BPL ಕಾರ್ಡನ್ನು ಹೊಂದಿರುವಂತಹ ಫಲಾನುಭವಿಗಳಿಗೆ ಇದೀಗ ಕೆಲವೊಂದಷ್ಟು ಹೊಸ ನಿಯಮಗಳನ್ನು ಈಗ ಸರ್ಕಾರ ಜಾರಿಗೆ ತಂದಿದೆ ಈ ನಿಯಮಗಳ ಅನುಸಾರವಾಗಿ ಕೆಲವು ಸದಸ್ಯರ ರೇಷನ್ ಕಾರ್ಡ್ ಗಳು ರದ್ದಾಗುವಂತಹ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ನೀಡಿರುವಂತಹ ಗ್ಯಾರಂಟಿಗಳಲ್ಲಿ ಒಂದಾದಂತಹ ಅನ್ನಭಾಗ್ಯ ಯೋಜನೆಯು ಜಾರಿಗೆ ಬಂದ ನಂತರ ಈ ರೀತಿಯಾದಂತಹ ಹೊಸ ನಿಯಮಗಳು ಜಾರಿಯಾಗುತ್ತಿದೆ ಅನ್ನಭಾಗ್ಯ ಯೋಜನೆ ಜಾರಿಯಾದ ನಂತರ ರೇಷನ್ ಕಾರ್ಡ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಈಗಾಗಲೇ ಸರ್ಕಾರ ತಾನು ನೀಡಿದ ಭರವಸೆಗಳನ್ನು ಹೀಡೇರಿಸಲು ಬಹಳ ವೇಗವಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ರೇಷನ್ ಕಾರ್ಡಿಗೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತದೆ ಸಾಕಷ್ಟು ಅನುಕೂಲ ಇದ್ದವರು ಕೂಡ ಇದೀಗ BPL ಕಾರ್ಡ್ ಗಳಿಗೆ ಸುಳ್ಳು ಮಾಹಿತಿಗಳನ್ನು ನೀಡಿ ಅರ್ಜಿ ಹಾಕುತ್ತಿದ್ದಾರೆ ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರವೇ ಕೆಲವು ದಿನಗಳಲ್ಲಿ ಹೊಸ ಮಾರ್ಗಸೂಚಿಯನ್ನು ಹೊರಡಿಸುತ್ತದೆ ಎನ್ನಲಾಗುತ್ತಿದೆ.
ಯಾವೆಲ್ಲ ಫಲಾನುಭವಿಗಳ ರೇಷನ್ ಕಾರ್ಡ್ ಗಳು ರದ್ದಾಗುತ್ತದೆ ಎಂದು ನೋಡುವುದಾದರೆ ನಾವು ತಿಳಿಸುವ ಈ ಕೆಳಕಂಡ ಕೆಲವು ಅನುಕೂಲಗಳು ಇದ್ದವರಿಗೂ ಕೂಡ ರೇಷನ್ ಕಾರ್ಡ್ ಗಳು ಸಿಗುವ ಸಾಧ್ಯತೆ ತುಂಬಾ ಕಡಿಮೆ ಇದೆ.
*ಈಗಾಗಲೇ ಸುಳ್ಳು ಮಾಹಿತಿಗಳನ್ನು ನೀಡಿ ರೇಶನ್ ಕಾರ್ಡ್ ಬರೆದಿರುವಂತಹ ಅನೇಕರ ಬಿಪಿಎಲ್ ಕಾರ್ಡ್ ಗಳು ರದ್ದಾಗುತ್ತದೆ.
*ಆದಾಯ ತೆರಿಗೆ ಕಟ್ಟುವಂತಹ ಕುಟುಂಬಗಳಿಗೆ ರೇಷನ್ ಕಾರ್ಡ್ ಗಳನ್ನು ನೀಡದಿರಲು ಸರ್ಕಾರ ಮುಂದಾಗಿದೆ
*ಕಾರು ಅಥವಾ ಟ್ರ್ಯಾಕ್ಟರ್ ಹೊಂದಿರುವಂತಹ ಕುಟುಂಬಗಳು ಅನುಕೂಲವಾಗಿದ್ದು ಇಂತಹ ಕುಟುಂಬಗಳಿಗೆ BPL ಕಾರ್ಡ್ ವಿತರಣೆ ಮಾಡಬಾರದು ಎನ್ನುವಂತಹ ತೀರ್ಮಾನವನ್ನು ಕೈಗೊಂಡಿದೆ
*ಎಸಿ ಅಳವಡಿಸಿರುವಂತಹ ಮನೆಗಳಿಗೆ
*5 ಕ್ಕಿಂತ ಅಧಿಕ ಜನರೇಟರ್ ಹೊಂದಿರುವಂತಹ ಮನೆಗಳಿಗೆ
*5 ಎಕರೆಗಿಂತ ಹೆಚ್ಚಿನ ಭೂಮಿ ಇರುವವರಿಗೆ
*ಶಸ್ತ್ರ ಲೈಸೆನ್ಸ್ ಇದ್ದವರ ಮನೆಗಳಿಗೆ
*ಸರ್ಕಾರದ ಪೆನ್ಷನ್ ಪಡೆಯುವ ಕುಟುಂಬಗಳಿಗೆ
*ನಗರ ಪ್ರದೇಶದಲ್ಲಿ ವಾಸಿಸಿಕೊಂಡು ವರ್ಷಕ್ಕೆ 3 ಲಕ್ಷಕ್ಕಿಂತ ಅಧಿಕ ಆದಾಯ ಇರುವಂತಹ ಕುಟುಂಬಕ್ಕೆ ಕಾರ್ಡ್ ಗಳು ಸಿಗುವುದಿಲ್ಲ.
ಇದೀಗ ಎಲ್ಲೆಡೆ ಇಷ್ಟು ಅನುಕೂಲತೆಗಳನ್ನು ಹೊಂದಿರುವಂತಹ ಕುಟುಂಬಗಳಿಗೆ ರೇಷನ್ ಕಾರ್ಡ್ ನೀಡಬಾರದು ಎಂದು ಸರ್ಕಾರ ನಿಯಮವನ್ನು ಜಾರಿಗೆ ತರುತ್ತದೆ ಎನ್ನುವಂತಹ ಸುದ್ದಿ ಹರಿದಾಡುತ್ತಿದೆ ಸದ್ಯಕ್ಕೆ ಕರ್ನಾಟಕದಲ್ಲಿ ರೇಷನ್ ಕಾರ್ಡ್ ತಿದ್ದುಪಟಿ ಕಾರ್ಯ ನಡೆಯುತ್ತಿದೆ ಹಾಗೆಯೇ ಹೊಸ ರೇಷನ್ ಕಾರ್ಡ್ ಕೂಡ ಶೀಘ್ರದಲ್ಲೇ ನೀಡಲಾಗುವುದು ಎಂದು ಸರ್ಕಾರ ಹೇಳಿದೆ
ಮೇಲಿನ ಎಲ್ಲ ಅಂಶಗಳನ್ನು ಪರಿಶೀಲಿಸಿ ಸರ್ಕಾರ ಈ ಹೊಸ ಯೋಜನೆ ನೀಡುವ ಸಾಧ್ಯತೆ ಇದೆ ಹಾಗೆಯೇ ಒಂದು ವೇಳೆ ಸುಳ್ಳು ಮಾಹಿತಿ ಕೊಟ್ಟು ರೇಷನ್ ಕಾರ್ಡ್ ಪಡೆದುಕೊಂಡರು ಸಹ ಅಂತಹವರ ರೇಷನ್ ಸದ್ಯದಲ್ಲೇ ದಂಡ ಸಹಿತ ರದ್ದಾಗಲಿದೆ ಎಂದು ಸರ್ಕಾರ ಮಾಹಿತಿಯನ್ನು ನೀಡಿದೆ. ಈ ಮೇಲ್ಕಂಡಂತಹ ಅನುಕೂಲಗಳು ಯಾರಿಗೆಲ್ಲ ಇದೇಯೋ ಅಂತಹವರಿಗೆ ಮುಂದಿನ ದಿನಗಳಲ್ಲಿ ರೇಷನ್ ಸಿಗುವ ಸಾಧ್ಯತೆ ತುಂಬಾ ಕಡಿಮೆ ಇದೆ
ಸಾಕಷ್ಟು ಜನರು ಅನುಕೂಲ ಇದ್ದರೂ ಸಹ BPL ಕಾರ್ಡ್ ಹೊಂದಿದ್ದಾರೆ ಇಂತಹವರ ಕಾರ್ಡ್ ಸದ್ಯದಲ್ಲೆ ರದ್ದಾಗಲಿದೆ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ ಮುಂದಿನ ದಿನಗಳಲ್ಲಿ ಬರುವಂತಹ BPL ಕಾರ್ಡ್ ಗಳು ಸಾಕಷ್ಟು ಪರಿಶೀಲನೆಯನ್ನು ನಡೆಸಿ ಸರ್ಕಾರ ಕಾರ್ಡ್ಗಳನ್ನು ವಿತರಣೆ ಮಾಡುತ್ತದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.