ಕಲಿಯುಗದ ಕಾಮಧೇನು ರಾಘವೇಂದ್ರ ಸ್ವಾಮಿಗಳನ್ನು ಪೂಜಿಸದೇ ಇರುವವರಲ್ಲಿ ತನ್ನನ್ನು ನಂಬಿ ಬಂದಂತಹ ಭಕ್ತರಿಗೆ ರಾಯರು ಎಂದಿಗೂ ಸಹ ಕೈ ಬಿಟ್ಟಿಲ್ಲ ಅವರ ಕಷ್ಟಗಳು ಏನೇ ಇದ್ದರೂ ಸತ್ಯ ಮಾರ್ಗದಲ್ಲಿ ನಡೆಯುತ್ತಿರುವಂತಹ ಭಕ್ತರ ಕಷ್ಟಗಳನ್ನು ಈಡೇರಿಸುತ್ತಾರೆ. ನಮಗೆ ಕಷ್ಟಗಳು ಬಂದಾಗ ರಾಯರನ್ನು ಮನಸ್ಸಿನಲ್ಲಿ ಒಮ್ಮೆ ನೆನೆಸಿದರೆ ಸಾಕು ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ.
ರಾಯರನ್ನು ಪೂಜಿಸಲು ಯಾವುದೇ ರೀತಿಯ ಕಠಿಣ ನಿಯಮಗಳೇನು ಇಲ್ಲ ಶುದ್ಧ ಮನಸ್ಸಿನಿಂದ ರಾಯರನ್ನು ಪೂಜಿಸಿದರೆ ಸಾಕು ಎಲ್ಲ ಕಷ್ಟಗಳು ಸಹ ನಿವಾರಣೆಯಾಗುತ್ತದೆ ನಾವಿಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಮೂಲ ಮಂತ್ರ ಹಾಗೂ ಗಾಯತ್ರಿ ಮಂತ್ರ ಪಠಿಸುವ ರೀತಿ ಹಾಗೂ ಅದರ ಪ್ರಯೋಜನಗಳನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಗುರು ರಾಘವೇಂದ್ರ ಸ್ವಾಮಿಯ ಮೂಲ ಮಂತ್ರ “ಓಂ ಶ್ರೀ ರಾಘವೇಂದ್ರಾಯ ನಮಃ” ಈ ಮಂತ್ರವನ್ನು ಗುರುವಾರ ದಿನದಂದೆ ಪಠಿಸ ಬೇಕೆಂಬ ನಿಯಮವಿಲ್ಲ ಯಾವಾಗ ಬೇಕಾದರೂ ಪಡಿಸಬಹುದು ಈ ಮಂತ್ರವನ್ನು ಪಠಿಸುವುದರಿಂದ ರಾಘವೇಂದ್ರ ಸ್ವಾಮಿಯ ಕೃಪೆ ನಿಮ್ಮ ಮೇಲೆ ಬೀಳುತ್ತದೆ ಮನಸ್ಸಿನಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಒಳ್ಳೆಯ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ತುಂಬಿಕೊಂಡು ಧನಾತ್ಮಕವಾಗಿ ಚಿಂತೆಯನ್ನು ನಡೆಸುತ್ತೀರಾ.
ಗುರು ರಾಘವೇಂದ್ರ ಸ್ವಾಮಿಯ ಗಾಯಿತ್ರಿ ಮಂತ್ರ “ಓಂ ವೆಂಕಟನಾಥಾಯ ವಿದ್ಮಹೆ ಸಚ್ಚಿದಾನಂದಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್”, “ವೆಂಕಟನಾಥಯ ವಿದ್ಮಹೆ ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್”, “ಓಂ ಪ್ರಹಲ್ಲಾದಾಯ ವಿದ್ಮಹಿ ವ್ಯಾಸರಾಜಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್”.
ಈ ಮಂತ್ರವು ತುಂಬಾ ಶಕ್ತಿಶಾಲಿಯಾಗಿದ್ದು ಈ ಮಂತವನ್ನು ಪ್ರತಿದಿನ ಬೆಳಿಗ್ಗೆ ಪಠಿಸಿದರೆ ತುಂಬಾ ಒಳ್ಳೆಯದು ಇದನ್ನು ನೀವು ಪ್ರತಿದಿನ ಪಠಿಸಲು ಸಾಧ್ಯವಾಗದೇ ಇದ್ದರೆ ಗುರುವಾರ ಹಾಗೂ ಶುಕ್ಲ ಪಕ್ಷದ ದಿನಗಳಲ್ಲಿ ಪಠಿಸುವುದರಿಂದ ನಿಮ್ಮ ಮೇಲೆ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸಿಗುತ್ತದೆ.
ಮಂತ್ರಗಳನ್ನು ಪಠಿಸುವಾಗ ಒಂದಷ್ಟು ಸಂಗತಿಗಳನ್ನು ನೀವು ಗಮನದಲ್ಲಿ ಇಟ್ಟುಕೊಂಡು ಮಂತ್ರವನ್ನು ಪಠಿಸಬೇಕಾಗುತ್ತದೆ. ಗಾಯಿತ್ರಿ ಮಂತ್ರವನ್ನು ಪಠಿಸುವಾಗ ಯಾವುದೇ ಉಚ್ಚಾರಣೆ ದೋಷವಿರಬಾರದು. ಈ ಮಂತ್ರವನ್ನು ಪ್ರತಿದಿನ ಪಠಿಸಬಹುದು ಅಥವಾ ಗುರುವಾರದಂದು ಮಾತ್ರ ಪಡಿಸಬಹುದು ಈ ಮಂತ್ರವನ್ನು ದಿನದಲ್ಲಿ 1 ಬಾರಿ, 3 ಬಾರಿ, 5 ಬಾರಿ, 9 ಬಾರಿ, 21 ಬಾರಿ, 1008 ಬಾರಿ ಜಪಿಸಿದರೆ ಒಳ್ಳೆಯದು.
ಗಾಯತ್ರಿ ಮಂತ್ರವನ್ನು ಎಷ್ಟು ದಿನಗಳವರೆಗೆ ಪಠಿಸಿದರೆ ಒಳ್ಳೆಯದು ಎಂದು ನೋಡುವುದಾದರೆ 48 ದಿನಗಳವರೆಗೆ ಗಾಯತ್ರಿ ಮಂತ್ರವನ್ನು ಪಠಣೆ ಮಾಡುವುದವು ತುಂಬಾ ಒಳ್ಳೆಯದು ನೀವು ಗಾಯಿತ್ರಿ ಮಂತ್ರವನ್ನು 48 ದಿನಗಳವರೆಗೆ ಪಠಿಸುವುದಾದರೆ ಗುರುವಾರ ಅಥವಾ ಶುಕ್ಲ ಪಕ್ಷದ ಪುಷ್ಯ ನಕ್ಷತ್ರದಂದು ಪಠಿಸಿದರೆ ತುಂಬಾ ಒಳ್ಳೆಯದು ಏನಾದರೂ ಮನಸ್ಸಿನಲ್ಲಿ ಸಂಕಲ್ಪ ನೆರವೇರಲಿ ಎಂದು ಈ ಮಂತ್ರವನ್ನು ಪಠಿಸುವುದಾದರೆ ಒಂದು ದಿನದಲ್ಲಿ 1008 ಬಾರಿ ಜಪಿಸಿ ಇದರಿಂದ ನಿಮಗೆ ನಿಮ್ಮ ಸಂಕಲ್ಪ ನೆರವೇರುತ್ತದೆ.
ಮಂತ್ರವನ್ನು ಪಠಣೆ ಮಾಡುವುದರಿಂದ ನಮಗೆ ಸಿಗುವಂತಹ ಲಾಭ ಏನು ಎಂದು ನೋಡುವುದಾದರೆ ಯಾರೆಲ್ಲ ಈ ಮಂತ್ರವನ್ನು 48 ದಿನವಳ ದಿನಗಳವರೆಗೆ ಪಠಿಸುತ್ತಾರೋ ಅವರ ಕನಸಿನಲ್ಲಿ ಗುರು ರಾಘವೇಂದ್ರ ಸ್ವಾಮಿಗಳು ಕಾಣಿಸಿಕೊಳ್ಳುತ್ತಾರೆ ಎಂದು ಭಕ್ತರು ತಮ್ಮ ಸ್ವ ಅನುಭವದಿಂದ ಹೇಳುತ್ತಾರೆ ಗುರುರಾಯರ ಭಕ್ತರಿಗೆ ಸ್ವಾಮಿಯ ಶಕ್ತಿಯ ಅರಿವು ಖಂಡಿತವಾಗಿ ಆಗುತ್ತದೆ ಯಾವಾಗ ಸ್ವಾಮಿ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ ಅವರ ಕನಸುಗಳೆಲ್ಲ ಪರಿಹಾರವಾಗುವುದು ಎಂಬ ನಂಬಿಕೆ ಕೂಡ ಇದೆ. ನೀವು ಸಹ ರಾಘವೇಂದ್ರ ಸ್ವಾಮಿಯ ಭಕ್ತರಾಗಿದ್ದರೆ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಎಂದು ಕಾಮೆಂಟ್ ಮೂಲಕ ತಿಳಿಸಿ.