ಸರ್ಕಾರವು ಘೋಷಣೆ ಮಾಡಿರುವಂತಹ ಐದು ಪ್ರಮುಖ ಗ್ಯಾರಂಟಿಗಳಲ್ಲಿ ಗೃಹಜೋತಿ ಯೋಜನೆಯು ಬಹಳ ಪ್ರಮುಖವಾದಂತಹದ್ದು. ಗೃಹಜೋತಿ ಯೋಜನೆಯನ್ನು ಜೂನ್ 18ರಿಂದ ಪ್ರಾರಂಭ ಮಾಡಲಿದ್ದು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಪ್ರತಿಯೊಬ್ಬರೂ ಸಹ ಅರ್ಜಿಯನ್ನು ಸಲ್ಲಿಸಿ 200 ಯೂನಿಟ್ ಉಚಿತವಾದಂತಹ ವಿದ್ಯುತ್ತನ್ನು ಪಡೆದುಕೊಳ್ಳಿ. ಈ ಹಿಂದೆ ಸರ್ಕಾರವು ಅಮೃತ ಜ್ಯೋತಿ ಎಂಬ ಯೋಜನೆಯ ಅಡಿಯಲ್ಲಿ ಎಸ್ ಸಿ ಎಸ್ ಟಿ ಗ್ರಾಹಕರಿಗೆ 75 ಯೂನಿಟ್ ಉಚಿತ ವಿದ್ಯುತ್ತನ್ನು ನೀಡಲಾಗುತ್ತಿತ್ತು ಆಫ್ ಲೈನ್ ಮತ್ತು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಿತ್ತು.
ಅದೇ ರೀತಿಯಾಗಿ ಗೃಹಜೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಅಪ್ಲಿಕೇಶನ್ ಅನ್ನು ಯಾವ ರೀತಿ ಫಿಲ್ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ತಿಳಿಸುತ್ತೇವೆ. ಈ ಹಿಂದೆ ಅಮೃತ ಜ್ಯೋತಿ ಎಂಬ ಯೋಚನೆಯಲ್ಲಿ ಯಾವ ರೀತಿ ಅಪ್ಲಿಕೇಶನ್ ನಲ್ಲಿ ಮಾಹಿತಿಯನ್ನು ನೀಡಲಾಗಿತ್ತು ಅದೇ ರೀತಿಯಾಗಿ ಗೃಹಜೋತಿಗೂ ಮಾಹಿತಿಯನ್ನು ಒದಗಿಸಬೇಕಾಗುತ್ತದೆ ಕೆಲವೊಂದು ಬದಲಾವಣೆಗಳು ಕಂಡುಬರುತ್ತದೆ.
ಗೃಹಜೋತಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಲು ಮೊದಲು ಸೇವಾ ಸಿಂಧು ಪೋರ್ಟಲ್ಲ್ ನಲ್ಲಿ ಹೋಗಿ ರಿಜಿಸ್ಟರ್ ಆಗಿ ಲಾಗಿನ್ ಮಾಡಿಕೊಳ್ಳಿ ನಂತರ ಸರ್ಚ್ ನಲ್ಲಿ ಹೋಗಿ ಎನರ್ಜಿ ಎಂದು ನೀವು ಟೈಪ್ ಮಾಡಿ ಈ ಹಿಂದೆ ಅಮೃತ ಜ್ಯೋತಿ ಅಪ್ಲಿಕೇಶನ್ ನನ್ನು ಯಾವ ರೀತಿಯಾಗಿ ಫಿಲ್ ಮಾಡಿದ್ದೀರೋ ಅದೇ ರೀತಿಯಾಗಿ ಈ ಒಂದು ಗೃಹಜ್ಯೋತಿ ಯೋಜನೆಗೂ ಸಹ ಅದರದ್ದೇ ಆದಂತಹ ಒಂದು ಮಾಹಿತಿಯನ್ನು ನೀಡಿ ನೀವು ಅಪ್ಲಿಕೇಶನ್ ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ.
ತಾಂತ್ರಿಕ ದೋಷದಿಂದ ಗೃಹಜೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ ಗೃಹಜೋತಿ ಯೋಜನೆಗೆ ಜೂನ್ 18 ರಿಂದ ನೊಂದಣಿ ಪ್ರಕ್ರಿಯೆ ಶುರುವಾಗಲಿದೆ ಎಂದು ಇಂಧನ ಇಲಾಖೆ ಮಾಹಿತಿಯನ್ನು ನೀಡಿದೆ ಈ ಕುರಿತು ಇಂಧನ ಇಲಾಖೆ ಅಧಿಕೃತ ಆದೇಶ ಬಿಡುಗಡೆ ಮಾಡಿದ್ದು ಆಗಸ್ಟ್ 1 ರಿಂದ ಗೃಹ ಜ್ಯೋತಿ ಯೋಜನೆ ಅಧಿಕೃತವಾಗಿ ಜಾರಿಗೆ ಬರಲಿದೆ ಆದರೆ ಅಡೆತಡೆಗಳ ಕಾರಣ ಜೂನ್ 15ರಿಂದ ಪ್ರಾರಂಭವಾಗಬೇಕಿದ್ದ ನೋಂದಣಿ ಕಾರ್ಯ ಜೂನ್ 18ರಿಂದ ಪ್ರಾರಂಭ ಆಗಲಿದೆ ಎಂದು ತಿಳಿಸಲಾಗಿದೆ.
ಗೃಹಜೋತಿ ಯೋಜನೆಗೆ ನೋಂದಾಯಿಸಲು ಸೇವಾ ಸಿಂಧು ಪೋರ್ಟಲ್ ನಲ್ಲಿ ಸಾರ್ವಜನಿಕರಿಗೆ ಅವಕಾಶವನ್ನು ನೀಡಲಾಗಿದೆ ಜುಲೈ ತಿಂಗಳ ವಿದ್ಯುತ್ ಬಿಲ್ ಮುಲಕ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ ಗೃಹಜೋತಿ ಯೋಜನೆ ಯ ಲಾಭ ಪಡೆಯಲು ಇಚ್ಛಿಸುವ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ಲಿ ಮೊಬೈಲ್ ಫೋನ್, ಕಂಪ್ಯೂಟರ್, ಲ್ಯಾಪ್ಟಾಪ್ ಗಳ ಮೂಲಕ ಸರಳವಾಗಿ ನೋಂದಾಯಿಸಿಕೊಳ್ಳಬಹುದು.
ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ಅಥವಾ ಯಾವುದೇ ವಿದ್ಯುತ್ ಕಚೇರಿಗಳಲ್ಲಿಯೂ ಸಹ ನೊಂದಣಿ ಮಾಡಿಸಿಕೊಳ್ಳಬಹುದಾಗಿದೆ. ಜನಸಾಮಾನ್ಯರು ಹೆಚ್ಚಿನ ಮಾಹಿತಿಗಾಗಿ ಅಗತ್ಯವಿದ್ದರೆ ವಿದ್ಯುತ್ ಶಕ್ತಿ ಕಚೇರಿ ಅಥವಾ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ 1912 ಕರೆ ಮಾಡಬಹುದು ಗೃಹಜೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವಂತಹ ಮುಖ್ಯ ದಾಖಲಾತಿಗಳು ಆಧಾರ್ ಕಾರ್ಡ್ ಮತ್ತು ಗ್ರಾಹಕರ ಐಡಿ ಕಾರ್ಡ್ ಗಳನ್ನು ನೀವು ನೀಡಬೇಕಾಗುತ್ತದೆ. ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.