ಮಹಿಳೆಯರಿಗೆ ಉಚಿತ ಪ್ರಯಾಣದ ಪರಿಣಾಮವಾಗಿ ಬಸ್ ಹತ್ತಲು ಹೋದ ಮಹಿಳೆಯರು ಬಸ್ ಬಾಗಿಲನ್ನೇ ಮುರಿದು ಹಾಕಿದ್ದಾರೆ.

ಕಾಂಗ್ರೆಸ್ ಸರ್ಕಾರದ 5 ಪ್ರಮುಖ ಯೋಜನೆಗಳಲ್ಲಿ ಸ್ತ್ರೀ ಶಕ್ತಿ ಯೋಜನೆಯು ಪ್ರಮುಖವಾಗಿದ್ದು ಇದರ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಕಲ್ಪಿಸಿಕೊಡಲಾಗಿತ್ತು ಇದರ ಪರಿಣಾಮವಾಗಿ ಉಚಿತ ಪ್ರಯಾಣದ ಬಸ್ ಹತ್ತಲುಬಂದ ಮಹಿಳೆಯರು ನೂಕುನುಗ್ಗಲಿನಿಂದಾಗಿ ಬಸ್ ಬಾಗಿಲನ್ನೇ ಮುರಿದು ಹಾಕಿರುವಂತಹ ಘಟನೆ ಇದೀಗ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಕಂಡು ಬಂದಿದೆ. ಇವತ್ತಿಗೆ ಸರಿಯಾಗಿ 8 ದಿನಗಳ ಹಿಂದೆ ರಾಜ್ಯ ಸರ್ಕಾರ ನಾರಿ ಶಕ್ತಿ ಯೋಜನೆ ಜಾರಿಗೆ ತಂದು ಎಲ್ಲಿಂದ ಎಲ್ಲಿಗೆ ಹೋದರು ಸಹ ಉಚಿತ ಬಸ್ ಪ್ರಯಾಣ ನಡೆಸಬಹುದು ಎಂದು ಹೇಳಲಾಗಿತ್ತು ಆದ್ದರಿಂದ ಮಹಿಳೆಯರು ಮೂಲೆ ಮೂಲೆಯಿಂದಲೂ ಸಹ ಪ್ರಯಾಣವನ್ನು ಬೆಳೆಸಿದ್ದಾರೆ.

ಬಸ್ ಗಾಗಿ ಮುಗಿಬಿದ್ದಿರುವಂತಹ ಮಹಿಳೆಯರು ಪ್ರವಾಸವನ್ನು ಸಹ ಕೈಗೊಂಡಿದ್ದಾರೆ. ಇಂದು ಮೊದಲ ವೀಕೆಂಡ್ ಆಗಿರುವುದರಿಂದ ಸ್ತ್ರೀಯರು ಉಚಿತ ಬಸ್ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಉಚಿತ ಮಹಿಳಾ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ ವೀಕೆಂಡ್ ಆದ ಕಾರಣದಿಂದಾಗಿ ಮಹಿಳೆಯರ ಪ್ರಯಾಣದ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ ಕಲ್ಪಿಸಿರುವ ಕಾರಣದಿಂದಾಗಿ ಇದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಸಾರ್ವಜನಿಕ ಬಸ್ ನ ಬಾಗಿಲನ್ನೇ ಮುರಿದು ಹಾಕಿರುವಂತಹ ಘಟನೆ ಇದೀಗ ಚಾಮರಾಜನಗರ ಜಿಲ್ಲೆಯ ಕಳ್ಳೇಗಾಲ ತಾಲೂಕಿನಲ್ಲಿ ಕಂಡು ಬಂದಿದೆ ಬಸ್ ಹತ್ತಲು ನೂಕು ನುಗ್ಗಲು ಮಾಡಿದ್ದಾರೆ.

ಮಹಿಳೆಯರು ನೂಕು ನುಗ್ಗಲಿಗೆ ಬಸ್‌ ಡೋರ್ ಮುರಿದು ಹೋಗಿದೆ ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದಂತಹ ಬಸ್ ಹತ್ತಲು ಹೋದ ಮಹಿಳೆಯರು ಸೀಟ್ ಅನ್ನು ಹಿಡಿಯುವಂತಹ ದಾವಂತದಲ್ಲಿ ಬಸ್ ನ ಬಾಗಿಲನ್ನೇ ಮುರಿದು ಹಾಕಿದ್ದಾರೆ ಮುರಿದ ಡೋರನ್ನು ಹಿಡಿದು ನಿಂತಿರುವಂತಹ ನಿರ್ವಾಹಕನ ಪರಿಸ್ಥಿತಿ ಹೇಳಲು ಅಸಾಧ್ಯ. ಬಸ್ ನಲ್ಲಿ ಮಹಿಳೆಯರೇ ತುಂಬಿಕೊಂಡಿದ್ದರಿಂದ ಕಂಡಕ್ಟರ್ಗೂ ಸಹ ಹತ್ತಲು ಸ್ಥಳವಿಲ್ಲದ ರೀತಿಯಲ್ಲಿ ಮಹಿಳೆಯರ ದಂಡು ಬಸ್ನಲ್ಲಿ ತುಂಬಿತ್ತು. ಇದೀಗ ಸಾರ್ವಜನಿಕ ಬಸ್‌ ಚಾಲಕರು ಮತ್ತು ಕಂಡಕ್ಟರ್ ಗಳಿಗೆ ತಲೆ ಬಿಸಿಯಾಗಿದೆ ಯಾವ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎನ್ನುವಂತಹ ತಲೆಬಿಸಿಯಲ್ಲಿ ಸಾರ್ವಜನಿಕ ಬಸ್ ನ ಕಂಡಕ್ಟರ್ ಯೋಚಿಸುತ್ತಿದ್ದಾರೆ.

ಶಕ್ತಿ ಯೋಜನೆಯ ಅಸಲಿ ಶಕ್ತಿ ಇದೆ ಎಂದು ಹೇಳಬಹುದು ಮಹಿಳೆಯರ ಶಕ್ತಿ ಎಂತಹದು ಎಂದು ಈ ದೃಶ್ಯವನ್ನು ನೋಡಿದರೆ ನಮಗೆ ಕಂಡುಬರುತ್ತದೆ ಕೇವಲ ಬಸ್ ನ ಡೋರ್ ಮಾತ್ರವಲ್ಲದೆ ಬಸ್ ಕಿಟಕಿಗೆ ಇರುವಂತಹ ಗ್ರಿಲ್ಗಳು ಸಹ ಮುರಿದು ಹೋಗಿವೆ. ಒಂದೇ ಬಸ್ಸನ್ನು ಹತ್ತಲು ಹೋದಂತಹ ಮಹಿಳೆಯರಿಂದಾಗಿ ಈ ಒಂದು ಘಟನೆ ಕಂಡುಬಂದಿದ್ದು ಈ ರೀತಿಯಾಗಿ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ ಇದರ ಪರಿಣಾಮವಾಗಿ ಮುಂದೆ ಯಾವ ರೀತಿಯಾದಂತಹ ಕ್ರಮಗಳು ಸರ್ಕಾರವು ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕು.

ಇದೇ ರೀತಿಯಾಗಿ ಮುಂದುವರೆದರೆ ಸರ್ಕಾರವು ಕಟ್ಟುನಿಟ್ಟುನ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಎರಡು ಮಾತಿಲ್ಲ ಈ ಯೋಜನೆ ಎಷ್ಟು ದಿನದವರೆಗೆ ಮುಂದುವರೆದುಕೊಂಡು ಹೋಗುತ್ತದೆ ಎನ್ನುವಂತಹ ಸಂದೇಹ ಎಲ್ಲರಲ್ಲಿಯೂ ಮನೆ ಮಾಡಿದೆ. ಎಲ್ಲ ಸಾರ್ವಜನಿಕ ಬಸ್ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು ಪುರುಷರ ಸಂಖ್ಯೆ ಕಡಿಮೆಯಾಗಿದೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸಲುವಾಗಿ ಇನ್ನು ಯಾವ ರೀತಿಯಾದಂತಹ ಪರಿಸ್ಥಿತಿಗಳು ಏರ್ಪಡುತ್ತವೆ ಎಂದು ಕಾದು ನೋಡಬೇಕು. ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

Leave a Comment