Thursday, September 28, 2023
Home cinema news ಆದಿ ನಟಿಸಬೇಕಾಗಿದ್ದ ಸಿನಿಮಾದಲ್ಲಿ ಶ್ರೀಮುರಳಿ ನಟಿಸಿ ದೊಡ್ಡ ಹಿಟ್ ಪಡೆದ ಚಿತ್ರ ಯಾವುದು ಗೊತ್ತಾ.?

ಆದಿ ನಟಿಸಬೇಕಾಗಿದ್ದ ಸಿನಿಮಾದಲ್ಲಿ ಶ್ರೀಮುರಳಿ ನಟಿಸಿ ದೊಡ್ಡ ಹಿಟ್ ಪಡೆದ ಚಿತ್ರ ಯಾವುದು ಗೊತ್ತಾ.?

 

ಕನ್ನಡದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗನಾದ ಆದಿತ್ಯ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕದ ಜನತೆಗೆ ಅವರು ಡೆಡ್ಲಿ ಸೋಮ ಆಗಿಯೇ ಹೆಚ್ಚು ಪರಿಚಯ. ನಟ ಆದಿತ್ಯ ಅವರು ಆದಿ, ಲವ್, ಸ್ನೇಹನಾ ಪ್ರೀತಿನಾ ಮುಂತಾದ ಲವ್ ಸ್ಟೋರಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಜನ ಅವರನ್ನು ಭೂಗತ ಲೋಕದ ಪಾತ್ರಗಳಲ್ಲಿ ನೋಡಲು ಹೆಚ್ಚು ಇಷ್ಟಪಡುತ್ತಾರೆ ಅದೇನೋ ಅವರ ಲುಕ್ ಅಲ್ಲಿ ಪಾತಕ ಲೋಕದ ಶೇಡ್ ಎದ್ದು ಕಾಣುತ್ತದೆ.

ಅದೇ ಕಾರಣಕ್ಕೆ ಡೆಡ್ಲಿಸೋಮ, ವಿಲನ್, ಎದೆಗಾರಿಕೆ ಇನ್ನು ಮುಂತಾದ ಸಿನಿಮಾಗಳಲ್ಲಿ ಅಂತಹದೇ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಆದಿತ್ಯ ಅವರು ಇತ್ತೀಚೆಗೆ ತೆರೆಯಿಂದ ಸ್ವಲ್ಪ ದೂರ ಉಳಿತಿದ್ದಾರೆ. ಆದರೆ ಒಂದು ಕಾಲದಲ್ಲಿ ಅವರ ಡೇಟ್ಸ್ ಸಿಗುವುದೇ ಕಷ್ಟವಾಗಿತ್ತು. ಹೀಗಾಗಿ ಹಲವಾರು ಸೂಪರ್ ಹಿಟ್ ಸಿನಿಮಾಗಳ ಅವಕಾಶಗಳನ್ನು ತಪ್ಪಿಸಿಕೊಂಡಿದ್ದರು.

ಈ ರೀತಿ ಆಗುವುದು ಇಂಡಸ್ಟ್ರಿಯಲಿ ಸಹಜ ಯಾವುದೋ ಒಂದು ಸಿನಿಮಾ ಕಥೆಯನ್ನು ಒಬ್ಬ ಹೀರೋ ಸಲುವಾಗಿ ತಯಾರು ಮಾಡಿರುತ್ತಾರೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾದಲ್ಲಿ ಆ ಹೀರೋ ನಟಿಸಲು ಆಗಲಿಲ್ಲ ಅಂದರೆ ನಂತರ ಅದು ಬೇರೆಯವರ ಪಾಲಾಗಿ ಹೋಗುತ್ತದೆ. ಈ ರೀತಿ ಬೇರೆಯವರ ಪಾಲಾದ ಸಿನಿಮಾಗಳು ಸೂಪರ್ ಹಿಟ್ ಆಗಿರುವ ಉದಾಹರಣೆಗಳೇ ಹೆಚ್ಚು. ವರನಟ ರಾಜಕುಮಾರ್, ಡಾ. ವಿಷ್ಣುವರ್ಧನ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಇವರ ನಡುವೆಯೂ ಸಹ ಸಾಕಷ್ಟು ಬಾರಿ ಈ ರೀತಿ ಆಗಿದೆ.

ಹಾಗೆ ಆದಿತ್ಯ ಕೂಡ ನಡೆಸಬೇಕಾಗಿದ್ದ ಒಂದು ಸಿನಿಮಾದಲ್ಲಿ ಬೇರೆ ಒಬ್ಬ ನಟ ನಟಿಸಿ ಹೀರೋ ಆಗಿ ಇಂಡಸ್ಟ್ರಿಗೆ ಲಾಂಚ್ ಆಗಿ ಇಂದು ಸ್ಟಾರ್ ಹೀರೋ ಆಗಿ ಮೆರೆಯುತ್ತಿದ್ದಾರೆ. ಇದು ಬೇರಾರು ಅಲ್ಲ ರೋರಿಂಗ್ ಸ್ಟಾರ್ ಎಂದು ಟೈಟಲ್ ಪಡೆದಿರುವ ಶ್ರೀ ಮುರುಳಿ ಅವರು. ಈ ವಿಷಯವನ್ನು ನಿರ್ದೇಶಕರಾದ ಎಸ್ ನಾರಾಯಣ್ ಅವರು ಹೇಳಿಕೊಂಡಿದ್ದಾರೆ. ಯಾಕೆಂದರೆ ಶ್ರೀಮುರಳಿ ಅವರನ್ನು ಇಂಡಸ್ಟ್ರಿಗೆ ಲಾಂಚ್ ಮಾಡಿದ್ದೆ ಅವರು. ಅವರ ಚಂದ್ರ ಚಕೋರಿ ಚಿತ್ರದಿಂದ ಶ್ರೀ ಮುರಳಿ ಅವರು ನಾಯಕನಟ ಆಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು.

ಆ ಸಿನಿಮಾ ಸೂಪರ್ ಡೂಪರ್ ಹಿಟ್ ಕೂಡ ಆಗಿ ಒಳ್ಳೆ ಕಲೆಕ್ಷನ್ ಗಳಿಸಿತ್ತು. ನಂತರ ಶ್ರೀ ಮುರಳಿಗೆ ಸಾಲು ಸಾಲು ಸಿನಿಮಾ ಗಳ ಅವಕಾಶವನ್ನು ಕೂಡ ತಂದು ಕೊಟ್ಟಿತು. ಆದರೆ ಎಸ್ ನಾರಾಯಣ್ ಅವರು ಈ ಸಿನಿಮಾ ಕಥೆಯನ್ನು ಆದಿತ್ಯ ಅವರಿಗೆ ಬರೆದಿದ್ದರಂತೆ. ಎಸ್ ನಾರಾಯಣ್ ಅವರು ಕುರಿಗಳು ಸಾರ್ ಕುರಿಗಳು ಸಿನಿಮಾ ಶೂಟಿಂಗ್ ಅಲ್ಲಿ ಇದ್ದಾಗ ಚಂದ್ರ ಚಕೋರಿ ಸಿನಿಮಾದ ಸ್ಕ್ರಿಪ್ಟ್ ರೆಡಿ ಮಾಡುತ್ತಿದ್ದರಂತೆ.

ಕುರಿಗಳು ಸಾರ್ ಕುರಿಗಳು ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಆದಿತ್ಯ ಅವರು ಆ ಸಿನಿಮಾ ಸೆಟ್ ಗೆ ಬರುತ್ತಿದ್ದಾಗ ಅವರನ್ನು ನೋಡಿ ಚಂದ್ರಚಕೋರಿಗೆ ಇವರನ್ನೇ ಹೀರೋ ಮಾಡಬೇಕು ಎಂದುಕೊಂಡಿದ್ದರಂತೆ. ಇದಕ್ಕಾಗಿ ಸಾಕಷ್ಟು ಬಾರಿ ಆದಿತ್ಯ ಅವರನ್ನು ಸಂಪರ್ಕ ಮಾಡಿದರು ಸಹ ಆ ಸಮಯದಲ್ಲಿ ಅವರಿಗೆ ಚಂದ್ರ ಚಕೋರಿ ಚಿತ್ರದಲ್ಲಿ ನಟಿಸಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ ಅವರು ಲವ್ ಸಿನಿಮಾ ಚಿತ್ರೀಕರಣ ಹಾಗೂ ಇನ್ನಿತರ ಸಿನಿಮಾಗಳ ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಇದ್ದರು.

ಅವರ ಡೇಟ್ ಸಿಗದೆ 3-4 ಬಾರಿ ಪ್ರಯತ್ನಿಸಿ ಸುಮ್ಮನಾಗಿದ್ದ ಎಸ್ ನಾರಾಯಣ್ ಅವರು ಶ್ರೀ ಮುರುಳಿ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದರು. ಶ್ರೀಮುರಳಿ ಅವರು ಚಂದ್ರಚಕೋರಿ ಸಿನಿಮಾದಲ್ಲಿ ಬಹಳ ಚೆನ್ನಾಗಿ ಅಭಿನಯಿಸಿ ಭರವಸೆಯ ನಾಯಕ ಎನ್ನುವ ಪಟ್ಟಗಿಟ್ಟಿಸಿಕೊಂಡರು. ಅಂದಿನಿಂದ ಇಂದಿನವರೆಗೆ ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಶ್ರೀಮುರುಳಿ ಅವರು ಬಹಳ ಸಮಯ ತೆಗೆದುಕೊಂಡರು ಒಂದೊಳ್ಳೆ ಹಿಟ್ ಜೊತೆಗೆ ಕಂಬ್ಯಾಕ್ ಆಗುತ್ತಾರೆ.

ಇತ್ತ ಆದಿತ್ಯ ಈಗ ಅವಕಾಶಗಳಿಲ್ಲದೆ ಇಂಡಸ್ಟ್ರಿಯ ಬೇರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಬ್ಬರು ಸಹ ಕನ್ನಡದ ಹೆಮ್ಮೆಯ ಕಲಾವಿದರುಗಳು, ಇಬ್ಬರಿಗೂ ಇನ್ನೂ ಒಳ್ಳೆಯ ಅವಕಾಶಗಳು ಸಿಕ್ಕಿ ಅವರ ಪ್ರತಿಭೆ ಹೊರಬರುವಂತಾಗಲಿ. ಈ ಮೂಲಕ ಕನ್ನಡಿಗರಿಗೆ ಒಳ್ಳೊಳ್ಳೆ ಸಿನಿಮಾಗಳು ನೋಡುವುದಕ್ಕೆ ಸಿಗಲಿ ಎಂದು ಹರಸೋಣ.

- Advertisment -