Thursday, September 28, 2023
Home Entertainment ಒಬ್ಬ ಶ್ರೀಮಂತ ತಂದೆ ತನ್ನ ಪಾದರಕ್ಷೆಗಳನ್ನು ಮಗನಿಗೆ ನೀಡಿ ಹೇಳಿದಂತಹ ಮಾತುಗಳನ್ನು ಕೇಳಿದರೆ ನಿಜಕ್ಕೂ ಕಣ್ಣಲ್ಲಿ...

ಒಬ್ಬ ಶ್ರೀಮಂತ ತಂದೆ ತನ್ನ ಪಾದರಕ್ಷೆಗಳನ್ನು ಮಗನಿಗೆ ನೀಡಿ ಹೇಳಿದಂತಹ ಮಾತುಗಳನ್ನು ಕೇಳಿದರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ.

ಒಬ್ಬ ಶ್ರೀಮಂತ ತನ್ನ ಮುದ್ದು ಮಗನಿಗೆ ಸಾ’ಯು’ವ ಸಮಯದಲ್ಲಿ ವಿಲ್ ಪತ್ರದ ಜೊತೆ ತನ್ನ ಪಾದರಕ್ಷೆ ಗಳನ್ನು ನೀಡಿ ಹೇಳಿದ ವಿಲ್ ಪತ್ರದಲ್ಲಿ ನಿನಗೆ ನನ್ನೆಲ್ಲಾ ಆಸ್ತಿಯನ್ನು ಬರೆದಿದ್ದೇನೆ. ನೀನು ಸುಖವಾಗಿ ಬಾಳು ಆದರೆ ನನ್ನ ಕೊನೆಯ ಆಸೆಯೊಂದಿದೆ ಅದನ್ನು ನೆರವೇರಿಸು ಅಷ್ಟು ಸಾಕು. ಅದೇನೆಂದರೆ ನಾನು ಸ’ತ್ತ ಮೇಲೆ ನನ್ನ ಪಾದಕ್ಕೆ ಈ ಹಳೆಯ ಚಪ್ಪಲಿಯನ್ನು ತೊಡಿಸಿ ಅಂ’ತ್ಯ ಕ್ರಿ’ಯೆ ನೆರವೇರಿಸು ಎಂದು ಹೇಳುತ್ತಾನೆ. ಮಗ ತನ್ನ ಕೆನ್ನೆಯ ಮೇಲೆ ಜಾರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಈ ಸಣ್ಣ ಆಸೆಯನ್ನು ನಾನು ಖಂಡಿತ ನೆರವೆರಿಸುತ್ತೇನೆ ಎಂದು ಅಪ್ಪನಿಗೆ ಮಾತು ಕೊಡುತ್ತಾನೆ.

ತಂದೆಯು ಕೊ’ನೆ’ಯು’ಸಿ’ರೆಳೆದ ದಿನ ವಿಧಿ ವಿಧಾನ ಕಾರ್ಯಗಳನ್ನು ಮಾಡಿದ ಪಂಡಿತರಿಗೆ ಮಗ ಅಪ್ಪನಿಗೆ ಹಳೆಯ ಚಪ್ಪಲಿ ತೊಡಿಸಲು ಕೋರುತ್ತಾನೆ. ಆದರೆ ಪಂಡಿತರು ಸಾಧ್ಯವೇ ಇಲ್ಲ ಇದು ನಮ್ಮ ಅಂ’ತ್ಯ’ಕ್ರಿಯೆ ಸಂಪ್ರದಾಯದಲ್ಲೇ ಇಲ್ಲವೆಂದು ನಿರಾಕರಿಸುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರು ಆ ಶ್ರೀಮಂತ ವ್ಯಕ್ತಿಗೆ ಹಳೆಯ ಚಪ್ಪಲಿ ತೊಡಿಸಲು ಸಾಧ್ಯವೇ ಆಗುವುದಿಲ್ಲ ಈ ವಿಚಾರವಾಗಿ ಸಂಬಂಧಿಕರು, ಊರಿನ ಹಿರಿಯ ಮುಖಂಡರು ಬುದ್ಧಿವಂತರು ಇತರೆ ಎಲ್ಲರೂ ಸೇರಿ ಈ ವಿಷಯದ ಕುರಿತು ಚರ್ಚಿಸುತ್ತಿರುತ್ತಾರೆ.

ಅಷ್ಟರಲ್ಲಿ ಅಲ್ಲಿಗೆ ಓಡೋಡಿ ಬಂದ ಆ ಶ್ರೀಮಂತನ ಸ್ನೇಹಿತ ಮಗನಿಗೆ ಪತ್ರ ನೀಡಿ ಹೇಳುತ್ತಾನೆ ನಿಮ್ಮ ತಂದೆಯವರು ಕೆಲ ದಿನಗಳ ಹಿಂದೆ ನನ್ನನ್ನು ಕರೆದು ಈ ಪತ್ರವನ್ನು ನನ್ನ ಮಗನಿಗೆ ನನ್ನ ಅಂ’ತ್ಯ ಸಂ’ಸ್ಕಾ’ರದ ಕೊನೆಗಳಿಗೆಯಲ್ಲಿ ನೀಡಲು ತಿಳಿಸಿದ್ದರು ಎಂದು ಹೇಳುತ್ತಾನೆ ತುಂಬಾ ಕೂತುಹಲದಿಂದ ಆ ಪತ್ರವನ್ನು ತೆರೆದು ನೋಡಿದಾಗ ಅವರ ತಂದೆ ಬರೆದಿರುತ್ತಾರೆ ಪ್ರಿಯ ಪುತ್ರನೇ ನೋಡಿದೆಯಾ ದೊಡ್ಡ ಫ್ಯಾಕ್ಟರಿ ಭವ್ಯ ಬಂಗಲೆ ಕಾರು ಚಿನ್ನ ಒಡವೆ ಫಾರಂ ಹೌಸ್ ಇದೆಲ್ಲರ ಒಡೆಯನಾಗಿದ್ದರೂ ನಾನು ಒಂದು ಜೊತೆ ಹಳೆಯ ಚಪ್ಪಲಿಯನ್ನು ಕೂಡ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಇಷ್ಟೇ ಬದುಕಿನ ಸತ್ಯ.

ನಿನಗೂ ಒಂದು ದಿನ ಸಾ’ವು ಹತ್ತಿರವಾಗುತ್ತದೆ ನೀನು ಕೇವಲ ಬಿಳಿ ಬಟ್ಟೆಯಲ್ಲಿ ಇಹಲೋಕ ತ್ಯ’ಜಿ’ಸ’ಬೇಕು ಈಗಲೇ ಎಚ್ಚರಗೊಳ್ಳು ದುಡ್ಡಿಗಾಗಿ ಯಾರನ್ನು ನೋಯಿಸಬೇಡ ಪೀಡಿಸಬೇಡ ಅನ್ಯಾಯ ಮತ್ತು ಅಧರ್ಮದಿಂದ ಹಣ ಸಂಪಾದನೆ ಮಾಡಬೇಡ ನೀನು ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ನಿರ್ಗತಿಕರಿಗೆ ಇಲ್ಲದವರಿಗೆ ದಾನ ಮಾಡು ಸತ್ಕಾರ್ಯಗಳಿಗೆ ಹಣವನ್ನು ಬಳಸು ಸ’ತ್ತಾ’ಗ ನಿನ್ನ ಹಿಂದೆ ಬರುವುದು ನಿನ್ನ ಕರ್ಮಗಳು ಮಾತ್ರ ಎಂದು ಪತ್ರ ಮುಗಿಸುತ್ತಾನೆ ಈ ಪತ್ರ ಓದುತ್ತಾ ಕಣ್ಣುಗಳು ತುಂಬಿ ಬಂದವು‌. ಮನುಷ್ಯ ಎಷ್ಟೇ ಗಳಿಸಿದರು ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ಏನೇ ಆಗಿದ್ದರೂ ಯಾಕಿಷ್ಟು ಅಹಂಕಾರ, ನೀ’ಚ’ತನ ಕ್ರೂ’ರ’ತನ. ಮನುಷ್ಯ ಎಷ್ಟೇ ಆಸ್ತಿ ಹಣ್ಣ ಹಂತಸ್ತು ಗಳಿಸಿದರು ಸಹ ತನ್ನೊಂದಿಗೆ ಏನನ್ನು ಕೊಂಡೊಯುವುದಿಲ್ಲ ಎನ್ನುವುದಕ್ಕೆ ಇದು ಒಂದು ಉತ್ತಮ ಉದಾಹರಣೆ.

ಆದ್ದರಿಂದ ನಾವು ಇರುವವರೆಗೂ ಸಹ ನಾಲ್ಕು ಜನರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡರೆ ಜನರು ನಮ್ಮನ್ನು ಸ್ಮರಿಸುತ್ತಾರೆ ನಾವು ಗಳಿಸಿದಂತಹ ಆಸ್ತಿ ಹಣ ಎಂದು ನಮ್ಮ ಜೊತೆಯಲ್ಲಿ ಬರುವುದಿಲ್ಲ ಬದಲಿಕ್ಕೆ ಕಳಿಸಿದಂತಹ ಪ್ರೀತಿ ವಿಶ್ವಾಸ ಇದು ನಮ್ಮ ಜೊತೆಗೆ ಬರುತ್ತದೆ ನಾವು ಇಹಲೋಕವನ್ನು ತ್ಯ’ಜಿ’ಸಿದ ನಂತರವೂ ನಮ್ಮ ಉತ್ತಮವಾದಂತಹ ಕಾರ್ಯಗಳನ್ನು ಜನರು ಸ್ಮರಿಸುತ್ತಾರೆ. ಆದ್ದರಿಂದ ಇರುವ ನಾಲ್ಕು ದಿನಗಳಲ್ಲಿ ನಾವು ನಾಲ್ಕು ಜನರಿಗೆ ಸಹಾಯವನ್ನು ಮಾಡಿ ಹೋಗಬೇಕು. ಈ ಜೀವನ ಪಾಠ ನಿಮಗೆ ಇಷ್ಟ ಆದರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

- Advertisment -