾರೆ.
ಇಸ್ತ್ರೇಲ್ ಹಾಗೂ ಹಮಾಲ್ ನಡುವಿನ ಸಂಘರ್ಷದಲ್ಲಿ ಭಾರತ ಇಸ್ತ್ರೇಲ್ ಬೆಂಬಲಿಸಿರುವುದು ಮತ್ತು ಪ್ರಧಾನ ಮೋದಿಯವರೇ ಅಲ್ಲಿನ ವಿಚಾರಗಳ ಬಗ್ಗೆ ಮಾತನಾಡುತ್ತಿರುವುದನ್ನು ಕುಟುಕಿದ ರಾಹುಲ್ ಗಾಂಧಿಯವರು ಈಗಿನ ಭಾರತ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಸ್ತ್ರೆಲ್ ನ ವಿಚಾರವಾಗಿ ಬಹಳ ಆಸಕ್ತಿ ಹೊಂದಿದ್ದಾರೆ.
ಆದರೆ ಅದೇ ಆಸಕ್ತಿಯು ನಮ್ಮದೇ ರಾಜ್ಯವಾದ ಮಣಿಪುರದ ಮೇಲೆ ಯಾಕಿಲ್ಲ ಎನ್ನುವುದು ನನಗೆ ಬಹಳ ಆಶ್ಚರ್ಯವನ್ನುಂಟು ಮಾಡಿದೆ ಎನ್ನುವ ಹೇಳಿಕೆ ಕೊಟ್ಟು ಪ್ರಧಾನಿಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಮಣಿಪುರದ ಕಲ್ಪನೆಯನ್ನು BJP ಸರ್ಕಾರ ಸಂಪೂರ್ಣವಾಗಿ ಬದಲಾಯಿಸಿ ಬಿಟ್ಟಿದೆ.
ಮೆಣಪುರ ಈಗ ಒಂದು ರಾಜ್ಯವಾಗಿ ಉಳಿದಿಲ್ಲ, ಮೈತೇಯಿ ಮತ್ತು ಕುಕಿ (Mietei & Kuki relegion) ಸಮುದಾಯಗಳ ನಡುವೆ ನಡೆಯುತ್ತಿರುವ ಜನಾಂಗೀಯ ಸಂಘರ್ಷವೇ ರಾಜ್ಯವನ್ನು ಇಬ್ಬಾಗ ಮಾಡಿದೆ. ಮಣಿಪುರ ಈಗ 2 ರಾಜ್ಯವಾಗಿದೆ ಇಲ್ಲಿ ಜನರನ್ನು ಹ’ತ್ಯೆ ಮಾಡಲಾಗಿದೆ, ಮಹಿಳೆಯರಿಗೆ ಕಿ’ರು’ಕು’ಳ ನೀಡಲಾಗಿದೆ ಮತ್ತು ಮಕ್ಕಳನ್ನು ಕೊ’ಲ್ಲಲಾಗಿದೆ.
ಆದರೆ ಪ್ರಧಾನಿ ಮಾತ್ರ ಇಲ್ಲಿಗೆ ಭೇಟಿ ನೀಡಿಲ್ಲ. ಮೇ ತಿಂಗಳಲ್ಲಿ 2 ಸಮುದಾಯಗಳ ನಡುವೆ ಹಿಂಸಾಚಾರ ಆರಂಭವಾಗಿ ಪರಿಸ್ಥಿತಿ ಇಷ್ಟು ಹದಗೆಟ್ಟ ಮೇಲೂ ಕೂಡ ಪ್ರಧಾನಿ ಮೋದಿಯವರು ಇನ್ನೂ ಮಣಿಪುರ ರಾಜ್ಯಕ್ಕೆ ಭೇಟಿ ನೀಡದೆ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಮ್ಮ ಕೇಂದ್ರ ಸರ್ಕಾರದ ನಾಯಕರಿಗೆ ಇಂದಿಗೂ ಕೂಡ ಇಲ್ಲಿನ ಪರಿಸ್ಥಿತಿ ಬಗ್ಗೆ ಸರಿಯಾಗಿ ಮನವರಿಕೆಯಾಗಿಲ್ಲ.
ಮಣಿಪುರದ ಹಿಂ’ಸಾ’ಚಾ’ರ’ವು ಭಾರತದ ಕಲ್ಪನೆಯ ಮೇಲಿನ ಆಕ್ರಮಣ ಮತ್ತು ದೇಶದ ಜನರ ಮೇಲಿನ ದಬ್ಬಾಳಿಕೆಯಾಗಿದೆ. ಯಾವುದೇ ರಾಷ್ಟ್ರೀಯ ಮಾಧ್ಯಮಗಳು ಕೂಡ ಮಣಿಪುರದ ಬಗ್ಗೆ ನೈಜ ಚಿತ್ರಣವನ್ನು ನೀಡಿಲ್ಲ. BJP ಯವರು ವಿವಿಧ ಸಮುದಾಯಗಳು, ಧರ್ಮಗಳು ಮತ್ತು ಭಾಷೆಗಳ ಮೇಲೆ ದಾಳಿ ನಡೆಸುತ್ತಾರೆ.
ಅಲ್ಲದೆ, ತಮ್ಮ ದುರಹಂಕಾರ, ತಿಳುವಳಿಕೆಯ ಕೊರತೆಯಿಂದಾಗಿ ದೇಶದಲ್ಲಿ ದ್ವೇ’ಷ ಮತ್ತು ಹಿಂ’ಸಾ’ಚಾ’ರವನ್ನು ಹರಡುತ್ತಾರೆ. ಇದು ಭಾರತ ಎನ್ನುವ ಕಲ್ಪನೆಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿಯವರು ನಮ್ಮ ಪಕ್ಷವು ಭಾರತ್ ಜೋಡೊ ಮೂಲಕ ದೇಶವನ್ನು ಒಂದುಗೂಡಿಸುತ್ತಿದ್ದೆ ಎಂದರು.
ರಾಹುಲ್ ಗಾಂಧಿ ಅವರು ಸೋಮವಾರ ನಡೆದ ಈ ಕಾಂಗ್ರೆಸ್ ರ್ಯಾಲಿಯಲ್ಲಿ ಐಜ್ವಾಲ್‌ನಲ್ಲಿನ ಚನ್ಮರಿ ಜಂಕ್ಷನ್‌ನಿಂದ ರಾಜಭವನದವರೆಗೆ ಸುಮಾರು 2 ಕಿ.ಮೀ ಗಳಷ್ಟು ಕಾಲ್ನಡಿಗೆಯಲ್ಲಿ ಪಾದಯಾತ್ರೆ ನಡೆಸಿದರು.
ದಾರಿಯುವುದಕ್ಕೂ ರಾಹುಲ್ ಗಾಂಧಿಯವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಯುವಕ ಯುವತಿ ಹಾಗೂ ವೃದ್ಧರು ಮುಗಿಬಿದ್ದಿದ್ದರು. ಇನ್ನೂ ಎರಡು ದಿನಗಳ ಭೇಟಿಗಾಗಿ ಅವರು ಮಿಜೋರಾಂನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. 40 ಸದಸ್ಯ ಬಲದ ಮಿಜೋರಾಂ ನ ವಿಧಾನಸಭಾ ಚುನಾವಣೆ ಮೇಲೆ ರಾಗಾ ಈಗ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ.