ಬಂಗಾರದ ಆಭರಣವೆಂದರೆ (Gold ornaments) ಯಾರಿಗೆ ಇಷ್ಟ ಇಲ್ಲ ಹೇಳಿ, ಇದನ್ನು ಹೂಡಿಕೆ, ಪ್ರತಿಷ್ಠೆ ಎಂದು ಕೆಲವರು ಭಾವಿಸಿದರೆ ಹೆಣ್ಣು ಮಕ್ಕಳಿಗೆ ಇದೊಂದು ಅಲಂಕಾರಿಕ ಸಾಧನ. ಚಿನ್ನವನ್ನು ಇಷ್ಟಪಡದ ಬಂಗಾರದ ಒಡವೆಗಳ ಮೇಲೆ ಆಸೆ ಇರದ ಹೆಣ್ಣು ಮಗಳು ಭಾರತದಲ್ಲಿ ಇಲ್ಲವೇ ಇಲ್ಲ ಎನ್ನಬಹುದು.
ಬಡವರ ಮನೆ ಮಕ್ಕಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಪ್ರತಿಯೊಬ್ಬರೂ ಕೂಡ ಬಂಗಾರದ ಒಡವೆಗಳನ್ನು ಹೊಂದಿರುತ್ತಾರೆ, ಯಾವುದಾದರೂ ಶುಭ ಸಮಾರಂಭ, ಕಾರ್ಯಕ್ರಮಗಳಲ್ಲಿ ಇದನ್ನು ಹಾಕಿಕೊಂಡು ಮಿಂಚುವುದೇ ಒಂದು ಮನೋರಂಜನೆ ಆದರೆ ಕೋಟಿ ಕೋಟಿ ಹಣವಿದ್ದರೂ ಕೂಡ ಇಲ್ಲೊಬ್ಬರು ಖ್ಯಾತ ನಟಿ ಸಾಲದಕ್ಕೆ ಸೂಪರ್ ಸ್ಟಾರ್ ಪತ್ನಿ ಒಂದು ಪ್ರೊಡಕ್ಷನ್ ಮಾಲೀಕರಾಗಿದ್ದರು ಕೂಡ ನಟಿ ಬಂಗಾರದ ಒಡವೆ ಧರಿಸುವುದಿಲ್ಲ ಯಾಕೆ ಗೊತ್ತಾ?
ಈಗ ನಾವು ಹೇಳುತ್ತಿರುವುದು ಕನ್ನಡಿಗರಿಗೆಲ್ಲ ಬಹಳ ಪರಿಚಯ ಇರುವ ನಟಿಯೊಬ್ಬರ ಬಗ್ಗೆಯೇ. ಕನ್ನಡಕ್ಕೆ ಪುಷ್ಪಕ ವಿಮಾನ ಸಿನಿಮಾದ ಮೂಲಕ ಎಂಟ್ರಿ ಕೊಟ್ಟ ನಟಿ ಅಮಲಾ ಮುಖರ್ಜಿ (Actress Amala Mukarji) ಬಣ್ಣದ ಗೆಜ್ಜೆ ಸಿನಿಮಾ (Bannada gejje movie) ಮೂಲಕ ಇನ್ನಷ್ಟು ಪ್ರಖ್ಯಾತಿ ಹೊಂದಿದ್ದರು.
ಸ್ವಾತಿ ಮುತ್ತಿನ ಮಳೆಹನಿಯೇ ಹಾಡಿನ ಖ್ಯಾತಿಯ ಈ ನಟಿ ಈಗ ತೆಲುಗಿನ ಸ್ಟಾರ್ ಹೀರೋ ನಾಗಾರ್ಜುನ್ (Married thelugu star Nagarjun) ಅವರ ಪತ್ನಿ. ಅಮಲಾ ಮುಖರ್ಜಿ ಆಗಿದ್ದ ಇವರು 1992ರ ಜೂನ್ 11ರಂದು ತಿರುಪತಿಯಲ್ಲಿ ಸರಳವಾಗಿ ಅಕ್ಕಿನೇನಿ ನಾಗಾರ್ಜುನ್ ಅವರನ್ನು ಮದುವೆಯಾಗಿ ಅಮಲಾ ಅಕ್ಕಿನೇನಿಯಾದರು.
ಮೊದಲು ಇಬ್ಬರ ಮದುವೆಗೆ ನಾಗಾರ್ಜುನ ತಂದೆ ನಾಗೇಶ್ವರರಾವ್ ಅಕ್ಕಿನೇನಿ ಅವರು ಒಪ್ಪಿಗೆ ನೀಡಿರಲಿಲ್ಲವಂತೆ, ನಂತರ ದಿನ ಕಳೆದಂತೆ ದೊರಸ್ವಾಮಿ ರಾಜು ಅವರ ಮಧ್ಯಸ್ತಿಕೆಯಿಂದ ಪರಿಸ್ಥಿತಿ ಸುಧಾರಿಸಿತ್ತು ಎಂದು ಹೇಳುತ್ತವೆ ಮೂಲಗಳು. ಆದರೆ ಇದು ಬೇರೆ ವಿಚಾರ, ಈಗ ಈಕೆ ಅಕ್ಕಿನೇನಿ ಕುಟುಂಬದ ಸೊಸೆಯಾಗಿಯೇ ಹೆಚ್ಚು ಫೇಮಸ್.
ಮೂಲತಃ ಕಲಾವಿದರ ಕುಟುಂಬವನ್ನೇ ಸೇರಿರುವ ಅಮಲಾರವರು ಈಗಲೂ ಕೂಡ ಕಿರುತೆರೆಯಲ್ಲಿ ಹಾಗೂ ವೆಬ್ ಸೀರೀಸ್ ಗಳಲ್ಲಿ ನಟಿಸುವ ಮೂಲಕ ಬೇಡಿಕೆಯಲ್ಲಿದ್ದಾರೆ. ನಾಗಾರ್ಜುನ ಅವರದ್ದು ಕೂಡ ಶ್ರೀಮಂತ ಕುಟುಂಬ ಈಗಲೂ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮತ್ತು ತಮ್ಮದೇ ಅನ್ನಪೂರ್ಣೇಶ್ವರಿ ಪ್ರೊಡಕ್ಷನ್ ಹೌಸ್ ಮಾಲೀಕತ್ವ ಕೂಡ ಹೊಂದಿರುವ ಇವರು ಬಿಗ್ ಬಾಸ್ ಕಾರ್ಯಕ್ರಮದ ಹೋಸ್ಟ್ ಕೂಡ ಹಾಕಿದ್ದಾರೆ.
ಇಂತಹ ಪ್ರತಿಷ್ಠಿತ ಕುಟುಂಬದ ಸೊಸೆಯಾಗಿ ಸಾರ್ವಜನಿಕವಾಗಿ ಅಮಲಾ ಅವರು ಕಾಣಿಸಿಕೊಳ್ಳುವುದು ಬಹಳ ಸಿಂಪಲ್ ಆಗಿ. ಅದರಲ್ಲೂ ಕೊರಳಲ್ಲಿ ಬರಿ ಕರಿಮಣಿ ಸರ ಧರಿಸಿ. ಈ ಬಗ್ಗೆ ಅನೇಕರಿಗೆ ಕುತೂಹಲವಿದೆ ಮತ್ತು ಇದಕ್ಕೆ ಕಾರಣ ತಿಳಿದುಕೊಳ್ಳುವ ಆಸಕ್ತಿಯು ಇದೆ, ಇಂತಹ ಹಲವಾರು ಪ್ರಶ್ನೆಗಳಿಗೆ ಇತ್ತೀಚಿಗೆ ಅಮಲಾ ಅವರು ಉತ್ತರಿಸಿದ್ದಾರೆ.
ಅಂತಹ ವಿಶೇಷವಾದ ಕಾರಣಗಳು ಏನು ಇಲ್ಲ ಎಲ್ಲಾ ಹೆಣ್ಣು ಮಕ್ಕಳಿಗೂ ಬಂಗಾರ ಇಷ್ಟ ಇರುವಂತೆ ನನಗೂ ಕೂಡ ಇಷ್ಟ. ಆದರೆ ಬಂಗಾರವನ್ನು ಧರಿಸಲು ನನಗೆ ಆಗುವುದಿಲ್ಲ, ನನ್ನ ತ್ವಚೆಗೆ ಬಂಗಾರ ಹೊಂದುವುದಿಲ್ಲ ಹಾಗಾಗಿ ಹಲವಾರು ಬಾರಿ ಇದನ್ನು ಪರೀಕ್ಷೆ ಮಾಡಿ ನೋಡಿ ಸುಮ್ಮನೆ ಸಮಸ್ಯೆ ಆಗಬಹುದು ಬೇಡ ಎಂದು ನಾನೆ ಬಂಗಾರದಿಂದ ದೂರ ಇದ್ದೇನೆ ಎಂದು ಅವರು ಸ್ಪಷ್ಟತೆ ಕೊಟ್ಟಿದ್ದಾರೆ. ಇದು ಅವರ ಇಚ್ಛೆಯ ಅಥವಾ ಆಯ್ಕೆಯ ವಿಷಯವಾಗಿದ್ದರು ಸೆಲೆಬ್ರಿಟಿಯಾಗಿ ಇವರು ಸರಳವಾಗಿರುವುದು ಅನೇಕರಿಗೆ ಸ್ಪೂರ್ತಿಯಾಗಿದೆ.