ರಾಕ್ ಲೈನ್ ವೆಂಕಟೇಶ್ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿ, ನಾಯಕನಾಗಿ, ಹಾಸ್ಯ ಕಲಾವಿದನಾಗಿ, ತೆರೆಹಿಂದೆಯೂ ಕೆಲಸಗಾರನಾಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಈಗ ಅವರು ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾರಂಗದಲ್ಲಿ ಸಂತೋಷದ ಸಮಯದಲ ಇವರು ಇರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಆ ಕುಟುಂಬಕ್ಕೆ ಕಷ್ಟ ಬಂದಾಗ ಇವರಿರುತ್ತಾರೆ ಎನ್ನುವುದಕ್ಕೆ ಉದಾಹರಣೆಯಾಗಿ ಹಲವು ವಿಚಾರಗಳನ್ನು ಕೊಡಬಹುದು.
ಅಣ್ಣಾವ್ರು ವೀರಪ್ಪನ್ ಇಂದ ಕಿಡ್ನಾಪ್ ಆಗಿದ್ದಾಗ ಅಣ್ಣಾವ್ರ ಮನೆಗೆ ಧೈರ್ಯ ತುಂಬಿದ ವ್ಯಕ್ತಿ ಇವರು, ವಿಷ್ಣುವರ್ಧನ್ ಅವರು ಮೃ’ತಪಟ್ಟಾಗ ಕೊನೆಯವರೆಗೂ ಮುಂದೆ ನಿಂತು ಅವರ ಕಾರ್ಯಗಳನ್ನು ನೋಡಿಕೊಂಡರು, ನಟ ಶಿವರಾಜ್ ಕುಮಾರ್ ಅವರ ಮಗಳ ಮದುವೆಯಲ್ಲಿ ತಮ್ಮದೇ ಮನೆ ಮದುವೆಯಂತೆ ಮುಂದೆ ನಿಂತು ಕಾರ್ಯನಿರ್ವಹಿಸಿದ್ದನ್ನು ಶಿವಣ್ಣ ಇಂದಿಗೂ ಸ್ಮರಿಸುತ್ತಾರೆ.
ಅಂಬರೀಶ್ ಅವರ ಕುಟುಂಬದ ಕಷ್ಟ ಸುಖದಲ್ಲಿ ಇವರದ್ದೇ ಉಸ್ತುವಾರಿ, ಸುಮಲತಾ ಅವರು ಎಲೆಕ್ಷನ್ ನಿಂತಾಗ ಕೂಡ ಅವರ ಪರವಾಗಿ ಪ್ರಚಾರಕ್ಕೆ ಇಳಿದವರು ರಾಕ್ ಲೈನ್ ವೆಂಕಟೇಶ್. ಹಾಗೆ ಈ ರೀತಿಯ ಹತ್ತಾರು ಉದಾಹರಣೆಗಳನ್ನು ಕೊಡಬಹುದು. ಹೀಗಾಗಿ ಇವರ ಬಗ್ಗೆ ಎಲ್ಲರಿಗೂ ಇವರ್ಯಾರು ಎನ್ನುವ ಕುತೂಹಲ ಹುಟ್ಟುತ್ತದೆ. ಹಾಗಾಗಿ ಈ ಅಂಕಣದಲ್ಲಿ ಇವರ ಬಗ್ಗೆ ಕೆಲ ವಿಚಾರ ತಿಳಿಸಿ ಕೊಡುತ್ತಿದ್ದೇವೆ.
1963ರಲ್ಲಿ ಜನಿಸಿದರು ಇವರು ಮೂಲತಃ ನಾಯ್ ಡುಕುಟುಂಬದವರು. ತಂದೆ ಕನ್ಸ್ಟ್ರಕ್ಷನ್ ಬಿಸಿನೆಸ್ ನಡೆಸುತ್ತಿರುತ್ತಾರೆ ಮನೆಯಲ್ಲಿ ಹತ್ತಾರು ಲಾರಿಗಳು ಇರುತ್ತವೆ. ಮನೆಗೆ ಹಿರಿಮಗನಾದ ಇವರಿಗೆ ಇಬ್ಬರು ಅಕ್ಕಂದಿರು, ಒಬ್ಬ ತಂಗಿ ಹಾಗೂ ಇಬ್ಬರು ತಮ್ಮಂದಿರು. 18ನೇ ವಯಸ್ಸಿಗೆ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಕಾರಣ ಎಲ್ಲಾ ವ್ಯವಹಾರಗಳ ಸಂಪೂರ್ಣ ಜವಾಬ್ದಾರಿ ಇವರ ಹೆಗಲಿಗೆ ಬರುತ್ತದೆ.
19ನೇ ವಯಸ್ಸಿಗೆ ಪ್ರೇಮ ಕುಮಾರಿ ಎನ್ನುವವರನ್ನು ವಿವಾಹವಾದ ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರ ಹಿರಿಯ ಮಗ ಕನ್ನಡದ ಮತ್ತೊಬ್ಬ ನಿರ್ಮಾಪಕ ಮುನಿರತ್ನ ಅವರ ಮಗಳನ್ನು ವರಿಸಿದ್ದಾರೆ. ರಾಕ್ ಲೈನ್ ವೆಂಕಟೇಶ್ ಅವರಿಗೆ ಅವಳಿ ಮೊಮ್ಮಕ್ಕಳಿದ್ದಾರೆ. ಆರಂಭದಿಂದಲೂ ಕೂಡ ಸಿನಿಮಾ ಬಗ್ಗೆ ಇಂಟರೆಸ್ಟ್ ಹೊಂದಿದ್ದ ಇವರಿಗೆ ನವರಸ ನಾಯಕ ಜಗ್ಗೇಶ್ ಕೂಡ ಕ್ಲಾಸ್ಮೇಟ್.
ಒಂದೇ ಶಾಲೆಯಲ್ಲಿ ಓದಿದ ಇವರು ಈಗ ಒಂದೇ ಇಂಡಸ್ಟ್ರಿಯನ್ನು ಸೇರಿದ್ದಾರೆ. ಆರಂಭದಲ್ಲಿ ಸಿನಿಮಾದಲ್ಲಿ ಸಣ್ಣಪುಟ್ಟ ಮಾತ್ರ, ಸ್ಟಂಟ್ ಮಾಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದ ಇವರು ನಿಧಾನವಾಗಿ ನಿರ್ಮಾಪಕರಾಗಿ ಪೂರ್ತಿ ಪ್ರಮಾಣದಲ್ಲಿ ಸಿನಿಮಾ ಇಂಡಸ್ಟ್ರಿಗೆ ಸೇರಿಕೊಂಡರು. ರಾಕ್ಲೈನ್ ಎನ್ನುವ ಪ್ರತಿಷ್ಠಿತ ಬಾರ್ ಅನ್ನು ಖರೀದಿಸಿದ ಕಾರಣ ಇವರ ಹೆಸರಿನ ಜೊತೆ ರಾಕ್ ಲೈನ್ ಎನ್ನುವ ಹೆಸರು ಕೂಡಸೇರಿಕೊಂಡಿತು.
ಅಂದಿನಿಂದ ಇವರು ರಾಕ್ ಲೈನ್ ವೆಂಕಟೇಶ್ ಎಂದೇ ಹೆಸರಾದರು. ಕನ್ನಡದಲ್ಲಿ ಹಲವಾರು ಸೂಪರ್ ಸಿನಿಮಾಗಳು ನಿರ್ಮಾಣ ಮಾಡಿರುವ ಇವರು ತೆಲುಗಿನಲ್ಲಿ ಪವರ್, ತಮಿಳಿನಲ್ಲಿ ರಜನಿಕಾಂತ್ ಅವರ ಲಿಂಗ ಹಾಗೂ ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರ ಬಜರಂಗಿ ಭಾಯಿಜಾನ್ ಸಿನಿಮಾಗೂ ಬಂಡವಾಳ ಹೂಡಿದ್ದರು.
ವ್ಯವಹಾರಿಕವಾಗಿ ಮಾತ್ರವಲ್ಲದೆ ವೈಯುಕ್ತಿಕವಾಗಿ ಕೂಡ ಬಹಳ ಸ್ನೇಹಪರ ಜೀವಿ, ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲದೇ ಹಲವು ಬಿಸಿನೆಸ್ ಗಳನ್ನು ಹೊಂದಿದ್ದಾರೆ. ಜೊತೆಗೆ ತಮ್ಮ ಸ್ನೇಹಿತರು ಯಾರೇ ಕಷ್ಟದಲ್ಲಿದ್ದರೂ ಅವರ ಕೈ ಹಿಡಿಯುತ್ತಾರೆ. ಪಬ್ಲಿಕ್ ಟಿವಿ ಖ್ಯಾತಿಯ ರಂಗನಾಥ್ ಅವರು ಕೂಡ ಒಮ್ಮೆ ಕೆಲಸ ಬಿಟ್ಟು ಮನೆಯಲ್ಲಿದ್ದಾಗ ಇವರ ಸಹಾಯದಿಂದಲೇ ಪಬ್ಲಿಕ್ ಟಿವಿ ಓಪನ್ ಮಾಡುವ ರೀತಿ ಆಯಿತು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದರೀಗ ತಮ್ಮ ಹುಲಿ ಪೆಂಡೆಂಟ್ ಕಾರಣದಿಂದಾಗಿ ವೆಂಕಟೇಶ್ ಅವರು ಸುದ್ದಿಯಲ್ಲಿದ್ದಾರೆ.