Tuesday, October 3, 2023
Home Entertainment ಬೀದಿ ಬಳಿ ನಿಂತು ತರಕಾರಿ ಸೊಪ್ಪು ಮಾರುತ್ತಿರುವ ನಟಿ ಹರ್ಷಿಕಾ ಪೂಣಚ್ಚ, ಕಾರಣವೇನು ಗೊತ್ತ.?

ಬೀದಿ ಬಳಿ ನಿಂತು ತರಕಾರಿ ಸೊಪ್ಪು ಮಾರುತ್ತಿರುವ ನಟಿ ಹರ್ಷಿಕಾ ಪೂಣಚ್ಚ, ಕಾರಣವೇನು ಗೊತ್ತ.?

  ನಟಿ ಹರ್ಷಿಕ ಪೂಣಚ್ಚ ಅವರು ಮುದ್ದು ಮೊಗ್ಗದ ಸುಂದರಿ. ವಯಸ್ಸು ಮೀರುತಿದ್ದರು ಸದಾ ಲವಲವಿಕೆಯಿಂದ ಇರುವ ಇವರ ಮನಸ್ಸು ಮತ್ತು ಚಟುವಟಿಕೆಯಿಂದ ಕೂಡಿರುವ ಇವರ ಕೆಲಸದಿಂದಾಗಿ ಈಗಿನ ನಾಯಕಿಯರು ಕೂಡ ನಾಚುವಂತೆ ತಮ್ಮ ಗ್ಲಾಮರ್ ಕಾಪಾಡಿಕೊಂಡಿದ್ದಾರೆ. ಕಾಲೇಜು ಹುಡುಗಿಯಂತೆ ಕಾಣುವ ಹರ್ಷಿಕ ಪೂಣಚ್ಚಾ ಇಂಡಸ್ಟ್ರಿಗೆ ಕಾಲಿಟ್ಟು ಒಂದು ದಶಕವೇ ಕಳೆದಿದೆ. ಪ್ರಜ್ವಲ್ ದೇವರಾಜ್ ಅವರ ಅಭಿನಯದ ಮುರಳಿ ಮೀಟ್ಸ್ ಮೀರಾ ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಪಾದಾರ್ಪಣೆ ಮಾಡಿದ ಇವರು ಸದ್ದಿಲ್ಲದೆ ಅನೇಕ ಸಿನಿಮಾಗಳನ್ನು ಮುಗಿಸಿದ್ದಾರೆ. ಆದರೆ ಅದ್ಯಾಕೋ ಈಕೆಯ ಅದೃಷ್ಟ ಅಷ್ಟೊಂದು ಕೈ ಹಿಡಿಯಲಿಲ್ಲ ಹಾಗಾಗಿ ನಡೆಸಿದ ಒಂದೆರಡು ಸಿನಿಮಾ ಬಿಟ್ಟು ಮತ್ಯಾವು ಅಷ್ಟೊಂದು ಸುದ್ದಿ ಆಗಲಿಲ್ಲಾ. ನಂತರ ಕಿರುತೆರೆ ಕಡೆಗೆ ಮುಖ ಮಾಡಿದ್ದ ಇವರು ಬಿಗ್ ಬಾಸ್, ಡ್ಯಾನ್ಸಿಂಗ್ ಸ್ಟಾರ್ ಇಂತಹ ರಿಯಾಲಿಟಿ ಶೋಗಳಲ್ಲಿ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಂಡಿದ್ದರು. ಬಳಿ ಸಿನಿಮಾರಂಗದತ್ತ ಮತ್ತೆ ಮುಖ ಮಾಡಿದ ಇವರು ಈ ಬಾರಿ ಕೆಲ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಇದರ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಬದುಕಿನ ಕುರಿತಾದ ಕೆಲಸದ ಸ್ವಾರಸ್ಯಕರ ವಿಷಯಗಳ ಬಗ್ಗೆ ತಮ್ಮ ಫಾಲೋವರ್ಸ್ ಮತ್ತು ಅಭಿಮಾನಿಗಳ ಜೊತೆ ವಿಷಯ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇದ್ದಕಿದ್ದಂತೆ ಲಕ್ಷಣವಾಗಿ ಲಂಗ ದಾವಣಿ ತೊಟ್ಟುಕೊಂಡು ರೋಡಿಗಿಳಿದು ಬಿಟ್ಟಿದ್ದಾರೆ. ಇಷ್ಟಾಗಿದ್ದರೆ ಯಾರಿಗೂ ಆಶ್ಚರ್ಯ ಆಗುತ್ತಿರಲಿಲ್ಲ, ಆದರೆ ಈಕೆ ಈ ರಸ್ತೆ ಒಂದರಲ್ಲಿ ಟೊಮೊಟೊ ಮತ್ತು ಕೊತ್ತಂಬರಿ ಸೊಪ್ಪು ಮಾರಲು ನಿಂತು ಬಿಟ್ಟಿದ್ದಾರೆ. ಈ ಕುರಿತ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ instagram ಖಾತೆಯಲ್ಲೂ ಕೂಡ ಹಂಚಿಕೊಂಡಿದ್ದಾರೆ. ನಟಿಗೆ ಏನಾಯ್ತು ಎಂದು ಎಲ್ಲರಿಗೂ ಒಂದು ಕ್ಷಣ ಶಾ’ಕ್ ಆಗಿದೆ. ಆದರೆ ಇದು ಇವರ ಸಿನಿಮಾ ಒಂದಕ್ಕೆ ಪ್ರಚಾರ ಕೊಡುತ್ತಿರುವ ವಿಶೇಷ ರೀತಿ. ಅದೇನೆಂದರೆ ವಿಜಯ ರಾಘವೇಂದ್ರ ಮತ್ತು ಹರ್ಷಿಕ ಪೂಣಚ್ಚ ಅವರು ಮುಖ್ಯ ಭೂಮಿಯಲ್ಲಿ ಅಭಿನಯಿಸಿರುವ ಕಾಸಿನ ಸರ ಎನ್ನುವ ಸಿನಿಮಾವು ಮಾರ್ಚ್ 3ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾವು ರೈತರ ಮತ್ತು ಅವರು ಬೆಳೆಯುವ ಬೆಳೆ ಕುರಿತು ಕಟ್ಟಿರುವ ಕಥೆ ಆಗಿದ್ದು, ವಿಜಯ ರಾಘವೇಂದ್ರ ಅವರು ಇದರಲ್ಲಿ ರೈತ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರೈತರ ಬಗ್ಗೆ ಮತ್ತು ರೈತರನ್ನು ಉಳಿಸುವ ಬಗ್ಗೆ ಹಾಗೂ ಸಾವಯವ ಆಹಾರ ಪದಾರ್ಥಗಳ ಬಳಕೆಯನ್ನು ಉತ್ತೇಜಿಸುವುದರ ಬಗ್ಗೆ ಸಂದೇಶ ನೀಡಲಾಗಿದೆಯಂತೆ. ಈ ಕುರಿತು ಹರ್ಷಿಕ ಪೂಣಚ್ಚ ಅವರು ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಿರುವ ಫೋಟೋ ವಿಡಿಯೋಗಳ ಜೊತೆ ಬರಹವನ್ನು ಕೂಡ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ. ಕಾಸಿನಸರ ಸಿನಿಮಾವನ್ನು ಒಂದೊಳ್ಳೆ ಸದುದ್ದೇಶದಿಂದ ಮಾಡಿದ್ದೇವೆ. ಇದು ರೈತರ ಕಷ್ಟದ ಕುರಿತು ಮತ್ತು ನಮ್ಮ ಆರೋಗ್ಯದ ಕುರಿತು ಕೂಡ ಬೆಳಕು ಹರಿಸುವ ಚಿತ್ರ ಆಗಿದೆ. ಸಿನಿಮಾದ ಪ್ರೀಮಿಯರ್ ಶೋ ನೋಡಿದ ಎಲ್ಲರೂ ಕೂಡ ಚಿತ್ರದ ಬಗ್ಗೆ ಮೆಚ್ಚಿ ಮಾತನಾಡುತ್ತಿದ್ದಾರೆ. ಈಗ ಇದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ಮಾರ್ಚ್ 3ರಂದು ಚಿತ್ರ ಬಿಡುಗಡೆ ಆಗುತ್ತಿದ್ದು, ದಯವಿಟ್ಟು ಎಲ್ಲರೂ ನಿಮ್ಮ ಹತ್ತಿರದಲ್ಲಿರುವ ಚಿತ್ರಮಂದಿರಗಳಿಗೆ ಭೇಟಿಕೊಟ್ಟು ಸಿನಿಮಾ ನೋಡಿ ಒಂದು ಉತ್ತಮ ಸಂದೇಶದ ಸಿನಿಮಾಗೆ ಪ್ರೋತ್ಸಾಹಿಸಿ. ಬೆಂಗಳೂರಿನ ತ್ರಿವೇಣಿ ಥಿಯೇಟರ್ ಅಲ್ಲಿ ನಮ್ಮ ಇಡೀ ಚಿತ್ರತಂಡ ಮಾರ್ಚ್ 3ರ ಬೆಳಿಗ್ಗೆ 9:30ಕ್ಕೆ ನಿಮಗಾಗಿ ಕಾಯಲಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಎನ್ ಆರ್ ನಂಜೇಗೌಡ ಎನ್ನುವವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ಪ್ರಯೋಗಾತ್ಮಕ ಹಾಗೂ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳು ಹೆಚ್ಚಾಗಿ ಬರುತ್ತಿವೆ. ಈ ಹಿಂದೆ ವಂಶೋದ್ಧಾರಕ ಎನ್ನುವ ಕೃಷಿ ಮತ್ತು ಹಳ್ಳಿ ಜೀವನಕ್ಕೆ ಸಂಬಂಧಪಟ್ಟ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಅವರು ಅಭಿನಯಿಸಿ ಹೊಸ ಅಲೆ ಆರಂಭಿಸಿದರು ಹಾಗಾಗಿ ಕಾಸಿನ ಸರ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ, ಫಲಿತಾಂಶ ಏನಾಗಲಿದೆ ಕಾದು ನೋಡೋಣ.

View this post on Instagram

A post shared by Harshika Poonacha (@harshikapoonachaofficial)

- Advertisment -