ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಸಿನಿಮಾ ಇಂಡಸ್ಟ್ರಿ ಮಾತ್ಲವಲ್ಲದೆ ಇಡೀ ನಾಡೇ ಕೊಂಡಾಡುವ ಹೀರೋ. ಆದರೂ ಅವರ ಜೊತೆ ಸಿನಿಮಾ ಮಂದಿಗೆ ಹೆಚ್ಚಿನ ಒಡನಾಟ ಇರುತ್ತದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಇತರ ಕಲಾವಿದರಗಳು ಅನೇಕ ಬಾರಿ ಡಿ ಬಾಸ್ ಬಗ್ಗೆ ಮಾತನಾಡಿದ್ದಾರೆ. ಯಾರ್ಯಾರು ದರ್ಶನ್ ಬಗ್ಗೆ ಏನೇನು ಹೇಳಿದ್ದಾರೆ ಎಂದು ನೋಡುವುದಾದರೆ ಕಾಶಿನಾಥ್ (Kashinath) ಅವರ ಪುತ್ರ ಅಭಿಮನ್ಯು (Abhimanyu) ಈ ರೀತಿ ಹೇಳಿದ್ದಾರೆ. ನನ್ನ ತಂದೆ ಹೋದಾಗ ನನಗೆ ತುಂಬಾ ಕುಸಿದು ಹೋಗಿದ್ದೆ ಎಲ್ಲರಿಗಿಂತ ಹೆಚ್ಚಾಗಿ ಡಿ ಬಾಸ್ ಹೇಳಿದ ಆ ಮಾತು ನನಗೆ ಇನ್ನಷ್ಟು ಧೈರ್ಯ ಕೊಟ್ಟಿತು.
ಯಾವುದೇ ಸಂದರ್ಭ ಇರಲಿ ಏನೇ ಸಮಸ್ಯೆ ಇರಲಿ ನೀನು ಒಂದೇ ಒಂದು ಕರೆ ಮಾಡು ಸಾಕು ಒಂದು ಗಂಟೆ ಒಳಗೆ ನಿನ್ನ ಪ್ರಾಬ್ಲಮ್ ಸಾಲ್ವ್ ಮಾಡಿಕೊಡುತ್ತೇನೆ ಅಂತ ಹೇಳಿದರು ಅದನ್ನು ನಾನು ಜನ್ಮ ಇರುವ ತನಕ ನೆನೆಸಿಕೊಳ್ಳುತ್ತೇನೆ ಅಷ್ಟೇ ಹೇಳಿದರೆ ಸಾಕು ನಮಗೆ ಧೈರ್ಯ ಬರುತ್ತದೆ ಎಂದು ಡಿ ಬಾಸ್ ಮನಸ್ಸಿನ ವೈಶಾಲ್ಯತೆತೆ ಎಷ್ಟಿತ್ತು ಎಂದು ತಿಳಿಸಿದ್ದಾರೆ. ಜೊತೆಗೆ ನೀನಾಸಂ ಸತೀಶ್ (Ninasam Sathish) ಅವರು ಒಂದು ಸಂದರ್ಶನದಲ್ಲಿ ನಿರೂಪಕರೊಬ್ಬರು ಯಾರ ಯಾವ ಸ್ಟಾರ್ ಇಂದ ಏನು ಕದಿಯಲು ಇಷ್ಟಪಡುತ್ತೀರಾ ಎಂದರು ಕೇಳಿದಾಗ ಡಿ ಬಾಸ್ ಇಂದ ಅಭಿಮಾನಿಗಳನ್ನು ಕದಿಯಲು ಇಷ್ಟ ಪಡುತ್ತೇನೆ.
ಯಾಕೆಂದರೆ ಕರ್ನಾಟಕದಲ್ಲಿ ಅವರಿಗೆ ಇರುವಷ್ಟು ಅಭಿಮಾನಿಗಳು ಯಾರಿಗೂ ಇಲ್ಲ ನಿಜವಾಗಿಯೂ ಅಂತಹ ಅಭಿಮಾನಿಗಳನ್ನು ಪಡೆಯಲು ಪುಣ್ಯ ಮಾಡಿರಬೇಕು ದರ್ಶನ್ ಸರ್ ಈ ವಿಷಯದಲ್ಲಿ ತುಂಬಾ ಲಕ್ಕಿ ಎಂದು ಹೇಳಿದ್ದಾರೆ. ಜೊತೆಗೆ ಯೋಗರಾಜ್ ಭಟ್ (Yograj bhat)ಅವರು ಸಹ ಅನೇಕ ಸಂದರ್ಶನದಲ್ಲಿ ದರ್ಶನ್ ಅವರ ಬಗ್ಗೆ ಇದೇ ಮಾತು ಹೇಳಿದ್ದಾರೆ. ಯಾವುದೇ ರೆಸಿಡೆನ್ಸಿಯಲ್ ಏರಿಯಾದಲ್ಲೂ ಬೆಳಗ್ಗೆ ಬೆಳಗ್ಗೆನೇ ದರ್ಶನ್ ಸಿನಿಮಾ ನೋಡಲು ಕ್ಯೂ ನಿಲ್ಲುತ್ತಾರೆ ಎಂದರೆ ಆತನಿಗೆ ಇರುವ ಕ್ರೇಝ್ ಏನು ಎನ್ನುವುದು ಗೊತ್ತಾಗುತ್ತದೆ.
ಜೊತೆಗೆ ಅಷ್ಟೇ ಅಲ್ಲದೆ ಹಳ್ಳಿ ಕಡೆ ಮಂದಿಯಿಂದಲೂ ಕೂಡ ದರ್ಶನ್ಗೆ ಅಷ್ಟೇ ಪ್ರೀತಿ ಸಿಗುತ್ತಿದೆ. ಯಾರು ಸುಮ್ಮನೆ ಅವರನ್ನು ಡಿ ಬಾಸ್ ಎಂದು ಕರೆಯುತ್ತಿಲ್ಲ ಅವರ ಮುಗ್ಧ ಮುಗುಳ್ನಗೆ ನೋಡಿ ಮನಸ್ಪೂರ್ತಿಯಾಗಿ ಪ್ರೀತಿಯಿಂದ ಕರೆಯುತ್ತಿದ್ದಾರೆ. ದರ್ಶನ್ ಗಿರುವ ಅಭಿಮಾನಿಗಳು ತುಂಬಾ ಶ್ರೇಷ್ಠ, ದರ್ಶನ್ ಸಹ ಈ ವಿಷಯದಲ್ಲಿ ಅದೃಷ್ಟವಂತ ಎಂದಿದ್ದಾರೆ. ಜೊತೆಗೆ ಕಿರುತೆರೆಯ ಕಲಾವಿದರಾದ ಜೊತೆ ಜೊತೆಯಲಿ (Jothe jotheyali) ಧಾರಾವಾಹಿ ಖ್ಯಾತಿಯ ಮೇಘ ಶೆಟ್ಟಿ (Megha Shetty) ಅವರು ಸಹ ನನಗೆ ಎಲ್ಲಾ ಹೀರೋಗಳು ಇಷ್ಟ, ಆದರೆ ದರ್ಶನ್ ಅವರು ಎಂದರೆ ಸ್ವಲ್ಪ ಜಾಸ್ತಿ ಇಷ್ಟ ನನಗೆ ಅವರು ಅಣ್ಣನ ರೀತಿ ಕಾಣುತ್ತಾರೆ ಎಂದು ಹೇಳಿದ್ದಾರೆ.
ಜೊತೆಗೆ ಕಿಸ್ (Kiss) ಸಿನಿಮಾದ ನಾಯಕನಾದ ವಿರಾಟ್ (Virat) ಅವರು ಸಹ ದರ್ಶನ್ ಅವರ ಫ್ಯಾನ್ಸ್ ನೋಡಿದರೆ ಒಂದು ಸ್ಪೂರ್ತಿ ನಮಗೂ ಆ ರೀತಿ ಆಗಬೇಕು ಎನಿಸುತ್ತದೆ ಎಂದಿದ್ದಾರೆ. ಕನ್ನಡದ ಮತ್ತೊಬ್ಬ ಕಲಾವಿದರಾದ ಮೋಹನ್ (Mohan) ಅವರು ಸಹ ನಾನು ದರ್ಶನ್ ಅವರು ಅನೇಕ ವರ್ಷಗಳ ಹಿಂದಿನಿಂದ ಸ್ನೇಹಿತರು. ಆಗ ದರ್ಶನ್ ನಮ್ಮಂತೆ ಸಾಮಾನ್ಯ ಕಲಾವಿದ ಆಗಿದ್ದ, ಆದರೆ ಇಂದು ಸ್ಟಾರ್ ಆಗಿ ಬೆಳೆದಿದ್ದೇನೆ ಎಂದು ಕೊಂಚವೂ ಅಹಂಕಾರ ಇಲ್ಲ. ಎಲ್ಲೇ ಸಿಕ್ಕಿದರು ಸಹ 20 ನಿಮಿಷ ಮಾತನಾಡುತ್ತಾನೆ. ಒಂದು ಚೂರು ಅಹಂ ಇಲ್ಲ ಸ್ಟಾರ್ ಡಂ ಇಲ್ಲ.
ಅವನು ಬೆಳೆದಿರುವ ರೀತಿ ನೋಡಿದರೆ ನಮಗೆಲ್ಲ ಖುಷಿಯಾಗುತ್ತದೆ. ಅದರಲ್ಲೂ ಊಟದ ವಿಚಾರದಲ್ಲಿ ದರ್ಶನ್ ಗೆ ಊಟದ ಸಮಯಕ್ಕೆ ನಾವು ಸಿಕ್ಕರೆ ಊಟ ಮಾಡಿಸದೆ ಕಳುಹಿಸುವುದೇ ಇಲ್ಲ. ದರ್ಶನ್ ಆ ಗುಣವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ನಿಜವಾಗಿ ದರ್ಶನ್ ಗ್ರೇಟ್ ಎಂದಿದ್ದಾರೆ. ಕನ್ನಡದ ಹಾಸ್ಯ ಕಲಾವಿದ ಮತ್ತು ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಮಿತ್ರ (Mithra) ಅವರು ಒಂದು ಟಿವಿ ಶೋ ಅಲ್ಲಿ ನನ್ನ ಮಗನಿಗೆ ಫೇವರೆಟ್ ಹೀರೋ ಎಂದರೆ ಅದು ದರ್ಶನ್ ನನ್ನ ಜೀವನದಲ್ಲಿ ಇರುವ ಒಂದೇ ಒಂದು ಆಸೆ ಎಂದರೆ ದರ್ಶನ್ ಅವರ ಒಂದು ಸಿನಿಮಾವನ್ನು ನಾನು ನಿರ್ಮಾಣ ಮಾಡಬೇಕು ಎನ್ನುವುದು ಎಂದು ಹೇಳಿಕೊಂಡಿದ್ದಾರೆ. ಇನ್ನು ಯಾವ ಯಾವ ಕಲಾವಿದರು ಏನೇನು ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.