ಈಗಾಗಲೇ ಗೃಹಜೋತಿ ಯೋಜನೆಯ ಅಡಿಯಲ್ಲಿ ಸಾಕಷ್ಟು ಜನರು ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಈ ಯೋಜನೆಯ ಮೂಲಕ ಸರ್ಕಾರವು ರಾಜ್ಯದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡುವ ಭರವಸೆಯನ್ನು ಕೊಟ್ಟಿದ್ದು ಅದರಂತೆ ಸರ್ಕಾರವು ಯೋಜನಾ ಸೌಲಭ್ಯವನ್ನು ಜನರಿಗೆ ಒದಗಿಸಿ ಕೊಟ್ಟಿದೆ.
ಗೃಹಜೋತಿ ಯೋಜನೆಯ ಸೌಲಭ್ಯದ ವಿಚಾರದಲ್ಲಿ ತಿಂಗಳಿಗೆ ಎಷ್ಟು ಯೂನಿಟ್ ವಿದ್ಯುತ್ ಅನ್ನು ಫ್ರೀಯಾಗಿ ನೀಡಬೇಕು ಎಂಬುದರ ಕುರಿತಾಗಿ ಪರಿಷ್ಕರಣೆ ಮಾಡಲಾಯಿತು. ಗೃಹ ಜ್ಯೋತಿ ಯೋಜನೆಯ ಮೂಲಕ ಉಚಿತ ವಿದ್ಯುತ್ ಪಡೆಯಬೇಕು ಎಂದರೆ ಮೊದಲು ನೀವು ಆನ್ಲೈನ್ ಮೂಲಕ ಗೃಹ ಜೊತೆ ಯೋಜನೆಗೆ ರಿಜಿಸ್ಟರ್ ಮಾಡಿಕೊಳ್ಳಬೇಕು.
ಸೇವಾ ಸಿಂಧು ಪೋರ್ಟಲ್ ನ ಮೂಲಕ ನೀವು ಗೃಹ ಜ್ಯೋತಿ ಯೋಜನೆಗೆ ರಿಜಿಸ್ಟರ್ ಮಾಡಿಕೊಳ್ಳಬಹುದ ರಿಜಿಸ್ಟರ್ ಆದ ನಂತರವಷ್ಟೇ ನಿಮಗೆ ಉಚಿತ ವಿದ್ಯುತ್ ಸಿಗುತ್ತದೆ ಇಲ್ಲದೆ ಹೋದರೆ ನಿಮಗೆ ಗೃಹಜೋತಿ ಯೋಜನೆಯ ಉಚಿತ ಪ್ರಯೋಜನ ಸಿಗುವುದಿಲ್ಲ. ಸಚಿವ ಕೆಜೆ ಜಾರ್ಜ್ ಅವರು ಹೇಳಿರುವ ಪ್ರಕಾರ ನೀವು ರಿಜಿಸ್ಟರ್ ಮಾಡಿಕೊಳ್ಳದೆ ಹೋದರೆ ನಿಮಗೆ ಈ ಯೋಜನೆಯ ಸೌಲಭ್ಯ ಸರ್ಕಾರದ ಕಡೆಯಿಂದ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ
ಇದರ ಜೊತೆಯಲ್ಲಿ ಜನರಲ್ಲಿ ಒಂದು ಪ್ರಶ್ನೆ ಕೂಡ ಕೇಳಿಬಂದಿದೆ ಅದೇನೆಂದರೆ ಒಂದು ವೇಳೆ ಜುಲೈ ತಿಂಗಳಿನಲ್ಲಿ 2010 ಯೂನಿಟ್ ಕರೆಂಟ್ ಬಿಲ್ ಬಂದಿದ್ದರೆ ನೀವು ಎಷ್ಟು ಹಣ ವಿದ್ಯುತ್ ಬಿಲ್ ಕಟ್ಟಬೇಕು ಎನ್ನುವ ಪ್ರಶ್ನೆ ಇದೆ ಇನ್ನು ಮುಂದೆ ಎಲೆಕ್ಟ್ರಿಸಿಟಿ ಬಿಲ್ ಅನ್ನು ಗೃಹ ಜ್ಯೋತಿ ಯೋಜನೆಯಾ ರೀತಿಯಲ್ಲಿ ಪಾವತಿ ಮಾಡಬೇಕು.
ಯೋಜನೆಯ ಸೌಲಭ್ಯದಲ್ಲಿ ಒಂದು ಮನೆಗೆ ಎಷ್ಟು ಯೂನಿಟ್ ಉಚಿತ ವಿದ್ಯುತ್ ಕೊಡಲಾಗುತ್ತದೆ ಎಂದು ಲೆಕ್ಕ ಹಾಕುವುದಾಗಿದ್ದರೆ ನಿಮ್ಮ ಮನೆಯ 12 ತಿಂಗಳ ವಿದ್ಯುತ್ ಬಿಲ್ ತೆಗೆದುಕೊಂಡು ಅದರ ಆಧಾರದ ಮೇಲೆ ನಿಮಗೆ ಎಷ್ಟು ವಿದ್ಯತ್ ಉಚಿತವಾಗಿ ಕೊಡಬೇಕು ಎಂದು ಅಂದಾಜು ಮಾಡಲಾಗುತ್ತದೆ. ಒಂದು ವೇಳೆ 12 ತಿಂಗಳಿಗೆ 100 ಯೂನಿಟ್ ವಿದ್ಯುತ್ ಬಂದಿದ್ದರೆ ಅದಕ್ಕೆ ಹೆಚ್ಚುವರಿ 10% ವಿದ್ಯುತ್ ಸಿಗುತ್ತದೆ ಒಟ್ಟು ನೀವು 110 ಯೂನಿಟ್ ವಿದ್ಯುತ್ ಫ್ರೀಯಾಗಿ ಬಳಸಬಹುದು.
ಒಂದು ವೇಳೆ 210 ಯೂನಿಟ್ ಬಳಸಿದ್ದರೆ ಆಗ ಎಷ್ಟು ಹಣ ಕಟ್ಟಬೇಕು ಎಂದರೆ ನಿಮಗೆ ಉಚಿತ ಇರುವ 110 ಯೂನಿಟ್ ಬಳಸಿ ಅದರ ಜೊತೆಗೆ ಎಕ್ಸ್ಟ್ರಾ 100 ಯೂನಿಟ್ ಬಳಸಿದ್ದರೆ ಅದಕ್ಕೆ ಹಣ ಕಟ್ಟಬೇಕು ಇಲ್ಲಿ ನೀವು ಮೊದಲ 100 ಯೂನಿಟ್ ಗೆ ಒಂದು ಯೂನಿಟ್ ಗೆ 4.75 ರೂ ಆಗುತ್ತದೆ, ನಂತರದ 100 ಯೂನಿಟ್ ಗೆ ಒಂದು ಯೂನಿಟ್ ಗೆ 7 ರೂ ಬೆಲೆ ಆಗಿರುತ್ತದೆ.
ಹಿಂದಿನ ಮೂರು ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲ ಎಂದರೆ ಮೊದಲು ಅದನ್ನು ಕಟ್ಟಬೇಕು, ಕಟ್ಟದೆ ಹೋದರೆ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ನಿಮಗೆ ಸಿಗುವುದಿಲ್ಲ ಈ ರೀತಿಯಾಗಿ ನೀವು ಹಿಂದಿನ ವಿದ್ಯುತ್ ಬಿಲ್ಲನ್ನು ಕಟ್ಟದೇ ಹೋದರೆ ಸೌಲಭ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ರೀತಿಯಾಗಿ ನೀವು ಕಳೆದ ವರ್ಷ ಎಷ್ಟು ಯೂನಿಟ್ ವಿದ್ಯುತ್ ಅನ್ನು ಬಳಕೆ ಮಾಡಿಕೊಂಡಿದ್ದೀರೋ, ಅದಕ್ಕೆ 10% ನಷ್ಟು ಉಚಿತ ವಿದ್ಯುತ್ತನ್ನು ಸೇರಿಸಿ ಎಕ್ಸ್ಟ್ರಾ ಕೊಡಲಾಗುತ್ತದೆ ಉಳಿದಂತಹ ಹೆಚ್ಚುವರಿ ವಿದ್ಯುತ್ ಗೆ ನೀವು ಹಣವನ್ನು ಪಾವತಿ ಮಾಡಬೇಕಾಗುತ್ತದೆ.