ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಅಂದರೆ ಮನೆಯ ಮುಖ್ಯಸ್ಥೆಗೆ 2000 ರೂಪಾಯಿಗಳನ್ನು ಅವರ ಖಾತೆಗೆ ಹಾಕುವುದಾಗಿ ಸರ್ಕಾರ ಘೋಷಣೆಯನ್ನು ಮಾಡಿದೆ ಈ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಇಡೀ ರಾಜ್ಯದೆಲ್ಲೆಡೆ ಕರ್ನಾಟಕ ಒನ್, ಸೇವಾ ಸಿಂಧು, ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳು ಎಲ್ಲಾ ಕಡೆ ಮಹಿಳೆಯರು ವಯಸ್ಸಾಗಿರುವಂತಹ ಅವರು ಕ್ಯೂನಲ್ಲಿ ನಿಂತು ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ.
ಆದರೆ ಇದೀಗ ಈ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಮಹಿಳೆಯರಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಹಾಕಲು ನೀವು ಯಾವುದೇ ರೀತಿಯ ಹಣವನ್ನು ನೀಡುವಂತಹ ಅವಶ್ಯಕತೆ ಇಲ್ಲ ಎಲ್ಲಾ ಕೇಂದ್ರಗಳಿಗೂ ಸಹ ಅರ್ಜಿಯನ್ನು ಹಾಕಲು ಸರ್ಕಾರದಿಂದಲೇ ಇಂತಿಷ್ಟು ಹಣ ಎಂದು ನಿಗದಿ ಮಾಡಲಾಗಿರುತ್ತದೆ ಆದ್ದರಿಂದ ನಿಮಗೆ ಫ್ರೀ ಆಗಿ ಅರ್ಜಿಯನ್ನು ಹಾಕಿ ಕೊಡಲಾಗುತ್ತದೆ.
ಮಹಿಳೆಯರಿಗೆ ಅರ್ಜಿ ಸಲ್ಲಿಸಲು ತೊಂದರೆ ಆಗುತ್ತಿರುವ ಕಾರಣದಿಂದಾಗಿ ಇದೀಗ ಒಂದು ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ ಮನೆಯಲ್ಲಿಯೇ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಸರ್ಕಾರವು ಇದೀಗ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಆಗಸ್ಟ್ ಮೊದಲನೇ ವಾರದಿಂದ ಪ್ರಜಾ ಪ್ರತಿನಿಧಿಗಳು ನಿಮ್ಮ ಮನೆಗೆ ಬಂದು ಅರ್ಜಿ ಹಾಕಿ ಕೊಡುತ್ತಾರೆ ಇದೀಗ ಸರ್ಕಾರವು ಪ್ರತಿನಿಧಿಗಳ ನೇಮಕಾತಿಯನ್ನು ಪ್ರಾರಂಭ ಮಾಡಲಾಗಿದೆ.
ಆಗಸ್ಟ್ ಮೊದಲನೇ ವಾರ ಅಥವಾ ಎರಡನೇ ವಾರದ ಪ್ರಾರಂಭದಿಂದಲೇ ನಿಮ್ಮ ಮನೆಗಳಿಗೆ ಪ್ರಜಾಪ್ರತಿನಿಧಿಗಳು ಬಂದು ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಅವರೇ ಪಡೆದುಕೊಳ್ಳುತ್ತಾರೆ ಸರ್ಕಾರವು ಅವರಿಗೆ ಒಂದು ಮೊಬೈಲ್ ಅನ್ನು ನೀಡುತ್ತದೆ ಆ ಮೊಬೈಲ್ ನಲ್ಲಿ ಅಪ್ಲಿಕೇಶನ್ ಗಳು ಸಹ ಇರುತ್ತದೆ ಸರ್ಕಾರವು ಪ್ರತಿನಿಧಿಗಳಿಗೆ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಗಳನ್ನು ನೀಡಿರಲಾಗುತ್ತದೆ ಇದರ ಮುಖಾಂತರವಾಗಿ ನಿಮ್ಮ ಮನೆಗಳಿಗೆ ಬಂದು ಅರ್ಜಿಯನ್ನು ಸಲ್ಲಿಸಿ ಕೆಲವೇ ದಿನಗಳಲ್ಲಿ ಸ್ವೀಕೃತಿ ಪತ್ರವನ್ನು ಸಹ ನಿಮ್ಮ ಮನೆಗೆ ತಂದುಕೊಡಲಾಗುತ್ತದೆ.
ಇಲ್ಲದಿದ್ದರೆ ಪೋಸ್ಟ್ ನ ಮುಖಾಂತರವಾಗಿ ಅರ್ಜಿ ಸ್ವೀಕೃತಿ ಪತ್ರ ನಿಮ್ಮ ಮನೆಗೆ ಬರುತ್ತದೆ. ಯಾವುದೇ ಕೇಂದ್ರಗಳಿಗೆ ಹೋಗಿ ನೀವು ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಸದ್ಯದಲ್ಲಿಯೇ ಸರ್ಕಾರವು ನೇಮಕ ಮಾಡಿರುವಂತಹ ಪ್ರತಿನಿಧಿಗಳು ನಿಮ್ಮ ಮನೆಗೆ ಬಂದು ಅರ್ಜಿಯನ್ನು ಸಲ್ಲಿಕೆ ಮಾಡುತ್ತಾರೆ ಎಲ್ಲಾ ಅಪ್ಲಿಕೇಶನ್ ಕಂಪ್ಲೀಟ್ ಆದ ನಂತರ ಸರ್ಕಾರ ಪ್ರತಿಯೊಬ್ಬ ಮುಖ್ಯಸ್ಥೆಯ ಖಾತೆಗೆ ಹಣ ವರ್ಗಾವಣೆ ಮಾಡುತ್ತದೆ ಆದ್ದರಿಂದ ಚಿಂತೆ ಮಾಡುವ ಅವಶ್ಯಕತೆ ಇಲ್ಲ.
ನೀವು ಯಾವುದೇ ಕೇಂದ್ರಗಳಿಗೆ ಹೋಗಿ ಅಪ್ಲಿಕೇಶನ್ ಹಾಕುವ ಸಂದರ್ಭದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಬಹುದು ಆದ್ದರಿಂದ ಈ ರೀತಿಯ ಸಮಸ್ಯೆಗಳು ಬಾರದೆ ಇರಲಿ ಎಂದು ಸರ್ಕಾರವು ಈ ರೀತಿಯಾದಂತಹ ನಿಯಮವನ್ನು ಕೈಗೊಳ್ಳುತ್ತಿದೆ.
ಪ್ರಜಾಪ್ರತಿನಿಧಿಗಳು ಅಪ್ಲಿಕೇಶನ್ ಹಾಕುವ ಸಂದರ್ಭದಲ್ಲಿ ನೀವು ಹಣ ನೀಡುವಂತಹ ಅವಶ್ಯಕತೆ ಇಲ್ಲ ಸರ್ಕಾರದ ವತಿಯಿಂದ ಅವರಿಗೆ ಹಣ ಹೋಗುತ್ತದೆ. ಮೊದಲು ಹಳ್ಳಿಗಳಿಂದ ಪ್ರಾರಂಭ ಮಾಡಲಾಗುತ್ತದೆ ಎನ್ನುವಂತಹ ಸುದ್ದಿ ಇದೆ ಆದ್ದರಿಂದ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಹೋಗಿ ಅಲೆದಾಡುವಂತಹ ಅವಶ್ಯಕತೆ ನಿಮಗೆ ಬರುವುದಿಲ್ಲ.
ನೀವು ಸಹ ಪ್ರಜಾಪ್ರತಿನಿಧಿಗಳು ಆಗಬಹುದು ಈಗಾಗಲೇ ಆನ್ಲೈನ್ ನಲ್ಲಿ ರಿಜಿಸ್ಟರ್ ಮಾಡಿಕೊಂಡು ನೀವು ಸಹ ಪ್ರಜಾ ಪ್ರತಿನಿಧಿಗಳಾಗಬಹುದು ನೀವು ಒಂದು ಅಪ್ಲಿಕೇಶನ್ ಫಾರ್ಮ್ ಫಿಲ್ ಮಾಡಿದರೆ ನಿಮಗೆ ಸರ್ಕಾರದ ವತಿಯಿಂದ 12 ರೂಪಾಯಿಗಳನ್ನು ನೀಡಲಾಗುತ್ತದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ಈ ಒಂದು ಕೆಲಸವನ್ನು ನಿರ್ವಹಿಸಬಹುದು ಆಸಕ್ತಿ ಇರುವವರು ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರಗಳಿಗೆ ಹೋಗಿ ವಿಚಾರಣೆ ನಡೆಸಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.