Saturday, September 30, 2023
Home News ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ ಹೊಸ ದಾಖಲೆಗಳು ಕಡ್ಡಾಯ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ ಹೊಸ ದಾಖಲೆಗಳು ಕಡ್ಡಾಯ.

ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸುವವರಿಗೆ ಸಾಕಷ್ಟು ಗೊಂದಲಗಳು ಎದುರಾಗುತ್ತದೆ ಯಾವ ದಾಖಲೆಗಳನ್ನು ನೀಡಬೇಕು ಎಲ್ಲಿ ಅರ್ಜಿ ಸಲ್ಲಿಸಬೇಕು ಈ ಎಲ್ಲ ಮಾಹಿತಿಗಳನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಹೊಸ ಕಾರ್ಡ್ ಗೆ ಅರ್ಜಿಯನ್ನು ಹಾಕುವ ಮುನ್ನ ನಾವು ಒಂದಷ್ಟು ಮಾಹಿತಿಗಳನ್ನು ಕಲೆ ಹಾಕಿ ಇಟ್ಟುಕೊಳ್ಳಬೇಕು.

ಹೊಸ ರೇಷನ್ ಕಾರ್ಡ್ ಗೆ ಯಾವ ದಿನಾಂಕದಿಂದ ನೀವು ಅರ್ಜಿ ಸಲ್ಲಿಸಬಹುದು ಹಾಗೆ ಎಲ್ಲಿ ಸಲ್ಲಿಸಬಹುದು ಎಂದು ನೋಡುವುದಾದರೆ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳ ಸೇವಾ ಸಿಂಧುಗಳಲ್ಲಿ ಈಗಾಗಲೇ ಪಡಿತರ ಚೀಟಿಯ ತಿದ್ದುಪಡಿ ನಡೆತ್ತಿದೆ ಆದರೆ ಇದೇ ತಿಂಗಳ ಆಗಸ್ಟ್ 15 ರ ನಂತರ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಆರಂಭವಾಗುವ ಎಲ್ಲಾ ಸಾಧ್ಯತೆಗಳು ಕಾಣುತ್ತಿದೆ

ಹಾಗಾಗಿ ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಕಾಯುತ್ತಿದ್ದೀರ ಅವರು ಆಗಸ್ಟ್ 15ರ ನಂತರ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿ. ಅದಕ್ಕೂ ಮುನ್ನ ಬೇಕಾದಂತಹ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೇಷನ್ ಕಾರ್ಡ್ ಗಳು ತುಂಬಾ ಅವಶ್ಯಕವಾಗಿ ಬೇಕಾಗಿದ್ದು ರೇಷನ್ ಕಾರ್ಡ್ ಇಲ್ಲದೆ ಇದ್ದರೆ ಕಾಂಗ್ರೆಸ್ ಸರ್ಕಾರದ ಯಾವ ಯೋಜನೆಯು ಸಹ ನಿಮಗೆ ದೊರೆಯುವುದಿಲ್ಲ.

ಕಳೆದ ಎರಡು ದಿನಗಳ ಹಿಂದೆ ಸರ್ಕಾರವು ರೇಷನ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿತ್ತು ಹಾಗೆ ಆಗಸ್ಟ್ 15ರ ನಂತರ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ವರದಿಗಳು ತಿಳಿಸಿದೆ ಮೂರು ತಿಂಗಳ ಹಿಂದೆ ಅಥವಾ ಅದಕ್ಕು ಮುಂಚೆ ಅರ್ಜಿಯನ್ನು ಸಲ್ಲಿಸಿದ ರೇಷನ್ ಕಾರ್ಡ್ ಗಳನ್ನು ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯ ಉದ್ದೇಶದಿಂದಾಗಿ ವಿತರಣೆಯನ್ನು ತಡೆಯಲಾಗಿತ್ತು

ಆದರೆ ಈಗ ಪಡಿತರ ಚೀಟಿ ತಿದ್ದುಪಡಿ ಹಾಗೂ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪುನರಾರಂಭಗೊಳ್ಳುತ್ತಿದೆ. ಹೊಸ ರೇಷನ್ ಕಾರ್ಡ್ ಗಳಿಗೆ ನೀವು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಸಿಟಿಜನ್ ಲಾಗಿನ್ ಅಂದರೆ ಗ್ರಾಹಕರು ಸ್ವಂತ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗದು ಆದರೆ ನೀವು ಹತ್ತಿರದ ಮೇಲೆ ತಿಳಿಸಲಾದ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

ಹೊಸ ರೇಷನ್ ಕಾರ್ಡಿಗೆ ಬಯೋಮೆಟ್ರಿಕ್ ಅವಶ್ಯಕತೆ ಇರುತ್ತದೆ ಹಾಗಾಗಿ ಬಯೋಮೆಟ್ರಿಕ್ ನೀಡಲು ರೇಷನ್ ಕಾರ್ಡಿನಲ್ಲಿ ಇರಬೇಕಾದ ಸದಸ್ಯರು ಎಲ್ಲರೂ ಸರ್ಕಾರಿ ಕೇಂದ್ರಗಳಿಗೆ ಹೋಗಬೇಕಾಗುತ್ತದೆ. 5 ವರ್ಷದ ಒಳಗಿನ ಮಕ್ಕಳಿಗೆ ಬಯೋಮೆಟ್ರಿಕ್ ಅವಶ್ಯಕತೆ ಇರುವುದಿಲ್ಲ ಆದರೆ ಅವರು ಕಡ್ಡಾಯವಾಗಿ ಆಧಾರ್ ಕಾರ್ಡನ್ನು ಹೊಂದಿರಬೇಕು ಪಿಹಚ್‌ಹೆಚ್ ಅಂದರೆ ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯಲು ಬಯಸುವ ಗ್ರಾಹಕರು ಆಧಾರ್ ಕಾರ್ಡ್ ಹಾಗೂ ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು. APLಪಡೆದುಕೊಳ್ಳಲು ಸಹ ಆಧಾರ್ ಕಾರ್ಡ್ ನ ಅವಶ್ಯಕತೆ ಇದೆ ಆಧಾರ್ ಕಾರ್ಡ್ ನಲ್ಲಿ ವಿಳಾಸವು ಸರಿಯಾಗಿ ಇರಬೇಕು.

ಬೇಕಾದಂತಹ ದಾಖಲಾತಿಗಳು

° ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
° ಕುಟುಂಬದಲ್ಲಿ ಯಾರಾದರೂ ಒಬ್ಬರ ಆದಾಯ ಪ್ರಮಾಣ ಪತ್ರ
° ಮನೆಯಲ್ಲಿ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಲ್ಲಿ ಅವರ ಜನನ ಪ್ರಮಾಣ ಪತ್ರ
° ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ.
ಈ ಎಲ್ಲಾ ದಾಖಲಾತಿಗಳನ್ನು ನೀವು ನೀಡಿ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

- Advertisment -