ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸಂತೋಷ್ (Thukali Santhosh) ರವರು ಇದೀಕ ಬಿಗ್ ಬಾಸ್ ಸಂತೋಷ್ ಆಗಿದ್ದಾರೆನ್ನಬಹುದು. ಬಿಗ್ ಬಾಸ್ 10ನೇ ಆವೃತ್ತಿಯ ಕಂಟೆಸ್ಟೆಂಟ್ ಆಗಿ ಬಿಗ್ ಮನೆ ಸೇರಿರುವ ಕಾಮಿಡಿ ಆಕ್ಟರ್ ತುಕಾಲಿ ಸಂತೋಷ ರವರ ಇಮೇಜ್ ಈಗ ನೆಗೆಟಿವ್ ಶೇಡ್ ಗೆ ಬದಲಾಗುತ್ತಿದೆ.
ಮನೆಯಲ್ಲಿ ಈ ರೀತಿ ವ್ಯತ್ಯಾಸಗಳು ಕಾಮನ್ ಆದರೂ ಇದಕ್ಕೆಲ್ಲ ಮೊದಲನೇ ವಾರದಲ್ಲಿ ಅವರೇ ಮಾಡಿಕೊಂಡ ಎಡವಟ್ಟುಗಳೇ ಕಾರಣವಾಗಿದೆ. ಡ್ರೋನ್ ಪ್ರತಾಪ್ ರವರ (tease to Drone Prathap) ಕಾಲೆಳೆಯುವ ಬರದಲ್ಲಿ ಅಟ್ಟಹಾಸ ಮೆರೆದ ಕಾಮಿಡಿ ಉಲ್ಟಾ ಹೊಡೆದು ಮನೆಯಲ್ಲಿ ಎಲ್ಲರಿಂದ ವಿಲನ್, ಖಾಲಿ ಡಬ್ಬ ಇತ್ಯಾದಿ ಬಿರುದುಗಳನ್ನು ಪಡೆಯಬೇಕಾಗಿ ಬಂತು.
ಇದಲ್ಲದೆ ವಾರಾಂತ್ಯದಲ್ಲಿ ಬಂದ ಕಿಚ್ಚ ಸುದೀಪ್ (Kicha Sudeep) ಅವರು ಸರಿಯಾಗಿ ಕ್ಲಾಸ್ ತೆಗೆದುಕೊಂಡು ಅವರು ಮಾಡಿದ ತಪ್ಪು ಅರಿವಾಗುವಂತೆ ಅರ್ಥ ಮಾಡಿಸಿದ್ದಾರೆ. ಅದಾದ ಮೇಲೂ ಈಗ ಬಿಗ್ ಬಾಸ್ ಮನೆಯೊಳಗೆ ನಡೆಯುತ್ತಿರುವ ಆಟವನ್ನು ನೋಡಿದರೆ ಮೊದಲ ವಾರದ ಪರಿಣಾಮ ಇನ್ನು ತಿಳಿಯಾದಂತಿಲ್ಲ, ಇನ್ನು ಸಹ ತುಕಾಲಿ ಸಂತೋಷವನ್ನು ವಿಲನ್ ಆಗಿಯೇ ಕಾಣಿಸುತ್ತಿದ್ದಾರೆ.
ಸಾಲದಕ್ಕೆ ಬಿಗ್ ಬಾಸ್ ಹೊರಗೂ ಕೂಡ ತುಕಾಲಿ ಸಂತೋಷ್ ಮೇಲೆ ಆರೋಪಗಳು ಕೇಳಿ ಬರುತ್ತಿವೆ. ನಿರ್ದೇಶಕ ಯತಿರಾಜ್ (Yathiraj) ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಸತ್ಯಂ ಶಿವಂ (Sathyam Shivam Movie) ಚಿತ್ರತಂಡ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯತಿರಾಜ್ ತುಕಾಲಿ ಸಂತೋಷ್ ಅವರ ಕಾಟ ತಡೆಯಲಾರದೆ ಸಿನಿಮಾದಿಂದ ಅವರನ್ನು ತೆಗೆದು ಹಾಕಿದ್ದರ ಬಗ್ಗೆ ಮಾಧ್ಯಮಗಳೊಂದಿಗೆ ವಿವರಿಸಿದ್ದಾರೆ.
ಈ ವಿಚಾರವನ್ನು ಹೇಳಬಾರದು ಎಂದುಕೊಂಡಿದ್ದೆ ಆದರೆ ಬಿಗ್ ಬಾಸ್ ಮನೆಯೊಳಗಿನ ಅವರ ಆಟ ನೋಡಿದ ಮೇಲೆ ಮಾತನಾಡಬೇಕು ಎನಿಸುತ್ತಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಡೋರ್ ಓಪನ್ ಮಾಡಲ್ಲ ಹಾಗಾಗಿ ಅವರು ಇನ್ನು ಅಲ್ಲಿಯೇ ಉಳಿದುಕೊಂಡಿದ್ದಾರೆ. ಇಲ್ಲವಾದರೆ ನಮ್ಮ ಸಿನಿಮಾಗೆ ಕೈ ಕೊಟ್ಟ ತರಹ ಅರ್ಧಕ್ಕೆ ಹೋಗಿರುತ್ತಿದ್ದರು.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅವರು ಹೇಳಿರುವ ಸುಳ್ಳುಗಳು ಮತ್ತು ಮಾಡಿರುವ ತಪ್ಪುಗಳ ಆಧಾರದ ಮೇಲೆ ಸುದೀಪ್ ಅವರು ಒಂದರಿಂದ ಹತ್ತರ ಒಳಗಡೆ ಅಂಕ ಕೊಟ್ಟುಕೊಳ್ಳಿ ಎಂದು ಹೇಳಿದ್ದರು ಅವರೇ ಒಪ್ಪಿಕೊಂಡು ಎರಡು ಅಂಕಗಳನ್ನು ಕೊಟ್ಟು ಕೊಂಡಿದ್ದಾರೆ.
ಈ ವಿಷಯವನ್ನು ಮಾತನಾಡಬಾರದು ಎಂದುಕೊಂಡಿದ್ದೆ ಆದರೂ ಹೇಳುತ್ತೇನೆ. ನಮ್ಮ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ಅವರು ಇರಬೇಕಿತ್ತು ಆದರೆ ನಾವೇ ತೆಗೆದು ಹಾಕಿದ್ದೇವೆ, ಅರ್ಧ ಸಿನಿಮಾದಿಂದ ಅವರನ್ನು ಬೇಕೆಂದೇ ಕೈಬಿಟ್ಟಿದ್ದೇವೆ. ನಮ್ಮ ಅವರ ಕಿ’ತ್ತಾ’ಟ ಹೊ’ಡೆ’ದಾ’ಟ ಆಗುವ ಮಟ್ಟಕ್ಕೆ ತಲುಪಿತ್ತು.
ಅವರು ಅಷ್ಟು ತೊಂದರೆ ಕೊಟ್ಟಿದ್ದರು. ನಾನು 20 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ ಇದ್ದುಕೊಂಡು ತಕ್ಕಮಟ್ಟಿಗೆ ಕಷ್ಟಪಟ್ಟು ಒಂದು ಸಿನಿಮಾವನ್ನು ಡೈರೆಕ್ಟ್ ಮಾಡುತ್ತಿದ್ದೇನೆ, ಇಂತಹ ಸಂದರ್ಭದಲ್ಲಿ ಅವರನ್ನು ಪಾತ್ರ ಒಂದಕ್ಕೆ ಹಾಕಿಕೊಂಡ ಮೇಲೆ ಒಬ್ಬ ಕಲಾವಿದನಾಗಿದ್ದು ಅವರೇ ಬಂದು ಅವಾಯ್ಡ್ ಮಾಡಿ ಅಂತ ಹೇಳುತ್ತಿದ್ದರು, ಕಥೆ ಬರೆಯುವಾಗ ಇದನ್ನೆಲ್ಲಾ ಲೆಕ್ಕಾಚಾರ ಮಾಡಿರುತ್ತೇವಾ ಬಹಳ ನೋವಾಗುತ್ತದೆ ಎಂದವರು ಹೇಳಿಕೊಂಡರು.
ಮನೆಯೊಳಗೆ ತಮ್ಮ ವಿಪರೀತವಾದ ವರ್ತನೆಯಿಂದ ಹಾಗೂ ಟಾಂಟ್ ರೀತಿ ಮಾತುಗಳಿಂದ ಮನೆಯವರಿಗೆಲ್ಲಾ ವಿಲನ್ ಆಗಿ ಕಾಣಿಸುತ್ತಿರುವ ತುಕಾಲಿ ಸಂತೋಷ್ ರವರು ನಿರ್ದೇಶಕರು ಕೊಟ್ಟಿರುವ ಹೇಳಿಕೆಯಿಂದ ಹೊರಗಿನವರ ಕಣ್ಣಿನಲ್ಲಿ ಹೀಗೆ ಬಿಂಬಿತವಾಗುತ್ತಿದ್ದಾರೆ. ಇದು ಬಿಗ್ ಬಾಸ್ ಮನೆಯಲ್ಲಿ ಅವರ ಆಟಕ್ಕೆ ಎಷ್ಟು ಎಫೆಕ್ಟ್ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಕಾದು ನೋಡೋಣ...