ಸದ್ಯಕ್ಕೆ ಈಗ ಕನ್ನಡದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರವಾಗುತ್ತಿರುವ ಭಾಗಲಕ್ಷ್ಮೀ ಧಾರಾವಾಹಿ (Bhagyalakshmi Serial) ನಂಬರ್ ಒನ್ ಧಾರವಾಹಿಯಾಗಿದೆ ಎಂದೇ ಹೇಳಬಹುದು ಯಾಕೆಂದರೆ ಈ ಸೀರಿಯಲ್ ಬಹಳ ಸ್ಪೆಷಲ್ ಕಂಟೆಂಟ್ ಆಗಿದೆ.
ಎಲ್ಲಾ ಧಾರವಾಹಿಗಳಲ್ಲೂ ಅತ್ತೆ ಸೊಸೆ ಕಿತ್ತಾಟ ನೋಡಿ ಸಾಕಾಗಿದ್ದ ಜನತೆಗೆ ಅಮ್ಮ ಮಗಳಂತಿರುವ ಕುಸುಮ ಹಾಗೂ ಭಾಗ್ಯಳ ಅನುಬಂಧ, ಅವಿದ್ಯಾವಂತೆ ಎನ್ನುವ ಕಾರಣಕ್ಕಾಗಿ ಹೆಂಡತಿಯನ್ನು ತಾತ್ಸಾರ ಮಾಡುವ ತಂಡವು ಗೆ ಬುದ್ಧಿ ಕಲಿಸಲು ಸೊಸೆಯನ್ನು ಓದಿಸುತ್ತಿರುವ ಅತ್ತೆ, ತಾಯಿಯಾಗಿ ಭಾಗ್ಯಳ ಮೇಲೆ ಅಪಾರ ಕಾಳಜಿ ಹಾಗೂ ಮಲಮಗಳು ಲಕ್ಷ್ಮೀ ಪಾಲಿಗೆ ಸುಣ್ಣದಂತಿರುವ ಸುನಂದ ಹೀಗೆ ಪ್ರತಿ ಪಾತ್ರ ಕೂಡ ಅಚ್ಚುಕಟ್ಟಾಗಿ ಜೋಡನೆ ಆಗಿದ್ದು ಒಂದು ಎಪಿಸೋಡ್ ಕೂಡ ಜನರು ಮಿಸ್ ಮಾಡಿಕೊಳ್ಳಲು ಇಷ್ಟಪಡದಂತೆ ಸೀರಿಯಲ್ ಎಲ್ಲರನ್ನು ಸೆಳೆದಿದೆ.
ಆದರಿಲ್ಲಿ ಇದೇ ಧಾರವಾಹಿಯ ನಟಿಯೊಬ್ಬರ ನಿಜ ಜೀವನದ ವ್ಯಥೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಈ ಧಾರಾವಾಹಿಯಲ್ಲಿ ಸುನಂದ (Sunanda Character artist Sunitha Shetty ) ಎನ್ನುವ ವಿಶೇಷ ಪಾತ್ರ ಮಾಡಿ ಕೆಲವರ ಮೆಚ್ಚುಗೆಗೆ ಹಾಗೂ ಅನೇಕರ ಕೋಪಕ್ಕೆ ಕಾರಣವಾಗಿರುವ ಸುನಿತಾ ಶೆಟ್ಟಿ ಅವರ ನಿಜ ಜೀವನದ ಕಥೆ ಹೇಳ ಬಯಸಿದ್ದೇವೆ.
ಇವರ ಸ್ಟೋರಿ ಕೇಳಿ ಹೆಣ್ಣು ಮಕ್ಕಳು ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳದೆ ಇರಲು ಪ್ರಯತ್ನಿಸಿ. ಮೂಲತಃ ಮಂಗಳೂರಿನವರಾದ ಸುನೀತ ಶೆಟ್ಟಿ ಹುಟ್ಟಿ ಬೆಳೆದಿದ್ದೆಲ್ಲಾ ಹುಬ್ಬಳ್ಳಿಯಲ್ಲಿ, 16 ವರ್ಷಕ್ಕೆ ಪ್ರೀತಿಯಲ್ಲಿ ಬಿದ್ದ ಇವರು ಇಷ್ಟ ಪಟ್ಟವರನ್ನೇ ಹಠ ಹಿಡಿದು ಮದುವೆಯಾದರು. ಆದರೆ ಮದುವೆ ಆದ ಕೆಲವೇ ದಿನಗಳಿಗೆ ಮಡಿಲಲ್ಲಿ ಎರಡು ಮಕ್ಕಳನ್ನು ಕೊಟ್ಟು ಆ ವ್ಯಕ್ತಿ ಮೋ’ಸ ಮಾಡಿ ಹೋದ.
ಆದರೆ ಬದುಕಿನ ಜಂಜಾಟಕ್ಕೆ ಬಗ್ಗದ ಈ ಗಟ್ಟಿಗಿತ್ತಿ ಸಿಂಗಲ್ ಪೇರೆಂಟ್ ಆಗಿ ಕಷ್ಟಪಟ್ಟು ದುಡಿದು, ಇಬ್ಬರು ಮಕ್ಕಳನ್ನು ಇಂದು ಸೆಟಲ್ ಆಗುವಂತೆ ಮಾಡಿದ್ದಾರೆ. ಮಗಳಿಗೆ ಮದುವೆ ಆಗದೆ, ಸುನಿತಾ ಶೆಟ್ಟಿ ಮಗಳು ಪತಿ ಹಾಗೂ ಮಕ್ಕಳೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಮಗನು ಕೂಡ ಜೀವನದಲ್ಲಿ ಒಳ್ಳೇ ಹಂತಕ್ಕೆ ತಲುಪಿದ್ದಾನೆ.
ಆದರೆ ಈ ಅಂತ ತಲುಪುವವರೆಗೂ ಆಕೆ ಸುರಿಸಿರುವುದು ಬೆವರನ್ನಲ್ಲ ರಕ್ತವನ್ನು ಎಂದೇ ಹೇಳಬಹುದು. ಯಾಕೆಂದರೆ ಈಗಿನ ಕಾಲದಲ್ಲಿ ಮಕ್ಕಳನ್ನು ಈ ಮಟ್ಟಕ್ಕೆ ಬೆಳೆಸುವುದು ಪೋಷಕರಿಗೆ ಕ’ಷ್ಟ. ಅದರಲ್ಲೂ ಸಿಂಗಲ್ ಪೇರೆಂಟ್ ಆದರೆ ಅದು ಡಬಲ್ ಹೊರೆ. ಆದರೆ ತಾಯಿಯು ಕೂಡ ಕಲಾವಿದೆಯಾದ ಕಾರಣಕ್ಕೆ ಸುನಿತಾ ಶೆಟ್ಟಿಗೆ ಕಿರುತೆರೆ ಕೈ ಹಿಡಿದಿದೆ, ಸಿಕ್ಕ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಹಲವಾರು ಧಾರವಾಹಿಗಳಲ್ಲಿ ಗುರುತಿಸಿಕೊಂಡು ಬದುಕಿನ ಬಂಡಿ ನೂಕಿದ್ದಾರೆ.
ಇಷ್ಟು ದಿನ ಪಟ್ಟ ಕ’ಷ್ಟದ ಬಗ್ಗೆ ಕೇಳಿದರೆ ನನ್ನ ಸ್ನೇಹಿತೆ ಒಬ್ಬಳು ಅವಳ ಖರ್ಚಿನಲ್ಲೇ ಮದುವೆ ಆದಳು. ಮದುವೆ ಮುಗಿದ ತಕ್ಷಣವೇ ಹಸೆ ಮಣೆಯಿಂದ ಎದ್ದು ಬಂದು ಮದುವೆಯಲ್ಲಿ ಕೆಲಸ ಮಾಡಿದವರಿಗೆ ಹಣ ಕೊಡುತ್ತಿದ್ದಳು. ಈ ರೀತಿ ಕ’ಷ್ಟಗಳನ್ನು ನೋಡಿದಾಗ ಅನಿಸುವುದು ಒಂದೇ ಈ ಭೂಮಿ ಮೇಲೆ ಯಾವ ಹೆಣ್ಣು ಮಕ್ಕಳಿಗೂ ಈ ರೀತಿಯ ಕ’ಷ್ಟ ಬರಬಾರದು ಎಂದು.
ಇದು ಸಣಕಾಸಿನ ವಿಚಾರವಲ್ಲ ಭಾವನೆಗಳ ಸಂಘರ್ಷವು ಕೂಡ. ಜೀವನದಲ್ಲಿ ಎಲ್ಲ ರೀತಿಯ ನೋ’ವುಗಳನ್ನು ನೋಡಿದ್ದೇನೆ ಈಗ ಏನು ಬಂದರು ಎದುರಿಸುವಷ್ಟು ಧೈರ್ಯವಿದೆ, ಸಾಧ್ಯವಾದರೆ ಇತರರಿಗೆ ನೆರವಾಗಿ ಆದರೆ ನೋ’ವು ಕೊಡಬೇಡಿ ಎನ್ನುತ್ತಾರೆ ಸುನಂದ ಅಲಿಯಾಸ್ ಸುನಿತಾ ಶೆಟ್ಟಿ.